AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಸ್ಸಿ ಪಡೆಗೆ ರತ್ನಗಂಬಳಿ: ಅರ್ಜೆಂಟೀನಾ ಫೈನಲ್ ಹಾದಿ ಸುಲಭ!

FIFA World Cup 2026: 48 ತಂಡಗಳೊಂದಿಗೆ ಶುರುವಾದ ಫಿಫಾ ವಿಶ್ವಕಪ್​ ಇದೀಗ ರೌಂಡ್ ಆಫ್ 32 ಸುತ್ತಿಗೆ ಬಂದು ನಿಂತಿದೆ. ಹೆಸರೇ ಸೂಚಿಸುವಂತೆ ಈ ಸುತ್ತಿನಲ್ಲಿ ಒಟ್ಟು 32 ತಂಡಗಳು ಕಣಕ್ಕಿಳಿಯಲಿವೆ. ಈ ಸುತ್ತಿನಲ್ಲಿ ಗೆಲ್ಲುವ ತಂಡಗಳು ರೌಂಡ್ ಆಫ್ 16 ಸುತ್ತಿಗೆ ಪ್ರವೇಶಿಸಲಿವೆ. ಇದಾದ ಬಳಿಕ ಕ್ವಾರ್ಟರ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳು ಜರುಗಲಿದೆ.

ಮೆಸ್ಸಿ ಪಡೆಗೆ ರತ್ನಗಂಬಳಿ: ಅರ್ಜೆಂಟೀನಾ ಫೈನಲ್ ಹಾದಿ ಸುಲಭ!
ArgentinaImage Credit source: FIFA
ಝಾಹಿರ್ ಯೂಸುಫ್
|

Updated on: Jun 29, 2026 | 10:05 AM

Share

ಫಿಫಾ ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಗಿದು, ಇದೀಗ ನಾಕೌಟ್ ರೌಂಡ್ ಶುರುವಾಗಿದೆ. ಈ ಸುತ್ತಿನಲ್ಲಿ ಒಟ್ಟು 32 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಪೂರ್ವ ನಿಗದಿಯಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಂದರೆ 16 ತಂಡಗಳು ಒಂದೇ ಹಾದಿಯಲ್ಲಿ ಕಣಕ್ಕಿಳಿದರೆ, ಮತ್ತೆ ಹದಿನಾರು ತಂಡಗಳು ಇನ್ನೊಂದು ಹಾದಿಯಲ್ಲಿ ಸಾಗಲಿವೆ. ಇದರ ಬೆನ್ನಲ್ಲೇ ಅರ್ಜೆಂಟೀನಾ ತಂಡದ ನಾಕೌಟ್ ಹಾದಿ ಚರ್ಚೆಗೆ ಕಾರಣವಾಗಿದೆ.

ಅರ್ಜೆಂಟೀನಾ ಹಾದಿ:

ಈ ಬಾರಿಯ ವಿಶ್ವಕಪ್​ನಲ್ಲಿ ಒಟ್ಟು 48 ತಂಡಗಳು ಕಣಕ್ಕಿಳಿದಿದ್ದವು. ಈ ತಂಡಗಳಲ್ಲಿ ಈಗ 32 ಟೀಮ್​ಗಳು ರೌಂಡ್ ಆಫ್ 32 ಅಥವಾ ನಾಕೌಟ್ ಹಂತಕ್ಕೇರಿದೆ. ನಾಕೌಟ್ ಹಂತದ ಬ್ರಾಕೆಟ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಅರ್ಜೆಂಟೀನಾ ಇರುವ ಬದಿಯಲ್ಲಿ ಸಾಂಪ್ರದಾಯಿಕ ಫುಟ್‌ಬಾಲ್ ದೈತ್ಯರ ಸಂಖ್ಯೆ ತೀರಾ ಕಡಿಮೆ.

ರೌಂಡ್ ಆಫ್ 32 ಹಂತದಲ್ಲಿ ಅರ್ಜೆಂಟೀನಾ ಜುಲೈ 3 ರಂದು ಮಿಯಾಮಿಯಲ್ಲಿ ಕೇಪ್ ವರ್ಡೆ ತಂಡವನ್ನು ಎದುರಿಸಲಿದೆ. ಆ ಬಳಿಕ ರೌಂಡ್ ಆಫ್ 16ರಲ್ಲಿ ಆಸ್ಟ್ರೇಲಿಯಾ ಅಥವಾ ಈಜಿಪ್ಟ್ ಎದುರಾಗಬಹುದು. ಕ್ವಾರ್ಟರ್ ಫೈನಲ್‌ನಲ್ಲಿ ಕೊಲಂಬಿಯಾ ಅಥವಾ ಸ್ವಿಟ್ಜರ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಅಂದರೆ ಸೆಮಿಫೈನಲ್​ವರೆಗೆ ಅರ್ಜೆಂಟೀನಾ ಹಾದಿ ನಿರಾಳ.

ಇನ್ನು ಸೆಮಿಫೈನಲ್​ಗೇರಿದರೆ ಬ್ರೆಝಿಲ್ ಅಥವಾ ಇಂಗ್ಲೆಂಡ್ ತಂಡಗಳು ಎದುರಾಳಿಗಳಾಗಿ ಸಿಗಲಿದೆ. ಅಲ್ಲಿಯವರೆಗೆ ಯಾವುದೇ ಮಾಜಿ ವಿಶ್ವ ಚಾಂಪಿಯನ್ನರು ಮೆಸ್ಸಿ ಪಡೆಗೆ ಅಡ್ಡಬರುವುದಿಲ್ಲ ಎಂಬುದೇ ಅಚ್ಚರಿ.

ರತ್ನಗಂಬಳಿ:

ವಿಶ್ವದ ನಂಬರ್ 1 ರ್ಯಾಂಕಿಂಗ್ ಹೊಂದಿರುವ ಅರ್ಜೆಂಟೀನಾ ತಂಡವು ಸೆಮಿಫೈನಲ್​ವರೆಗೆ ಯಾವುದೇ ಬಲಿಷ್ಠ ತಂಡವನ್ನು ಎದುರಿಸುತ್ತಿಲ್ಲ. ಬದಲಾಗಿ ತನಗಿಂತ ದುರ್ಬಲ ತಂಡಗಳ ವಿರುದ್ಧವೇ ಕಣಕ್ಕಿಳಿಯಲಿದೆ. ಇದಕ್ಕೆ ಸಾಕ್ಷಿ ಅರ್ಜೆಂಟೀನಾ ಎದುರಾಳಿಗಳ ಪ್ರಸ್ತುತ ಫಿಫಾ ರ್ಯಾಂಕಿಂಗ್.

  • ಕೇಪ್ ವರ್ಡೆ: 67ನೇ ರ್ಯಾಂಕ್​ ತಂಡ (32ನೇ ಸುತ್ತಿನಲ್ಲಿ)
  • ಈಜಿಪ್ಟ್: 26ನೇ ರ್ಯಾಂಕ್​ ತಂಡ (16ನೇ ಸುತ್ತಿನಲ್ಲಿ) or
  • ಆಸ್ಟ್ರೇಲಿಯಾ: 28ನೇ ರ್ಯಾಂಕ್​ ತಂಡ  (16ನೇ ಸುತ್ತಿನಲ್ಲಿ)
  • ಕೊಲಂಬಿಯಾ: 11ನೇ ರ್ಯಾಂಕ್​ ತಂಡ  (ಕ್ವಾರ್ಟರ್ ಫೈನಲ್​ನಲ್ಲಿ) or
  • ಸ್ವಿಟ್ಜರ್ಲೆಂಡ್: 16ನೇ ರ್ಯಾಂಕ್​ ತಂಡ (ಕ್ವಾರ್ಟರ್ ಫೈನಲ್​ನಲ್ಲಿ)
  • ಇಂಗ್ಲೆಂಡ್: 4ನೇ ನೇ ರ್ಯಾಂಕ್​ ತಂಡ (ಸೆಮಿಫೈನಲ್​​ನಲ್ಲಿ) or
  • ಬ್ರೆಝಿಲ್: 5ನೇ ರ್ಯಾಂಕ್​ ತಂಡ (ಸೆಮಿಫೈನಲ್​ನಲ್ಲಿ)

ಅಂದರೆ  ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್​ನಲ್ಲಿ ಟಾಪ್-10 ನಲ್ಲಿ ಕಾಣಿಸಿಕೊಂಡಿರುವ ತಂಡವನ್ನು ಎದುರಿಸುವುದು ಸೆಮಿಫೈನಲ್​ನಲ್ಲಿ ಮಾತ್ರ. ಅದುವರೆಗೆ ದುರ್ಬಲ ತಂಡಗಳ ವಿರುದ್ಧವೇ ಕಣಕ್ಕಿಳಿಯಲಿವೆ. ಹೀಗಾಗಿಯೇ ಈ ಬಾರಿ ಅರ್ಜೆಂಟೀನಾ ಪಡೆ ಸೆಮಿಫೈನಲ್​ಗೇರುವುದು ಖಚಿತ ಎನ್ನಲಾಗುತ್ತಿದೆ.

‘ಮರಣ ಮೃದಂಗ’:

ಅರ್ಜೆಂಟೀನಾ ಹಾದಿ ಇಷ್ಟು ಸುಲಭವಾಗಿ ಕಾಣಲು ಮುಖ್ಯ ಕಾರಣ, ಬ್ರಾಕೆಟ್‌ನ ಮತ್ತೊಂದು ಬದಿಯಲ್ಲಿ ಯೂರೋಪಿನ ಘಟಾನುಘಟಿ ತಂಡಗಳು ಮುಖಾಮುಖಿಯಾಗುತ್ತಿರುವುದು.

ಫ್ರಾನ್ಸ್, ಜರ್ಮನಿ, ಸ್ಪೇನ್, ಪೋರ್ಚುಗಲ್, ನೆದರ್ಲ್ಯಾಂಡ್ಸ್, ಕ್ರೊಯೇಷಿಯಾ ಮತ್ತು ಬೆಲ್ಜಿಯಂ ತಂಡಗಳು ಒಂದೇ ಬದಿಯಲ್ಲಿವೆ. ಇದರರ್ಥ, ಈ ಯೂರೋಪಿಯನ್ ದೈತ್ಯರು ರೌಂಡ್ ಆಫ್ 16 ಮತ್ತು ಕ್ವಾರ್ಟರ್ ಫೈನಲ್ ಹಂತಗಳಲ್ಲೇ ಪರಸ್ಪರ ಮುಖಾಮುಖಿಯಾಗಿ ಟೂರ್ನಿಯಿಂದ ಹೊರಬೀಳಲಿದ್ದಾರೆ.

  • ಫ್ರಾನ್ಸ್: 2ನೇ ರ್ಯಾಂಕ್
  • ಸ್ಪೇನ್: 3ನೇ ರ್ಯಾಂಕ್
  • ನೆದರ್ಲ್ಯಾಂಡ್ಸ್: 7ನೇ ರ್ಯಾಂಕ್
  • ಪೋರ್ಚುಗಲ್: 8ನೇ ರ್ಯಾಂಕ್
  • ಬೆಲ್ಜಿಯಂ: 10ನೇ ರ್ಯಾಂಕ್
  • ಜರ್ಮನಿ: 12ನೇ ರ್ಯಾಂಕ್
  • ಕ್ರೊಯೇಷಿಯಾ: 13ನೇ ರ್ಯಾಂಕ್

ವಿಶ್ವದ ಟಾಪ್ 10 ತಂಡಗಳ ಪೈಕಿ ಬರೋಬ್ಬರಿ 5 ಸೂಪರ್ ಪವರ್ ತಂಡಗಳು (ಫ್ರಾನ್ಸ್, ಸ್ಪೇನ್, ನೆದರ್ಲ್ಯಾಂಡ್ಸ್, ಪೋರ್ಚುಗಲ್, ಬೆಲ್ಜಿಯಂ) ಮತ್ತು ಅತ್ಯಂತ ಬಲಿಷ್ಠ ಜರ್ಮನಿ ತಂಡ ಇವೆಲ್ಲವೂ ನಾಕೌಟ್ ಬ್ರಾಕೆಟ್‌ನ ಒಂದೇ ಗುಂಪಿನಲ್ಲಿ ಮುಖಾಮುಖಿಯಾಗುತ್ತಿವೆ. ಹೀಗಾಗಿಯೇ ಈ ಬ್ರಾಕೆಟ್ ಅನ್ನು ಇದೀಗ ‘ಮರಣ ಮೃದಂಗ’ ಎಂದು ವಿಶ್ಲೇಷಿಸಲಾಗುತ್ತಿದೆ.

ಅರ್ಜೆಂಟೀನಾಗೆ ಸುವರ್ಣಾವಕಾಶ:

ಇಲ್ಲಿ ಅರ್ಜೆಂಟೀನಾ ತಂಡದ ಬಲಿಷ್ಠತೆಯ ಮುಂದೆ ಉಳಿದ ತಂಡಗಳು ದುರ್ಬಲವಾಗಿ ಕಂಡರೂ ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಕೇಪ್ ವರ್ಡೆ ಅಥವಾ ಕೊಲಂಬಿಯಾ ತಂಡಗಳು ಕಾಗದದ ಮೇಲೆ ದುರ್ಬಲವಾಗಿದ್ದರೂ, ಮೈದಾನದಲ್ಲಿ ಯಾವುದೇ ಹಂತದಲ್ಲೂ ಆಘಾತ ನೀಡಬಹುದು.

ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ಎದುರಾಳಿ ಯಾರು? ಇಲ್ಲಿದೆ ವೇಳಾಪಟ್ಟಿ

ಆದಾಗ್ಯೂ, ವಿಶ್ವಕಪ್​ ಇತಿಹಾಸದಲ್ಲೇ ಇಷ್ಟು ಸುಲಭವಾಗಿ ಸೆಮಿಫೈನಲ್ ಅಥವಾ ಫೈನಲ್ ತಲುಪುವ ಅವಕಾಶ ಹಾಲಿ ಚಾಂಪಿಯನ್ನರಿಗೆ ಸಿಕ್ಕಿರುವುದೇ ವಿಶೇಷ. ಈ ಅವಕಾಶವನ್ನು ಬಳಸಿ ಲಿಯೋನೆಲ್ ಮೆಸ್ಸಿ ಪಡೆ ಮತ್ತೊಮ್ಮೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

Follow Us
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್
‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ಆಸೆ
‘ಸಂಜಿತ್ ಹೆಗಡೆಗಾಗಿ ಕಾಯ್ತಾ ಇದ್ದೆ’; ಕೊನೆಗೂ ಈಡೇರಿತು ವಿನಯ್ ಆಸೆ
12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ
12 ರಾಶಿಗಳ ದಿನ ಭವಿಷ್ಯ ವಿವರಣೆ ಇಲ್ಲಿದೆ
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
ಲಿಫ್ಟ್​ನಲ್ಲಿ ಸಿಲುಕಿಕೊಂಡ ತಾಯಿ-ಮಗು; ಪೊಲೀಸರು ರಕ್ಷಿಸಿದ್ದು ಹೇಗೆ?
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
‘ಕಂದಮ್ಮ’ ಹಾಡಿನ ವಿಚಾರದಲ್ಲಿ ಮಗಳ ಜತೆ ದುನಿಯಾ ವಿಜಯ್ ಪ್ರೀತಿಯ ಗಲಾಟೆ
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ಶಾಸ್ತ್ರದ ಪ್ರಕಾರ ಪತ್ನಿ ಚೆನ್ನಮ್ಮನನ್ನು ಕಳಿಸಿಕೊಟ್ಟ ದೇವೇಗೌಡ್ರು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು
ತಾಯಿ ಚೆನ್ನಮ್ಮ ಅಂತಿಮ ಸಂಸ್ಕಾರದ ಬಳಿಕ ಕುಮಾರಸ್ವಾಮಿ ಭಾವುಕ ಮಾತು