‘ಕಾನೂನು ಕುರುಡಲ್ಲ’; ಸುಪ್ರೀಂ ಕೋರ್ಟ್‌ನಲ್ಲಿ ಕಣ್ಣು ತೆರೆದ ಹೊಸ ನ್ಯಾಯದೇವತೆ ಪ್ರತಿಮೆ ಅನಾವರಣ
ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿದ ನ್ಯಾಯದೇವತೆಯ ಪ್ರತಿಮೆಯ ಬದಲು ಕಣ್ಣು ತೆರೆದ ನ್ಯಾಯ ದೇವತೆಯ ಪ್ರತಿಮೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಅನಾವರಣಗೊಳಿಸಲಾಗಿದೆ. ಹಾಗೇ, ಈ ಹಿಂದಿನ ಪ್ರತಿಮೆಯ ಕೈಯಲ್ಲಿದ್ದ ಕತ್ತಿಯ ಬದಲಾಗಿ ಹೊಸ ನ್ಯಾಯದೇವತೆಯ ಕೈಯಲ್ಲಿ ಸಂವಿಧಾನದ ಪುಸ್ತಕವನ್ನು ಇರಿಸಲಾಗಿದೆ. ಕಾನೂನು ಕುರುಡಲ್ಲ ಎಂಬ ಸಂದೇಶ ಸಾರುವ ಸಲುವಾಗಿ ಈ ಹೊಸ ಪ್ರತಿಮೆ ನಿರ್ಮಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ: ಲೇಡಿ ಆಫ್ ಜಸ್ಟಿಸ್ (ನ್ಯಾಯದೇವತೆ) ಪ್ರತಿಮೆಯ ಮೇಲಿನ ಕಣ್ಣಿಗೆ ಪಟ್ಟಿಯನ್ನು ತೆಗೆದುಹಾಕಲಾಗಿದೆ. ಆಕೆಯ ಎಡಗೈಯಲ್ಲಿ ಕತ್ತಿಯ ಬದಲಾಗಿ ಸಂವಿಧಾನದ ಪುಸ್ತಕವನ್ನು ಇರಿಸಲಾಗಿದೆ. ಲೇಡಿ ಜಸ್ಟಿಸ್ ಪ್ರತಿಮೆಯನ್ನು ಭಾರತದಲ್ಲಿ ನ್ಯಾಯದ ಆಧುನಿಕ ಆವೃತ್ತಿಯನ್ನು ಪ್ರತಿಬಿಂಬಿಸಲು ಮರುವಿನ್ಯಾಸಗೊಳಿಸಲಾಗಿದೆ. ಹಿಂದಿನ ಆವೃತ್ತಿಯಲ್ಲಿ ನ್ಯಾಯದೇವತೆಯ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಲಾಗಿತ್ತು. ಆದರೆ, ಹೊಸ ಪ್ರತಿಮೆಯು ತೆರೆದ ಕಣ್ಣುಗಳನ್ನು ಹೊಂದಿದೆ, “ನ್ಯಾಯವು ಇನ್ನು ಮುಂದೆ ಕುರುಡಾಗಿಲ್ಲ” ಎಂಬುದನ್ನು ಇದು ಸಂಕೇತಿಸುತ್ತದೆ.
‘ನ್ಯಾಯದೇವತೆ’ಯ ಪ್ರತಿಮೆಯನ್ನು ಸಾಮಾನ್ಯವಾಗಿ ನ್ಯಾಯಾಲಯಗಳು, ಚಲನಚಿತ್ರಗಳು ಮತ್ತು ಕಾನೂನಿಗೆ ಸಂಬಂಧಿಸಿದ ಕಚೇರಿಗಳಲ್ಲಿ ನೋಡಿರುತ್ತೇವೆ. ಇದರ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಲಾಗಿತ್ತು. ಇದೀಗ ಇದು ಹೊಸ ರೂಪಾಂತರಕ್ಕೆ ಒಳಗಾಗಿದೆ. ಸಾಂಕೇತಿಕ ರೂಪವಾಗಿ ಆ ಪ್ರತಿಮೆಯ ಕಣ್ಣಿಗೆ ಕಟ್ಟಲಾಗಿದ್ದ ಬಟ್ಟೆಯನ್ನು ತೆಗೆದುಹಾಕಲಾಗಿದೆ ಮತ್ತು ಆ ಪ್ರತಿಮೆಯ ಕೈಯಲ್ಲಿದ್ದ ಕತ್ತಿಯ ಬದಲು ಸಂವಿಧಾನದ ಪುಸ್ತಕ ಇರಿಸಲಾಗಿದೆ. ಈ ಬದಲಾವಣೆಯು ದೇಶದಲ್ಲಿ ಬ್ರಿಟಿಷ್ ಕಾಲದ ಕಾನೂನುಗಳ ಇತ್ತೀಚಿನ ಕೂಲಂಕುಷ ಪರೀಕ್ಷೆಯನ್ನು ಪ್ರತಿಬಿಂಬಿಸುತ್ತದೆ. ಏಕೆಂದರೆ ಭಾರತೀಯ ನ್ಯಾಯಾಂಗವು ಹೊಸ ಗುರುತನ್ನು ಸ್ವೀಕರಿಸಿದೆ.
New Delhi: CJI Chandrachud Orders Changes to Supreme Court’s Justice Statue
Chief Justice of India, D.Y. Chandrachud, has directed changes to the statue of the Goddess of Justice at the Supreme Court. The statue’s traditional blindfold has been removed, symbolizing transparent… pic.twitter.com/XBePehNg7k
— IANS (@ians_india) October 16, 2024
ಇದನ್ನೂ ಓದಿ: ಒಳಮೀಸಲಾತಿ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಕೋರ್ಟ್ ನಕಾರ
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿ.ವೈ. ಚಂದ್ರಚೂಡ್ ಅವರು ಈ ಹೊಸ ಪ್ರತಿಮೆಯ ಅನಾವರಣ ಮಾಡಿದ್ದು, ಭಾರತೀಯ ನ್ಯಾಯದ ವಿಕಾಸದ ಸ್ವರೂಪವನ್ನು ಒತ್ತಿಹೇಳಿದ್ದಾರೆ. ಹೊಸ ಪ್ರತಿಮೆಯನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಗ್ರಂಥಾಲಯದಲ್ಲಿ ಸ್ಥಾಪಿಸಲಾಗಿದೆ. ಮೂಲಗಳ ಪ್ರಕಾರ, ಸಿಜೆಐ ಚಂದ್ರಚೂಡ್ ವಸಾಹತುಶಾಹಿ ಪರಂಪರೆಯನ್ನು ಮೀರಿ ಮುನ್ನಡೆಯುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. “ಕಾನೂನು ಕುರುಡಲ್ಲ; ಅದು ಎಲ್ಲರನ್ನು ಸಮಾನವಾಗಿ ನೋಡುತ್ತದೆ” ಎಂದು ಅವರು ಹೇಳಿದ್ದಾರೆ. ಆದ್ದರಿಂದ, ಲೇಡಿ ಜಸ್ಟೀಸ್‌ನ ಹೊಸ ರೂಪವು ಈ ತತ್ವವನ್ನು ಪ್ರತಿಬಿಂಬಿಸುತ್ತದೆ, ಆಕೆಯ ಕೈಯಲ್ಲಿ ಸಂವಿಧಾನವು ಸಾಂವಿಧಾನಿಕ ಮೌಲ್ಯಗಳ ಆಧಾರದ ಮೇಲೆ ನ್ಯಾಯಕ್ಕೆ ಅವರ ಬದ್ಧತೆಯನ್ನು ಸೂಚಿಸುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:11 pm, Wed, 16 October 24