T20 World Cup 2022: 15 ದಿನ, 12 ತಂಡ, 30 ಪಂದ್ಯ; ಸೂಪರ್ 12 ಸುತ್ತಿನ ವೇಳಾಪಟ್ಟಿ ಹೀಗಿದೆ
T20 World Cup 2022: ಇದರಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ಮೊದಲನೇ ಗುಂಪಿನಲ್ಲಿ ಸ್ಥಾನಪಡೆದಿವೆ. ಮತ್ತೊಂದೆಡೆ, ಎರಡನೇ ಗುಂಪಿನಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್, ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ಭಾರತ ತಂಡಗಳು ಸ್ಥಾನ ಪಡೆದುಕೊಂಡಿವೆ.
ಕಳೆದ ಭಾನುವಾರದಿಂದ ಆರಂಭವಾದ ಟಿ20 ವಿಶ್ವಕಪ್ (T20 World Cup 2022), ಈ ಭಾನುವಾರದಷ್ಟರೊಳಗೆ ಅರ್ಹತಾ ಸುತ್ತನ್ನು ಮುಗಿಸಿ, ಸೂಪರ್ 12 ಸುತ್ತಿಗೆ ಎಂಟ್ರಿಕೊಟ್ಟಿದೆ. ಈಗಾಗಲೇ ಸೂಪರ್ 12 ಸುತ್ತಿನಲ್ಲಿ ಕಣಕ್ಕಿಳಿಯುತ್ತಿರುವ 12 ತಂಡಗಳು ಯಾವುವು ಎಂಬುದಕ್ಕೆ ಖಚಿತತೆ ಸಿಕ್ಕಿದೆ. ಅರ್ಹತಾ ಸುತ್ತಿಗೂ ಮೊದಲು ಮೊದಲನೇ ಮತ್ತು ಎರಡನೇ ಗುಂಪಿನಲ್ಲಿ ತಲಾ 4 ತಂಡಗಳು ಸ್ಥಾನ ಪಡೆದಿದ್ದವು. ಆ ಬಳಿಕ ಅರ್ಹತಾ ಸುತ್ತಿನಲ್ಲಿ ಗೆದ್ದ ಜಿಂಬಾಬ್ವೆ, ಶ್ರೀಲಂಕಾ, ಐರ್ಲೆಂಡ್ ಮತ್ತು ನೆದರ್ಲ್ಯಾಂಡ್ಸ್ ತಂಡಗಳು ಸೂಪರ್ 12 ಸುತ್ತಿಗೆ ತಮ್ಮ ಸ್ಥಾನವನ್ನು ಖಚಿತಪಡಿಸಿವೆ. ಅಕ್ಟೋಬರ್ 22 ರಂದು ನ್ಯೂಜಿಲೆಂಡ್ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ನಡುವಿನ ಪಂದ್ಯದೊಂದಿಗೆ ಸೂಪರ್ 12 ರ ಸುತ್ತು ಆರಂಭವಾಗಲಿದೆ.
ಸೂಪರ್ 12 ರಲ್ಲಿ ಸ್ಥಾನ ಪಡೆದಿರುವ ತಂಡಗಳನ್ನು ತಲಾ ಆರು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ, ಐರ್ಲೆಂಡ್, ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ಮೊದಲನೇ ಗುಂಪಿನಲ್ಲಿ ಸ್ಥಾನಪಡೆದಿವೆ. ಮತ್ತೊಂದೆಡೆ, ಎರಡನೇ ಗುಂಪಿನಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ನೆದರ್ಲ್ಯಾಂಡ್ಸ್, ಜಿಂಬಾಬ್ವೆ, ಬಾಂಗ್ಲಾದೇಶ ಮತ್ತು ಭಾರತ ತಂಡಗಳು ಸ್ಥಾನ ಪಡೆದುಕೊಂಡಿವೆ. ಎಲ್ಲಾ ತಂಡಗಳು ತಮ್ಮ ಗುಂಪಿನ ಉಳಿದ ತಂಡಗಳ ವಿರುದ್ಧ ತಲಾ ಒಂದೊಂದು ಪಂದ್ಯವನ್ನು ಆಡುತ್ತವೆ. ಎರಡೂ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಲಿದೆ. ಆ ಬಳಿಕ ನೆದರ್ಲೆಂಡ್ಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳನ್ನು ಎದುರಿಸಲಿದೆ.
ಪಂದ್ಯ ಸಂಖ್ಯೆ |
ದಿನಾಂಕ | ಮುಖಾಮುಖಿ | ಸಮಯ | ಸ್ಥಳ |
13 | ಅ. 22 | ನ್ಯೂಜಿಲೆಂಡ್ vs ಆಸ್ಟ್ರೇಲಿಯಾ | 12:30 ಮಧ್ಯಾಹ್ನ |
ಸಿಡ್ನಿ |
14 |
ಅ. 22 | ಇಂಗ್ಲೆಂಡ್ vs ಅಫ್ಘಾನಿಸ್ತಾನ | 04:30 ಮಧ್ಯಾಹ್ನ | ಪರ್ತ್ |
15 | ಅ. 23 | ಶ್ರೀಲಂಕಾ vs ಐರ್ಲೆಂಡ್ | 09:30 ಬೆಳಿಗ್ಗೆ |
ಹೊಬಾರ್ಟ್ |
16 |
ಅ. 23 | ಭಾರತ vs ಪಾಕಿಸ್ತಾನ | 01:30 ಮಧ್ಯಾಹ್ನ | ಮೆಲ್ಬೋರ್ನ್ |
17 | ಅ. 24 | ಬಾಂಗ್ಲಾದೇಶ vs ನೆದರ್ಲ್ಯಾಂಡ್ಸ್ | 09:30 ಬೆಳಿಗ್ಗೆ |
ಹೊಬಾರ್ಟ್ |
18 |
ಅ. 24 | ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ | 01:30 ಮಧ್ಯಾಹ್ನ | ಹೊಬಾರ್ಟ್ |
19 | ಅ. 25 | ಆಸ್ಟ್ರೇಲಿಯಾ vs ಶ್ರೀಲಂಕಾ | 01:30 ಮಧ್ಯಾಹ್ನ |
ಪರ್ತ್ |
20 |
ಅ. 26 | ಇಂಗ್ಲೆಂಡ್ vs ಐರ್ಲೆಂಡ್ | 09:30 ಬೆಳಿಗ್ಗೆ | ಮೆಲ್ಬೋರ್ನ್ |
21 | ಅ. 26 | ನ್ಯೂಜಿಲೆಂಡ್ vs ಅಫ್ಘಾನಿಸ್ತಾನ | 01:30 ಮಧ್ಯಾಹ್ನ |
ಮೆಲ್ಬೋರ್ನ್ |
22 |
ಅ. 27 | ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ | 08:30 ಬೆಳಿಗ್ಗೆ | ಸಿಡ್ನಿ |
23 | ಅ. 27 | ಭಾರತ vs ನೆದರ್ಲ್ಯಾಂಡ್ಸ್ | 12:30 ಮಧ್ಯಾಹ್ನ |
ಸಿಡ್ನಿ |
24 |
ಅ. 27 | ಪಾಕಿಸ್ತಾನ vs ಜಿಂಬಾಬ್ವೆ | 4:30 ಮಧ್ಯಾಹ್ನ | ಪರ್ತ್ |
25 | ಅ. 28 | ಅಫ್ಘಾನಿಸ್ತಾನ vs ಐರ್ಲೆಂಡ್ | 09:30 ಬೆಳಿಗ್ಗೆ |
ಮೆಲ್ಬೋರ್ನ್ |
26 |
ಅ. 28 | ಇಂಗ್ಲೆಂಡ್ vs ಆಸ್ಟ್ರೇಲಿಯಾ | 1:30 ಮಧ್ಯಾಹ್ನ | ಮೆಲ್ಬೋರ್ನ್ |
27 | ಅ. 29 | ನ್ಯೂಜಿಲೆಂಡ್ vs ಶ್ರೀಲಂಕಾ | 09:30 ಬೆಳಿಗ್ಗೆ |
ಸಿಡ್ನಿ |
28 |
ಅ. 30 | ಬಾಂಗ್ಲಾದೇಶ vs ಜಿಂಬಾಬ್ವೆ | 08:30 ಬೆಳಿಗ್ಗೆ | ಬ್ರಿಸ್ಬೇನ್ |
29 | ಅ. 30 | ಪಾಕಿಸ್ತಾನ vs ನೆದರ್ಲ್ಯಾಂಡ್ಸ್ | 12:30 ಮಧ್ಯಾಹ್ನ |
ಪರ್ತ್ |
30 |
ನ. 30 | ಭಾರತ vs ದಕ್ಷಿಣ ಆಫ್ರಿಕಾ | 4:30 ಮಧ್ಯಾಹ್ನ | ಪರ್ತ್ |
31 | ನ. 31 | ಆಸ್ಟ್ರೇಲಿಯಾ vs ಐರ್ಲೆಂಡ್ | 1:30 ಮಧ್ಯಾಹ್ನ |
ಬ್ರಿಸ್ಬೇನ್ |
32 |
ನ. 1 | ಅಫ್ಘಾನಿಸ್ತಾನ vs ಶ್ರೀಲಂಕಾ | 09:30 ಬೆಳಿಗ್ಗೆ | ಬ್ರಿಸ್ಬೇನ್ |
33 | ನ. 1 | ಇಂಗ್ಲೆಂಡ್ vs ನ್ಯೂಜಿಲೆಂಡ್ | 1:30 ಮಧ್ಯಾಹ್ನ |
ಬ್ರಿಸ್ಬೇನ್ |
34 |
ನ. 2 | ಜಿಂಬಾಬ್ವೆ vs ನೆದರ್ಲ್ಯಾಂಡ್ಸ್ | 09:30 ಬೆಳಿಗ್ಗೆ | ಅಡಿಲೇಡ್ |
35 | ನ. 2 | ಭಾರತ vs ಬಾಂಗ್ಲಾದೇಶ | 1:30 ಮಧ್ಯಾಹ್ನ |
ಅಡಿಲೇಡ್ |
36 |
ನ. 3 | ಪಾಕಿಸ್ತಾನ vs ದಕ್ಷಿಣ ಆಫ್ರಿಕಾ | 1:30 ಮಧ್ಯಾಹ್ನ | ಸಿಡ್ನಿ |
37 | ನ. 4 | ನ್ಯೂಜಿಲೆಂಡ್ vs ಐರ್ಲೆಂಡ್ | 09:30 ಬೆಳಿಗ್ಗೆ |
ಅಡಿಲೇಡ್ |
38 |
ನ. 4 | ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ | 1:30 ಮಧ್ಯಾಹ್ನ | ಅಡಿಲೇಡ್ |
39 | ನ.5 | ಇಂಗ್ಲೆಂಡ್ vs ಶ್ರೀಲಂಕಾ | 1:30 ಮಧ್ಯಾಹ್ನ |
ಸಿಡ್ನಿ |
40 |
ನ. 6 | ದಕ್ಷಿಣ ಆಫ್ರಿಕಾ vs ನೆದರ್ಲ್ಯಾಂಡ್ಸ್ | 05:30 ಬೆಳಿಗ್ಗೆ | ಅಡಿಲೇಡ್ |
41 | ನ. 6 | ಪಾಕಿಸ್ತಾನ vs ಬಾಂಗ್ಲಾದೇಶ | 09:30 ಬೆಳಿಗ್ಗೆ |
ಅಡಿಲೇಡ್ |
42 |
ನ. 6 | ಭಾರತ vs ಜಿಂಬಾಬ್ವೆ | 1:30 ಮಧ್ಯಾಹ್ನ |
ಮೆಲ್ಬೋರ್ನ್ |
Published On - 5:31 pm, Sat, 22 October 22