T20 World Cup 2024: ಅಫ್ಘಾನ್ ವಿರುದ್ಧ 75 ರನ್​​ಗಳಿಗೆ ಆಲೌಟ್! ಸೋಲಿಗೆ ಕಿವೀಸ್ ನಾಯಕ ದೂರಿದ್ದು ಯಾರನ್ನ?

T20 World Cup 2024: ಹೀನಾಯ ಸೋಲಿನ ನಂತರ ಮಾತನಾಡಿದ ಕೇನ್ ವಿಲಿಯಮ್ಸನ್, ಈ ಪಂದ್ಯಕ್ಕೂ ಮುಂಚೆ ನಮಗೆ ಅಭ್ಯಾಸ ಮಾಡಲು ಹೆಚ್ಚಿನ ಸಮಯ ಸಿಗಲಿಲ್ಲ. ಹೀಗಾಗಿ ಆಟಗಾರರು ಗುರಿ ಬೆನ್ನಟ್ಟುವಲ್ಲಿ ವಿಫಲರಾದರು. ಆದರೆ, ಈಗ ನಾವು ಇದನ್ನು ಮರೆತು ಮುಂದಿನ ಸವಾಲುಗಳನ್ನು ಎದುರಿಸಲು ಮುನ್ನಡೆಯಬೇಕಾಗಿದೆ ಎಂದರು.

T20 World Cup 2024: ಅಫ್ಘಾನ್ ವಿರುದ್ಧ 75 ರನ್​​ಗಳಿಗೆ ಆಲೌಟ್! ಸೋಲಿಗೆ ಕಿವೀಸ್ ನಾಯಕ ದೂರಿದ್ದು ಯಾರನ್ನ?
ಕೇನ್ ವಿಲಿಯಮ್ಸನ್
Follow us
ಪೃಥ್ವಿಶಂಕರ
|

Updated on: Jun 08, 2024 | 4:09 PM

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ (T20 World Cup 2024) ನ್ಯೂಜಿಲೆಂಡ್ ತಂಡ ಅತ್ಯಂತ ಕೆಟ್ಟ ಆರಂಭ ಮಾಡಿದೆ. ತಂಡ ತನ್ನ ಮೊದಲ ಪಂದ್ಯದಲ್ಲಿಯೇ ಅಫ್ಘಾನಿಸ್ತಾನದ (New Zealand vs Afghanistan) ಎದುರು ಸೋಲನ್ನು ಎದುರಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 159 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕಿತು. ಗುರಿ ಬೆನ್ನಟ್ಟಿದ ಕಿವೀಸ್ ತಂಡದ ಬ್ಯಾಟಿಂಗ್ ವಿಭಾಗ ಅಫ್ಘಾನ್ ಬೌಲರ್​ಗಳ ವಿರುದ್ಧ ಮಕಾಡೆ ಮಲಗಿತು. ಹೀಗಾಗಿ ಪೂರ್ಣ 20 ಓವರ್​ಗಳನ್ನು ಆಡದ ಕಿವೀಸ್ ಪಡೆ 15.2 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 75 ರನ್​ ಕಲೆಹಾಕಲಷ್ಟೇ ಶಕ್ತವಾಯಿತು. ಈ ಪಂದ್ಯದ ನಂತರ ಮಾತನಾಡಿದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (Kane Williamson), ಅಫ್ಘಾನಿಸ್ತಾನ ವಿರುದ್ಧದ ಈ ಸೋಲಿಗೆ ನಿಜವಾದ ಕಾರಣವನ್ನು ವಿವರಿಸಿದರು.

ಸೋಲಿನ ನಂತರ ವಿಲಿಯಮ್ಸನ್ ಹೇಳಿದ್ದೇನು?

ಹೀನಾಯ ಸೋಲಿನ ನಂತರ ಮಾತನಾಡಿದ ಕೇನ್ ವಿಲಿಯಮ್ಸನ್, ಈ ಪಂದ್ಯಕ್ಕೂ ಮುಂಚೆ ನಮಗೆ ಅಭ್ಯಾಸ ಮಾಡಲು ಹೆಚ್ಚಿನ ಸಮಯ ಸಿಗಲಿಲ್ಲ. ಹೀಗಾಗಿ ಆಟಗಾರರು ಗುರಿ ಬೆನ್ನಟ್ಟುವಲ್ಲಿ ವಿಫಲರಾದರು. ಆದರೆ, ಈಗ ನಾವು ಇದನ್ನು ಮರೆತು ಮುಂದಿನ ಸವಾಲುಗಳನ್ನು ಎದುರಿಸಲು ಮುನ್ನಡೆಯಬೇಕಾಗಿದೆ. 160 ರನ್‌ಗಳ ಗುರಿಯನ್ನು ಬೆನ್ನಟ್ಟಲು, ನಮಗೆ ಜೊತೆಯಾಟದ ಅಗತ್ಯವಿತ್ತು. ಆದರೆ ಅಫ್ಘಾನ್ ತಂಡದ ಬಿಗಿಯಾದ ಬೌಲಿಂಗ್ ಮುಂದೆ ಈ ಗುರಿಯು ನಮಗೆ ಕಷ್ಟಕರವಾಯಿತು.

ಇದಲ್ಲದೆ ನಮ್ಮ ಫೀಲ್ಡಿಂಗ್ ಕೂಡ ಕೆಟ್ಟದಾಗಿತ್ತು. ಮೊದಲ 10 ಓವರ್‌ಗಳಲ್ಲಿ ನಮಗೆ ವಿಕೆಟ್ ಪಡೆಯುವ ಅವಕಾಶಗಳಿದ್ದವು. ಆದರೆ ನಮಗೆ ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಈಗ ಇದನ್ನು ಮರೆತು ಮುಂದಿನ ಪಂದ್ಯದಲ್ಲಿ ಭರ್ಜರಿ ಪುನರಾಗಮನ ಮಾಡಲು ಪ್ರಯತ್ನಿಸುತ್ತೇವೆ ಎಂದರು. ಇದಲ್ಲದೆ ಅಫ್ಘಾನ್ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಕೇನ್ ವಿಲಿಯಮ್ಸನ್, ನಮ್ಮನ್ನು ಸೋಲಿಸಿದ ರೀತಿಗಾಗಿ ಅಫ್ಘಾನಿಸ್ತಾನ ತಂಡಕ್ಕೆ ದೊಡ್ಡ ಅಭಿನಂದನೆಗಳು ಎಂದರು.

ಒಂದಂಕಿ ದಾಟದ ಕಿವೀಸ್ ಬ್ಯಾಟ್ಸ್‌ಮನ್‌ಗಳು

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಬ್ಯಾಟ್ಸ್​ಮನ್​ಗಳ ಕಳಪೆ ಪ್ರದರ್ಶನವೇ ಸೋಲಿಗೆ ಪ್ರಮುಖ ಕಾರಣವಾಗಿತ್ತು. ತಂಡದ ಯಾವುದೇ ಬ್ಯಾಟ್ಸ್‌ಮನ್ 20 ರನ್‌ಗಳಿಗಿಂತ ಹೆಚ್ಚು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. 9 ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಗದಿದ್ದರೆ, ಇಬ್ಬರು ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಔಟಾದರು. ಗ್ಲೆನ್ ಫಿಲಿಪ್ಸ್ ಕಿವೀಸ್ ತಂಡದ ಪರ ಗರಿಷ್ಠ 18 ರನ್ ಗಳಿಸಿದರು. ಆದರೆ ಅಫ್ಘಾನಿಸ್ತಾನದ ಬೌಲರ್‌ಗಳು ಅದ್ಭುತ ಬೌಲಿಂಗ್‌ನ ಚಮತ್ಕಾರವನ್ನು ಪ್ರಸ್ತುತಪಡಿಸಿದರು. ಇದರಿಂದಾಗಿ ಕಿವೀಸ್ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ