AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ರೋಹಿತ್ ಶರ್ಮಾ ಬಳಿ ಹೋಗಿ ಬೆರಳು ತೋರಿಸಿದ ವಿರಾಟ್ ಕೊಹ್ಲಿ: ವಿಡಿಯೋ

India vs Australia, Virat Kohli pointed to Rohit Sharma: ಐಸಿಸಿ ಏಕದಿನ ವಿಶ್ವಕಪ್​ನ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿಕೆಟ್-ಕೀಪರ್, ಬ್ಯಾಟರ್ ಅಲೆಕ್ಸ್ ಕ್ಯಾರಿಯನ್ನು ಜಡೇಜಾ ಎಲ್​ಬಿ ಬೆಲೆಗೆ ಬೀಳಿಸಿ ಔಟ್ ಮಾಡಿದಾಗ ವಿರಾಟ್ ಕೊಹ್ಲಿ ಅವರು ರೋಹಿತ್ ಶರ್ಮಾ ಬಳಿ ಬಂದು ಬೆರಳು ತೋರಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

Virat Kohli: ರೋಹಿತ್ ಶರ್ಮಾ ಬಳಿ ಹೋಗಿ ಬೆರಳು ತೋರಿಸಿದ ವಿರಾಟ್ ಕೊಹ್ಲಿ: ವಿಡಿಯೋ
Virat Kohli and Rohit Sharma
Vinay Bhat
|

Updated on: Oct 09, 2023 | 8:13 AM

Share

ಐಸಿಸಿ ಏಕದಿನ ವಿಶ್ವಕಪ್ 2023 (ICC World Cup) ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಭರ್ಜರಿ ಶುಭಾರಂಭ ಮಾಡಿದೆ. ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್​ಗಳ ಅಮೋಘ ಜಯ ಸಾಧಿಸಿದೆ. ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಶತಕದ ಜೊತೆಯಾಟ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇದರ ನಡುವೆ ಪಂದ್ಯದ ಮಧ್ಯೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಅವರ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಆರಂಭದಲ್ಲೇ ವಿಕೆಟ್ ಕಳೆದುಕೊಳ್ಳುವ ಜೊತೆಗೆ ನಿಧಾರಗತಿಯ ಬ್ಯಾಟಿಂಗ್ ನಡೆಸಿತು. ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಕೆಲಹೊತ್ತಷ್ಟೆ ಆಸರೆಯಾದರು. ರವೀಂದ್ರ ಜಡೇಜಾ ಸ್ಪಿನ್ ದಾಳಿಗೆ ಆಸೀಸ್ ನಲುಗಿತು. ಇದರಲ್ಲಿ ಆಸ್ಟ್ರೇಲಿಯಾದ ವಿಕೆಟ್-ಕೀಪರ್, ಬ್ಯಾಟರ್ ಅಲೆಕ್ಸ್ ಕ್ಯಾರಿಯನ್ನು ಜಡೇಜಾ ಎಲ್​ಬಿ ಬೆಲೆಗೆ ಬೀಳಿಸಿ ಔಟ್ ಮಾಡಿದಾಗ ವಿರಾಟ್ ಕೊಹ್ಲಿ ಮುಗುಳ್ನಕ್ಕು ರೋಹಿತ್ ಶರ್ಮಾಗೆ ಬೆರಳು ತೋರಿಸಿದರು.

ಇದನ್ನೂ ಓದಿ
Image
‘ಆಗ ತಾನೇ ಸ್ನಾನ ಮುಗಿಸಿದ್ದೆ ವಿಶ್ರಾಂತಿಗೂ ಸಮಯ ಸಿಗಲಿಲ್ಲ’; ರಾಹುಲ್
Image
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ನಾಯಕ ರೋಹಿತ್ ಶರ್ಮಾ ಏನು ಹೇಳಿದ್ರು?
Image
ಕಿಂಗ್ ಕೊಹ್ಲಿ ಕ್ಯಾಚ್ ಕೈಚೆಲ್ಲಿ ಸೋಲಿಗೆ ಆಹ್ವಾನ ನೀಡಿದ ಆಸ್ಟ್ರೇಲಿಯಾ!
Image
1992 ರ ನಂತರ ಮೊದಲ ಬಾರಿಗೆ ಈ ರೀತಿಯ ಸೋಲು ಕಂಡ ಆಸ್ಟ್ರೇಲಿಯಾ..!

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬೆರಳು ತೋರಿಸುತ್ತಿರುವ ವಿಡಿಯೋ:

View this post on Instagram

A post shared by ICC (@icc)

ಅಂಪೈರ್ ಔಟ್ ಕೊಟ್ಟು ಕ್ಯಾರಿ ಪೆವಿಲಿಯನ್ ಕಡೆ ಹೋಗುತ್ತಿದ್ದಂತೆ, ಕೊಹ್ಲಿ ಅವರು ರೋಹಿತ್ ಬಳಿ ಬಂದು ಜಡೇಜಾ ರೀತಿಯಲ್ಲಿ ಔಟ್ ಎಂದು ಕೈಬೆರಳು ತೋರಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು, ಇಬ್ಬರು ದಿಗ್ಗಜರ ಉತ್ತಮ ಬಾಂಧವ್ಯವನ್ನು ಎತ್ತಿ ತೋರಿಸುತ್ತಿದೆ. ಇದರ ಜೊತೆಗೆ ಪಂದ್ಯದುದ್ದಕ್ಕೂ ಕೊಹ್ಲಿ-ರೋಹಿತ್ ತಂತ್ರಗಳ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂತು.

ಏಕದಿನ ಇತಿಹಾಸದಲ್ಲಿ ಮೊದಲ ಬಾರಿಗೆ ಯಾರು ಊಹಿಸದ ಅನಗತ್ಯ ದಾಖಲೆ ಬರೆದ ಭಾರತ..!

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 49.3 ಓವರ್​ಗಳಲ್ಲಿ 199 ರನ್​ಗೆ ಆಲೌಟ್ ಆಯಿತು. ತಂಡದ ಪರ ಸ್ಟೀವ್ ಸ್ಮಿತ್ 46, ವಾರ್ನರ್ 41 ಹಾಗೂ ಮಿಚೆಲ್ ಸ್ಟಾರ್ಕ್ 28 ರನ್ ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಭಾರತ ಪರ ಜಡೇಜಾ ಮೂರು ವಿಕೆಟ್ ಕಿತ್ತರೆ, ಬುಮ್ರಾ ಹಾಗೂ ಕುಲ್ದೀಪ್ 2, ಸಿರಾಜ್, ಹಾರ್ದಿಕ್ ಮತ್ತು ಅಶ್ವಿನ್ ತಲಾ 1 ವಿಕೆಟ್ ಪಡೆದರು.

200 ರನ್​ಗಳ ಸುಲಭ ಟಾರ್ಗೆಟ್ ಬೆನ್ನಟ್ಟಿದ ಭಾರತ 2 ರನ್​ಗೆ 3 ವಿಕೆಟ್ ಕಳೆದುಕೊಂಡಿತು. ರೋಹಿತ್, ಕಿಶನ್ ಹಾಗೂ ಅಯ್ಯರ್ ಸೊನ್ನೆ ಸುತ್ತಿದರು. ಆದರೆ, 4ನೇ ವಿಕೆಟ್​ಗೆ ಜೊತೆಯಾದ ವಿರಾಟ್ ಕೊಹ್ಲಿ (85) ಹಾಗೂ ಕೆಎಲ್ ರಾಹುಲ್ (ಅಜೇಯ 97) 165 ರನ್​ಗ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಹಾರ್ದಿಕ್ ಅಜೇಯ 11 ರನ್ ಗಳಿಸಿದರು. ಭಾರತ 41.2 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಜಯ ಸಾಧಿಸಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್​ಗೆ ಪಂದ್ಯಶ್ರೇಷ್ಠ ಸಿಕ್ಕಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ