AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20, ಏಕದಿನ ಸರಣಿಯ ಪೂರ್ಣ ವೇಳಾಪಟ್ಟಿ

Ind vs Aus Full Schedule 2025: ಏಕದಿನ ಸರಣಿಯ ನಂತರ, ಎರಡೂ ತಂಡಗಳು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ, ಇದು ಅಕ್ಟೋಬರ್ 29 ರಂದು ಕ್ಯಾನ್‌ಬೆರಾದಲ್ಲಿ ಪ್ರಾರಂಭವಾಗಿ ನವೆಂಬರ್ 8 ರಂದು ಬ್ರಿಸ್ಬೇನ್‌ನಲ್ಲಿ ಕೊನೆಗೊಳ್ಳಲಿದೆ. ಟಿ20 ಸ್ವರೂಪದಲ್ಲಿರುವ ಈ ಸರಣಿಯು ಆಟಗಾರರಿಗೆ ಮುಂದಿನ ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲು ಅವಕಾಶವನ್ನು ನೀಡುತ್ತದೆ.

India vs Australia: ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟಿ20, ಏಕದಿನ ಸರಣಿಯ ಪೂರ್ಣ ವೇಳಾಪಟ್ಟಿ
Ind Vs Aus Series
Vinay Bhat
|

Updated on:Jun 27, 2025 | 7:08 PM

Share

ಬೆಂಗಳೂರು (ಜೂ. 27): ಕ್ರಿಕೆಟ್ ಪ್ರಿಯರಿಗೆ ಒಂದು ರೋಮಾಂಚಕಾರಿ ಸುದ್ದಿ ಇದೆ. ಭಾರತೀಯ ಕ್ರಿಕೆಟ್ ತಂಡವು (Indian Cricket Team) ಅಕ್ಟೋಬರ್ ಮತ್ತು ನವೆಂಬರ್ 2025 ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಏಕದಿನ ಸರಣಿಯು ಅಕ್ಟೋಬರ್ 19, 2025 ರಂದು ಪರ್ತ್‌ನಿಂದ ಪ್ರಾರಂಭವಾಗಿ ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ಕೊನೆಗೊಳ್ಳಲಿದೆ. ಶಾಕಿಂಗ್ ಎಂದರೆ, ಏಕದಿನ ಮತ್ತು ಟಿ20 ಸರಣಿಯ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಸುದ್ದಿ ಇದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆಸ್ಟ್ರೇಲಿಯಾ vs ಭಾರತ, 1ನೇ ODI 2025

  • ದಿನಾಂಕ: ಅಕ್ಟೋಬರ್ 19, 2025
  • ಸ್ಥಳ: ಪರ್ತ್ ಕ್ರೀಡಾಂಗಣ, ಪರ್ತ್

ಆಸ್ಟ್ರೇಲಿಯಾ vs ಭಾರತ, 2ನೇ ODI 2025

ಇದನ್ನೂ ಓದಿ
Image
ವಿಂಡೀಸ್ ಕ್ರಿಕೆಟಿಗನ ಮೇಲೆ 11 ಮಹಿಳೆಯರಿಂದ ಅತ್ಯಾಚಾರ ಆರೋಪ
Image
ಟಿ20 ವಿಶ್ವಕಪ್ ಪಂದ್ಯದ ಬಗ್ಗೆ ರೋಹಿತ್ ಶಾಕಿಂಗ್ ಹೇಳಿಕೆ
Image
ಟಿ20 ಪವರ್‌ಪ್ಲೇ ನಿಯಮದಲ್ಲಿ ಪವರ್​ಫುಲ್ ಬದಲಾವಣೆ ತಂದ ಐಸಿಸಿ
Image
ಐಪಿಎಲ್​​ನಲ್ಲಿ ಇಂಜೂರಿ, ಎಂಎಲ್​ಸಿಯಲ್ಲಿ ಅಬ್ಬರದ ಆಟ
  • ದಿನಾಂಕ: ಅಕ್ಟೋಬರ್ 23, 2025
  • ಸ್ಥಳ: ಅಡಿಲೇಡ್ ಓವಲ್, ಅಡಿಲೇಡ್

ಆಸ್ಟ್ರೇಲಿಯಾ vs ಭಾರತ, 3ನೇ ODI 2025

  • ದಿನಾಂಕ: ಅಕ್ಟೋಬರ್ 25, 2025
  • ಸ್ಥಳ: ಸಿಡ್ನಿ ಕ್ರಿಕೆಟ್ ಮೈದಾನ (SCG), ಸಿಡ್ನಿ

ಭಾರತ-ಆಸ್ಟ್ರೇಲಿಯಾ ಟಿ20 ಸರಣಿ 2025 ವೇಳಾಪಟ್ಟಿ

ಏಕದಿನ ಸರಣಿಯ ನಂತರ, ಎರಡೂ ತಂಡಗಳು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ, ಇದು ಅಕ್ಟೋಬರ್ 29 ರಂದು ಕ್ಯಾನ್‌ಬೆರಾದಲ್ಲಿ ಪ್ರಾರಂಭವಾಗಿ ನವೆಂಬರ್ 8 ರಂದು ಬ್ರಿಸ್ಬೇನ್‌ನಲ್ಲಿ ಕೊನೆಗೊಳ್ಳಲಿದೆ. ಟಿ20 ಸ್ವರೂಪದಲ್ಲಿರುವ ಈ ಸರಣಿಯು ಆಟಗಾರರಿಗೆ ಮುಂದಿನ ಟಿ20 ವಿಶ್ವಕಪ್‌ಗೆ ತಯಾರಿ ನಡೆಸಲು ಅವಕಾಶವನ್ನು ನೀಡುತ್ತದೆ.

ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬೆದರಿಕೆ; 2 ದಿನ ಹೋಟೆಲ್​ನಲ್ಲೇ ಲಾಕ್..!

ಆಸ್ಟ್ರೇಲಿಯಾ vs ಭಾರತ, 1ನೇ T20 2025

  • ದಿನಾಂಕ: ಅಕ್ಟೋಬರ್ 29, 2025
  • ಸ್ಥಳ: ಮನುಕಾ ಓವಲ್, ಕ್ಯಾನ್‌ಬೆರಾ

ಆಸ್ಟ್ರೇಲಿಯಾ vs ಭಾರತ, 2ನೇ T20 2025

  • ದಿನಾಂಕ: ಅಕ್ಟೋಬರ್ 31, 2025
  • ಸ್ಥಳ: ಮೆಲ್ಬೋರ್ನ್ ಕ್ರಿಕೆಟ್ ಮೈದಾನ (ಎಂಸಿಜಿ), ಮೆಲ್ಬೋರ್ನ್

ಆಸ್ಟ್ರೇಲಿಯಾ vs ಭಾರತ, 3ನೇ T20 2025

  • ದಿನಾಂಕ: ನವೆಂಬರ್ 2, 2025
  • ಸ್ಥಳ: ಬೆಲ್ಲೆರಿವ್ ಓವಲ್, ಹೋಬಾರ್ಟ್

ಆಸ್ಟ್ರೇಲಿಯಾ vs ಭಾರತ, 4ನೇ T20 2025

  • ದಿನಾಂಕ: 6 ನವೆಂಬರ್ 2025
  • ಸ್ಥಳ: ಗೋಲ್ಡ್ ಕೋಸ್ಟ್ ಕ್ರೀಡಾಂಗಣ, ಗೋಲ್ಡ್ ಕೋಸ್ಟ್

ಆಸ್ಟ್ರೇಲಿಯಾ vs ಭಾರತ, 5ನೇ T20I 2025

  • ದಿನಾಂಕ: ನವೆಂಬರ್ 8, 2025
  • ಸ್ಥಳ: ದಿ ಗಬ್ಬಾ, ಬ್ರಿಸ್ಬೇನ್

ವಿರಾಟ್-ರೋಹಿತ್ ಮ್ಯಾಜಿಕ್

ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತೀಯ ಅಭಿಮಾನಿಗಳಲ್ಲಿ ಅಪಾರ ಉತ್ಸಾಹವಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ, ‘ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲ್ಲಿರುವ ಏಕದಿನ ಪಂದ್ಯ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯಲ್ಲಿರುವ ಟಿ20 ಪಂದ್ಯದ ಟಿಕೆಟ್‌ಗಳು ಪಂದ್ಯಕ್ಕೆ ನಾಲ್ಕು ತಿಂಗಳ ಮೊದಲೇ ಮಾರಾಟವಾಗಿದ್ದು, ಇದು ಈ ಪಂದ್ಯಗಳಿಗೆ ಭಾರಿ ಬೇಡಿಕೆಯನ್ನು ತೋರಿಸುತ್ತದೆ. ಈ ಪಂದ್ಯಗಳು ಮಾತ್ರವಲ್ಲದೆ ಎಂಸಿಜಿಯಲ್ಲಿ ನಡೆಯಲ್ಲಿರುವ ಟಿ20 ಪಂದ್ಯ ಹಾಗೂ ಗಬ್ಬಾದಲ್ಲಿ ನಡೆಯಲ್ಲಿರುವ ಟಿ20 ಪಂದ್ಯದ ಟಿಕೆಟ್​ಗೂ ಭಾರಿ ಬೇಡಿಕೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Fri, 27 June 25