ಐಪಿಎಲ್ ಆರಂಭಕ್ಕೂ ಮುನ್ನವೇ ‘ಕಪ್ ಗೆಲ್ಲುತ್ತೇವೆ’ ಎಂದು ಮೆಸೇಜ್ ಮಾಡಿದ್ದ ಕೊಹ್ಲಿ!

IPL 2026: ಮಾರ್ಚ್ 28 ರಿಂದ ಶುರುವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2026) ಮೊದಲ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಲ್ಲಿ ಆರ್​ಸಿಬಿ, ಸನ್​ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎದುರಿಸಲಿದೆ.

ಐಪಿಎಲ್ ಆರಂಭಕ್ಕೂ ಮುನ್ನವೇ ಕಪ್ ಗೆಲ್ಲುತ್ತೇವೆ ಎಂದು ಮೆಸೇಜ್ ಮಾಡಿದ್ದ ಕೊಹ್ಲಿ!
Rcb

Updated on: Mar 18, 2026 | 2:08 PM

ಇಂಡಿಯನ್ ಪ್ರೀಮಿಯರ್ ಲೀಗ್​​ ಸೀಸನ್-18ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಕಾಯುವಿಕೆ ಅಂತ್ಯಗೊಳಿಸಿದ್ದರು. ಆದರೆ ಈ ಕಾಯುವಿಕೆ ಈ ವರ್ಷವೇ ಅಂತ್ಯವಾಗಲಿದೆ ಎಂಬುದು ವಿರಾಟ್ ಕೊಹ್ಲಿಗೆ ಮೊದಲೇ ಗೊತ್ತಿತ್ತು. ಏಕೆಂದರೆ ಐಪಿಎಲ್​ನ ಹರಾಜಿನ ಬಳಿಕ ಆರ್​ಸಿಬಿ ತಂಡದ ಸಮತೋಲನವನ್ನು ನೋಡಿದ್ದ ಕೊಹ್ಲಿ ಅಂತಹದೊಂದು ವಿಶ್ವಾಸ ಹೊಂದಿದ್ದರು. ಇದೇ ವಿಶ್ವಾಸದೊಂದಿಗೆ ತನ್ನ ಗೆಳೆಯ ಆರ್​ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ಗೆ ವಿಶೇಷ ಸಂದೇಶವನ್ನೂ ಸಹ ರವಾನಿಸಿದ್ದರು.

2025ರ ಮೆಗಾ ಹರಾಜಿನ ನಂತರ, ಆರ್​ಸಿಬಿ ತಂಡದ ಸಮತೋಲನವನ್ನು ನೋಡಿ ವಿರಾಟ್ ಕೊಹ್ಲಿ ನನಗೆ ಮೆಸೇಜ್ ಕಳಿಸಿದ್ದರು. “ಬಿಸ್ಕೆಟ್, ನಾವು ಈ ವರ್ಷ ಕಪ್ ಗೆಲ್ಲಲಿದ್ದೇವೆ. ನಾವು ಫೈನಲ್ ತಲುಪಿದಾಗ ನೀನು ಅಲ್ಲಿರಬೇಕೆಂದು ನಾನು ಬಯಸುತ್ತೇನೆ.” ಎಂದು ಸಂದೇಶ ರವಾನಿಸಿದ್ದರು.

ಅವರ ಈ ನಂಬಿಕೆ ನಿಜವಾಗಿದೆ. 17 ವರ್ಷಗಳಲ್ಲಿ ಸಾಧ್ಯವಾಗದೇ ಇರುವುದನ್ನು ಆರ್​ಸಿಬಿ 18ನೇ ಸೀಸನ್​ನಲ್ಲಿ ಸಾಧಿಸಿ ತೋರಿಸಿದೆ. ಅತ್ತ ಫೈನಲ್​ ಪಂದ್ಯದ ವೇಳೆ ನಾನು ಸಹ ಅಲ್ಲಿದದ್ದು ಖುಷಿಯ ವಿಚಾರ. ಅಲ್ಲದೆ ವಿರಾಟ್ ಕೊಹ್ಲಿಯ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾದೆ.

ಈ ವೇಳೆ ವಿರಾಟ್ ಕೊಹ್ಲಿ, “ಇದು ನಮಗೆ ಎಷ್ಟು ಸೇರುತ್ತದೆಯೋ ಅಷ್ಟೇ ನಿಮಗೂ (ಡಿವಿಲಿಯರ್ಸ್‌ಗೆ) ಸೇರುತ್ತದೆ” ಎಂದಿದ್ದರು. ನಿಜಕ್ಕೂ ಅವೆಲ್ಲವೂ ಅತ್ಯಮೂಲ್ಯ ಕ್ಷಣಗಳಾಗಿದ್ದವು ಎಂದು ಎಬಿ ಡಿವಿಲಿಯರ್ಸ್ ಆರ್​ಸಿಬಿ ಫೈನಲ್ ಗೆಲುವನ್ನು ಸ್ಮರಿಸಿದ್ದಾರೆ.

ಫೈನಲ್ ಪಂದ್ಯದ ಮುಖ್ಯಾಂಶಗಳು:

ಜೂನ್ 3, 2025 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 190 ರನ್ ಕಲೆಹಾಕಿದ್ದರು.

ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 184 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಆರ್​ಸಿಬಿ ತಂಡ 6 ರನ್​ಗಳ ರೋಚಕ ಜಯ ಸಾಧಿಸಿ ಚೊಚ್ಚಲ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಇದೀಗ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್​ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಈ ಬಾರಿ ಕೂಡ ಈ ಹಿಂದಿನ ತಂಡವನ್ನೇ ಉಳಿಸಿಕೊಂಡಿರುವ ಆರ್​ಸಿಬಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ.

ಇದನ್ನೂ ಓದಿ: ಮೂರು ತಂಡಗಳಿಗೆ ಆಸ್ಟ್ರೇಲಿಯನ್ ‘ಕ್ಯಾಪ್ಟನ್ಸ್’

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್.

 

Follow Us