ಹಲವು ಏಳು- ಬೀಳುಗಳೊಂದಿಗೆ 2022ರ ವರ್ಷವನ್ನು ಮುಗಿಸಿರುವ ಟೀಂ ಇಂಡಿಯಾಕ್ಕೆ (Team India) ಇಡೀ ವರ್ಷ ಯಾವುದೇ ಐಸಿಸಿ ಈವೆಂಟ್ಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಇದೀಗ ಲಂಕಾ ವಿರುದ್ಧದ ತವರು ಸರಣಿಯೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಳ್ಳಲ್ಲಿರುವ ಟೀಂ ಇಂಡಿಯಾ ((India vs Srilanka)) 2023ರಲ್ಲಿ ಫುಲ್ ಬ್ಯುಸಿಯಾಗಿರಲಿದೆ. ಈಗಿನ ವೇಳಾಪಟ್ಟಿಯಂತೆ ಟೀಂ ಇಂಡಿಯಾ ಮುಂದಿನ ವರ್ಷ ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸರಣಿ ಆಡಲಿದೆ. ಅದೇ ಹೊತ್ತಿಗೆ ಐಪಿಎಲ್ (IPL) 16ನೇ ಸೀಸನ್ನಲ್ಲಿ ಭಾರತದ ಆಟಗಾರರು ಸದ್ದು ಮಾಡಲಿದ್ದಾರೆ. ಆ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಮಾಡಲ್ಲಿರುವ ಟೀಂ ಇಂಡಿಯಾ ಅಲ್ಲಿಂದ ವಾಪಸ್ಸಾದ ನಂತರ ಭಾರತದಲ್ಲೇ ಆಯೋಜನೆಯಾಗುತ್ತಿರುವ ಏಕದಿನ ವಿಶ್ವಕಪ್ (World Cup) ನಲ್ಲಿ ಕಣಕ್ಕಿಳಿಯಲಿದೆ. ನಂತರ ಪಾಕಿಸ್ತಾನ ಆತಿಥ್ಯವಹಿಸಿರುವ ಏಷ್ಯಾಕಪ್ (Asia Cup) ಕೂಡ ಆಡಬೇಕಿದೆ. ಇವೆಲ್ಲ ಹೋರಾಟಗಳ ಬಳಿಕ ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಇದರೊಂದಿಗೆ ಟೀಂ ಇಂಡಿಯಾ ವರ್ಷವನ್ನು ಅಂತ್ಯಗೊಳಿಸಲಿದೆ.
2023ರಲ್ಲಿ ಎರಡು ದೊಡ್ಡ ಐಸಿಸಿ ಟೂರ್ನಿಗಳು ನಡೆಯಲಿವೆ. ಇದರೊಂದಿಗೆ ಏಷ್ಯಾಕಪ್ ಟೂರ್ನಿಯೂ ನಡೆಯಲಿದೆ. ಇದರಲ್ಲಿ ಎರಡು ಪ್ರಮುಖ ಐಸಿಸಿ ಈವೆಂಟ್ಗಳೆಂದರೆ, ಒಂದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಮತ್ತು ಇನ್ನೊಂದು 2023ರ ಏಕದಿನ ವಿಶ್ವಕಪ್. ಹಾಗೆಯೇ 2023 ರಲ್ಲಿ ಏಷ್ಯಾಕಪ್ ಕೂಡ ನಡೆಯಲ್ಲಿದೆ.
ಮೊದಲು ಐಪಿಎಲ್ನಲ್ಲಿ ಕೋಟಿ ಲೂಟಿ, ಈಗ ತಂಡಕ್ಕೆ ಎಂಟ್ರಿ! ಐದೇ ದಿನದಲ್ಲಿ ಬದಲಾಯ್ತು ಟ್ಯಾಕ್ಸಿ ಡ್ರೈವರ್ ಮಗನ ಬದುಕು
2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಇದು ಟೂರ್ನಿಯಲ್ಲಿ ಟೀಂ ಇಂಡಿಯಾಕ್ಕೆ ಅತ್ಯಂತ ನಿರ್ಣಾಯಕವಾಗಲಿದೆ. ಟೀಂ ಇಂಡಿಯಾ 2011ರಲ್ಲಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿತ್ತು. ಏತನ್ಮಧ್ಯೆ, 2013 ರಿಂದ ಟೀಂ ಇಂಡಿಯಾ ಯಾವುದೇ ಐಸಿಸಿ ಈವೆಂಟ್ ಗೆದ್ದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ 2023ರ ಏಕದಿನ ವಿಶ್ವಕಪ್ ಅನ್ನು ತಮ್ಮ ತಾಯ್ನಾಡಿನಲ್ಲಿ ಗೆಲ್ಲುವ ಭರವಸೆಯಲ್ಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:53 am, Wed, 28 December 22