
ಪಾಕಿಸ್ತಾನ ತಂಡದ ಮಾಜಿ ನಾಯಕ ವಾಸಿಮ್ ಅಕ್ರಮ್, ಭಾರತದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ವಿರುದ್ಧ ಗಂಭೀರ ಆರೋಪವೊಂದನ್ನು ಹೊರಿಸಿದ್ದಾರೆ. ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಮಾತನಾಡಿರುವ ಅಕ್ರಮ್, ಇರ್ಫಾನ್ ಪಠಾಣ್ ಅವರ ವೃತ್ತಿಬದುಕಿನ ಆರಂಭದಲ್ಲಿ ನಾನು ಅವರಿಗೆ ಕೆಲವು ಸಲಹೆಗಳನ್ನು ನೀಡುತ್ತಿದ್ದೆ. ಬೌಲಿಂಗ್ನಲ್ಲಿ ಮಾಡಬೇಕಾದ ವ್ಯತ್ಯಾಸಗಳ ಮಹತ್ವದ ಬಗ್ಗೆ ನಾನು ಪಠಾಣ್‌ಗೆ ವಿವರಿಸಿದ್ದೆ. ಆದರೀಗ ಕ್ರಿಕೆಟ್ನಿಂದ ನಿವೃತ್ತಿಯಾದ ಬಳಿಕ ಪಠಾಣ್ ಪಾಕಿಸ್ತಾನದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಇದು ಸರಿಯಲ್ಲ. ನಮಗೂ ಅಭಿಮಾನಿಗಳಿದ್ದಾರೆ ಅವರು ತಿರುಗಿಬಿದ್ದರೆ ಪಠಾಣ್‌ಗೆ ಸಂಕಷ್ಟ ತಪ್ಪಿದಲ್ಲ ಎಂಬರ್ಥದಲ್ಲಿ ಅಕ್ರಮ್ ಮಾತನಾಡಿದ್ದಾರೆ.
ದಶಕಗಳ ಕಾಲ ಪಾಕ್ ಕ್ರಿಕೆಟ್ನಲ್ಲಿ ಮಿಂಚಿದ ಅಕ್ರಮ್ ಬೌಲರ್ ಆಗಿ ಮಾತ್ರವಲ್ಲದೆ ನಾಯಕನಾಗಿಯೂ ಮಿಂಚಿದವರು. ಆದಾಗ್ಯೂ ಅಕ್ರಮ್ 2003 ರಲ್ಲಿ ವೃತ್ತಿಬದುಕಿಗೆ ವಿದಾಯ ಹೇಳಿದರು. ಇತ್ತ ಅದೇ ವರ್ಷ ಇರ್ಫಾನ್ ಪಠಾಣ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಒಂದೆಡೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇರ್ಫಾನ್ ಪಠಾಣ್ ತಮ್ಮ ಚೊಚ್ಚಲ ಪಂದ್ಯವನ್ನಾಡಿದರೆ, ಇತ್ತ ವಾಸಿಂ ಅಕ್ರಮ್ ಅದೇ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರನಾಗಿದ್ದರು. ಈ ಸಮಯದಲ್ಲಿ ಇರ್ಫಾನ್ ಪಠಾಣ್ ಜೊತೆಗಿನ ಸಂಭಾಷಣೆಯನ್ನು ಇಲ್ಲಿ ಬಹಿರಂಗಪಡಿಸಿರುವ ಅಕ್ರಮ್, ‘ಇರ್ಫಾನ್ ಪಠಾಣ್ ನನ್ನನ್ನು ಮೊದಲು ಭೇಟಿಯಾದದ್ದು 2004 ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ. ಆಗ ನಾನು ಇಎಸ್‌ಪಿಎನ್ ಸ್ಟಾರ್‌ಗೆ ವ್ಯಾಖ್ಯಾನಕಾರನಾಗಿದ್ದೆ. ಅವರು ನನ್ನ ದೊಡ್ಡ ಅಭಿಮಾನಿ. ಅವರು ನಮ್ಮ ಆಟವನ್ನು ನೋಡುತ್ತಾ ಬೆಳೆದವರು. ಆ ಸರಣಿಯಲ್ಲಿ ನಾನು ಅವರಿಗೆ ಕೆಲವು ಸಲಹೆಗಳನ್ನು ನೀಡಿದ್ದೇನೆ. ಇರ್ಫಾನ್ ತಮ್ಮ ವೃತ್ತಿಜೀವನದ ಆರಂಭದಿಂದಲೂ ಅದ್ಭುತವಾಗಿ ಆಡುತ್ತಿದ್ದಾರೆ. ಆರಂಭದಲ್ಲಿ, ಅವರ ಬೌಲಿಂಗ್ ಶೈಲಿ ನನ್ನಂತೆಯೇ ಇತ್ತು.
‘ಆರ್ಸಿಬಿ ಹೊರಹಾಕಿದ ದುಬಾರಿ ವೇಗಿಯನ್ನು ಸಿಎಸ್ಕೆ ಖರೀದಿಸಬೇಕು’; ಇರ್ಫಾನ್ ಪಠಾಣ್
ಹುಡುಗರು ನಮ್ಮಿಂದ ಸಲಹೆ ಕೇಳಿದಾಗ, ನಾವು ಮುಖ್ಯವಾಗಿ ಮನಸ್ಥಿತಿಯ ಬಗ್ಗೆ ಮಾತನಾಡುತ್ತೇವೆ. ನಾವು ಮಣಿಕಟ್ಟಿನ ಸ್ಥಾನ ಮತ್ತು ಎದುರಾಳಿಯ ಬ್ಯಾಟರ್ ಅನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂಬುದರ ಬಗ್ಗೆ ಮಾತನಾಡುತ್ತೇವೆ. ಇರ್ಫಾನ್ ಒಳ್ಳೆಯ ವ್ಯಕ್ತಿ. ನಾವು ಈಗಲೂ ಆಗಾಗ್ಗೆ ಭೇಟಿಯಾಗುತ್ತೇವೆ. ಆದಾಗ್ಯೂ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ವಿರುದ್ಧ ಆಗಾಗ್ಗೆ ಪೋಸ್ಟ್ ಮಾಡುತ್ತಾರೆ. ನಮ್ಮ ಅಭಿಮಾನಿಗಳು ಸಹ ಅದಕ್ಕೆ ಸಿದ್ಧರಿದ್ದಾರೆ. ಅವರು ಅಂತಹ ವಿಷಯಗಳಿಗೆ ಉತ್ತರಿಸುತ್ತಾರೆ’ ಎಂದು ಅಕ್ರಮ್ ಹೇಳಿದ್ದಾರೆ.
Published On - 7:51 pm, Thu, 3 September 26