Ashes 2023: ಸ್ಟೋಕ್ಸ್ ಭರ್ಜರಿ ಸೆಂಚುರಿ: ಕುತೂಹಲ ಘಟ್ಟದಲ್ಲಿ ENG vs AUS ಪಂದ್ಯ..!

England vs Australia: ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ (110) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 416 ರನ್ ಪೇರಿಸಿತ್ತು.

Ashes 2023: ಸ್ಟೋಕ್ಸ್ ಭರ್ಜರಿ ಸೆಂಚುರಿ: ಕುತೂಹಲ ಘಟ್ಟದಲ್ಲಿ ENG vs AUS ಪಂದ್ಯ..!
Ben Stokes
Follow us
| Updated By: ಝಾಹಿರ್ ಯೂಸುಫ್

Updated on: Jul 02, 2023 | 6:34 PM

Ashes 2023: ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯವು ರೋಚಕಘಟ್ಟದತ್ತ ಸಾಗುತ್ತಿದೆ. ಈ ಪಂದ್ಯದ ಕೊನೆಯ ದಿನದಾಟದಲ್ಲಿ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಅಬ್ಬರಿಸಿದ್ದಾರೆ. ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್​ ತಂಡಕ್ಕೆ ಗೆಲ್ಲಲು 257 ರನ್​ಗಳ ಅವಶ್ಯಕತೆಯಿತ್ತು. ಅತ್ತ ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್​ಗಳ ಅಗತ್ಯತೆಯಿತ್ತು.

ಈ ಸಮಬಲದ ಅಂಕಿ ಅಂಶಗಳೊಂದಿಗೆ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡವು ಬೆನ್ ಡಕೆಟ್ ಆಸರೆಯಾದರು. 112 ಎಸೆತಗಳನ್ನು ಎದುರಿಸಿದ ಡಕೆಟ್ 83 ರನ್​ಗಳಿಸಿ ಔಟಾದರು. ಇದರ ಬೆನ್ನಲ್ಲೇ ಜಾನಿ ಬೈರ್​ಸ್ಟೋವ್ (10) ರನೌಟ್ ಆದರು. ಈ ಹಂತದಲ್ಲಿ ಆಸ್ರೇಲಿಯಾ ತಂಡವು ಮೇಲುಗೈ ಸಾಧಿಸಿತು. ಆದರೆ ಈ ಮೇಲುಗೈಯನ್ನು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ತಮ್ಮ ಪರ ವಾಲುವಂತೆ ಮಾಡುವಲ್ಲಿ ಬೆನ್ ಸ್ಟೋಕ್ಸ್ ಯಶಸ್ವಿಯಾದರು.

ಜಾನಿ ಬೈರ್​ಸ್ಟೋವ್ ರನೌಟ್ ಆಗುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬೆನ್ ಸ್ಟೋಕ್ಸ್ ಆಸೀಸ್ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಸ್ಟೋಕ್ಸ್​ ಬ್ಯಾಟ್​ನಿಂದ ಕೇವಲ 21 ಎಸೆತಗಳಲ್ಲಿ 46 ರನ್​ಗಳು ಮೂಡಿಬಂತು. ಈ ಮೂಲಕ ಕೇವಲ 142 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಅಬ್ಬರಿಸಿದರು.

ಇನ್ನು ಸ್ಟುವರ್ಟ್ ಬ್ರಾಡ್ ಜೊತೆಗೂಡಿ 7ನೇ ವಿಕೆಟ್​ಗೆ ಅರ್ಧಶತಕದ ಜೊತೆಯಾಟವಾಡಿದರು. ವಿಶೇಷ ಎಂದರೆ ಈ ಅರ್ಧಶತಕದ ಜೊತೆಯಾಟದಲ್ಲಿ ಬ್ರಾಡ್​ ಕಾಣಿಕೆ ಕೇವಲ 1 ರನ್ ಮಾತ್ರ. ಇದರೊಂದಿಗೆ ಭೋಜನ ವಿರಾಮದ ಅಂತ್ಯಕ್ಕೆ ಇಂಗ್ಲೆಂಡ್ ತಂಡವು 6 ವಿಕೆಟ್ ನಷ್ಟಕ್ಕೆ 243 ರನ್​ ಕಲೆಹಾಕಿದೆ.

ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಇನ್ನು 128 ರನ್​ಗಳ ಅವಶ್ಯಕತೆಯಿದ್ದರೆ, ಅತ್ತ ಆಸ್ಟ್ರೇಲಿಯಾ 4 ವಿಕೆಟ್ ಪಡೆದರೆ ಗೆಲ್ಲಬಹುದು. ಸದ್ಯ ಭರ್ಜರಿ ಶತಕ ಸಿಡಿಸಿರುವ ಬೆನ್ ಸ್ಟೋಕ್ಸ್ ಹಾಗೂ ಸ್ಟುವರ್ಟ್ ಬ್ರಾಡ್ ಕ್ರೀಸ್​ನಲ್ಲಿದ್ದಾರೆ. ಹೀಗಾಗಿ ಊಟದ ವಿರಾಮದ ಬಳಿಕ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಸ್ಟೀವ್ ಸ್ಮಿತ್ (110) ಅವರ ಶತಕದ ನೆರವಿನಿಂದ ಮೊದಲ ಇನಿಂಗ್ಸ್​ನಲ್ಲಿ 416 ರನ್ ಪೇರಿಸಿತ್ತು.

ಇದನ್ನೂ ಓದಿ: ICC World Cup 2023: ಏಕದಿನ ವಿಶ್ವಕಪ್​​ಗೆ ಅರ್ಹತೆ ಪಡೆದುಕೊಂಡ ಶ್ರೀಲಂಕಾ

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ಕಲೆಹಾಕಿದ್ದು ಕೇವಲ 325 ರನ್​ಗಳು ಮಾತ್ರ. ಇತ್ತ ಮೊದಲ ಇನಿಂಗ್ಸ್​ನಲ್ಲಿನ 91 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 279 ರನ್​ಗಳಿಗೆ ಆಲೌಟ್ ಆಯಿತು.

ಅದರಂತೆ 371 ರನ್​ಗಳ ಗುರಿಯೊಂದಿಗೆ ನಾಲ್ಕನೇ ದಿನದಾಟದಲ್ಲಿ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು 114 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದೀಗ ಐದನೇ ದಿನದಾಟವು ಮುಂದುವರೆದಿದ್ದು, ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ತಂಡವು 6 ವಿಕೆಟ್ ನಷ್ಟಕ್ಕೆ 243 ರನ್​ಗಳಿಸಿದೆ. ಅಲ್ಲದೆ ಇನ್ನು ಗೆಲ್ಲಲು 128 ರನ್​ಗಳ ಅವಶ್ಯಕತೆಯಿದೆ.

ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಶಿಗ್ಗಾವಿ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್​ಗೆ​ ಮತ ನೀಡುತ್ತಾರೆ: ಸಚಿವ
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಯೋಗೇಶ್ವರ್ ಸ್ಪರ್ಧಿಯಾದರೂ ಶಿವಕುಮಾರ್ ಹೆಸರಲ್ಲಿ ಮತಯಾಚನೆ: ಸುರೇಶ್
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಯೋಗರಾಜ್ ಭಟ್ ಎದುರು ಅನಾವರಣವಾಯಿತು ಹನುಮಂತನ ನಿಜವಾದ ಬಣ್ಣ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
ಬಿಜೆಪಿ ಜೊತೆ ಮೈತ್ರಿ ಬೆಳಸುವಂತೆ ಕುಮಾರಸ್ವಾಮಿಗೆ ಹೇಳಿದ್ದೇ ನಾನು: ಸಿಪಿವೈ
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ಬಗ್ಗೆ ಸೋಮಶೇಖರ್​ರನ್ನೇ ಕೇಳಬೇಕು: ಸಚಿವ
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಖಾದ್ರಿಗೆ ಸಿಎಂ ತಾಕೀತು
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಪಹಣಿಯಲ್ಲಿ ವಕ್ಫ್​​ ಹೆಸರು: ವಿಜಯಪುರ ರೈತರ ಪ್ರತಿಭಟನೆ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ಮುಚ್ಚಿದ ಹೋಟೆಲ್​​ಗೆ ರಾತ್ರಿ ನುಗ್ಗಿದ ಹೆಲ್ಮೆಟ್​ಧಾರಿ ಕಳ್ಳ ಚಿಲ್ರೆ ಕದ್ದ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ
ನಸುಕಿನ ಜಾವ 4ಗಂಟೆಯಿಂದ ರಾತ್ರಿ 11 ಗಂಟೆಯರೆಗೆ ಭಕ್ತರ ದರ್ಶನಕ್ಕೆ ಅವಕಾಶ