T20 World Cup 2022: ಐಸಿಸಿಯ 16 ತೀರ್ಪುಗಾರರು: ಭಾರತ vs ಪಾಕ್ ಪಂದ್ಯಕ್ಕೆ ಅಂಪೈರ್ ಯಾರು?
T20 World Cup 2022: ಐಸಿಸಿ ಮೊದಲ ಸುತ್ತಿನ ಮತ್ತು ಸೂಪರ್ 12 ಹಂತದ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಲಿರುವ ಅಂಪೈರ್‌ಗಳ ಹೆಸರನ್ನು ಮಾತ್ರ ಪ್ರಕಟಿಸಿದೆ.
T20 World Cup 2022: ಟಿ20 ವಿಶ್ವಕಪ್ಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಟೂರ್ನಿಯಲ್ಲಿ ಭಾಗವಹಿಸಲಿರುವ 16 ತಂಡಗಳ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಇದೀಗ ಐಸಿಸಿ ಕೂಡ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿರುವ 16 ಅಂಪೈರ್ಗಳನ್ನು ಕೂಡ ಘೋಷಿಸಿದೆ. ಅದರಲ್ಲೂ ಭಾರತ-ಪಾಕಿಸ್ತಾನ್ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ತೀರ್ಪುಗಾರರಾಗಿ ಯಾರು ಕಾರ್ಯ ನಿರ್ವಹಿಸಲಿದ್ದಾರೆ ಎಂಬುದನ್ನು ಕೂಡ ಐಸಿಸಿ ಪ್ರಕಟಿಸಿದೆ. ಐಸಿಸಿ ಪ್ರಕಟಿಸಿರುವ 16 ಅಂಪೈರ್‌ಗಳ ಎಲೈಟ್ ಪ್ಯಾನೆಲ್‌ನಲ್ಲಿರುವ ಏಕೈಕ ಭಾರತೀಯ ತೀರ್ಪುಗಾರರೆಂದರೆ ನಿತಿನ್ ಮೆನನ್.
ಈಗಾಗಲೇ ಟಿ20 ವಿಶ್ವಕಪ್‌ನಲ್ಲಿ ಅಂಪೈರಿಂಗ್ಗಾಗಿ ನಿತಿನ್ ಮೆನನ್ ಆಸ್ಟ್ರೇಲಿಯಾ ತೆರಳಿದ್ದಾರೆ. ಹಾಗೆಯೇ 6 ಟಿ20 ವಿಶ್ವಕಪ್‌ನಲ್ಲಿ ಕಾರ್ಯ ನಿರ್ವಹಿಸಿರುವ ಮೂವರು ಅಂಪೈರ್‌ಗಳು ಈ ಬಾರಿ ಕೂಡ ಸ್ಥಾನ ಪಡೆದಿದ್ದಾರೆ. ಅಂದರೆ ಎಲ್ಲಾ ಟಿ20 ವಿಶ್ವಕಪ್‌ನಲ್ಲಿ ಅಂಪೈರಿಂಗ್ ಮಾಡಿದ ಅನುಭವಿಗಳಿಗೂ ಈ ಬಾರಿ ಮಣೆ ಹಾಕಲಾಗಿದೆ. ಅದರಂತೆ ಎರಾಸ್ಮಸ್, ಟಕರ್ ಮತ್ತು ಅಲೀಮ್ ದಾರ್ ಅವರು 7ನೇ ಬಾರಿ ಟಿ20 ವಿಶ್ವಕಪ್‌ನಲ್ಲಿ ಅಂಪೈರಿಂಗ್ ಮಾಡಲಿದ್ದಾರೆ.
ಇನ್ನು ಐಸಿಸಿ ಮೊದಲ ಸುತ್ತಿನ ಮತ್ತು ಸೂಪರ್ 12 ಹಂತದ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಲಿರುವ ಅಂಪೈರ್‌ಗಳ ಹೆಸರನ್ನು ಮಾತ್ರ ಪ್ರಕಟಿಸಿದೆ. ಇನ್ನು ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಯಾರು ಕಾರ್ಯ ನಿರ್ವಹಿಸಲಿದ್ದಾರೆ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇನ್ನು ಅಕ್ಟೋಬರ್ 23 ರಂದು ನಡೆಯಲಿರುವ ಭಾರತ – ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯದಲ್ಲಿ ರಾಡ್ನಿ ಟಕರ್ ಮತ್ತು ಮರೈಸ್ ಎರಾಸ್ಮಸ್ ಆನ್ ಫೀಲ್ಡ್ ಅಂಪೈರ್ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಐಸಿಸಿ ತಿಳಿಸಿದೆ.
ಹಾಗೆಯೇ ಐಸಿಸಿ ಮ್ಯಾಚ್ ರೆಫರೀಸ್ ಪ್ಯಾನೆಲ್‌ನ ಮುಖ್ಯ ರೆಫರಿಯಾಗಿರುವ ರಂಜನ್ ಮದುಗಲೆ ಈ ಬಾರಿ ಕೂಡ ಟಿ20 ವಿಶ್ವಕಪ್‌ನ ಭಾಗವಾಗಲಿದ್ದಾರೆ. ಅವರಲ್ಲದೆ, ಜಿಂಬಾಬ್ವೆಯ ಆಂಡ್ರ್ಯೂ ಪೈಕ್ರಾಫ್ಟ್, ಇಂಗ್ಲೆಂಡ್‌ನ ಕ್ರಿಸ್ಟೋಫರ್ ಬ್ರಾಡ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ಬೂನ್ ಕೂಡ ಮ್ಯಾಚ್ ರೆಫರಿ ಆಗಿ ಕಾರ್ಯ ನಿರ್ಹಿಸಲಿದ್ದಾರೆ.
ಟಿ20 ವಿಶ್ವಕಪ್ಗೆ ಆಯ್ಕೆಯಾದ 16 ಅಂಪೈರ್‌ಗಳು: ಆಡ್ರಿಯನ್ ಹೋಲ್ಡ್‌ಸ್ಟೋಕ್, ಅಲೀಮ್ ದಾರ್, ಅಹ್ಸಾನ್ ರಾಝಾ, ಕ್ರಿಸ್ಟೋಫರ್ ಬ್ರೌನ್, ಕ್ರಿಸ್ಟೋಫರ್ ಗಫಾನಿ, ಜೋಯಲ್ ವಿಲ್ಸನ್, ಕುಮಾರ್ ಧರ್ಮಸೇನಾ, ಲೆಂಗ್ಟನ್ ರೌಸ್ಸೆರ್, ಮರೈಸ್ ಎರಾಸ್ಮಸ್, ಮೈಕೆಲ್ ಗಾಫ್, ನಿತಿನ್ ಮೆನನ್, ಪಾಲ್ ರೀಫೆಲ್, ಪಾಲ್ ವಿಲ್ಸನ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕೆಟಲ್‌ಬರೋಕ್.