
ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಗೆದ್ದಿರುವ ಟೀಂ ಇಂಡಿಯಾ (Team India) ಹಲವು ದಾಖಲೆಗಳೊಂದಿಗೆ ಚುಟುಕು ಸಮರಕ್ಕೆ ವಿದಾಯ ಹೇಳಿದೆ. ಕಳೆದೊಂದು ತಿಂಗಳಿಂದ ಟಿ20 ವಿಶ್ವಕಪ್ನಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾ ಇದೀಗ ವಿಶ್ರಾಂತಿ ಜಾರಿದೆ. ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯವನ್ನು ಮುಗಿಸಿ ತಂಡದೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ ಆಟಗಾರರು ಇದೀಗ ತಮ್ಮ ತಮ್ಮ ಮನೆಗಳತ್ತ ಮುಖಮಾಡಿದ್ದಾರೆ. ಟಿ20 ವಿಶ್ವಕಪ್ ಗೆದ್ದ ಖುಷಿಯನ್ನು ಇನ್ನು ಕೆಲವು ದಿನ ಆಚರಿಸಲಿದ್ದಾರೆ. ಇದು ಟೀಂ ಇಂಡಿಯಾ ಆಟಗಾರರ ಕಥೆಯಾದರೆ, ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸದೊಂದು ಪ್ರಶ್ನೆ ಮೂಡಿದೆ. ಅದೆನೇಂದರೆ ಟೀಂ ಇಂಡಿಯಾ ಮತ್ತೆ ಅಖಾಡಕ್ಕಿಳಿಯುವುದು ಯಾವಾಗ ಎಂಬುದು?
ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಟೀಂ ಇಂಡಿಯಾ 96 ದಿನಗಳ ಕಾಲ ಕ್ರಿಕೆಟ್‌ನಿಂದ ದೂರವಿರಲಿದೆ. ಆ ಬಳಿಕ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಸರಣಿ ಆಡಲಿದೆ. ಜೂನ್ 6 ರಂದು ನ್ಯೂ ಚಂಡೀಗಢದಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಇದರ ನಂತರ ಟೀಂ ಇಂಡಿಯಾ, ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಆಡಲಿದ್ದಾರೆ. ಈ ಸರಣಿಗೂ ಮೊದಲು ಭಾರತೀಯ ತಂಡವನ್ನು ನೋಡಲಾಗುವುದಿಲ್ಲವಾದರೂ, ಟೀಂ ಇಂಡಿಯಾ ಆಟಗಾರರು ಖಂಡಿತವಾಗಿಯೂ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾರ್ಚ್ 28 ರಿಂದ ಪ್ರಾರಂಭವಾಗುವ ಐಪಿಎಲ್‌ನಲ್ಲಿ ಭಾರತೀಯ ಆಟಗಾರರು ತಮ್ಮ ತಮ್ಮ ತಂಡಗಳನ್ನು ಪ್ರತಿನಿಧಿಸಲಿದ್ದಾರೆ. ಈ ಪಂದ್ಯಾವಳಿಯ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದೆ.
ಟಿ20 ವಿಶ್ವಕಪ್ ಗೆದ್ದು ನಿವೃತ್ತಿಯ ಬಗ್ಗೆ ಮೌನ ಮುರಿದ ಸೂರ್ಯಕುಮಾರ್ ಯಾದವ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ