AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿಗೆ ಕಾರಣವೇನು? ಇಲ್ಲಿದೆ ಅಸಲಿ ವಿಚಾರ!

Ben Stokes: ಬೆನ್ ಸ್ಟೋಕ್ಸ್ ತಮ್ಮ 15 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಒಟ್ಟು 258 ಪಂದ್ಯಗಳನ್ನು ಆಡಿದ್ದಾರೆ. ಇಷ್ಟೂ ಪಂದ್ಯಗಳಿಂದ ಅವರು ಒಟ್ಟು 10,381 ರನ್‌ಗಳನ್ನು ಬಾರಿಸಿದ್ದು, ಇದರಲ್ಲಿ 15 ಶತಕಗಳು ಸೇರಿವೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿರುವ ಸ್ಟೋಕ್ಸ್, ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ 313 ವಿಕೆಟ್‌ಗಳನ್ನು ಕಬಳಿಸಿ ಜಾಗತಿಕ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿಗೆ ಕಾರಣವೇನು? ಇಲ್ಲಿದೆ ಅಸಲಿ ವಿಚಾರ!
Ben Stokes Image Credit source: Espn
ಝಾಹಿರ್ ಯೂಸುಫ್
|

Updated on: Jun 29, 2026 | 11:05 AM

Share

ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ… ಪಂದ್ಯದ ನಡುವೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಮ್ಯಾಚ್ ಆರಂಭಕ್ಕೂ ಮುನ್ನ ಈ ಬಗ್ಗೆ ಸಣ್ಣ ಸುಳಿವು ಕೂಡ ನೀಡದ ಸ್ಟೋಕ್ಸ್ ದಿಢೀರ್ ನಿವೃತ್ತಿ ಘೋಷಿಸಲು ಕಾರಣವೇನು? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಸದ್ಯ ಸಿಗುತ್ತಿರುವ ಉತ್ತರ ತೀವ್ರ ಮಾನಸಿಕ ಒತ್ತಡ, ದೈಹಿಕ ಬಳಲಿಕೆ ಮತ್ತು ಆಫ್-ಫೀಲ್ಡ್ ವಿವಾದಗಳು ಮತ್ತು ಮನಸ್ತಾಪ!

ಮಾನಸಿಕ ಒತ್ತಡ ಮತ್ತು ಮನಸ್ತಾಪ:

ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿಗೆ ಮುಖ್ಯ ಕಾರಣ ಮಾನಸಿಕ ಒತ್ತಡ ಮತ್ತು ಮನಸ್ತಾಪ ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ನೈಟ್ ಕ್ಲಬ್ ವಿವಾದದ ವೇಳೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತನ್ನ ಬೆನ್ನಿಗೆ ನಿಲ್ಲದೆ ಕೇವಲ ಶಿಸ್ತು ಕ್ರಮಕ್ಕೆ ಮುಂದಾಗಿದ್ದು ಅವರಲ್ಲಿ ಬೆಸರವನ್ನುಂಟು ಮಾಡಿದೆ ಎಂದು ತಿಳಿದು ಬಂದಿದೆ.

ಆಶಸ್ ಸರಣಿಯ ಸೋಲಿನಿಂದ ಈಗಾಗಲೇ ತೀವ್ರ ಮಾನಸಿಕ ಒತ್ತಡ ಹಾಗೂ ದೈಹಿಕ ಬಳಲಿಕೆಗೆ ಒಳಗಾಗಿದ್ದ ಸ್ಟೋಕ್ಸ್, ನೈಟ್‌ಕ್ಲಬ್ ವಿವಾದದ ತನಿಖೆಯಲ್ಲಿ ತಮಗೆ ಕ್ಲೀನ್ ಚೀಟ್ ಸಿಕ್ಕಿದರೂ ಬೋರ್ಡ್‌ನ ಹಿರಿಯ ಅಧಿಕಾರಿಗಳು ತಮಗೆ ಬಹಿರಂಗ ಬೆಂಬಲ ನೀಡದೆ ತಂಡದಿಂದ ಅಮಾನತುಗೊಳಿಸಿದ್ದರಿಂದ ಮತ್ತು ಲಿಖಿತ ಎಚ್ಚರಿಕೆ ನೀಡಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದರು.  ಬೋರ್ಡ್ ತನ್ನನ್ನು ಒಂಟಿ ಮಾಡಿ ಮಾಧ್ಯಮಗಳ ಟೀಕೆಗೆ ಗುರಿಪಡಿಸಿದೆ ಎಂದು ಭಾವಿಸಿದ ಅವರು, ಆಟದ ಮೇಲಿನ ಆಸಕ್ತಿಯನ್ನು ಕಳೆದುಕೊಂಡು ಜಾಗತಿಕ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಸೇರಿದಂತೆ ಹಲವರು ಇಂಗ್ಲೆಂಡ್ ಕ್ರಿಕೆಟ್​ ಬೋರ್ಡ್‌ನ ಈ ನಿಲುವನ್ನು ಕಠಿಣವಾಗಿ ಟೀಕಿಸಿದ್ದು, ಕಳೆದ ಮೂರು ವಾರಗಳ ಈ ಆಡಳಿತಾತ್ಮಕ ಗೊಂದಲವೇ ಸ್ಟೋಕ್ಸ್ ನಿವೃತ್ತಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

 ನಾಯಕತ್ವದ ಭಾರ:

2022 ರಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ಬೆನ್ ಸ್ಟೋಕ್ಸ್, ಕೋಚ್ ಬ್ರೆಂಡನ್ ಮೆಕಲಮ್ ಜೊತೆಗೂಡಿ ‘ಬಾಝ್​ಬಾಲ್’ ಎಂಬ ಆಕ್ರಮಣಕಾರಿ ಆಟದ ಶೈಲಿಯನ್ನು ಪರಿಚಯಿಸಿದರು. ಈ ಶೈಲಿ ಇಂಗ್ಲೆಂಡ್ ತಂಡಕ್ಕೆ ಯಶಸ್ಸು ತಂದಿತ್ತಾದರೂ, ಸ್ಟೋಕ್ಸ್ ಅವರ ವೈಯಕ್ತಿಕ ಶಕ್ತಿಯನ್ನು ಸಂಪೂರ್ಣವಾಗಿ ಹೀರಿಬಿಟ್ಟಿತು.

ಇತ್ತೀಚಿನ ಆಶಸ್ ಸರಣಿಯಲ್ಲಿ ಅನುಭವಿಸಿದ 4-1ಮುಖಭಂಗದ ನಂತರ ತಂಡವನ್ನು ಮತ್ತೆ ಹಳಿಗೆ ತರಲು ಅವರು ನಡೆಸಿದ ನಿರಂತರ ಮಾನಸಿಕ ಹೋರಾಟ ಅವರನ್ನು ಸಂಪೂರ್ಣವಾಗಿ ‘ಬರ್ನ್‌ಔಟ್’ ಮಾಡಿತು. ನಾಯಕತ್ವದ ಅತಿಯಾದ ಜವಾಬ್ದಾರಿ ಅವರ ಕುಟುಂಬದ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿತ್ತು ಎಂಬುದನ್ನು ಸ್ವತಃ ಸ್ಟೋಕ್ಸ್ ಒಪ್ಪಿಕೊಂಡಿದ್ದಾರೆ. ಇದು ಕೂಡ ಒಂದು ಕಾರಣ.

ಆಟದ ಮೇಲೆ ನಿರಾಸಕ್ತಿ:

ಯಾವ ಕ್ರೀಡಾಪಟುವೂ ಎದುರಿಸಬಾರದ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಸ್ಟೋಕ್ಸ್ ಎದುರಿಸಿದರು. ಈ ಸರಣಿಯ ಆರಂಭದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲೇ ಅವರ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಮೂಡತೊಡಗಿದ್ದವು. ಆಟದ ಮೇಲಿನ ಆಸಕ್ತಿ ಕಳೆದುಕೊಂಡಿದ್ದ ಅವರು, ಕೇವಲ “ಅದು ನನ್ನ ಜವಾಬ್ದಾರಿ” ಎಂಬ ಏಕೈಕ ಕಾರಣಕ್ಕಾಗಿ ತಮ್ಮನ್ನು ತಾವು ಬಲವಂತವಾಗಿ ಮೈದಾನಕ್ಕೆ ತಳ್ಳಿಕೊಳ್ಳುತ್ತಿದ್ದರು. ನನಗೆ ನಿಜವಾಗಿಯೂ ಆಟದ ಮೇಲೆ ಆಸಕ್ತಿ ಇಲ್ಲದಂತಾಗಿದೆ ಎಂದು ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ. ಇದೇ ಕಾರಣದಿಂದಾಗಿ ನಿವೃತ್ತಿ ಹೊಂದುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ಸ್ಟೋಕ್ಸ್ ತಿಳಿಸಿದ್ದಾರೆ.

ಇದನ್ನೂ ಓದಿ: ಮೆಸ್ಸಿ ಪಡೆಗೆ ರತ್ನಗಂಬಳಿ: ಅರ್ಜೆಂಟೀನಾ ಫೈನಲ್ ಹಾದಿ ಸುಲಭ!

ಬಳಲಿದ ದೇಹ:

ಕಳೆದ 15 ವರ್ಷಗಳ ಸುದೀರ್ಘ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಸ್ಟೋಕ್ಸ್ ಒಬ್ಬ ಅತ್ಯುತ್ತಮ ಆಲ್‌ರೌಂಡರ್ ಆಗಿ ಮೂರೂ ವಿಭಾಗಗಳಲ್ಲಿ ಶ್ರಮಿಸಿದ್ದಾರೆ. ಮೊಣಕಾಲು, ಹೆಗಲು ಮತ್ತು ಸ್ನಾಯು ಸೆಳೆತದ ನಿರಂತರ ಗಾಯಗಳು 35ರ ಹರೆಯದ ಈ ಆಟಗಾರನ ದೈಹಿಕ ಸಾಮರ್ಥ್ಯವನ್ನು ಕುಂದಿಸಿದ್ದವು. ತಂಡಕ್ಕೆ ಶೇ. 100 ರಷ್ಟು ಕೊಡುಗೆ ನೀಡಲು ಸಾಧ್ಯವಾಗದಿದ್ದಾಗ ಮೈದಾನದಿಂದ ಗೌರವಯುತವಾಗಿ ಹೊರನಡೆಯುವುದೇ ಸೂಕ್ತ ಎಂದು ಬೆನ್ ಸ್ಟೋಕ್ಸ್ ತೀರ್ಮಾನಕ್ಕೆ ಬಂದಿದ್ದಾರೆ. ಈ ನಿರ್ಧಾರದೊಂದಿಗೆ ಸ್ಟೋಕ್ಸ್ ಅವರ ಅಂತಾರಾಷ್ಟ್ರೀಯ ಕೆರಿಯರ್ ಕೂಡ ಅಂತ್ಯವಾಗಿದೆ.

Follow Us
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ