
ನವೆಂಬರ್ 8 ರಿಂದ ಓಮನ್‌ನಲ್ಲಿ ನಡೆಯಲಿರುವ ಅಂಡರ್-19 ಏಷ್ಯಾಕಪ್ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ. ಈ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಭಾಗವಹಿಸಲಿದ್ದು, ಈ 8 ತಂಡಗಳ ಪಟ್ಟಿಯಲ್ಲಿ ಭಾರತ, ಶ್ರೀಲಂಕಾ, ಮಲೇಷ್ಯಾ, ಯುಎಇ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶ ತಂಡಗಳು ಸೇರಿವೆ. ಲೀಗ್ ಹಂತದಲ್ಲಿಯೇ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಕದನ ನವೆಂಬರ್ 8 ರಂದು ನಡೆಯಲಿದೆ. ಮೊದಲ ಪಂದ್ಯ ಶ್ರೀಲಂಕಾ ಮತ್ತು ಮಲೇಷ್ಯಾ ನಡುವೆ ನಡೆಯಲಿದ್ದು, ಇದರೊಂದಿಗೆ ಪಂದ್ಯಾವಳಿಗೆ ಚಾಲನೆ ಸಿಗಲಿದೆ.
𝐎𝐦𝐚𝐧 𝐢𝐬 𝐚𝐥𝐥 𝐬𝐞𝐭 𝐭𝐨 𝐰𝐞𝐥𝐜𝐨𝐦𝐞 𝐀𝐬𝐢𝐚’𝐬 𝐛𝐫𝐢𝐠𝐡𝐭𝐞𝐬𝐭 𝐲𝐨𝐮𝐧𝐠 𝐜𝐫𝐢𝐜𝐤𝐞𝐭𝐢𝐧𝐠 𝐭𝐚𝐥𝐞𝐧𝐭 🇴🇲
The #DPWorldMensU19AsiaCup2026 gets underway on November 5 ~ with the continent’s top U19 sides set to battle it out for the title 🏆
#ACC https://t.co/tol77z81yK
— AsianCricketCouncil (@ACCMedia1) October 8, 2026
ಅಂಡರ್-19 ಏಷ್ಯಾಕಪ್ ಭಾರತ ಯುವ ಪಡೆಯ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಕಳೆದ ಆವೃತ್ತಿಯಲ್ಲಿ ಅಂದರೆ 2026ರ ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋತಿತು. ಆ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 50 ಓವರ್‌ಗಳಲ್ಲಿ 347 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 156 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಪಾಕಿಸ್ತಾನ ಪಂದ್ಯವನ್ನು 191 ರನ್‌ಗಳಿಂದ ಗೆದ್ದು, ಟ್ರೋಫಿ ಎತ್ತಿಹಿಡಿದಿತ್ತು.
ಭಾರತ ತಂಡ ಸತತ ಎರಡು ಅಂಡರ್-19 ಏಷ್ಯಾಕಪ್ ಫೈನಲ್‌ಗಳಲ್ಲಿ ಸೋಲು ಕಂಡಿದೆ. ಇನ್ನು ಭಾರತ ಸತತ ಮೂರು ಬಾರಿ ಈ ಟ್ರೋಫಿ ಗೆದ್ದಿದ್ದು, ಕೊನೆಯದಾಗಿ 2021 ರಲ್ಲಿ ಅಂಡರ್-19 ಏಷ್ಯಾಕಪ್ ಚಾಂಪಿಯನ್ ಆಗಿತ್ತು. ಹಾಗೆಯೇ ಟೀಂ ಇಂಡಿಯಾ 2018, 2019 ಮತ್ತು 2021 ರಲ್ಲಿ ಚಾಂಪಿಯನ್ ಆಗಿದ್ದು, ಇದುವರೆಗೆ 7 ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಅತಿ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ತಂಡವೆಂಬ ದಾಖಲೆ ಬರೆದಿದೆ.