IND vs NZ: ಬೆಂಗಳೂರು ಟೆಸ್ಟ್ ಮಳೆಗಾಹುತಿಯಾದರೆ ಟೀಂ ಇಂಡಿಯಾಕ್ಕಾಗುವ ನಷ್ಟವೇನು?

WTC Final: ಬೆಂಗಳೂರು ಟೆಸ್ಟ್ ಹೊರತುಪಡಿಸಿ ಉಳಿದ 7 ಪಂದ್ಯಗಳಲ್ಲಿ ಭಾರತ ತಂಡ 3ರಲ್ಲಿ ಗೆಲುವು ಸಾಧಿಸಿದರೂ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಲಿದೆ. ಆದರೆ, ಈ ಪರಿಸ್ಥಿತಿಯಲ್ಲಿ ರೋಹಿತ್ ಪಡೆ ಇತರೆ ತಂಡಗಳ ಫಲಿತಾಂಶದ ಮೇಲೂ ನಿಗಾ ಇಡಬೇಕಿದೆ.

IND vs NZ: ಬೆಂಗಳೂರು ಟೆಸ್ಟ್ ಮಳೆಗಾಹುತಿಯಾದರೆ ಟೀಂ ಇಂಡಿಯಾಕ್ಕಾಗುವ ನಷ್ಟವೇನು?
ಟೀಂ ಇಂಡಿಯಾ
Follow us
|

Updated on:Oct 16, 2024 | 10:53 PM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ಇಂದಿನಿಂದ ಅಂದರೆ ಅಕ್ಟೋಬರ್ 16 ರಿಂದ ಆರಂಭವಾಗಬೇಕಿತ್ತು. ಆದರೆ ಮಳೆಯಿಂದಾಗಿ ಟೆಸ್ಟ್‌ನ ಮೊದಲ ದಿನದಾಟವನ್ನು ರದ್ದುಗೊಳಿಸಲಾಗಿದೆ. ಅಲ್ಲದೆ ಟೆಸ್ಟ್​ನ ಉಳಿದ ನಾಲ್ಕು ದಿನಗಳಲ್ಲೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಬೆಂಗಳೂರು ಟೆಸ್ಟ್ ಪಂದ್ಯ ಮಳೆಯಿಂದ ಡ್ರಾದಲ್ಲಿ ಅಂತ್ಯಗೊಂಡರೆ ಟೀಂ ಇಂಡಿಯಾಕ್ಕೆ ಭಾರಿ ಹೊಡೆತ ಬೀಳಲಿದೆ. ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ಗೆ ಪ್ರಬಲ ಸ್ಪರ್ಧಿಯಾಗಿರುವ ಟೀಂ ಇಂಡಿಯಾ, ಮೊದಲ ಟೆಸ್ಟ್ ಡ್ರಾ ಆದರೆ ಸಾಕಷ್ಟು ಹಿನ್ನಡೆ ಅನುಭವಿಸಲಿದೆ.

ಬೆಂಗಳೂರು ಟೆಸ್ಟ್ ಡ್ರಾಗೊಂಡರೆ ಏನಾಗಬಹುದು?

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಡ್ರಾಗೊಂಡರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ರೇಸ್​ನಲ್ಲಿರುವ ಟೀಂ ಇಂಡಿಯಾಕ್ಕೆ ಅಂಕಗಳ ವಿಚಾರದಲ್ಲಿ ಭಾರಿ ಹೊಡೆತ ಬೀಳಲಿದೆ. ವಾಸ್ತವವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಅಡಿಯಲ್ಲಿ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲುವ ತಂಡಕ್ಕೆ 12 ಅಂಕಗಳನ್ನು ನೀಡಲಾಗುತ್ತದೆ. ಒಂದು ವೇಳೆ ಪಂದ್ಯ ಟೈ ಆದರೆ ಉಭಯ ತಂಡಗಳಿಗೆ ತಲಾ 6 ಅಂಕ ನೀಡಲಾಗುತ್ತದೆ. ಹಾಗೆಯೇ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ ಆಗ ಎರಡೂ ತಂಡಗಳಿಗು ತಲಾ 4 ಅಂಕಗಳನ್ನು ನೀಡಲಾಗುತ್ತದೆ. ಹೀಗಾಗಿ ಬೆಂಗಳೂರು ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡರೆ ಟೀಂ ಇಂಡಿಯಾಕ್ಕೆ ಕೇವಲ 4 ಅಂಕಗಳು ಸಿಗಲಿವೆ.

ಪ್ರಸ್ತುತ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನಲ್ಲಿ ಟೀಂ ಇಂಡಿಯಾ ಇದುವರೆಗೆ ಒಟ್ಟು 11 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಉಳಿದಂತೆ ಒಂದು ಪಂದ್ಯ ಡ್ರಾ ಆಗಿದೆ. ಈ ಪ್ರದರ್ಶನದೊಂದಿಗೆ ರೋಹಿತ್ ಪಡೆ ಶೇ.74.24 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತಕ್ಕಿಂತ ಸ್ವಲ್ಪ ಹಿಂದಿರುವ ಆಸ್ಟ್ರೇಲಿಯಾ ತಂಡದ ಗೆಲುವಿನ ಶೇಕಡಾವಾರು 62.50 ಆಗಿದೆ. ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾದ ಗೆಲುವಿನ ಶೇಕಡಾವಾರು 55.56 ಇದ್ದರೆ, ಇಂಗ್ಲೆಂಡ್ ತಂ 45.59 ಗೆಲುವಿನ ಶೇಕಡಾವಾರುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

4 ಪಂದ್ಯ ಗೆದ್ದರೆ ಫೈನಲ್ ಹಾದಿ ಸುಗಮ

ಇದೀಗ ರೋಹಿತ್ ಪಡೆ ಸತತ ಮೂರನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಆಡಬೇಕಾದರೆ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆಲ್ಲಲೇಬೇಕು. ಬೆಂಗಳೂರು ಟೆಸ್ಟ್ ಹೊರತುಪಡಿಸಿ, ಭಾರತ ಇನ್ನೂ 7 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿದೆ. ಅದರಲ್ಲಿ ಎರಡು ಪಂದ್ಯಗಳು ನ್ಯೂಜಿಲೆಂಡ್ ವಿರುದ್ಧ ತವರು ನೆಲದಲ್ಲಿ ನಡೆದರೆ, ಉಳಿದ ಐದು ಪಂದ್ಯಗಳು ಆಸ್ಟ್ರೇಲಿಯಾ ವಿರುದ್ಧ ಅವರ ನೆಲದಲ್ಲಿ ನಡೆಯಲ್ಲಿದೆ. ರೋಹಿತ್ ಪಡೆ ಉಳಿದಿರುವ ಎರಡು ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಆಸ್ಟ್ರೇಲಿಯಾ ವಿರುದ್ಧ ಕನಿಷ್ಠ ಎರಡು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಒಂದು ವೇಳೆ ನಾಲ್ಕು ಟೆಸ್ಟ್ ಪಂದ್ಯಗಳನ್ನು ಟೀಂ ಇಂಡಿಯಾ ಗೆದ್ದರೆ, ಸುಲಭವಾಗಿ ಡಬ್ಲ್ಯುಟಿಸಿ ಫೈನಲ್‌ಗೆ ಅರ್ಹತೆ ಪಡೆಯಲ್ಲಿದೆ.

ಮೂರು ಟೆಸ್ಟ್‌ ಗೆದ್ದರೂ ಅವಕಾಶವಿದೆ

ಬೆಂಗಳೂರು ಟೆಸ್ಟ್ ಹೊರತುಪಡಿಸಿ ಉಳಿದ 7 ಪಂದ್ಯಗಳಲ್ಲಿ ಭಾರತ ತಂಡ 3ರಲ್ಲಿ ಗೆಲುವು ಸಾಧಿಸಿದರೂ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಲಿದೆ. ಆದರೆ, ಈ ಪರಿಸ್ಥಿತಿಯಲ್ಲಿ ರೋಹಿತ್ ಪಡೆ ಇತರೆ ತಂಡಗಳ ಫಲಿತಾಂಶದ ಮೇಲೂ ನಿಗಾ ಇಡಬೇಕಿದೆ. ಪ್ರಸ್ತುತ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ, ಭಾರತಕ್ಕೆ ದೊಡ್ಡ ಸ್ಪರ್ಧಿಯಾಗಿದೆ. ಶ್ರೀಲಂಕಾ ಮುಂದಿನ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಬೇಕಾಗಿದೆ. ಲಂಕಾ ಇರುವ ಪ್ರಸ್ತುತ ಫಾರ್ಮ್​ ಗಮನಿಸಿದರೆ, ಆಫ್ರಿಕಾ ತಂಡವನ್ನು ಮಣಿಸುವುದು ಕಷ್ಟವೇನಲ್ಲ. ಇತ್ತ ಪಾಕಿಸ್ತಾನದ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಿರುವ ಇಂಗ್ಲೆಂಡ್ ಬಗ್ಗೆಯೂ ಟೀಂ ಇಂಡಿಯಾ ಎಚ್ಚರಿಕೆ ವಹಿಸಬೇಕಾಗಿದೆ. ಹೀಗಾಗಿ ಇನ್ನೊಂದು ತಂಡದ ಫಲಿತಾಂಶದ ಮೇಲೆ ಅವಲಂಬಿತವಾಗದೆ, ನೇರವಾಗಿ ಫೈನಲ್ ಪ್ರವೇಶಿಸಬೇಕೆಂದರೆ ಟೀಂ ಇಂಡಿಯಾ 4 ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:48 pm, Wed, 16 October 24

ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಆಂಧ್ರಪ್ರದೇಶದಲ್ಲಿ 16ನೇ ಶತಮಾನದ ಆಂಜನೇಯ ದೇವಾಲಯಕ್ಕೆ ಹಾನಿ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಚೆನ್ನೈನಲ್ಲಿ ಭಾರೀ ಮಳೆ; ಪ್ರವಾಹದ ನೀರಿನಿಂದ ಎಂಜಿನಿಯರಿಂಗ್ ಕಾಲೇಜು ಜಲಾವೃತ
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಮಿತಿ ಮೀರಿದ ದರ್ಶನ್ ಬೆನ್ನು ನೋವು; ಬಳ್ಳಾರಿ ಜೈಲಿಗೆ ಬಂತು ಮೆಡಿಕಲ್ ಬೆಡ್
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ಬಿಜೆಪಿ, ಜೆಡಿಎಸ್ ಸಂಸದರು ಕೇಂದ್ರದ ಮುಂದೆ ತುಟಿಬಿಚ್ಚಲ್ಲ: ಸಿದ್ದರಾಮಯ್ಯ
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ನೂರೈವತ್ತು ಜನಕ್ಕೆ ತಯಾರಿಸಿದ ಬಾಡೂಟ ಸೀಜ್ ಮಾಡಿದ ಚುನಾವಣಾಧಿಕಾರಿಗಳು
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಮುಡಾ ಪ್ರಕರಣ ಮತ್ತು ಈಡಿ ನಡುವೆ ಎಲ್ಲಿಯ ಸಂಬಂಧ? ಸಂತೋಷ್ ಲಾಡ್, ಸಚಿವ
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಜಗಳಗಳೇ ತುಂಬಿದ್ದ ಬಿಗ್​ಬಾಸ್ ಮನೆಯಲ್ಲಿ ಮಗುವಿನ ಅಳು
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ಟಿಕೆಟ್ ಸಿಗದಿದ್ದರೆ ಕಾರ್ಯಕರ್ತರು ಹೇಳಿದಂತೆ ಕೇಳುವೆ: ಸಿಪಿ ಯೋಗೇಶ್ವರ್
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ನಿರಂತರ ಮಳೆಗೆ ಗಿಡದಲ್ಲಿಯೇ ಕೊಳೆಯುತ್ತಿರೋ ದಾಳಿಂಬೆ; ಕಂಗಾಲಾದ ರೈತರು
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ
ಸಿದ್ದರಾಮಯ್ಯರನ್ನು ಸಿಲುಕಿಸುವ ಪ್ರಯತ್ನದಲ್ಲಿ ಬಿಜೆಪಿ ಸಫಲವಾಗಲ್ಲ:ನಾಗೇಂದ್ರ