AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SA: ‘ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು’; ಗಂಭೀರ್ ತಂತ್ರವನ್ನು ಪ್ರಶ್ನಿಸಿದ ಕುಂಬ್ಳೆ

India's Test Crisis: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಕಳಪೆ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿರಂತರ ಪ್ರಯೋಗಗಳು ತಂಡದ ವೈಫಲ್ಯಕ್ಕೆ ಕಾರಣವೆಂದು ಅವರು ದೂಷಿಸಿದ್ದಾರೆ. ಆಲ್‌ರೌಂಡರ್‌ಗಳ ಆಯ್ಕೆ, ಬ್ಯಾಟಿಂಗ್ ಕ್ರಮಾಂಕದ ಬದಲಾವಣೆ ಮತ್ತು ಅನುಭವಿ ಆಟಗಾರರ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಭಾರತೀಯ ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

IND vs SA: ‘ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು’; ಗಂಭೀರ್ ತಂತ್ರವನ್ನು ಪ್ರಶ್ನಿಸಿದ ಕುಂಬ್ಳೆ
Anil Kumble
ಪೃಥ್ವಿಶಂಕರ
|

Updated on:Nov 26, 2025 | 6:27 PM

Share

ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ (India vs South Africa) ಕಳಪೆ ಪ್ರದರ್ಶನ ತಂಡದ ಮಾಜಿ ಆಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಅದರಲ್ಲೂ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ತಂಡದಲ್ಲಿ ಮಾಡುತ್ತಿರುವ ಪ್ರಯೋಗಗಳು ಫಲಿತಾಂಶದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವುದು ದಿಗ್ಗಜರ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಭಾರತ ಟೆಸ್ಟ್ ತಂಡದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕನ್ನಡಿಗರಾದ ಅನಿಲ್ ಕುಂಬ್ಳೆ (Anil Kumble) ಮತ್ತು ವೆಂಕಟೇಶ್ ಪ್ರಸಾದ್ ( Venkatesh Prasad) ಎಚ್ಚೆತ್ತುಕೊಳ್ಳುವಂತೆ ಕರೆ ನೀಡಿದ್ದಾರೆ. ಹಾಗೆಯೇ ತವರಿನಲ್ಲಿ ಎರಡನೇ ವೈಟ್ ವಾಶ್ ಸೋಲಿಗೆ ಕಾರಣರಾಗಿರುವ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ತಂತ್ರವನ್ನೂ ಕುಂಬ್ಳೆ ಪ್ರಶ್ನಿಸಿದ್ದಾರೆ.

ವಿಭಿನ್ನ ಮನಸ್ಥಿತಿ ಬೇಕು

ಈ ಬಗ್ಗೆ ಅಧಿಕೃತ ಪ್ರಸಾರಕರೊಂದಿಗೆ ಮಾತನಾಡಿರುವ ಅನಿಲ್ ಕುಂಬ್ಳೆ, ‘ಟೆಸ್ಟ್ ಪಂದ್ಯಗಳಿಗೆ ವಿಭಿನ್ನ ಮನಸ್ಥಿತಿ ಬೇಕು. ತಂಡದಲ್ಲಿ ಎಷ್ಟೋ ಆಲ್‌ರೌಂಡರ್‌ಗಳು ಕೆಲಸ ಮಾಡುವುದಿಲ್ಲ. ಹಾಗೆಯೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವು ಬದಲಾವಣೆಗಳು ಸಹ ಕೆಲಸ ಮಾಡುವುದಿಲ್ಲ. ಪ್ರತಿ ಪಂದ್ಯದಲ್ಲೂ ತಂಡಕ್ಕೆ ಹೊಸ ಆಟಗಾರರು ಬರುತ್ತಿದ್ದಾರೆ ಮತ್ತು ಕೆಲವರು ಹೊರ ಹೋಗುತ್ತಿದ್ದಾರೆ.

ಇದೆಲ್ಲವನ್ನು ಭಾರತೀಯ ತಂಡವು ಚಿಂತಿಸಬೇಕಾಗಿದೆ. ಈ ಫಲಿತಾಂಶಗಳನ್ನು ಮರೆಯಲು ಸಾಧ್ಯವಿಲ್ಲ. ಭಾರತೀಯ ಟೆಸ್ಟ್ ಕ್ರಿಕೆಟ್ ಅನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುವುದು ಎಂಬುದರ ಕುರಿತು ನೀವು ನಿಮ್ಮೊಳಗೆ ಚರ್ಚಿಸಬೇಕು. ಕಳೆದ ಆರರಿಂದ ಎಂಟು ತಿಂಗಳಲ್ಲಿ ಲೆಜೆಂಡರಿ ಆಟಗಾರರು ನಿವೃತ್ತಿ ಹೊಂದಿದ್ದಾರೆ. ಹೀಗಾಗಿ ನೀವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯುವ ಆಟಗಾರರು ತಪ್ಪುಗಳಿಂದ ಕಲಿಯುತ್ತಾರೆ ಮತ್ತು ಬೆಳೆಯುತ್ತಾರೆ ಎಂಬ ಆಶಯದೊಂದಿಗೆ ನೀವು ಅವರನ್ನು ತಂಡಕ್ಕೆ ತರಲು ಸಾಧ್ಯವಿಲ್ಲ. ಅದು ಸಂಭವಿಸುವುದಿಲ್ಲ. ಎಂಟು ಅಥವಾ ಒಂಬತ್ತು ಬಲಿಷ್ಠ ಆಟಗಾರರಿದ್ದರೆ, ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಆ ರೀತಿ ಪ್ರಯತ್ನಿಸಬಹುದು. ಆದರೆ ಉಳಿದವರಿಗೆ ಕಲಿಯಲು ಅವಕಾಶ ನೀಡಲು ನೀವು ಒಬ್ಬ ಅಥವಾ ಇಬ್ಬರು ಅನುಭವಿ ಬ್ಯಾಟ್ಸ್‌ಮನ್‌ಗಳು ಅಥವಾ ಬೌಲರ್‌ಗಳನ್ನು ತಂಡದಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ.

IND vs SA: ‘ನಿರ್ಧಾರ ಬಿಸಿಸಿಐಗೆ ಬಿಟ್ಟಿದ್ದು’; ಅವಮಾನಕರ ಸೋಲಿನ ನಂತರ ಗಂಭೀರ್ ಹೇಳಿದ್ದಿದು

ಬೇಸರ ವ್ಯಕ್ತಪಡಿಸಿದ ವೆಂಕಟೇಶ್

ಅನಿಲ್ ಕುಂಬ್ಳೆ ಅವರಂತೆಯೇ ಬೇಸರ ವ್ಯಕ್ತಪಡಿಸಿರುವ ಮಾಜಿ ವೇಗಿ ವೆಂಕಟೇಶ್ ಪ್ರಸಾದ್,‘ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿಧಾನದಿಂದ ನಾನು ನಿರಾಶೆಗೊಂಡಿದ್ದೇನೆ. ಆಲ್‌ರೌಂಡರ್‌ಗಳನ್ನು ತಂಡಕ್ಕೆ ಸೇರಿಸಿಕೊಂಡು ಅವರಿಗೆ ಬೌಲಿಂಗ್ ನೀಡದಿದ್ದರೆ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಳಪೆ ತಂತ್ರ, ಕಳಪೆ ಕೌಶಲ್ಯ ಮತ್ತು ಕಳಪೆ ದೇಹ ಭಾಷೆ ಎರಡು ಸರಣಿ ವೈಟ್‌ವಾಶ್‌ಗಳಿಗೆ ಕಾರಣವಾಗಿದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Wed, 26 November 25

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ
ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ