8 ವರ್ಷಗಳ ಬಳಿಕ ತಂದೆಯಾದ ಝಹೀರ್ ಖಾನ್: ಮಗುವಿನ ಹೆಸರು ಬಹಿರಂಗ
Zaheer Khan and Sagarika Ghatge: ಭಾರತ ತಂಡದ ಮಾಜಿ ವೇಗಿ ಝಹೀರ್ ಖಾನ್ 2017 ರಲ್ಲಿ ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ 8 ವರ್ಷಗಳ ಬಳಿಕ ಸ್ಟಾರ್ ದಂಪತಿ ಮನೆಗೆ ಪುಟ್ಟ ಮಗುವಿನ ಆಗಮನವಾಗಿದೆ. ಈ ಖುಷಿ ವಿಚಾರವನ್ನು ಸಾಗರಿಕಾ ಘಾಟ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾದ ಮಾಜಿ ವೇಗಿ, ಪ್ರಸ್ತುತ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮೆಂಟರ್ ಝಹೀರ್ ಖಾನ್ (Zaheer Khan) ತಂದೆಯಾಗಿದ್ದಾರೆ. ಅವರ ಪತ್ನಿ ಸಾಗರಿಕಾ ಘಾಟ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಝಹೀರ್ ಖಾನ್ ಹಾಗೂ ಸಾಗರಿಕಾ ಘಾಟ್ಗೆ 2017 ರಲ್ಲಿ ವಿವಾಹವಾಗಿದ್ದರು. ಇದೀಗ ಈ ದಂಪತಿಯ ಪ್ರೀತಿಯ ಸಂಕೇತವಾಗಿ ಪುಟ್ಟ ಪುಟಾಣಿಯ ಆಗಮನವಾಗಿದೆ.
ಜೂನಿಯರ್ ಝ್ಯಾಕ್ ಹೆಸರನೇನು?
ಝಹೀರ್ ಖಾನ್ ತಂದೆಯಾಗಿರುವ ಖುಷಿ ಸುದ್ದಿಯನ್ನು ಏಪ್ರಿಲ್ 16 ರ ಬೆಳಿಗ್ಗೆ ಅವರ ಪತ್ನಿ ಸಾಗರಿಕಾ ಘಾಟ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದರು. ಅಲ್ಲದೆ ತಮ್ಮ ಮನೆಯ ಹೊಸ ಸದಸ್ಯನಿಗೆ ಫತೇಹ್ ಸಿನ್ಹ್ ಖಾನ್ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.
ಫತೇಹ್ ಎಂದರೆ ವಿಜಯಶಾಲಿ ಎಂಬ ಅರ್ಥವಿದೆ. ಹಾಗೆಯೇ ಸಾಗರಿಕಾ ಘಾಟ್ಗೆ ರಜಪೂತ ವಂಶಸ್ಥರಾಗಿದ್ದು, ಹೀಗಾಗಿ ಮಗುವಿನ ಹೆಸರಿನ ಹಿಂದೆ ಸಿನ್ಹ್ ಸೇರಿಸಲಾಗಿದೆ. ಹಾಗೆಯೇ ಝಹೀರ್ ಖಾನ್ ಅವರ ಸರ್ನೇಮ್ ಖಾನ್ ಅನ್ನು ಸಹ ಮಗುವಿನ ಹೆಸರಿನೊಂದಿಗೆ ಮುಂದುವರೆಸಲಾಗಿದೆ.
View this post on Instagram
ಐಪಿಎಲ್ನಲ್ಲಿ ಝಹೀರ್ ಖಾನ್ ಬ್ಯುಸಿ:
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿ ಝಹೀರ್ ಖಾನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹುದ್ದೆಯೊಂದಿಗೆ ಬೌಲಿಂಗ್ ಕೋಚ್ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಬ್ಯುಸಿಯಾಗಿದ್ದ ಝಹೀರ್ ಖಾನ್, ಸಣ್ಣ ಬ್ರೇಕ್ನೊಂದಿಗೆ ಕೆಲ ದಿನಗಳ ಕಾಲ ಪತ್ನಿ ಹಾಗೂ ಮಗುವಿನೊಂದಿಗೆ ಕಾಲ ಕಳೆಯಲಿದ್ದಾರೆ ಎಂದು ವರದಿಯಾಗಿದೆ.
ಪ್ರೇಮದ ಸಂಕೇತ:
ಜಹೀರ್ ಖಾನ್ ಕ್ರಿಕೆಟ್ ಜಗತ್ತಿನೊಂದಿಗೆ ಸಂಬಂಧ ಹೊಂದಿದ್ದಾರೆ. ಮತ್ತು ಅವರ ಪತ್ನಿ ಸಾಗರಿಕಾ ಘಾಟ್ಗೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬಾಲಿವುಡ್ನ ಸೂಪರ್ ಡೂಪರ್ ಹಿಟ್ ಸಿನಿಮಾ ಚಕ್ದೇ ಇಂಡಿಯಾ, ಫಾಕ್ಸ್, ರಶ್ ಸೇರಿದಂತೆ ಹಲವು ಚಿತ್ರಗಳಲ್ಲಿ ಸಾಗರಿಕಾ ಘಾಟ್ಗೆ ನಟಿಸಿದ್ದಾರೆ.
ಇದನ್ನೂ ಓದಿ: VIDEO: ಮೋಸದಾಟಕ್ಕೆ ಮುಂದಾಗಿ ಸಿಕ್ಕಿಬಿದ್ದ ಸುನಿಲ್ ನರೈನ್, ಆ್ಯಂಡ್ರೆ ರಸೆಲ್
ಝಹೀರ್ ಖಾನ್ ಕ್ರಿಕೆಟ್ ಕೆರಿಯರ್ನಲ್ಲಿ ಉತ್ತುಂಗದಲ್ಲಿದ್ದಾಗ ಸಾಗರಿಕಾ ಘಾಟ್ಗೆ ಅವರನ್ನು ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದರು. ಈ ಭೇಟಿಯು ಸ್ನೇಹ ತಿರುಗಿ ಆ ಬಳಿಕ ಪ್ರೇಮವಾಗಿ ಮಾರ್ಪಟ್ಟಿದೆ. ಅಲ್ಲದೆ ಇಬ್ಬರು ಧರ್ಮವನ್ನು ಮೀರಿ 2017 ರಲ್ಲಿ ಕುಟುಂಬಸ್ಥರು ಅನುಮತಿಯೊಂದಿಗೆ ವಿವಾಹವಾಗಿದ್ದರು. ಇದೀಗ ಈ ದಂಪತಿಗಳ ಪ್ರೇಮದ ಸಂಕೇತವಾಗಿ ಫತೇಹ್ ಸಿನ್ಹ್ ಖಾನ್ ಆಗಮನವಾಗಿದೆ.