Team India: ಭಾರತ ತಂಡದ ಮುಂಬರುವ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

T20 World Cup 2024 Final: ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 176 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 20 ಓವರ್​ಗಳಲ್ಲಿ 169 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 7 ರನ್​ಗಳ ರೋಚಕ ಜಯ ಸಾಧಿಸಿ ವ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತ ತಂಡ ಐಸಿಸಿ ಟೂರ್ನಿ ಮುಗಿಸಿದ್ದು, ಇನ್ನು ಹಲವು ಸರಣಿಗಳನ್ನು ಆಡಲಿದೆ. ಈ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

Team India: ಭಾರತ ತಂಡದ ಮುಂಬರುವ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ
Team India
Follow us
|

Updated on: Jun 30, 2024 | 12:49 PM

T20 World Cup 2024: ಟಿ20 ವಿಶ್ವಕಪ್ ಮುಕ್ತಾಯಗೊಂಡಿದೆ. 20 ತಂಡಗಳ ನಡುವಣ ಕದನದಲ್ಲಿ ಅಂತಿಮವಾಗಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಐಸಿಸಿ ಟ್ರೋಫಿ ಗೆಲ್ಲುವ ಭಾರತ ತಂಡದ 11 ವರ್ಷಗಳ ಕನಸು ಕೂಡ ನನಸಾಗಿದೆ. ಇನ್ನೇನಿದ್ದರೂ ಸರಣಿಗಳ ಕದನ. ಅಂದರೆ 2025ರ ಚಾಂಪಿಯನ್ಸ್ ಟ್ರೋಫಿವರೆಗೂ, ಭಾರತ ತಂಡವು ಹಲವು ಸರಣಿಗಳನ್ನಾಡಲಿದೆ. ಈ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…

ಭಾರತ vs ಝಿಬಾಬ್ವೆ ಸರಣಿ:

2024ರ ಟಿ20 ವಿಶ್ವಕಪ್ ವಿಜಯದ ಬೆನ್ನಲ್ಲೇ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಗಾಗಿ ಝಿಂಬಾಬ್ವೆಗೆ ತೆರಳಲಿದೆ. ಜುಲೈ 6 ರಿಂದ ಶುರುವಾಗಲಿರುವ ಈ ಸರಣಿಗಾಗಿ ಟೀಮ್ ಇಂಡಿಯಾ ಯುವ ಪಡೆಯನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಈ ಸರಣಿಯಲ್ಲಿ ಭಾರತ ತಂಡವನ್ನು ಶುಭ್​ಮನ್ ಗಿಲ್ ಮುನ್ನಡೆಸಲಿದ್ದಾರೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟಿ20, ಝಿಂಬಾಬ್ವೆ vs ಭಾರತ ಶನಿವಾರ, 6 ಜುಲೈ 2024 4:30 PM ಹರಾರೆ
2ನೇ ಟಿ20, ಝಿಂಬಾಬ್ವೆ vs ಭಾರತ ಭಾನುವಾರ, 7 ಜುಲೈ 2024 4:30 PM ಹರಾರೆ
3ನೇ ಟಿ20, ಝಿಂಬಾಬ್ವೆ vs ಭಾರತ ಬುಧವಾರ, 10 ಜುಲೈ 2024 9:30 PM ಹರಾರೆ
4ನೇ ಟಿ20, ಝಿಂಬಾಬ್ವೆ vs ಭಾರತ ಶನಿವಾರ, 13 ಜುಲೈ 2024 4:30 PM ಹರಾರೆ
5ನೇ ಟಿ20, ಝಿಂಬಾಬ್ವೆ vs ಭಾರತ ಭಾನುವಾರ, 14 ಜುಲೈ 2024 4:30 PM ಹರಾರೆ

ಭಾರತ vs ಶ್ರೀಲಂಕಾ ಸರಣಿ:

ಝಿಂಬಾಬ್ವೆ ಪ್ರವಾಸದ ಬಳಿಕ ಭಾರತ ತಂಡವು ಶ್ರೀಲಂಕಾ ವಿರುದ್ಧ ಸರಣಿ ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಒಟ್ಟು 6 ಪಂದ್ಯಗಳನ್ನಾಡಲಿದೆ. ಈ ಸರಣಿಯ ದಿನಾಂಕವನ್ನು ಇನ್ನೂ ಕೂಡ ಖಚಿತಪಡಿಸಿಲ್ಲ. ಇದಾಗ್ಯೂ ಜುಲೈ 27 ರಿಂದ ಆಗಸ್ಟ್ 7 ರ ನಡುವೆ ಭಾರತ ಮತ್ತು ಶ್ರೀಲಂಕಾ ತಂಡಗಳು 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ ಎಂದು ತಿಳಿದು ಬಂದಿದೆ.

ಭಾರತ vs ಬಾಂಗ್ಲಾದೇಶ್ ಸರಣಿ:

ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶ್ ತಂಡವು ಸರಣಿ ಆಡಲು ಭಾರತಕ್ಕೆ ಬರಲಿದೆ. ಈ ವೇಳೆ 2 ಟೆಸ್ಟ್ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಗುರುವಾರ, 19 ಸೆಪ್ಟೆಂಬರ್ 2024 9:30 AM ಚೆನ್ನೈ
2ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ ಶುಕ್ರವಾರ, 27 ಸೆಪ್ಟೆಂಬರ್ 2024 9:30 AM ಕಾನ್ಪುರ
1ನೇ ಟಿ20, ಭಾರತ vs ಬಾಂಗ್ಲಾದೇಶ ಭಾನುವಾರ, 6 ಅಕ್ಟೋಬರ್ 2024 7 PM ಧರ್ಮಶಾಲಾ
2ನೇ ಟಿ20, ಭಾರತ vs ಬಾಂಗ್ಲಾದೇಶ ಬುಧವಾರ, 9 ಅಕ್ಟೋಬರ್ 2024 7 PM ದೆಹಲಿ
3ನೇ ಟಿ20, ಭಾರತ vs ಬಾಂಗ್ಲಾದೇಶ ಶನಿವಾರ, 12 ಅಕ್ಟೋಬರ್ 2024 7 PM ಹೈದರಾಬಾದ್

ಭಾರತ vs ನ್ಯೂಝಿಲೆಂಡ್ ಸರಣಿ:

ಬಾಂಗ್ಲಾದೇಶದ ನಂತರ, ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯ ವೇಳಾಪಟ್ಟಿ ಇಲ್ಲಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಬುಧವಾರ, 16 ಅಕ್ಟೋಬರ್ 2024 9:30 AM ಚೆನ್ನೈ
2ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಗುರುವಾರ, 24 ಅಕ್ಟೋಬರ್ 2024 9:30 AM ಕಾನ್ಪುರ
3ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ ಶುಕ್ರವಾರ, 1 ನವೆಂಬರ್ 2024 9:30 AM ಹೈದರಾಬಾದ್

ಭಾರತ vs ಸೌತ್ ಆಫ್ರಿಕಾ:

ಟಿ20 ವಿಶ್ವಕಪ್​ನ ಫೈನಲಿಸ್ಟ್​ಗಳಾದ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ನವೆಂಬರ್​ನಲ್ಲಿ ಮತ್ತೆ ಮುಖಾಮುಖಿಯಾಗಲಿದೆ. 4 ಟಿ20 ಪಂದ್ಯಗಳ ಈ ಸರಣಿಗೆ ಸೌತ್ ಆಫ್ರಿಕಾ ಆತಿಥ್ಯವಹಿಸಲಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟಿ20, ಸೌತ್ ಆಫ್ರಿಕಾ vs ಭಾರತ ಶುಕ್ರವಾರ, 8 ನವೆಂಬರ್ 2024 8:30 PM ಡರ್ಬನ್
2ನೇ ಟಿ20, ಸೌತ್ ಆಫ್ರಿಕಾ vs ಭಾರತ ಭಾನುವಾರ, 10 ನವೆಂಬರ್ 2024 8:30 PM ಗ್ಕೆಬರ್ಹಾ
3ನೇ ಟಿ20, ಸೌತ್ ಆಫ್ರಿಕಾ vs ಭಾರತ ಬುಧವಾರ, 13 ನವೆಂಬರ್ 2024 8:30 PM ಸೆಂಚುರಿಯನ್
4ನೇ ಟಿ20, ಸೌತ್ ಆಫ್ರಿಕಾ vs ಭಾರತ ಶುಕ್ರವಾರ, 15 ನವೆಂಬರ್ 2024 8:30 PM ಜೋಹಾನ್ಸ್‌ಬರ್ಗ್

ಭಾರತ vs ಆಸ್ಟ್ರೇಲಿಯಾ ಸರಣಿ:

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಕೊನೆಯ ಟೆಸ್ಟ್ ಸರಣಿಯನ್ನು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಕಾಂಗರೂಗಳ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 22 ನವೆಂಬರ್ 2024 7:50 AM ಪರ್ತ್
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) ಶುಕ್ರವಾರ, 6 ಡಿಸೆಂಬರ್ 2024 9:30 AM ಅಡಿಲೇಡ್
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶನಿವಾರ, 14 ಡಿಸೆಂಬರ್ 2024 5:50 AM ಬ್ರಿಸ್ಬೇನ್
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಗುರುವಾರ, 26 ಡಿಸೆಂಬರ್ 2024 5 AM ಮೆಲ್ಬೋರ್ನ್
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ ಶುಕ್ರವಾರ, 3 ಜನವರಿ 2025 5 AM ಸಿಡ್ನಿ

ಭಾರತ vs ಇಂಗ್ಲೆಂಡ್ ಸರಣಿ:

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಮ್ ಇಂಡಿಯಾ ಹೊಸ ವರ್ಷಕ್ಕೆ ಕಾಲಿಡಲಿದ್ದು, 2025 ರಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ.

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟಿ20, ಭಾರತ vs ಇಂಗ್ಲೆಂಡ್ ಬುಧವಾರ, 22 ಜನವರಿ 2025 7 PM ಚೆನ್ನೈ
2ನೇ ಟಿ20, ಭಾರತ vs ಇಂಗ್ಲೆಂಡ್ ಶನಿವಾರ, 25 ಜನವರಿ 2025 7 PM ಕೋಲ್ಕತ್ತಾ
3ನೇ ಟಿ20, ಭಾರತ vs ಇಂಗ್ಲೆಂಡ್ ಮಂಗಳವಾರ, 28 ಜನವರಿ 2025 7 PM ರಾಜ್ಕೋಟ್
4ನೇ ಟಿ20, ಭಾರತ vs ಇಂಗ್ಲೆಂಡ್ ಶುಕ್ರವಾರ, 31 ಜನವರಿ 2025 7 PM ಪುಣೆ
5ನೇ ಟಿ20, ಭಾರತ vs ಇಂಗ್ಲೆಂಡ್ ಭಾನುವಾರ, 2 ಫೆಬ್ರವರಿ 2025 7 PM ಮುಂಬೈ
1ನೇ ಏಕದಿನ, ಭಾರತ vs ಇಂಗ್ಲೆಂಡ್ ಗುರುವಾರ, 6 ಫೆಬ್ರವರಿ 2025 1:30 PM ನಾಗ್ಪುರ
2ನೇ ಏಕದಿನ, ಭಾರತ vs ಇಂಗ್ಲೆಂಡ್ ಭಾನುವಾರ, 9 ಫೆಬ್ರವರಿ 2025 1:30 PM ಕಟಕ್
3ನೇ ಏಕದಿನ, ಭಾರತ vs ಇಂಗ್ಲೆಂಡ್ ಬುಧವಾರ, 12 ಫೆಬ್ರವರಿ 2025 1:30 PM ಅಹಮದಾಬಾದ್

ಇದನ್ನೂ ಓದಿ: Virat Kohli: ಕೊನೆಯ ಪಂದ್ಯದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ವಿರಾಟ್ ಕೊಹ್ಲಿ

ಚಾಂಪಿಯನ್ಸ್ ಟ್ರೋಫಿ:

ಫೆಬ್ರವರಿ ಮೂರನೇ ವಾರದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗುವ ಸಾಧ್ಯತೆಯಿದ್ದು, ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೆ ಈ ಟೂರ್ನಿಯ ಬಳಿಕ ಭಾರತೀಯ ಆಟಗಾರರು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
‘ದರ್ಶನ್ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಭಾರೀ ಮಳೆಯಿಂದ ಟ್ರಾಫಿಕ್ ಮಧ್ಯೆ 8 ಅಡಿ ಉದ್ದದ ಮೊಸಳೆ ಪ್ರತ್ಯಕ್ಷ!
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಅಪ್ಪ ಕೊಚ್ಚಿ ಹೋಗುವ ವಿಡಿಯೋ ಮಗಳ ಮೊಬೈಲ್​ನಲ್ಲಿ ಸೆರೆ
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಪಿಕ್ನಿಕ್ ಹೋದ ಐವರು ಜಲಪಾತದಲ್ಲಿ ಕೊಚ್ಚಿ ಹೋದ ಭಯಾನಕ ವಿಡಿಯೋ ವೈರಲ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಸಿದ್ದರಾಮಯ್ಯ ಮೇಲಿನ ವೈರತ್ವ ಮಗನ ಮೇಲೆ ಸಾಧಿಸುವುದು ಸರಿಯಲ್ಲ:ಭೈರತಿ ಸುರೇಶ್
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಶೇ 60 ರಷ್ಟು ಕನ್ನಡ ಕಡ್ಡಾಯ; ಸರ್ಕಾರದಿಂದ  ಸೂಕ್ತ ಕ್ರಮ: ನಾರಾಯಣಗೌಡ, ಕರವೇ
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಪ್ರಜ್ವಲ್​ ಮಾತಾಡಿಸಲು ಜೈಲಿಗೆ ಬಂದ ಭವಾನಿ ಮಾಧ್ಯಮಗಳಿಗೆ ಮುಖ ತೋರಿಸಲಿಲ್ಲ!
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ಸ್ಟಿಕ್ ಹಿಡಿದು ಕುಂಟುತ್ತ ಪ್ರಜ್ವಲ್​ ನೋಡಲು ಬಂದ ಭವಾನಿ ರೇವಣ್ಣ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ರಾಹುಲ್ ಎಂದಿಗೂ ಹಿಂದೂ ವಿರೋಧಿಯಲ್ಲ; ಪ್ರಿಯಾಂಕಾ ಗಾಂಧಿ ಸ್ಪಷ್ಟನೆ
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್
ಪಕ್ಷದ ಶಿಸ್ತು ಮೀರುವವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು: ಡಿಕೆ ಶಿವಕುಮಾರ್