ಆಫ್ರಿಕಾ ವಿರುದ್ಧ ಅಬ್ಬರಿಸಿದ್ದ ತಿಲಕ್​ ವರ್ಮಾ ದೇಶೀ ಟೂರ್ನಿಯಲ್ಲಿ ಸೊನ್ನೆ ಶೂರ

Vijay Hazare Trophy: ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಅದ್ಭುತ ಶತಕಗಳನ್ನು ಸಿಡಿಸಿದ ತಿಲಕ್ ವರ್ಮಾ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡುತ್ತಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟ್ ಆಗಿದ್ದಾರೆ. ಇದಕ್ಕೂ ಮುನ್ನ ನಾಗಾಲ್ಯಾಂಡ್ ವಿರುದ್ಧವೂ ತಿಲಕ್ ಶೂನ್ಯಕ್ಕೆ ಔಟಾಗಿದ್ದರು.

ಆಫ್ರಿಕಾ ವಿರುದ್ಧ ಅಬ್ಬರಿಸಿದ್ದ ತಿಲಕ್​ ವರ್ಮಾ ದೇಶೀ ಟೂರ್ನಿಯಲ್ಲಿ ಸೊನ್ನೆ ಶೂರ
ತಿಲಕ್ ವರ್ಮಾ
Follow us
ಪೃಥ್ವಿಶಂಕರ
|

Updated on: Dec 23, 2024 | 4:05 PM

ರಾಷ್ಟ್ರೀಯ ತಂಡದಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ದಾಖಲೆಗಳ ಮೇಲೆ ದಾಖಲೆ ಬರೆದಿದ್ದ ಟೀಂ ಇಂಡಿಯಾದ ಯುವ ಕ್ರಿಕೆಟಿಗ ತಿಲಕ್ ವರ್ಮಾ ದೇಶೀ ಕ್ರಿಕೆಟ್​ನಲ್ಲಿ ಮಾತ್ರ ರನ್ ಬರ ಎದುರಿಸುತ್ತಿದ್ದಾರೆ. ತಿಂಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿದ್ದ ಟಿ20 ಸರಣಿಯಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನು ನಮೋದಿಸಿದ್ದ ತಿಲಕ್​ ಇದೀಗ ಭಾರತದಲ್ಲಿ ನಡೆಯುತ್ತಿರುವ ದೇಶೀ ಟೂರ್ನಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡನೇ ಪಂದ್ಯದಲ್ಲೂ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದಾರೆ.

ಸತತ 2 ಶತಕ ಬಾರಿಸಿ ದಾಖಲೆ ಬರೆದಿದ್ದ ತಿಲಕ್

ವಾಸ್ತವವಾಗಿ ಕಳೆದ ನವೆಂಬರ್​ನಲ್ಲಿ 4 ಪಂದ್ಯಗಳ ಟಿ20 ಸರಣಿಗಾಗಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿತ್ತು. ಈ ವೇಳೆ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದ ತಿಲಕ್ ವರ್ಮಾ ಸತತ ಎರಡು ಟಿ 20 ಗಳಲ್ಲಿ ಶತಕ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಸೆಂಚುರಿಯನ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅಜೇಯ 107 ರನ್ ಕಲೆಹಾಕಿದ್ದ ತಿಲಕ್ ನಂತರ ಜೋಹಾನ್ಸ್‌ಬರ್ಗ್​ನಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲೂ ಅಜೇಯ 120 ರನ್ ಬಾರಿಸುವ ಮೂಲಕ ದಾಖಲೆ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಆದರೆ, ತಿಲಕ್ ದೇಶೀಯ ಕ್ರಿಕೆಟ್‌ನಲ್ಲಿ ಈ ಫಾರ್ಮ್ ಅನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್. 2 ದಿನಗಳ ಹಿಂದೆ ಪ್ರಾರಂಭವಾದ ದೇಶೀಯ ಏಕದಿನ ಪಂದ್ಯಾವಳಿ ವಿಜಯ್ ಹಜಾರೆ ಟ್ರೋಫಿಯಲ್ಲಿ ತಿಲಕ್ ಅವರ ಫ್ಲಾಪ್ ಶೋ ಮುಂದುವರೆದಿದೆ.

ಸತತ 2 ಪಂದ್ಯಗಳಲ್ಲಿ ಸೊನ್ನೆಗೆ ಔಟ್

ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್ ತಂಡದ ನಾಯಕರಾಗಿರುವ ತಿಲಕ್ ವರ್ಮಾ ಮುಂಬೈ ವಿರುದ್ಧದ ಎರಡನೇ ಪಂದ್ಯದಲ್ಲೂ ಮತ್ತೊಮ್ಮೆ ಖಾತೆ ತೆರೆಯಲು ವಿಫಲರಾಗಿದ್ದಾರೆ. ಈ ಪಂದ್ಯದಲ್ಲಿ ಕೇವಲ 2 ಎಸೆತಗಳನ್ನು ಎದುರಿಸಿದ ತಿಲಕ್​ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇದಕ್ಕೂ ಮುನ್ನ ನಾಗಾಲ್ಯಾಂಡ್ ವಿರುದ್ಧವೂ ತಿಲಕ್ ಶೂನ್ಯಕ್ಕೆ ಔಟಾಗಿದ್ದರು.

ಮುಂಬೈಗೆ 3 ವಿಕೆಟ್ ಜಯ

ಇನ್ನು ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ ತಂಡ ಸಂಪೂರ್ಣ 50 ಓವರ್​ಗಳನ್ನು ಆಡಲು ಸಾಧ್ಯವಾಗದೆ 38.1 ಓವರ್‌ಗಳಲ್ಲಿ 169 ರನ್‌ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ ತಂಡ 130 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕವೂ ಚೇತರಿಸಿಕೊಳ್ಳಲು ಸಾಧ್ಯವಾಗದೆ ಅಲ್ಪ ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿತು. ಮುಂಬೈ ಪರ ವಿನೋದ್ 4 ಹಾಗೂ ಆಯುಷ್ ಮ್ಹಾತ್ರೆ ಮೂರು ವಿಕೆಟ್ ಪಡೆದರು.

ಈ ಗುರಿ ಬೆನ್ನಟ್ಟಿದ ಮುಂಬೈ ತಂಡ ಕೂಡ ಗೆಲುವಿಗೆ ಸಾಕಷ್ಟು ಶ್ರಮವಹಿಸಬೇಕಾಯಿತು. ತನುಷ್ ಕೋಟ್ಯಾನ್ ಅವರ ಅಜೇಯ 39 ರನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 44 ರನ್​ಗಳ ಸ್ಫೋಟಕ ಇನ್ನಿಂಗ್ಸ್​ನಿಂದಾಗಿ ಮುಂಬೈ ತಂಡ 7 ವಿಕೆಟ್ ಕಳೆದುಕೊಂಡು 25.2 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಕಿರುತೆರೆಯಲ್ಲಿ ಹಲವಾರು ಧಾರಾವಹಿಗಳನ್ನು ನಿರ್ದೇಶಿಸಿರುವ ಸರಿಗಮವಿಜಿ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು 7 ಮಂದಿಗೆ ಗಂಭೀರ ಗಾಯ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಮಿಡ್ ವೀಕ್ ಬಗ್ಗೆ ಘೋಷಣೆ ಮಾಡಿದ ಬಿಗ್ ಬಾಸ್; ರಜತ್​ಗೆ ಸ್ಕೆಚ್ ಇಟ್ಟ ಭವ್ಯಾ
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಸ್​ನಲ್ಲಿ ನಿವೃತ್ತ ಐಎಎಸ್ ಅಧಿಕಾರಿಯನ್ನು ಥಳಿಸಿದ ಬಸ್ ಕಂಡಕ್ಟರ್​
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
ಬಿಗ್ ಶೋ ಬಿಗ್ಗೆಸ್ಟ್ ಸಿಕ್ಸ್: ರಾಕೆಟ್ ಸಿಕ್ಸ್ ಸಿಡಿಸಿದ ಮ್ಯಾಕ್ಸ್​ವೆಲ್
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
Daily Devotional: ಹಣೆ ಬರಹ ಬದಲಿಸಲು ಸಾಧ್ಯವೆ? ಇಲ್ಲಿದೆ ಉತ್ತರ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಇಂದು ಬನದ ಹುಣ್ಣಿಮೆ, ಈ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಜಗದೀಶ್ ಬೆಳ್ಯಪ್ಪ, ಎಂ ಶ್ರೀಕಾಂತ್​ಗೆ ಬೆಂಗಳೂರು ಪ್ರೆಸ್​ಕ್ಲಬ್​ ಪ್ರಶಸ್ತಿ
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆ ಎಂದ ಸಚಿವ ಜಮೀರ್
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?
ಹಸುಗಳ ಕೆಚ್ಚಲು ಕೊಯ್ದು ವಿಕೃತಿ, ಕೇಸ್ ಬುಕ್: ಸಿಎಂ ಹೇಳಿದ್ದೇನು?