AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲಾ ಪಂದ್ಯಗಳನ್ನು ಗೆದ್ದರೂ ಆಸ್ಟ್ರೇಲಿಯಾ ಇನ್ನೂ ಕೂಡ ಸೆಮಿಫೈನಲ್​ಗೇರಿಲ್ಲ!

ICC Women's T20 World Cup 2026: ಮಹಿಳಾ ಟಿ20 ವಿಶ್ವಕಪ್​ನಲ್ಲಿ ಒಟ್ಟು 12 ತಂಡಗಳು ಕಣಕ್ಕಿಳಿದಿವೆ. ಈ ತಂಡಗಳನ್ನು 2 ಗ್ರೂಪ್​ಗಳಲ್ಲಿ ವಿಂಗಡಿಸಲಾಗಿದ್ದು, ಈ ಗ್ರೂಪ್​ಗಳ ಅಂಕ ಪಟ್ಟಿಯಲ್ಲಿ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ನಾಲ್ಕು ತಂಡಗಳು ಸೆಮಿಫೈನಲ್​ಗೇರಲಿವೆ. ಆದರೆ ಅತ್ತ 4 ಮ್ಯಾಚ್​ಗಳಲ್ಲಿ ಗೆದ್ದರೂ ಆಸ್ಟ್ರೇಲಿಯಾ ತಂಡ ಇನ್ನೂ ಕೂಡ ಅಧಿಕೃತವಾಗಿ ಸೆಮಿಫೈನಲ್​ಗೇರಿಲ್ಲ ಎಂಬುದು ವಿಶೇಷ.

ಎಲ್ಲಾ ಪಂದ್ಯಗಳನ್ನು ಗೆದ್ದರೂ ಆಸ್ಟ್ರೇಲಿಯಾ ಇನ್ನೂ ಕೂಡ ಸೆಮಿಫೈನಲ್​ಗೇರಿಲ್ಲ!
AustraliaImage Credit source: GettyImages
ಝಾಹಿರ್ ಯೂಸುಫ್
|

Updated on: Jun 24, 2026 | 8:57 AM

Share

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಆಡಿದ ನಾಲ್ಕೂ ಪಂದ್ಯಗಳನ್ನು ಗೆಲುವು ದಾಖಲಿಸಿರುವ ಆಸೀಸ್ ಪಡೆ ಒಟ್ಟು 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದಾಗ್ಯೂ ಆಸ್ಟ್ರೇಲಿಯಾ ತಂಡ ಅಧಿಕೃತವಾಗಿ ಸೆಮಿಫೈನಲ್​ಗೇರಿಲ್ಲ ಎಂಬುದು ವಿಶೇಷ.

ಸತತ ನಾಲ್ಕು ಪಂದ್ಯಗಳನ್ನು ಗೆದ್ದು, +4.724 ರಷ್ಟು ಬೃಹತ್ ನೆಟ್ ರನ್ ರೇಟ್ ಹೊಂದಿದ್ದರೂ ಸಹ ಆಸೀಸ್ ಪಡೆಯ ಸೆಮಿಫೈನಲ್​ ಎಂಟ್ರಿ ಖಚಿತವಾಗದಿರಲು ಮುಖ್ಯ ಕಾರಣ ಈ ಕೆಳಗಿನಂತಿದೆ.

ಸೆಮಿಫೈನಲ್​ಗೇರಿಲ್ಲ ಯಾಕೆ?

ಗ್ರೂಪ್ ‘A’ ನಲ್ಲಿ ಆಸ್ಟ್ರೇಲಿಯಾ ತನ್ನ 4 ಪಂದ್ಯಗಳನ್ನು ಆಡಿ ಮುಗಿಸಿದೆ. ಆದರೆ ಗ್ರೂಪ್‌ನ ಇತರ ಪ್ರಮುಖ ತಂಡಗಳಾದ ಭಾರತ, ಸೌತ್ ಆಫ್ರಿಕಾ ಮತ್ತು ಬಾಂಗ್ಲಾದೇಶ್ ತಂಡಗಳು ಕೇವಲ 3 ಪಂದ್ಯಗಳನ್ನು ಆಡಿದ್ದು, ಈ ತಂಡಗಳಿಗೆ ತಲಾ ಎರಡೆರಡು ಪಂದ್ಯಗಳು ಬಾಕಿ ಇವೆ.

ಪ್ರಸ್ತುತ ಭಾರತ, ಸೌತ್ ಆಫ್ರಿಕಾ ಮತ್ತು ಬಾಂಗ್ಲಾದೇಶ್ ತಂಡಗಳು ತಲಾ 4 ಅಂಕಗಳನ್ನು ಹೊಂದಿವೆ. ಅಂದರೆ ಮುಂದಿನ ಎರಡು ಪಂದ್ಯಗಳ ಮೂಲಕ ಈ ಟೀಮ್​ಗಳಿಗೂ 8 ಅಂಗಳನ್ನು ಪಡೆಯಲು ಅವಕಾಶವಿದೆ.

  • ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಆಸ್ಟ್ರೇಲಿಯಾವನ್ನು ಸೋಲಿಸಿದರೆ 8 ಅಂಕ ತಲುಪುತ್ತದೆ.
  • ಸೌತ್ ಆಫ್ರಿಕಾ ತಂಡವು ನೆದರ್​ಲೆಂಡ್ಸ್ ಮತ್ತು ಬಾಂಗ್ಲಾದೇಶ್ ವಿರುದ್ಧ ಜಯ ಸಾಧಿಸಿದರೆ 8 ಅಂಕಗಳನ್ನು ಪಡೆಯಲಿದೆ.
  • ಬಾಂಗ್ಲಾದೇಶ್ ತಂಡವು ಭಾರತ ಮತ್ತು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ 8 ಅಂಕಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಅಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿ 8 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡದ ಪಾಯಿಂಟ್ಸ್​ ಅನ್ನು ಸರಿದೂಗಿಸಲು ಮೂರು ತಂಡಗಳಿಗೆ ಅವಕಾಶವಿದೆ. ಒಂದು ವೇಳೆ ಅಂಕ ಪಟ್ಟಿಯಲ್ಲಿ ಮೂರು ತಂಡಗಳು 8 ಅಂಕಗಳನ್ನು ಪಡೆದುಕೊಂಡರೆ, ನೆಟ್​ ರನ್ ರೇಟ್ ಲೆಕ್ಕಾಚಾರ ಬರಲಿದೆ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

ಹೀಗಾಗಿಯೇ 4 ಗೆಲುವು ದಾಖಲಿಸಿದರೂ ಆಸ್ಟ್ರೇಲಿಯಾ ತಂಡ ಅಧಿಕೃತವಾಗಿ ಸೆಮಿಫೈನಲ್​ಗೇರಿಲ್ಲ. ಒಂದು ವೇಳೆ ಆಸೀಸ್ ಪಡೆ ತನ್ನ ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿದರೆ ಆಸ್ಟ್ರೇಲಿಯಾ ತಂಡ ಸೆಮಿಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಜೂನ್ 28 ರಂದು ನಡೆಯಲಿರುವ ಕೊನೆಯ ಪಂದ್ಯವು ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳಿಗೆ ನಿರ್ಣಾಯಕ ಎನ್ನಬಹುದು.

Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು