AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

T20 World Cup 2026: ಬಾಬರ್ ಆಝಂ ಟೆಸ್ಟ್ ಬ್ಯಾಟಿಂಗ್​ಗೆ ಪಾಕ್ ನಾಯಕ ಗರಂ

T20 World Cup 2026: 2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ನೆದರ್‌ಲ್ಯಾಂಡ್ಸ್ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು. 19ನೇ ಓವರ್‌ನಲ್ಲಿ ಫಹೀಮ್ 24 ರನ್ ಗಳಿಸಿ ಪಾಕ್‌ಗೆ ಜಯ ತಂದರು. ಬಾಬರ್ ಅಜಮ್ ಅವರ 18 ಎಸೆತಗಳಲ್ಲಿ 15 ರನ್ ಗಳಿಕೆಯ ನಿಧಾನಗತಿಯ ಬ್ಯಾಟಿಂಗ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು. ನಾಯಕ ಸಲ್ಮಾನ್ ಅಘಾ ಬಾಬರ್ ಅವರ ಬ್ಯಾಟಿಂಗ್ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

T20 World Cup 2026: ಬಾಬರ್ ಆಝಂ ಟೆಸ್ಟ್ ಬ್ಯಾಟಿಂಗ್​ಗೆ ಪಾಕ್ ನಾಯಕ ಗರಂ
Babar Azam, Salman Ali Agha
ಪೃಥ್ವಿಶಂಕರ
|

Updated on:Feb 07, 2026 | 5:31 PM

Share

2026 ರ ಟಿ20 ವಿಶ್ವಕಪ್‌ನ (T20 World Cup 2026) ಮೊದಲ ಪಂದ್ಯ ಪಾಕಿಸ್ತಾನ ಮತ್ತು ನೆದರ್‌ಲ್ಯಾಂಡ್ಸ್ ( Pakistan vs Netherlands) ನಡುವೆ ನಡೆಯಿತು. ಈ ಪಂದ್ಯದಲ್ಲಿ ಪಾಕಿಸ್ತಾನ, ನೆದರ್‌ಲ್ಯಾಂಡ್ಸ್ ತಂಡವನ್ನು ಕೊನೆಯ ಓವರ್​ನಲ್ಲಿ ಸೋಲಿಸಿತು. ವಾಸ್ತವವಾಗಿ, ಈ ಪಂದ್ಯದ ಮೇಲೆ 18ನೇ ಓವರ್​​ವರೆಗೂ ನೆದರ್ಲ್ಯಾಂಡ್ಸ್ ಹಿಡಿತ ಸಾಧಿಸಿತ್ತು. ಆದರೆ 19ನೇ ಓವರ್​ನಲ್ಲಿ ನೆದರ್ಲ್ಯಾಂಡ್ಸ್ ತಂಡ ಮಾಡಿದ ಎಡವಟ್ಟು, ಪಾಕಿಸ್ತಾನಕ್ಕೆ ವರದಾನವಾಯಿತು. 19 ನೇ ಓವರ್‌ನಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಫಾಹಿಮ್ ಒಂದೇ ಓವರ್​ನಲ್ಲಿ 24 ರನ್ ಕಲೆಹಾಕಿ ಪಾಕ್ ತಂಡಕ್ಕೆ ಗೆಲುವು ತಂದುಕೊಟ್ಟರು. ಆದಾಗ್ಯೂ ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಸಲ್ಮಾನ್ ಅಘಾ ಮಧ್ಯಮ ಓವರ್​ಗಳಲ್ಲಿ ಬ್ಯಾಟರ್​ಗಳ ನಿಧಾನಗತಿಯ ಬ್ಯಾಟಿಂಗ್‌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು ಎಂದಿದ್ದಾರೆ.

ಪಾಕ್ ತಂಡಕ್ಕೆ ಉತ್ತಮ ಆರಂಭ

ವಾಸ್ತವವಾಗಿ, ಈ ಪಂದ್ಯವು ಆರಂಭದಿಂದಲೂ ಪಾಕಿಸ್ತಾನದ ಕೈಯಲ್ಲಿತ್ತು. ಆದ್ದರಿಂದ ಪಾಕಿಸ್ತಾನ ಸುಲಭವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ 10 ನೇ ಓವರ್ ನಂತರ ಎಲ್ಲವೂ ಬದಲಾಯಿತು. 12 ನೇ ಓವರ್‌ನ ಮೊದಲ ಎಸೆತದಲ್ಲಿ, ಪಾಕಿಸ್ತಾನ 98 ರನ್‌ಗಳಾಗಿದ್ದಾಗ ಮೂರನೇ ವಿಕೆಟ್ ಪತನವಾಯಿತು. ಈ ವಿಕೆಟ್ ನಂತರ, ಪಂದ್ಯದ ಚಿತ್ರಣ ಬದಲಾಯಿತು. ಏಕೆಂದರೆ ಆ ಓವರ್​ನ ಎರಡನೇ ಎಸೆತದಲ್ಲಿಯೇ ಉಸ್ಮಾನ್ ಖಾನ್ ವಿಕೆಟ್ ಒಪ್ಪಿಸಿದರು. ಹೀಗಾಗಿ ಪಾಕಿಸ್ತಾನ 98 ರನ್‌ಗಳಿಗೆ 4 ನೇ ವಿಕೆಟ್ ಕಳೆದುಕೊಂಡಿತು. ಆದಾಗ್ಯೂ ಗುರಿ ಕಡಿಮೆ ಇದ್ದುದ್ದರಿಂದ ಪಾಕ್ ತಂಡ ಸುಲಭವಾಗಿ ಗೆಲುವು ಸಾಧಿಸಬಹುದು ಎಂದು ಭಾವಿಸಲಾಗಿತ್ತು. ಆದರೆ ಬಾಬರ್ ಆಝಂ ಅವರ ಆಮೆಗತಿಯ ಬ್ಯಾಟಿಂಗ್‌ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.

ಬಾಬರ್ ಆಮೆಗತಿಯ ಬ್ಯಾಟಿಂಗ್

ಟಿ20 ಕ್ರಿಕೆಟ್​ನಲ್ಲಿ ಟೆಸ್ಟ್ ಕ್ರಿಕೆಟ್ ಆಡುವುದಕ್ಕೆ ಹೆಸರುವಾಸಿಯಾಗಿರುವ ಬಾಬರ್ ಆಝಂ ಡಚ್ ಬೌಲರ್‌ಗಳ ವಿರುದ್ಧವೂ ರನ್​ಗಾಗಿ ಪರದಾಡಬೇಕಾಯಿತು. ತಮ್ಮ ಇನ್ನಿಂಗ್ಸ್​ನಲ್ಲಿ 18 ಎಸೆತಗಳಲ್ಲಿ ಆಡಿದ ಬಾಬರ್ ಕೇವಲ 15 ರನ್ ಮಾತ್ರ ಕಲೆಹಾಕಿದರು. ಅಂದರೆ ಮೂರು ಓವರ್‌ ಬ್ಯಾಟಿಂಗ್‌ ಮಾಡಿದ ಬಾಬರ್ ಕೇವಲ ಒಂದು ಬೌಂಡರಿ ಬಾರಿಸಿದರು. ಬಾಬರ್ ಅವರ ನಿಧಾನಗತಿಯ ಬ್ಯಾಟಿಂಗ್ ಪಾಕಿಸ್ತಾನವನ್ನು ಒತ್ತಡಕ್ಕೊಳಗಾಗುವಂತೆ ಮಾಡಿತು. ಏಕೆಂದರೆ ಬಾಬರ್ ಅವರ ಈ ಆಮೆಗತಿಯ ಬ್ಯಾಟಿಂಗ್​ನಿಂದ ರನ್‌ಗಳು ಮತ್ತು ಎಸೆತಗಳ ನಡುವಿನ ಅಂತರ ಹೆಚ್ಚಾಯಿತು. ಇದರ ನಡುವೆ ತಂಡದ ಸ್ಕೋರ್ 100 ರ ಗಡಿ ದಾಟಿದ ಕೂಡಲೇ ಬಾಬರ್ ಔಟಾದರು. ಇದರಿಂದ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೆಚ್ಚಾಯಿತು. ಅಂತಿಮವಾಗಿ ಪಾಕ್ ತಂಡ ಗೆದ್ದಿತ್ತಾದರೂ ಪಂದ್ಯ ಮುಗಿದ ಬಳಿಕ ಮಾತನಾಡಿದ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಕೂಡ ಬಾಬರ್ ಆಝಂ ಅವರ ಇನ್ನಿಂಗ್ಸ್‌ ಬಗ್ಗೆ ಪರೋಕ್ಷವಾಗಿ ಆಕ್ರೋಶ ಹೊರಹಾಕಿದರು.

ಬಲಿಷ್ಠ ತಂಡಗಳನ್ನು ಮಣಿಸಿ ಟಿ20 ವಿಶ್ವಕಪ್​ನಿಂದ ಹೊರಹಾಕಿದ ದುರ್ಬಲ ತಂಡಗಳಿವು

ಪಾಕ್ ನಾಯಕ ಹೇಳಿದ್ದೇನು?

ಈ ಬಗ್ಗೆ ಪಂದ್ಯ ಪ್ರಸ್ತುತಿಯಲ್ಲಿ ಮಾತನಾಡಿದ ಅಘಾ, ‘ನಾವು ಮೊದಲ 10 ಓವರ್‌ಗಳಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೇವು. ಆದರೆ ಮಧ್ಯಮ ಓವರ್​ಗಳಲ್ಲಿ ಓವರ್​ಗೆ ಐದು, ಆರು, ಎರಡು, ಮೂರು ರನ್ ಕಲೆಹಾಕಿದರೆ ಇತರರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆದರೆ ಕ್ರೆಡಿಟ್ ಫಹೀಮ್‌ಗೆ ಸಲ್ಲುತ್ತದೆ. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು’ ಎಂದಿದ್ದಾರೆ. ಮಧ್ಯಮ ಓವರ್​ಗಳಲ್ಲಿ ಬಾಬರ್ ಆಝಂ ನಿದಾನಗತಿಯ ಬ್ಯಾಟಿಂಗ್ ಮಾಡಿದ್ದಕ್ಕೆ ಪಾಕ್ ನಾಯಕ ಪರೋಕ್ಷವಾಗಿ ಅಸಮಾಧಾನಗೊಂಡಿದ್ದಾರೆ ಎಂಬುದು ಸ್ಪಷ್ಟವಾದಂತ್ತಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Sat, 7 February 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಕಿತ್ತೂರು ರಾಣಿ ಚೆನ್ನಮ್ಮ ಕುರಿತು ಕನ್ನಡದಲ್ಲಿ ಬರುತ್ತಿದೆ ಎಐ ಸಿನಿಮಾ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದರಾಮಯ್ಯ ನಿರ್ಧಾರ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ಇನ್ನೇನು ಟೇಕಾಫ್ ಆಗಬೇಕೆನ್ನುವಷ್ಟರಲ್ಲಿ ಇಂಡಿಗೋ ವಿಮಾನದಲ್ಲಿ ಹೊಗೆ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?