IPL 2026: RCB ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯುವುದೇಕೆ? ಇಲ್ಲಿದೆ ಉತ್ತರ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 26ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್​​​ಸಿಬಿ ಆಟಗಾರರು ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯಲಿರುವುದು ವಿಶೇಷ.

IPL 2026: RCB ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯುವುದೇಕೆ? ಇಲ್ಲಿದೆ ಉತ್ತರ
Rcb

Updated on: Apr 18, 2026 | 9:19 AM

IPL 2026: ಐಪಿಎಲ್ ಅಂದಾಕ್ಷಣ ಕಣ್ಣಮುಂದೆ ಬರುವುದು ಕೆಂಪು ಮತ್ತು ಬಂಗಾರದ ಬಣ್ಣದ ಜೆರ್ಸಿಯಲ್ಲಿ ಮಿಂಚುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಆದರೆ, ಪ್ರತಿ ವರ್ಷ ಒಂದು ಪಂದ್ಯದಲ್ಲಿ ಆರ್‌ಸಿಬಿ ತನ್ನ ಸಾಂಪ್ರದಾಯಿಕ ಬಣ್ಣವನ್ನು ಬದಿಗಿಟ್ಟು ‘ಹಸಿರು’ ಉಡುಗೆಯಲ್ಲಿ ಕಣಕ್ಕಿಳಿಯುತ್ತದೆ. ಇದು ಕೇವಲ ಫ್ಯಾಷನ್ ಅಥವಾ ಆಕರ್ಷಣೆಗೆ ಅಲ್ಲ, ಬದಲಾಗಿ ಇದೊಂದು ಗ್ರೋ ಗ್ರೀನ್ ಅಭಿಯಾನ. ಏನಿದು ಅಭಿಯಾನ? ಇದರ ಉದ್ದೇಶವೇನು? ಇಲ್ಲಿದೆ ಮಾಹಿತಿ

ಏನಿದು ಗೋ ಗ್ರೀನ್ ಅಭಿಯಾನ?

2011ರಿಂದ ಆರ್‌ಸಿಬಿ ಆರಂಭಿಸಿದ ಈ ‘ಗೊ ಗ್ರೀನ್’ (Go Green) ಅಭಿಯಾನವು ಪರಿಸರ ಸಂರಕ್ಷಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ. ಈ ಜೆರ್ಸಿಯು ಕೇವಲ ಬಣ್ಣದಿಂದ ಮಾತ್ರ ಹಸಿರಲ್ಲ, ಅದರ ತಯಾರಿಕೆಯಲ್ಲೂ ಪರಿಸರ ಸ್ನೇಹಿ ತಂತ್ರಜ್ಞಾನ ಅಡಗಿದೆ.

ಮರುಬಳಕೆಯ ಜೆರ್ಸಿ: ಈ ಬಾರಿಯ ಹಸಿರು ಜೆರ್ಸಿಯನ್ನು ಮೈದಾನ ಮತ್ತು ಸುತ್ತಮುತ್ತ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಹಳೆಯ ಬಟ್ಟೆಗಳನ್ನು ಮರುಬಳಕೆಮಾಡಿ ತಯಾರಿಸಲಾಗಿದೆ. ಇದು ‘ತ್ಯಾಜ್ಯದಿಂದ ಸಂಪತ್ತು’ ಎಂಬ ಸಂದೇಶ ಸಾರುತ್ತಿದೆ.

ಸಸಿಗಳನ್ನು ನೀಡುವ ಸಂಪ್ರದಾಯ: ಟಾಸ್ ವೇಳೆ ಆರ್‌ಸಿಬಿ ನಾಯಕ ಎದುರಾಳಿ ತಂಡದ ನಾಯಕನಿಗೆ ಸ್ಮರಣಿಕೆಯ ಬದಲು ಸಣ್ಣ ಸಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಹಸಿರೀಕರಣಕ್ಕೆ ಒತ್ತು ನೀಡುತ್ತಾರೆ.

ಕಾರ್ಬನ್ ನ್ಯೂಟ್ರಲ್ ತಂಡ: ಆರ್‌ಸಿಬಿ ಜಗತ್ತಿನ ಮೊದಲ ‘ಕಾರ್ಬನ್ ನ್ಯೂಟ್ರಲ್’ ಟಿ20 ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕ್ರೀಡಾಂಗಣದಲ್ಲಿ ಬಳಸುವ ಸೌರಶಕ್ತಿ ಮತ್ತು ತ್ಯಾಜ್ಯ ವಿಲೇವಾರಿ ಕ್ರಮಗಳು ಇದಕ್ಕೆ ಸಾಕ್ಷಿ.

ಅಭಿಮಾನಿಗಳಿಗೆ ಕರೆ: ಪಂದ್ಯ ವೀಕ್ಷಿಸಲು ಬರುವ ಅಭಿಮಾನಿಗಳು ಸಾರ್ವಜನಿಕ ಸಾರಿಗೆ (ಮೆಟ್ರೋ ಅಥವಾ ಬಸ್) ಬಳಸಿ ಇಂಧನ ಉಳಿಸುವಂತೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವಂತೆ ತಂಡವು ಮನವಿ ಮಾಡಿದೆ.

ಇದನ್ನೂ ಓದಿ: ಗ್ರೀನ್​ ಸಿಕ್ಸ್​ಗೆ ಕಾರ್ ಡೆಂಟ್: ಸಿಕ್ತು 5 ಲಕ್ಷ ರೂ. ದೇಣಿಗೆ..!

ಮೈದಾನದಲ್ಲಿ ಹಸಿರು ಪಡೆ:

ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಆಟಗಾರರು ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಪಂದ್ಯವು ಸಂಜೆ 3.30 ಕ್ಕೆ ಶುರುವಾಗಲಿದ್ದು, ಟಾಸ್ ಪ್ರಕ್ರಿಯೆ 3 ಗಂಟೆಗೆ ನಡೆಯಲಿದೆ. ಇದೇ ವೇಳೆ ಗೋ ಗ್ರೀನ್ ಅಭಿಯಾನದ ಭಾಗವಾಗಿ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಿಗೆ ಸಸಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.

 

Follow Us