ಮೊದಲು ಐಪಿಎಲ್​ನಲ್ಲಿ ಕೋಟಿ ಲೂಟಿ, ಈಗ ತಂಡಕ್ಕೆ ಎಂಟ್ರಿ! ಐದೇ ದಿನದಲ್ಲಿ ಬದಲಾಯ್ತು ಟ್ಯಾಕ್ಸಿ ಡ್ರೈವರ್ ಮಗನ ಬದುಕು

IND vs SL: ಐಪಿಎಲ್‌ನ ಕೊನೆಯ ಸೀಸನ್‌ನಲ್ಲಿ ಮಾರಾಟವಾಗದೇ ಉಳಿದಿದ್ದ ಮುಖೇಶ್‌ಗೆ ಒಂದೇ ವರ್ಷದಲ್ಲಿ ತನ್ನ ಬದುಕು ಈ ರೀತಿಯ ಟರ್ನಿಂಗ್ ತೆಗೆದುಕೊಳ್ಳುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ ಎನಿಸುತ್ತದೆ.

ಮೊದಲು ಐಪಿಎಲ್​ನಲ್ಲಿ ಕೋಟಿ ಲೂಟಿ, ಈಗ ತಂಡಕ್ಕೆ ಎಂಟ್ರಿ! ಐದೇ ದಿನದಲ್ಲಿ ಬದಲಾಯ್ತು ಟ್ಯಾಕ್ಸಿ ಡ್ರೈವರ್ ಮಗನ ಬದುಕು
Mukesh KumarImage Credit source: Hindustan Times
Follow us
TV9 Web
| Updated By: ಪೃಥ್ವಿಶಂಕರ

Updated on:Dec 28, 2022 | 11:25 AM

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು (India vs Srilanka) ಪ್ರಕಟಿಸಲಾಗಿದೆ. ಈ ತವರು ಸರಣಿಯಿಂದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ (Rohit Sharma , Virat Kohli) ವಿಶ್ರಾಂತಿ ನೀಡಲಾಗಿದೆ. ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ತಂಡ ಶ್ರೀಲಂಕಾ ವಿರುದ್ಧ ಮೈದಾನಕ್ಕಿಳಿಯಲಿದೆ. ಅಲ್ಲದೆ ಈ ಸರಣಿಯಲ್ಲಿ ಅನುಭವಿ ಬ್ಯಾಟರ್​ಗಳ ಜೊತೆಗೆ ಅನುಭವಿ ಬೌಲರ್​ಗಳು ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಅದರಲ್ಲಿ ಪ್ರಮುಖ ಎರಡು ಹೆಸರುಗಳೆಂದರೆ, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್ (Shivam Mavi, Mukesh Kumar). ಅದರಲ್ಲೂ ಕಳೆದ 5 ದಿನಗಳಿಂದ ಕ್ರಿಕೆಟ್​ ಲೋಕದಲ್ಲಿ ಸಖತ್ ಸಂಚಲನ ಮೂಡಿಸುತ್ತಿರುವ ಮುಖೇಶ್ ಕುಮಾರ್ ಒಂದರ ಮೇಲೊಂದು ಸಿಹಿ ಸುದ್ದಿ ಪಡೆಯುತ್ತಿದ್ದಾರೆ.

ಸರಿಯಾಗಿ 5 ದಿನಗಳ ಹಿಂದೆ ಐಪಿಎಲ್ ಮಿನಿ ಹರಾಜಿನಲ್ಲಿ ಕೋಟಿ ಕೋಟಿಗೆ ದೆಹಲಿ ಸೇರಿಕೊಂಡಿದ್ದ ಮುಖೇಶ್​ಗೆ ಇದೀಗ ಟೀಂ ಇಂಡಿಯಾಕ್ಕೆ ಎಂಟ್ರಿ ಸಿಕ್ಕಿದೆ. ಇದೇ 23 ರಂದು ನಡೆದ ಐಪಿಎಲ್ ಹರಾಜಿನಲ್ಲಿ ಮುಖೇಶ್​ಗೆ ಭಾರಿ ಬೇಡಿಕೆ ಕಂಡು ಬಂದಿತ್ತು. ಬಹುತೇಕ ಎಲ್ಲಾ ಫ್ರಾಂಚೈಸಿಗಳು ಈ ಆಟಗಾರನ ಖರೀದಿಗಾಗಿ ಮುಗಿಬಿದ್ದಿದ್ದವು. 20 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜಿಗಿಳಿದಿದ್ದ ಮುಖೇಶ್​ ಅವರನ್ನು ಬರೋಬ್ಬರಿ 5.50 ಕೋಟಿ ರೂ.ನೀಡಿ ದೆಹಲಿ ಕ್ಯಾಪಿಟಲ್ಸ್ ತಂಡ ಖರೀದಿಸಿತ್ತು.

IND vs SL: ಟೀಂ ಇಂಡಿಯಾದಿಂದ ರಿಷಬ್ ಪಂತ್ ಹೊರಬಿದ್ದಿದ್ಯಾಕೆ? ಇಲ್ಲಿದೆ ಶಾಕಿಂಗ್ ನ್ಯೂಸ್

ಸುದೀರ್ಘ ಹೋರಾಟದ ಫಲಿತಾಂಶ

ಐಪಿಎಲ್‌ನ ಕೊನೆಯ ಸೀಸನ್‌ನಲ್ಲಿ ಮಾರಾಟವಾಗದೇ ಉಳಿದಿದ್ದ ಮುಖೇಶ್‌ಗೆ ಒಂದೇ ವರ್ಷದಲ್ಲಿ ತನ್ನ ಬದುಕು ಈ ರೀತಿಯ ಟರ್ನಿಂಗ್ ತೆಗೆದುಕೊಳ್ಳುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ ಎನಿಸುತ್ತದೆ. ಐಪಿಎಲ್‌ನಲ್ಲಿ ಕೋಟಿಗೆ ಹರಾಜಾದ ಸಂಭ್ರಮದಲ್ಲಿರುವ ಮುಖೇಶ್​ಗೆ ಬಿಸಿಸಿಐ ಪಾಳಯದಿಂದ ಮತ್ತೊಂದು ಸಂತಸ ಸುದ್ದಿ ಸಿಕ್ಕಿದೆ. 29ರ ಹರೆಯದ ಮುಕೇಶ್‌ರನ್ನು ಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿದೆ.

ಸೇನೆಗೆ ಸೇರಲು ಬಯಸಿದ್ದ ಮುಖೇಶ್

ಬಿಹಾರದಲ್ಲಿ ಜನಿಸಿದ ಮುಖೇಶ್ ಬಂಗಾಳ ಪರ ದೇಶೀಯ ಕ್ರಿಕೆಟ್ ಆಡುತ್ತಾರೆ. ಕ್ರಿಕೆಟ್​ನಲ್ಲಿ ತನ್ನ ಬದುಕನ್ನು ಕಂಡುಕೊಳ್ಳುವ ಮುನ್ನ ಸೇನಾ ನೇಮಕಾತಿಗೂ ಅರ್ಜಿ ಸಲ್ಲಿಸಿದ್ದ ಮುಖೇಶ್​ ನೌಕರಿ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಆದರೆ ಕಠಿಣ ಶ್ರಮದಿಂದ ಕ್ರಿಕೆಟ್​ನಲ್ಲಿ ತನ್ನ ಬದುಕನ್ನು ಕಟ್ಟಿಕೊಂಡಿರುವ ಮುಕೇಶ್ ಅವರ ತಂದೆ ವೃತ್ತಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದಾರೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ದೇಶೀ ಕ್ರಿಕೆಟ್​ನಲ್ಲಿ ಮುಖೇಶ್ ಪ್ರದರ್ಶನ

ಬಂಗಾಳದ ಎರಡನೇ ದರ್ಜೆಯ ಕ್ಲಬ್‌ಗೆ ಸೇರುವ ಮೂಲಕ ಕ್ರಿಕೆಟ್ ಆಡಲು ಪ್ರಾರಂಭಿಸಿದ ಮುಖೇಶ್, ಸತತ ಪರಿಶ್ರಮದ ಆಧಾರದ ಮೇಲೆ 2015ರಲ್ಲಿ ಬಂಗಾಳದ ರಣಜಿ ತಂಡಕ್ಕೂ ಆಯ್ಕೆಯಾದರು. ಇನ್ನು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 33 ಪಂದ್ಯಗಳನ್ನಾಡಿರುವ ಮುಖೇಶ್, 123 ವಿಕೆಟ್ಗಳನ್ನು ಪಡೆದಿದ್ದಾರೆ. ಹಾಗೆಯೇ ಲಿಸ್ಟ್ ಎ ನಲ್ಲಿ 26 ವಿಕೆಟ್ ಹಾಗೂ ಟಿ20 ಪಂದ್ಯಗಳಲ್ಲಿ 25 ವಿಕೆಟ್ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:21 am, Wed, 28 December 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್