AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೀಲ್ಡಿಂಗ್ ಅಂದ್ರೆ ಇದು: ಗಾಳಿಯಲ್ಲಿ ಹಾರಿ ಕಣ್ಮನ ಸೆಳೆಯುವ ಕ್ಯಾಚ್: ಶಾಕಿಂಗ್ ವೀಡಿಯೋ

Stephan Pascal Catch Video: ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ 2024ರ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಸ್ಟೀಫನ್ ಪಾಸ್ಕಲ್ ಆಸ್ಟ್ರೇಲಿಯದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಹಿಡಿದ ಕ್ಯಾಚ್ ವಿಶ್ವದಾದ್ಯಂತ ಭಾರೀ ವೈರಲ್ ಆಗುತ್ತಿದೆ. 42ನೇ ಓವರ್‌ನ ಕೊನೆಯ ಎಸೆತದಲ್ಲಿ ಈ ಘಟನೆ ನಡೆದಿದೆ.

ಫೀಲ್ಡಿಂಗ್ ಅಂದ್ರೆ ಇದು: ಗಾಳಿಯಲ್ಲಿ ಹಾರಿ ಕಣ್ಮನ ಸೆಳೆಯುವ ಕ್ಯಾಚ್: ಶಾಕಿಂಗ್ ವೀಡಿಯೋ
stephan pascal catch
Vinay Bhat
|

Updated on: Feb 04, 2024 | 9:54 AM

Share

ದಕ್ಷಿಣ ಆಫ್ರಿಕಾದಲ್ಲಿ 19 ವರ್ಷದೊಳಗಿನವರ ಐಸಿಸಿ ಏಕದಿನ ವಿಶ್ವಕಪ್ 2024 (ICC U19 World Cup) ನಡೆಯುತ್ತಿದೆ. ಸದ್ಯ ತಂಡಗಳು ಸೂಪರ್-6 ಸುತ್ತಿನಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿ ಆಗಿದ್ದವು. ಇದರಲ್ಲಿ ವೆಸ್ಟ್ ಇಂಡೀಸ್ ನಾಯಕ ಸ್ಟೀಫನ್ ಪಾಸ್ಕಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತು. ಇದೀಗ ಆಸ್ಟ್ರೇಲಿಯದ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ಆಟಗಾರನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಸ್ಟೀಫನ್ ಪಾಸ್ಕಲ್ ಆಸ್ಟ್ರೇಲಿಯದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಹಿಡಿದ ಕ್ಯಾಚ್ ವಿಶ್ವದಾದ್ಯಂತ ಭಾರೀ ವೈರಲ್ ಆಗುತ್ತಿದೆ. 42ನೇ ಓವರ್‌ನ ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ರಾಫೆಲ್ ಮೆಕ್‌ಮಿಲನ್ ಮಿಡ್ ವಿಕೆಟ್ ಕಡೆಗೆ ಚೆಂಡನ್ನು ಅಟ್ಟು ಯತ್ನಿಸಿದರು. ಆದರೆ, ಬಾಲ್ ಸ್ವಿಂಗ್ ಆದ ಪರಿಣಾಮ ಬ್ಯಾಟ್​ನ ತುದಿಗೆ ಸಿಕ್ಕಿತು. ಆಗ ಪಾಯಿಂಟ್‌ನಲ್ಲಿ ನಿಂತಿದ್ದ ಪಾಸ್ಕಲ್ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಪಡೆದರು. ಈ ಕ್ಯಾಚ್ ತುಂಬಾ ಅಪಾಯಕಾರಿಯಾಗಿದ್ದು, ಆಸ್ಟ್ರೇಲಿಯ ಬ್ಯಾಟರ್ ಒಂದುಕ್ಷಣ ದಂಗಾದರು. ಈ ಕ್ಯಾಚ್‌ನ ವಿಡಿಯೋವನ್ನು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ
Image
ಆಡಲೇ ಬೇಕಾದ ಒತ್ತದಲ್ಲಿ ರೋಹಿತ್: ರೋಚಕತೆ ಸೃಷ್ಟಿಸಿದ ಇಂದಿನ 3ನೇ ದಿನದಾಟ
Image
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಿಂದ ಹೊರಗುಳಿಯಲು ಇದುವೇ ಅಸಲಿ ಕಾರಣ
Image
ಸೆಮಿಸ್​ನಲ್ಲಿ ಭಾರತ- ಆಫ್ರಿಕಾ ಫೈಟ್; ಪಂದ್ಯ ಯಾವಾಗ ಗೊತ್ತಾ?
Image
6 ವಿಕೆಟ್ ಉರುಳಿಸಲು ಕಾರಣವಾದ ರಹಸ್ಯ ಬಿಚ್ಚಿಟ್ಟ ಬುಮ್ರಾ..!

ಸ್ಟೀಫನ್ ಪಾಸ್ಕಲ್ ಹಿಡಿದ ಅದ್ಭುತ ಕ್ಯಾಚ್​ನ ವಿಡಿಯೋ:

View this post on Instagram

A post shared by ICC (@icc)

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 8 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಆಸ್ಟ್ರೇಲಿಯಾ ಪರ ಸ್ಯಾಮ್ ಕಾನ್‌ಸ್ಟನ್ಸ್ 108 ರನ್‌ಗಳೊಂದಿಗೆ ಅಮೋಘ ಶತಕ ಬಾರಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 1 ಸಿಕ್ಸರ್‌ಗಳನ್ನು ಹೊಡೆದರು. ಇದಲ್ಲದೇ ಮೆಕ್ ಮಿಲನ್ 29 ರನ್ ಗಳ ಇನ್ನಿಂಗ್ಸ್ ಆಡಿದರು. ಹಗ್ ವೆಬ್‌ಗೆನ್ 22 ರನ್ ಗಳಿಸಿದರು. ಹರ್ಜಸ್ ಸಿಂಗ್ 16 ರನ್ ಗಳಿಸಿದರು.

ಟೆಸ್ಟ್ ಕ್ರಿಕೆಟ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಜಸ್ಪ್ರೀತ್ ಬುಮ್ರಾ..!

ಅನಿಶ್ಚಿತ ಫಲಿತಾಂಶ

ಬಳಿಕ ಚೇಸಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಕೇವಲ 4.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 24 ರನ್ ಗಳಿಸಿತ್ತು. ಈ ಸಂದರ್ಭ ಜೋರಾಗಿ ಮಳೆ ಸುರಿಯಿತು. ಕೆಲ ಸಮಯ ಕಾದರೂ ಮಳೆ ಕಡಿಮೆ ಆಗಲಿಲ್ಲ. ಬಳಿಕ ಪಂದ್ಯವನ್ನು ರದ್ದು ಮಾಡಲಾಯಿತು. ಇದರಿಂದಾಗಿ ಉಭಯ ತಂಡಗಳಿಗೆ ಸಮಾನ ಅಂಕ ಹಂಚಲಾಯಿತು.

ಹೆಚ್ಚಿನ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ