Video: ನೋ ಬಾಲ್ ಅಲ್ಲ, ಡೆಡ್ ಬಾಲ್ ಅಂತು ಅಲ್ಲವೇ ಅಲ್ಲ: ಔಟ್ ಆದರೂ ನಾಟೌಟ್..!
Viral Video: ಹೋಬರ್ಟ್‌ನ ಪಿಚ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕ್ವೀನ್ಸ್‌ಲ್ಯಾಂಡ್ ಮತ್ತು ಟ್ಯಾಸ್ಮೆನಿಯಾ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಕ್ವೀನ್ಸ್‌ಲ್ಯಾಂಡ್ ಮೊದಲು ಬ್ಯಾಟಿಂಗ್ ಮಾಡಿತ್ತು.
ಕ್ರಿಕೆಟ್‌ನಲ್ಲಿ ಅನಿರೀಕ್ಷಿತ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಆದರೆ ಕೆಲವೊಮ್ಮೆ ನಡೆಯುವ ಘಟನೆಗಳು ಅಚ್ಚರಿಗೆ ಕಾರಣವಾಗುತ್ತದೆ. ಅಂತಹದೊಂದು ಘಟನೆ ಆಸ್ಟ್ರೇಲಿಯಾದ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್ನಲ್ಲಿ ನಡೆದಿದೆ. ಹೋಬರ್ಟ್‌ನ ಪಿಚ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಕ್ವೀನ್ಸ್‌ಲ್ಯಾಂಡ್ ಮತ್ತು ಟ್ಯಾಸ್ಮೆನಿಯಾ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಕ್ವೀನ್ಸ್‌ಲ್ಯಾಂಡ್ ಮೊದಲು ಬ್ಯಾಟಿಂಗ್ ಮಾಡಿತ್ತು. ಪಂದ್ಯದ 14ನೇ ಓವರ್ನಲ್ಲಿ ನಡೆದ ಘಟನೆಯು ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ವಕರೆವಾ ಎಸೆದ ಈ ಓವರ್‌ನ ನಾಲ್ಕನೇ ಎಸೆತದಲ್ಲಿ ಚೆಂಡು ವಿಕೆಟ್ ಬೇಲ್ಸ್ ಅನ್ನು ಎಗರಿಸಿತು. ಹೀಗಾಗಿ ಇದು ಬೌಲ್ಡ್ ಔಟ್. ಆದರೆ ಬ್ಯಾಟರ್ ಕ್ರೀಸ್ ಬಿಟ್ಟು ಕದಲಲಿಲ್ಲ. ಅತ್ತ ಬೌಲರುಗಳು ಕೂಡ ಮನವಿ ಮಾಡಲಿಲ್ಲ. ಇನ್ನು ವಿಕೆಟ್ ಕೀಪರ್ ಅದಕ್ಕೂ ನನಗೂ ಸಂಬಂಧವೇ ಇಲ್ಲ ಎಂಬಂತಿದ್ದರು. ಇದೆಲ್ಲವನ್ನೂ ನೋಡಿದರೂ ಅಂಪೈರ್ ಕೂಡ ಔಟ್ ನೀಡಲಿಲ್ಲ.
ಕ್ರಿಕೆಟ್ ನಿಯಮಗಳ ಪ್ರಕಾರ, ಔಟ್ಗಾಗಿ ಮನವಿ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಟ್ಯಾಸ್ಮೆನಿಯಾದ ಯಾವುದೇ ಆಟಗಾರರು ಮನವಿ ಮಾಡಿಲ್ಲ. ಪರಿಣಾಮ ಔಟ್ ಆದರೂ ಬೌಲ್ಡ್ ಆದ ಬ್ಯಅಟ್ ಜಾರ್ಜಿಯಾ ಕ್ರೀಸ್ನಲ್ಲೇ ಉಳಿಯುವಂತಾಯಿತು. ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಕ್ರಿಕೆಟ್ ಅಂಗಳದಲ್ಲಿ ಅಂಪೈರ್ ಜೊತೆಗಿನ ಮನವಿಗೆ ಎಷ್ಟು ಪ್ರಾಮುಖ್ಯತೆ ಇದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ.
ಮತ್ತೊಂದೆಡೆ ಬೇಲ್ಸ್ ಬಿದ್ದಿರುವುದು ಗೊತ್ತಿದ್ದರೂ, ಕ್ರೀಸ್ ಬಿಟ್ಟು ಕದಲದ ಜಾರ್ಜಿಯಾ ಅವರ ನಡೆಯ ಬಗ್ಗೆ ಕೂಡ ಚರ್ಚೆಗೀಡಾಗಿದೆ. ಏಕೆಂದರೆ ಔಟ್ ಆಗಿರುವುದು ಗೊತ್ತಾದರೆ ಕ್ರೀಡಾ ಸ್ಪೂರ್ತಿ ಮೆರೆಯುವ ಅವಕಾಶ ಜಾರ್ಜಿಯಾ ಮುಂದಿತ್ತು. ಇದಾಗ್ಯೂ ಆಕೆ ಕ್ರೀಸ್ನಲ್ಲೇ ಉಳಿದಿರುವ ಬಗ್ಗೆ ಅನೇಕರು ಆಕೆಯ ಕ್ರೀಡಾ ಸ್ಪೂರ್ತಿಯ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ. ಒಟ್ಟಿನಲ್ಲಿ ಈ ಒಂದು ಘಟನೆ ಇದೀಗ ಅಂಪೈರ್ ಮನವಿಯ ಬಗ್ಗೆ ಕ್ರಿಕೆಟಿಗರಿಗೆ ಹೊಸ ಪಾಠ ಹೇಳಿಕೊಟ್ಟಂತಿರುವುದು ಸುಳ್ಳಲ್ಲ.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Unbelievable! Queensland’s Georgia Voll was bowled but nobody from Tasmania appealed! ? #WNCL
See the full clip here: https://t.co/rb6HL44Ecm pic.twitter.com/PS9O6XVmEo
— cricket.com.au (@cricketcomau) December 19, 2021
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!
ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!
(Voll bowled, but survives after no appeal)