AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಟ್ರೇಲಿಯಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಟ್ವೀಟ್: ಹೊಸ ಚರ್ಚೆ ಶುರು

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಕಾಂಗರೂನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 8 ಪಂದ್ಯಗಳನ್ನಾಡಲಾಗುತ್ತದೆ. ಮೊದಲಿಗೆ 3 ಮ್ಯಾಚ್​ಗಳ ಏಕದಿನ ಸರಣಿ ನಡೆದರೆ, ಆ ಬಳಿಕ ಐದು ಪಂದ್ಯಗಳ ಟಿ20 ಸರಣಿ ಜರುಗಲಿದೆ.

ಆಸ್ಟ್ರೇಲಿಯಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಟ್ವೀಟ್: ಹೊಸ ಚರ್ಚೆ ಶುರು
Virat Kohli
ಝಾಹಿರ್ ಯೂಸುಫ್
|

Updated on:Oct 16, 2025 | 2:38 PM

Share

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಈ ಸರಣಿಯ ಮೂಲಕ ವಿರಾಟ್ ಕೊಹ್ಲಿ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಟೀಮ್ ಇಂಡಿಯಾ ಪರ ಒಂದೇ ಪಂದು ಮ್ಯಾಚ್ ಆಡಿಲ್ಲ. ಇದೀಗ ಆಸೀಸ್ ಪಿಚ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ಕೊಹ್ಲಿ ಸರಣಿ ಆರಂಭಕ್ಕೂ ಮುನ್ನ ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಅದು ಸಹ ನಿಗೂಢ ಅರ್ಥ ಹೊಂದಿರುವ ಟ್ವೀಟ್​​ನೊಂದಿಗೆ..!

ಸಾಮಾನ್ಯವಾಗಿ ವಿರಾಟ್ ಕೊಹ್ಲಿ ತಮ್ಮ ವೈಯುಕ್ತಿಕ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದಿಲ್ಲ. ಅದರಲ್ಲೂ ಅಭಿಮಾನಿಗಳ ತಲೆಗೆ ಹುಳ ಬಿಡುವಂತಹ ಟ್ವೀಟ್​ಗಳಿಂದ ಕೊಹ್ಲಿ ದೂರ. ಆದರೆ ಈ ಬಾರಿ ಕೊಹ್ಲಿ ಹಂಚಿಕೊಂಡಿರುವ ಟ್ವೀಟ್​ವೊಂದು ಚರ್ಚೆಗೆ ಕಾರಣವಾಗಿದೆ.

ನೀವು ನಿಜವಾಗಲೂ ಸೋಲುವುದು ಯಾವಾಗ ಅಂದರೆ, ನೀವು ಬಿಟ್ಟು ಕೊಡಲು ನಿರ್ಧರಿಸಿದಾಗ… ಎಂಬಾರ್ಥದ ವಾಕ್ಯವನ್ನು ವಿರಾಟ್ ಕೊಹ್ಲಿ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇತ್ತ ಆಸ್ಟ್ರೇಲಿಯಾ ಸರಣಿಗೂ ಮುನ್ನ ಕೊಹ್ಲಿ ಹೀಗಂದಿರುವುದು ಯಾಕೆ ಎಂಬ ಪ್ರಶ್ನೆ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಮೂಡಿತ್ತು.

ಅದರಲ್ಲೂ ಕೆಲವರು ಇದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್​ಗೆ ನೀಡಿದ ತಿರುಗೇಟು ಎಂದು ಪ್ರತಿಕ್ರಿಯಿಸಿದ್ದರು. ಆದರೆ ಟ್ವೀಟ್ ವೈರಲ್ ಆಗುತ್ತಿದ್ದಂತೆ ವಿರಾಟ್ ಕೊಹ್ಲಿಯಿಂದಲೇ ಸ್ಪಷ್ಟನೆ ಹೊರಬಿದ್ದಿದೆ.

ತನ್ನ ಟ್ವೀಟ್​ಗೆ ಜಾಹೀರಾತುವೊಂದರ ವಿಡಿಯೋ ಮೂಲಕ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, ತಾನು ಹೇಳಿರುವುದು ಜಾಹೀರಾತಿಗೆ ಸಂಬಂಧಿಸಿದ ವಿಷಯ ಎಂದು ಸಾರಿದ್ದಾರೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದ್ದ ಚರ್ಚೆಗೆ ಬ್ರೇಕ್ ಹಾಕಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ಸರಣಿಗೆ ಉಭಯ ತಂಡಗಳು ಹೀಗಿವೆ:

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಧ್ರುವ್ ಜುರೆಲ್.

ಇದನ್ನೂ ಓದಿ: ರ‍್ಯಾಂಕಿಂಗ್​ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿದ ಅಫ್ಘಾನ್ ಬ್ಯಾಟರ್

ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಅಲೆಕ್ಸ್ ಕ್ಯಾರಿ, ಕೂಪರ್ ಕೊನೊಲಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಓವನ್, ಮ್ಯಾಥ್ಯೂ ರೆನ್‌ಶಾ, ಮ್ಯಾಥ್ಯೂ ಶಾರ್ಟ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ.

Published On - 2:21 pm, Thu, 16 October 25

Follow Us
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಬಜೆಟ್ ಮಧ್ಯೆ ಡಿಕೆ ಶಿವಕುಮಾರ್ ಡಿನ್ನರ್ ಪಾಲಿಟಿಕ್ಸ್: ಸಂಚಲನ ಮೂಡಿಸಿದ ನಡೆ
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್
ಮರಿಗಳ ಜೊತೆ ಕಾಫಿ ತೋಟದಲ್ಲಿ ಕಾಡಾನೆಗಳ ಜಾಲಿ ರೌಂಡ್ಸ್
ಚಂದ್ರ ಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳು ನಿತ್ಯ ಪೂಜೆಯ ಬಳಿಕ ಬಂದ್
ಚಂದ್ರ ಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳು ನಿತ್ಯ ಪೂಜೆಯ ಬಳಿಕ ಬಂದ್
ದುಬೈನಿಂದ ಜೀವಂತ ಮರಳಿದ್ದೇ ಪವಾಡ: ಭಯಾನಕ ಅನುಭವ ಬಿಚ್ಚಿಟ್ಟ ಭೋಜೇಗೌಡ
ದುಬೈನಿಂದ ಜೀವಂತ ಮರಳಿದ್ದೇ ಪವಾಡ: ಭಯಾನಕ ಅನುಭವ ಬಿಚ್ಚಿಟ್ಟ ಭೋಜೇಗೌಡ
15 ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವ ಕೊನೆಗೂ ಸೆರೆ
15 ಕಳ್ಳತನ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದವ ಕೊನೆಗೂ ಸೆರೆ
ಮೋಸ ಮಾಡಿ ಇಸ್ರೇಲ್​​-ಅಮೆರಿಕಾದಿಂದ ಖಮೇನಿ ಹತ್ಯೆ: 'ಕೈ' ನಾಯಕನ ಆರೋಪ
ಮೋಸ ಮಾಡಿ ಇಸ್ರೇಲ್​​-ಅಮೆರಿಕಾದಿಂದ ಖಮೇನಿ ಹತ್ಯೆ: 'ಕೈ' ನಾಯಕನ ಆರೋಪ
ಅಮೆರಿಕದ ಟ್ರಂಪ್ ಟವರ್​​ನಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆ
ಅಮೆರಿಕದ ಟ್ರಂಪ್ ಟವರ್​​ನಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆ
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಹೋಳಿ ಹುಣ್ಣಿಮೆಯಂದೇ ಗ್ರಹಣ: ಸಾಲು ಸಾಲು ಅವಘಡಗಳು ಫಿಕ್ಸ್​​?
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ
ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ವಿಡಿಯೋ ಇಲ್ಲಿದೆ