VIDEO: ಮೋಸದಾಟಕ್ಕೆ ಮುಂದಾಗಿ ಸಿಕ್ಕಿಬಿದ್ದ ಸುನಿಲ್ ನರೈನ್, ಆ್ಯಂಡ್ರೆ ರಸೆಲ್
IPL 2025 PBKS vs KKR: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್-18 ರಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ನಿಯಮಗಳ ಜಾರಿ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರು ನಿಯಮಮೀರಿ ಬ್ಯಾಟ್ಗಳನ್ನು ಬಳಸಲು ಮುಂದಾಗಿರುವುದು ಕಂಡು ಬಂದಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ 31ನೇ ಪಂದ್ಯದಲ್ಲಿ ನಿಯಮ ಮೀರಿದ ಬ್ಯಾಟ್ಗಳನ್ನು ಬಳಸಲು ಮುಂದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಸುನಿಲ್ ನರೈನ್ (Sunil Narine) ಹಾಗೂ ಆ್ಯಂಡ್ರೆ ರಸೆಲ್ (Andre Russell) ಸಿಕ್ಕಿ ಬಿದ್ದಿದ್ದಾರೆ. ಮುಲ್ಲನ್ಪುರ್ನ ಎಂವೈಎಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 15.3 ಓವರ್ಗಳಲ್ಲಿ 111 ರನ್ಗಳಿಸಿ ಆಲೌಟ್ ಆಯಿತು.
ಈ ಗುರಿಯನ್ನು ಬೆನ್ನತ್ತಲು ಆರಂಭಿಕನಾಗಿ ಕಣಕ್ಕಿಳಿಯಲು ಮುಂದಾಗಿದ್ದ ಸುನಿಲ್ ನರೈನ್ ಅವರ ಬ್ಯಾಟ್ ಅನ್ನು ಅಂಪೈರ್ ಪರಿಶೀಲಿಸಿದ್ದಾರೆ. ಈ ಪರಿಶೀಲನೆ ವೇಳೆ ನರೈನ್ ಬಳಸಲು ಮುಂದಾಗಿದ್ದ ಬ್ಯಾಟ್ ಅಗಲದಿಂದ ಕೂಡಿರುವುದು ಕಂಡು ಬಂದಿದೆ. ಹೀಗಾಗಿ ಆ ಬ್ಯಾಟ್ ಅನ್ನು ಬಳಸಲು ಅಂಪೈರ್ ಅನುಮತಿ ನೀಡಿರಲಿಲ್ಲ.
ಸುನಿಲ್ ನರೈನ್ ಬ್ಯಾಟ್ ಪರಿಶೀಲನೆ ವಿಡಿಯೋ:
Sunil Narine bat doesn’t pass umpire’s check#IPL2025 pic.twitter.com/d2VISP3gnd
— Zsports (@_Zsports) April 16, 2025
ಇದಾದ ಬಳಿಕ ಕೆಕೆಆರ್ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರೆ ರಸೆಲ್ ಕೂಡ ದಪ್ಪದ ಬ್ಯಾಟ್ನೊಂದಿಗೆ ಆಗಮಿಸಿದ್ದರು. ಈ ಬಗ್ಗೆ ಸಂದೇಹಗೊಂಡ ಅಂಪೈರ್ ಗೇಜ್ನೊಂದಿಗೆ ಬ್ಯಾಟ್ ಪರಿಶೀಲಿಸಿದರು. ಈ ವೇಳೆ ಬ್ಯಾಟ್‌ನ ಹಿಂಭಾಗವು ನಿಗದಿತ ಮಿತಿಗಿಂತ ದೊಡ್ಡದಿರುವುದು ಕಂಡು ಬಂದಿದೆ. ಹೀಗಾಗಿ ಬ್ಯಾಟ್ ಬದಲಿಸುವಂತೆ ಸೂಚಿಸಿದ್ದಾರೆ.
ಆ್ಯಂಡ್ರೆ ರಸೆಲ್ ಬ್ಯಾಟ್ ಪರಿಶೀಲನೆ ವಿಡಿಯೋ:
View this post on Instagram
ಬ್ಯಾಟ್ ಅಗಲ ಎಷ್ಟಿರಬೇಕು?
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಾಗಿ ಬ್ಯಾಟ್‌ನ ಆಯಾಮಗಳಿಗೆ ಮಿತಿಯನ್ನು ನಿಗದಿಪಡಿಸಿದೆ. ಅದರ ಪ್ರಕಾರ ಬ್ಯಾಟ್‌ನ ಅಂಚಿನ ಅಗಲ 4 ಸೆಂಟಿಮೀಟರ್, ಮುಖದ ಅಗಲ 10.79 ಸೆಂಟಿಮೀಟರ್‌ಗಳನ್ನು ಮೀರಿರಬಾರದು. ಇನ್ನು ಬ್ಲೇಡ್‌ನ ದಪ್ಪ 6.7 ಸೆಂ.ಮೀ ಮೀರಬಾರದು. ಹಾಗೆಯೇ ಬ್ಯಾಟ್‌ನ ಉದ್ದ 96.4 ಸೆಂಟಿಮೀಟರ್ಗಿಂತ ಹೆಚ್ಚಿರಬಾರದು.
ಇದನ್ನು ಫೀಲ್ಡ್ ಅಂಪೈರ್ಗಳು ಗೇಜ್ ಬಳಸಿ ಪರಿಶೀಲಿಸಲಿದ್ದಾರೆ. ಈ ಪರಿಶೀಲನೆಯಲ್ಲಿ ಅಂಪೈರ್ ಬಳಸುವ ಗೇಜ್ ಮೂಲಕ ಬ್ಯಾಟ್ ಹಾದು ಹೋದರೆ ಮಾತ್ರ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಲಾಗುತ್ತದೆ.
ಅಂದರೆ 4 ಸೆಂಟಿಮೀಟರ್ ಇಂಚುಗಳಿಗಿಂತ ಹೆಚ್ಚಿನ ಅಗಲವಾದ ಬ್ಯಾಟ್ ಬಳಸಲು ಅವಕಾಶವಿಲ್ಲ. ಹೀಗಾಗಿ ಬ್ಯಾಟ್ಗಳ ಅಗಲದ ಮೇಲೆ ಸಂದೇಹ ಮೂಡಿದರೆ ಅಂಪೈರ್ ಮೈದಾನದಲ್ಲೇ ಪರಿಶೀಲಿಸುತ್ತಿದ್ದಾರೆ.
ಈ ನಿಯಮ ಜಾರಿ ಮಾಡಿದ್ದೇಕೆ?
ಐಪಿಎಲ್ನಲ್ಲಿ ಬ್ಯಾಟ್ ಪರಿಶೀಲನೆ ನಿಯಮವನ್ನು ಜಾರಿಗೊಳಿಸಲು ಮುಖ್ಯ ಕಾರಣ ಬ್ಯಾಟರ್ಗಳ ಅಬ್ಬರ. ಕೆಲ ಬ್ಯಾಟ್ಸ್ಮನ್ಗಳು ಹೆಚ್ಚಿನ ಅಗಲದ ಬ್ಯಾಟ್ ಬಳಸಿದ್ದಾರೆ ಎಂದು ಆರೋಪಗಳು ಕೇಳಿ ಬಂದಿದೆ. ಹೀಗಾಗಿ ಬಿಸಿಸಿಐ ಕಠಿಣ ನಿಯಮದೊಂದಿಗೆ ಬ್ಯಾಟ್ ಪರಿಶೀಲಿಸಲು ಮುಂದಾಗಿದ್ದಾರೆ.
ಅದರಂತೆ ಇದೀಗ ಪ್ರತಿ ಪಂದ್ಯಗಳಲ್ಲೂ ಬ್ಯಾಟ್ ಪರಿಶೀಲನೆ ನಡೆಯುತ್ತಿದೆ. ಇದರ ನಡುವೆ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸುನಿಲ್ ನರೈನ್ ಹಾಗೂ ಆ್ಯಂಡ್ರೆ ರಸೆಲ್ ನಿಗದಿತ ಮಿತಿಗಿಂತ ಹೆಚ್ಚಿನ ಅಗಲ ಮತ್ತು ದಪ್ಪದ ಬ್ಯಾಟ್ ಬಳಸಲು ಮುಂದಾಗಿರುವುದು ಕಂಡು ಬಂದಿದೆ.
ಪಂಜಾಬ್ ಪರಾಕ್ರಮಕ್ಕೆ ಒಲಿದ ಜಯ:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 15.3 ಓವರ್ಗಳಲ್ಲಿ ಕೇವಲ 111 ರನ್ಗಳಿಸಿ ಆಲೌಟ್ ಆಗಿದೆ. ಈ ಸುಲಭ ಗುರಿಯನ್ನು ಬೆನ್ನತ್ತಿದ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 15.1 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ 16 ರನ್ಗಳಿಂದ ಸೋಲೊಪ್ಪಿಕೊಂಡಿದೆ.
ಇದನ್ನೂ ಓದಿ: ಮೋಸದಾಟದ ಡೌಟ್… ಹಾರ್ದಿಕ್ ಪಾಂಡ್ಯ ಬ್ಯಾಟ್ ಪರಿಶೀಲಿಸಿದ ಅಂಪೈರ್
ಈ ಗೆಲುವಿನೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಸ್ಕೋರ್ಗಳಿಸಿ ಜಯ ಸಾಧಿಸಿ ತಂಡವೆಂಬ ದಾಖಲೆಯನ್ನು ಪಂಜಾಬ್ ಕಿಂಗ್ಸ್ ತನ್ನಾಗಿಸಿಕೊಂಡಿದೆ. ಇದಕ್ಕೂ ಮುನ್ನ 2009 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ವಿರುದ್ಧ 116 ರನ್ ಬಾರಿಸಿ 24 ರನ್ಗಳ ಗೆಲುವು ದಾಖಲಿಸಿತ್ತು. ಇದೀಗ 111 ರನ್ಗಳಿಸಿ 16 ರನ್ಗಳ ವಿಜಯ ಸಾಧಿಸಿ ಹೊಸ ಇತಿಹಾಸ ಬರೆಯುವಲ್ಲಿ ಪಂಜಾಬ್ ಕಿಂಗ್ಸ್ ಯಶಸ್ವಿಯಾಗಿದೆ.