UPW vs MI, WPL 2023: ಮುಂದುವರೆದ ಮುಂಬೈ ತಂಡದ ಗೆಲುವಿನ ನಾಗಾಲೋಟ

TV9 Web
| Updated By: ಝಾಹಿರ್ ಯೂಸುಫ್

Updated on:Mar 12, 2023 | 10:57 PM

UP Warriorz vs Mumbai Indians: ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು.

UPW vs MI, WPL 2023: ಮುಂದುವರೆದ ಮುಂಬೈ ತಂಡದ ಗೆಲುವಿನ ನಾಗಾಲೋಟ
UPW vs MI

UPW vs MI Live Score, WPL 2023: ಮುಂಬೈನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್​ನ 10ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್​ ಕಲೆಹಾಕಿತು. 160 ರನ್​ಗಳ ಗುರಿ ಪಡೆದ ಮುಂಬೈ ಇಂಡಿಯನ್ಸ್ ಪರ ನಾಯಕಿ ಹರ್ಮನ್​ಪ್ರೀತ್ ಕೌರ್ (53) ಭರ್ಜರಿ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಪರಿಣಾಮ ಕೇವಲ 17.3 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು 8 ವಿಕೆಟ್​ಗಳ ಭರ್ಜರಿ ಸಾಧಿಸಿತು.

ಈ ಜಯದೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ಸತತ 4ನೇ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್​ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಅಂದಹಾಗೆ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಒಂದೇ ಒಂದು ಸೋಲು ಕಾಣದೇ ಮುಂಬೈ ಇಂಡಿಯನ್ಸ್​ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ.

ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ದೇವಿಕಾ ವೈದ್ಯ, ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.

ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವೊಂಗ್, ಅಮಾನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್.

ಯುಪಿ ವಾರಿಯರ್ಸ್​ ತಂಡ: ಅಲಿಸ್ಸಾ ಹೀಲಿ (ನಾಯಕಿ) , ದೇವಿಕಾ ವೈದ್ಯ , ಶ್ವೇತಾ ಸೆಹ್ರಾವತ್ , ಕಿರಣ್ ನವಗಿರೆ , ತಹ್ಲಿಯಾ ಮೆಕ್‌ಗ್ರಾತ್ , ದೀಪ್ತಿ ಶರ್ಮಾ , ಗ್ರೇಸ್ ಹ್ಯಾರಿಸ್ , ಸಿಮ್ರಾನ್ ಶೇಖ್ , ಸೋಫಿ ಎಕ್ಲೆಸ್ಟೋನ್ , ಅಂಜಲಿ ಸರ್ವಾಣಿ , ರಾಜೇಶ್ವರಿ ಲಾ ಇಸ್ಮಾಯಿಲ್ , ಶಿವನ್ ಲಾ ಇಸ್ಮೇಲ್ , ಶಬ್ನ್ ಲಾ ಗಾಯಕ್ವಾಡ್ ಸೊಪ್ಪದಂಡಿ ಯಶಸ್ರಿ.

ಮುಂಬೈ ಇಂಡಿಯನ್ಸ್ ತಂಡ: ಯಾಸ್ತಿಕಾ ಭಾಟಿಯಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಹೇಲಿ ಮ್ಯಾಥ್ಯೂಸ್ , ನ್ಯಾಟ್ ಸಿವರ್-ಬ್ರಂಟ್ , ಅಮೆಲಿಯಾ ಕೆರ್ , ಪೂಜಾ ವಸ್ತ್ರಾಕರ್ , ಇಸ್ಸಿ ವೊಂಗ್ , ಅಮನ್ಜೋತ್ ಕೌರ್ , ಹುಮೈರಾ ಕಾಜಿ , ಜಿಂಟಿಮಣಿ ಕಲಿತಾ , ಸೈಕಾ ಇಶಾಕ್ , ಡಿ ಗುಹರಾ ಟ್ರೈಜಾಕ್ , ಚಲೋ ಗ್ರಹಾರಾ ಸೋನಮ್ ಯಾದವ್ , ನೀಲಂ ಬಿಷ್ಟ್ , ಪ್ರಿಯಾಂಕಾ ಬಾಲ.

LIVE NEWS & UPDATES

The liveblog has ended.
  • 12 Mar 2023 10:54 PM (IST)

    UPW vs MI Live Score, WPL 2023: ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ

    ಯುಪಿ ವಾರಿಯರ್ಸ್​- 159/6 (20)

    ಮುಂಬೈ ಇಂಡಿಯನ್ಸ್​- 164/2 (17.3)

     

    8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್
  • 12 Mar 2023 10:49 PM (IST)

    UPW vs MI Live Score, WPL 2023: ಅರ್ಧಶತಕ ಪೂರೈಸಿದ ಹರ್ಮನ್​ಪ್ರೀತ್ ಕೌರ್

    31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹರ್ಮನ್​ಪ್ರೀತ್ ಕೌರ್

    MIW 152/2 (16.3)

      

  • 12 Mar 2023 10:48 PM (IST)

    UPW vs MI Live Score, WPL 2023: ವಾಟ್ ಎ ಶಾಟ್

    ಸೋಫಿ ಎಸೆತದಲ್ಲಿ ಡೀಪ್ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ಬ್ರಂಟ್

    MIW 148/2 (16.2)

      

  • 12 Mar 2023 10:47 PM (IST)

    UPW vs MI Live Score, WPL 2023: ಒಂದೇ ಓವರ್​ನಲ್ಲಿ 19 ರನ್​

    ತಹ್ಲಿಯಾ ಓವರ್​ನಲ್ಲಿ 19 ರನ್​ ಕಲೆಹಾಕಿದ ಹರ್ಮನ್​ಪ್ರೀತ್ ಕೌರ್-ಸೀವರ್ ಬ್ರಂಟ್

    MIW 142/2 (16)

      

  • 12 Mar 2023 10:44 PM (IST)

    UPW vs MI Live Score, WPL 2023: ಭರ್ಜರಿ ಸಿಕ್ಸ್

    ತಹ್ಲಿಯಾ ಮೆಕ್​ಗ್ರಾಥ್ ಎಸೆತದಲ್ಲಿ ಲೆಗ್ ಸೈಡ್​ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಹರ್ಮನ್​ಪ್ರೀತ್ ಕೌರ್

    MIW 133/2 (15.3)

      

  • 12 Mar 2023 10:38 PM (IST)

    UPW vs MI Live Score, WPL 2023: 15 ಓವರ್ ಮುಕ್ತಾಯ

    ಕ್ರೀಸ್​ನಲ್ಲಿ ಸೀವರ್ ಬ್ರಂಟ್ ಹಾಗೂ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್

    MIW 123/2 (15)

      

  • 12 Mar 2023 10:34 PM (IST)

    UPW vs MI Live Score, WPL 2023: ಸ್ವೀಪ್ ಶಾಟ್

    ರಾಜೇಶ್ವರಿ ಎಸೆತದಲ್ಲಿ ಲೆಗ್​ ಸೈಡ್​ನತ್ತ ಸ್ವೀಪ್ ಶಾಟ್ ಫೋರ್ ಬಾರಿಸಿದ ಹರ್ಮನ್​ಪ್ರೀತ್ ಕೌರ್

    MIW 107/2 (13.5)

      

  • 12 Mar 2023 10:31 PM (IST)

    UPW vs MI Live Score, WPL 2023: 13 ಓವರ್ ಮುಕ್ತಾಯ

    ಯುಪಿ ವಾರಿಯರ್ಸ್​- 159/6 (20)

    ಮುಂಬೈ ಇಂಡಿಯನ್ಸ್- 99/2 (13)

    ಕ್ರೀಸ್​ನಲ್ಲಿ ಸೀವರ್ ಬ್ರಂಟ್ ಹಾಗೂ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್

      

  • 12 Mar 2023 10:24 PM (IST)

    UPW vs MI Live Score, WPL 2023: ಆಕರ್ಷಕ ಬೌಂಡರಿ

    ದೀಪ್ತಿ ಶರ್ಮಾ ಎಸೆತದಲ್ಲಿ ಲೆಗ್ ​ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಬ್ರಂಟ್

    MIW 80/2 (11.1)

     

  • 12 Mar 2023 10:14 PM (IST)

    UPW vs MI Live Score, WPL 2023: 9 ಓವರ್ ಮುಕ್ತಾಯ

    MIW 64/2 (9)

     

    ಕ್ರೀಸ್​ನಲ್ಲಿ ಸೀವರ್ ಬ್ರಂಟ್ ಹಾಗೂ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್

  • 12 Mar 2023 10:04 PM (IST)

    UPW vs MI Live Score, WPL 2023: 2ನೇ ವಿಕೆಟ್ ಪತನ

    ಸೋಫಿ ಎಸೆತದಲ್ಲಿ ನೇರವಾಗಿ ಬೌಲರ್​ಗೆ ಕ್ಯಾಚ್ ನೀಡಿ ಹೇಲಿ ಮ್ಯಾಥ್ಯೂಸ್ (12)

    MIW 58/2 (7.2)

     

  • 12 Mar 2023 10:00 PM (IST)

    UPW vs MI Live Score, WPL 2023: ಮುಂಬೈ ಇಂಡಿಯನ್ಸ್ ಮೊದಲ ವಿಕೆಟ್ ಪತನ

    ರಾಜೇಶ್ವರಿ ಗಾಯಕ್ವಾಡ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿ ಯಾಸ್ತಿಕಾ ಭಾಟಿಯಾ (42)

    MIW 58/0 (6.4)

     

  • 12 Mar 2023 09:57 PM (IST)

    UPW vs MI Live Score, WPL 2023: ಅರ್ಧಶತಕ ಪೂರೈಸಿದ ಮುಂಬೈ ಇಂಡಿಯನ್ಸ್

    ಪವರ್​ಪ್ಲೇನಲ್ಲೇ ಅರ್ಧಶತಕ ಪೂರೈಸಿದ ಮುಂಬೈ ಇಂಡಿಯನ್ಸ್​

    MIW 51/0 (6)

    ಕ್ರೀಸ್​ನಲ್ಲಿ ಯಾಸ್ತಿಕಾ ಭಾಟಿಯಾ – ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್

  • 12 Mar 2023 09:49 PM (IST)

    UPW vs MI Live Score, WPL 2023: 5 ಓವರ್ ಮುಕ್ತಾಯ

    UPW 159/6 (20)

    MIW 40/0 (5)

      

    ಕ್ರೀಸ್​ನಲ್ಲಿ ಯಾಸ್ತಿಕಾ ಭಾಟಿಯಾ – ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್
  • 12 Mar 2023 09:30 PM (IST)

    UPW vs MI Live Score, WPL 2023: ಮುಂಬೈ ಇಂಡಿಯನ್ಸ್ ಉತ್ತಮ​ ಆರಂಭ

    ಶಬ್ನಿಮ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಫೋರ್ ಬಾರಿಸಿದ ಯಾಸ್ತಿಕಾ ಭಾಟಿಯಾ

    MIW 16/0 (1.5)

      

  • 12 Mar 2023 09:08 PM (IST)

    UPW vs MI Live Score, WPL 2023: ಯುಪಿ ವಾರಿಯರ್ಸ್ ಇನಿಂಗ್ಸ್ ಅಂತ್ಯ

    UPW 159/6 (20)

    ಮುಂಬೈ ಇಂಡಿಯನ್ಸ್​​ಗೆ 160 ರನ್​ಗಳ ಗುರಿ ನೀಡಿದ ಯುಪಿ ವಾರಿಯರ್ಸ್​

  • 12 Mar 2023 09:07 PM (IST)

    UPW vs MI Live Score, WPL 2023: 6ನೇ ವಿಕೆಟ್ ಪತನ

    ಅಮೆಲಿಯಾ ಕೆರ್ ಎಸೆತದಲ್ಲಿ ಸ್ಟಂಪ್ ಔಟಾದ  ದೀಪ್ತಿ ಶರ್ಮಾ (7)

    UPW 156/6 (19.3)

      

  • 12 Mar 2023 09:04 PM (IST)

    UPW vs MI Live Score, WPL 2023: 19 ಓವರ್ ಮುಕ್ತಾಯ

    UPW 155/5 (19)

    ಕ್ರೀಸ್​ನಲ್ಲಿ ಸಿಮ್ರಾನ್ ಶೇಖ್ – ದೀಪ್ತಿ ಶರ್ಮಾ ಬ್ಯಾಟಿಂಗ್

  • 12 Mar 2023 08:58 PM (IST)

    UPW vs MI Live Score, WPL 2023: 5ನೇ ವಿಕೆಟ್ ಪತನ

    ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿ…ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿಯಾ ಸೋಫಿ ಎಕ್ಲೆಸ್ಟೋನ್ (1)

    UPW 146/5 (18)

      

  • 12 Mar 2023 08:52 PM (IST)

    UPW vs MI Live Score, WPL 2023: ಬ್ಯಾಕ್ ಟು ಬ್ಯಾಕ್ ವಿಕೆಟ್

    ಸೈಕಾ ಇಶಾಕ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ನಿರ್ಗಮಿಸಿದ ತಹ್ಲಿಯಾ ಮೆಕ್​ಗ್ರಾಥ್ (50)

    UPW 141/4 (16.5)

      

  • 12 Mar 2023 08:50 PM (IST)

    UPW vs MI Live Score, WPL 2023: 3ನೇ ವಿಕೆಟ್ ಪತನ

    ಸೈಕಾ ಇಶಾಕ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ಅಲಿಸ್ಸಾ ಹೀಲಿ (58)

    UPW 140/3 (16.3)

      

  • 12 Mar 2023 08:48 PM (IST)

    UPW vs MI Live Score, WPL 2023: 16 ಓವರ್ ಮುಕ್ತಾಯ

    UPW 138/2 (16)

      ಕ್ರೀಸ್​ನಲ್ಲಿ ಅಲಿಸ್ಸಾ ಹೀಲಿ – ತಹ್ಲಿಯಾ ಬ್ಯಾಟಿಂಗ್

  • 12 Mar 2023 08:43 PM (IST)

    UPW vs MI Live Score, WPL 2023: ಎಕ್ಸ್​ಟ್ರಾ ಕವರ್​ ಶಾಟ್

    ವೋಂಗ್ ಎಸೆತದಲ್ಲಿ ಎಕ್ಸ್​​ಟ್ರಾ ಕವರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ತಹ್ಲಿಯಾ

    UPW 129/2 (14.5)

      

  • 12 Mar 2023 08:36 PM (IST)

    UPW vs MI Live Score, WPL 2023: ಅರ್ಧಶತಕ ಪೂರೈಸಿದ ಅಲಿಸ್ಸಾ ಹೀಲಿ

    36 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ

    UPW 119/2 (13.2)

      

  • 12 Mar 2023 08:33 PM (IST)

    UPW vs MI Live Score, WPL 2023: 13 ಓವರ್ ಮುಕ್ತಾಯ

    UPW 113/2 (13)

      

    ಕ್ರೀಸ್​ನಲ್ಲಿ ಅಲಿಸ್ಸಾ ಹೀಲಿ – ತಹ್ಲಿಯಾ ಬ್ಯಾಟಿಂಗ್

  • 12 Mar 2023 08:25 PM (IST)

    UPW vs MI Live Score, WPL 2023: ರಾಕೆಟ್ ಶಾಟ್

    ಕಲಿತಾ ಎಸೆತದಲ್ಲಿ ಆಫ್​ ಸೈಡ್​ನತ್ತ ಭರ್ಜರಿ ಪೋರ್ ಬಾರಿಸಿದ ತಹ್ಲಿಯಾ ಮೆಕ್​ಗ್ರಾಥ್

    UPW 100/2 (11.5)

      

  • 12 Mar 2023 08:16 PM (IST)

    UPW vs MI Live Score, WPL 2023: 10 ಓವರ್ ಮುಕ್ತಾಯ

    UPW 85/2 (10)

      

    ಕ್ರೀಸ್​ನಲ್ಲಿ ಅಲಿಸ್ಸಾ ಹೀಲಿ – ತಹ್ಲಿಯಾ ಮೆಕ್​ಗ್ರಾಥ್ ಬ್ಯಾಟಿಂಗ್

  • 12 Mar 2023 08:15 PM (IST)

    UPW vs MI Live Score, WPL 2023: ರಿವರ್ಸ್ ಸ್ವೀಪ್

    ಹೇಲಿ ಮ್ಯಾಥ್ಯೂಸ್ ಎಸೆತದಲ್ಲಿ ರಿವರ್ಸ್​ ಸ್ವೀಪ್ ಶಾಟ್ ಮೂಲಕ ಫೋರ್ ಬಾರಿಸಿದ ಬಲಗೈ ಬ್ಯಾಟರ್ ತಹ್ಲಿಯಾ

    UPW 84/2 (9.5)

      

  • 12 Mar 2023 08:11 PM (IST)

    UPW vs MI Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಅಮೆಲಿಯಾ ಕೆರ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಬಾರಿಸಿದ ತಹ್ಲಿಯಾ

    UPW 75/2 (8.3)

      

  • 12 Mar 2023 08:07 PM (IST)

    UPW vs MI Live Score, WPL 2023: ಆಕರ್ಷಕ ಬೌಂಡರಿ

    ಹೇಲಿ ಮ್ಯಾಥ್ಯೂಸ್ ಫುಲ್ ಟಾಸ್ ಎಸೆತಕ್ಕೆ ಲೆಗ್ ಸೈಡ್​ನತ್ತ ಆಕರ್ಷಕ ಫೋರ್ ಬಾರಿಸಿದ ತಹ್ಲಿಯಾ ಮೆಕ್​ಗ್ರಾಥ್

    UPW 64/2 (7.2)

     

  • 12 Mar 2023 08:03 PM (IST)

    UPW vs MI Live Score, WPL 2023: 2ನೇ ವಿಕೆಟ್ ಪತನ

    ಅಮೆಲಿಯಾ ಕೆರ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನ…ವಿಕೆಟ್ ಕೀಪರ್​ಗೆ ಕ್ಯಾಚ್​….ಕಿರಣ್ ನವಗಿರೆ (17) ಔಟ್

    UPW 58/2 (6.4)

     

  • 12 Mar 2023 08:02 PM (IST)

    UPW vs MI Live Score, WPL 2023: ಬಿಗ್ ಸಿಕ್ಸ್

    ಅಮೆಲಿಯಾ ಕೆರ್ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಕಿರಣ್ ನವಗಿರೆ

    UPW 54/1 (6.2)

     

  • 12 Mar 2023 07:58 PM (IST)

    UPW vs MI Live Score, WPL 2023: ಪವರ್​ಪ್ಲೇ ಮುಕ್ತಾಯ

    ಬ್ರಂಟ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಅಲಿಸ್ಸಾ ಹೀಲಿ

    UPW 48/1 (6)

     ಕ್ರೀಸ್​ನಲ್ಲಿ ಅಲಿಸ್ಸಾ ಹೀಲಿ – ಕಿರಣ್ ನವಗಿರೆ ಬ್ಯಾಟಿಂಗ್

  • 12 Mar 2023 07:49 PM (IST)

    UPW vs MI Live Score, WPL 2023: ಬ್ಯಾಕ್ ಟು ಬ್ಯಾಕ್ ಬೌಂಡರಿ

    ಸೈಕಾ ಇಶಾಕ್ ಎಸೆತಗಳಲ್ಲಿ ಸ್ಟ್ರೈಟ್ ಹಿಟ್ ಬೌಂಡರಿ ಬಾರಿಸಿದ ಬೆನ್ನಲ್ಲೇ ಆಫ್​ ಸೈಡ್​ನತ್ತ ಮತ್ತೊಂದು ಫೋರ್ ಸಿಡಿಸಿದ ಹೀಲಿ

    UPW 30/1 (3.5)

      

  • 12 Mar 2023 07:48 PM (IST)

    UPW vs MI Live Score, WPL 2023: ಸ್ಟ್ರೈಟ್ ಹಿಟ್ ಬೌಂಡರಿ

    ಸೈಕಾ ಇಶಾಕ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಫೋರ್ ಬಾರಿಸಿದ ಅಲಿಸ್ಸಾ ಹೀಲಿ

    UPW 26/1 (3.4)

      

  • 12 Mar 2023 07:38 PM (IST)

    UPW vs MI Live Score, WPL 2023: ಯುಪಿ ವಾರಿಯರ್ಸ್ ಮೊದಲ ವಿಕೆಟ್ ಪತನ

    ಸೈಕಾ ಇಶಾಕ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರನಡೆದ ದೇವಿಕಾ ವೈದ್ಯ (6)

    UPW 8/1 (2)

      

  • 12 Mar 2023 07:07 PM (IST)

    UPW vs MI Live Score, WPL 2023: ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

    ಮುಂಬೈ ಇಂಡಿಯನ್ಸ್ (ಪ್ಲೇಯಿಂಗ್ XI): ಯಾಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಧಾರಾ ಗುಜ್ಜರ್, ಅಮೆಲಿಯಾ ಕೆರ್, ಇಸ್ಸಿ ವೊಂಗ್, ಅಮಾನ್ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್

  • 12 Mar 2023 07:06 PM (IST)

    UPW vs MI Live Score, WPL 2023: ಯುಪಿ ವಾರಿಯರ್ಸ್ ಪ್ಲೇಯಿಂಗ್ ಇಲೆವೆನ್

    ಯುಪಿ ವಾರಿಯರ್ಸ್ (ಪ್ಲೇಯಿಂಗ್ XI): ದೇವಿಕಾ ವೈದ್ಯ, ಅಲಿಸ್ಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್

  • 12 Mar 2023 07:02 PM (IST)

    UPW vs MI Live Score, WPL 2023: ಟಾಸ್ ಗೆದ್ದ ಯುಪಿ ವಾರಿಯರ್ಸ್

    ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • 12 Mar 2023 06:36 PM (IST)

    UPW vs MI Live Score, WPL 2023: ಮುಂಬೈ ಇಂಡಿಯನ್ಸ್​ vs ಯುಪಿ ವಾರಿಯರ್ಸ್

    ಟಾಸ್ ಪ್ರಕ್ರಿಯೆ: 7 ಗಂಟೆಗೆ

    ಪಂದ್ಯ ಶುರು: 7. 30 ಕ್ಕೆ

    ಸ್ಥಳ: ಬ್ರಬೋರ್ನ್ ಸ್ಟೇಡಿಯಂ, ಮುಂಬೈ

  • Published On - Mar 12,2023 6:33 PM

    Follow us
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
    ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
    ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
    ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
    ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
    ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
    ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
    ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
    ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
    ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
    ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು