AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೂಟ್ ವಿಶ್ವ ದಾಖಲೆ ಮುರೀತಾರಾ? ಪ್ರಾಮಾಣಿಕ ಉತ್ತರ ನೀಡಿದ ಸಚಿನ್ ತೆಂಡೂಲ್ಕರ್

ಅದು ಡಿಸೆಂಬರ್ 2012, ನಾಗ್ಪುರ ಟೆಸ್ಟ್ ಪಂದ್ಯ. 21 ವರ್ಷದ ಇಂಗ್ಲೆಂಡ್ ಯುವಕನೊಬ್ಬ ಭಾರತೀಯ ಬೌಲರ್‌ಗಳನ್ನು ಎದುರಿಸಿ ಕ್ರೀಸ್‌ನಲ್ಲಿ ಕಲ್ಲುಬಂಡೆಯಂತೆ ನಿಂತಿದ್ದ. ಅಂದು ಆ ಯುವಕನ ಆಟವನ್ನು ಮೈದಾನದಲ್ಲೇ ಹತ್ತಿರದಿಂದ ನೋಡಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಅಂದೇ ಒಂದು ವಿಷಯ ಪಕ್ಕಾ ಆಗಿತ್ತು. ಹೌದು, ಅಂದು ಸಚಿನ್ ಕಣ್ಣಿಗೆ ಬಿದ್ದ ಆ ಯುವಕನೇ ಇಂದಿನ ರನ್ ಮಷಿನ್ ಜೋ ರೂಟ್!

ರೂಟ್ ವಿಶ್ವ ದಾಖಲೆ ಮುರೀತಾರಾ? ಪ್ರಾಮಾಣಿಕ ಉತ್ತರ ನೀಡಿದ ಸಚಿನ್ ತೆಂಡೂಲ್ಕರ್
Joe Root - SachinImage Credit source: GettyImages
ಝಾಹಿರ್ ಯೂಸುಫ್
|

Updated on: Nov 05, 2026 | 10:52 AM

Share

ಟೆಸ್ಟ್ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ರನ್ ಸರದಾರ ಯಾರಾಗಲಿದ್ದಾರೆ? ಕ್ರಿಕೆಟ್ ಜಗತ್ತಿನಲ್ಲಿ ಇಂತಹುದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಇಂಗ್ಲೆಂಡ್‌ನ ರನ್ ಮಷಿನ್ ಜೋ ರೂಟ್ ಅವರ ಪ್ರದರ್ಶನ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ನಿರ್ಮಿಸಿರುವ ರನ್ ರಾಶಿಯತ್ತ ಜೋ ರೂಟ್ ಹೆಜ್ಜೆ ಇಡುತ್ತಿದ್ದಾರೆ. ಹೀಗಾಗಿಯೇ, ಸಚಿನ್ ಹೆಸರಿನಲ್ಲಿರುವ ಆ ಐತಿಹಾಸಿಕ ವಿಶ್ವ ದಾಖಲೆಯನ್ನು ರೂಟ್ ಮುರಿಯುತ್ತಾರಾ ಎಂಬ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ಅತ್ಯಂತ ಪ್ರಾಮಾಣಿಕ ಉತ್ತರ ನೀಡಿದ್ದಾರೆ.

ಇತ್ತೀಚೆಗೆ ಜನಪ್ರಿಯ ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರು ‘ಆಸ್ಕ್ ಮಿ ಎನಿಥಿಂಗ್’ (AMA) ಎಂಬ ಲೈವ್ ಪ್ರಶ್ನೋತ್ತರ ಸಂವಾದ ನಡೆಸಿದ್ದರು. ಈ ವೇಳೆ ಅಭಿಮಾನಿಯೊಬ್ಬರು, ‘ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ನಿಮ್ಮ ಅತ್ಯಧಿಕ ರನ್‌ಗಳ ವಿಶ್ವ ದಾಖಲೆಯನ್ನು ಮುರಿಯಲಿದ್ದಾರಾ?’ ಎಂಬ ನೇರ ಪ್ರಶ್ನೆಯೊಂದನ್ನು ಮಾಸ್ಟರ್ ಬ್ಲಾಸ್ಟರ್ ಮುಂದೆ ಇಟ್ಟಿದ್ದರು.

ಈ ಪ್ರಶ್ನೆಗೆ ಉತ್ತರಿಸಿದ ಸಚಿನ್ ತೆಂಡೂಲ್ಕರ್, “ನಾನು ಜೋ ರೂಟ್ ಅವರನ್ನು ಯಾವಾಗಲೂ ಉನ್ನತ ಮಟ್ಟದ ಆಟಗಾರನೆಂದೇ ಪರಿಗಣಿಸಿದ್ದೇನೆ. ಇಂಗ್ಲೆಂಡ್ ಪರ ಅವರು ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ, ಅವರು ಮುಂದೊಂದು ದಿನ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಲಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ಮನವರಿಕೆಯಾಗಿತ್ತು” ಎಂದು ಸಚಿನ್ ನೆನಪಿಸಿಕೊಂಡಿದ್ದಾರೆ.

2012 ರಲ್ಲೇ ರೂಟ್​ ಬ್ಯಾಟಿಂಗ್ ನೋಡಿದ್ದ ಸಚಿನ್!

ಡಿಸೆಂಬರ್ 2012 ರಲ್ಲಿ ನಾಗ್ಪುರದಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದ ಮೂಲಕ ಜೋ ರೂಟ್ ತಮ್ಮ ಟೆಸ್ಟ್ ವೃತ್ತಿಜೀವನವನ್ನು ಆರಂಭಿಸಿದ್ದರು. ಆ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಭಾರತ ತಂಡದ ಪರ ಕಣದಲ್ಲಿದ್ದರು. ಅಂದು ಕೇವಲ 21 ವರ್ಷದ ಯುವಕನಾಗಿದ್ದ ಜೋ ರೂಟ್, ಅತ್ಯಂತ ಪ್ರಬುದ್ಧ ಬ್ಯಾಟಿಂಗ್ ಪ್ರದರ್ಶಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 229 ಎಸೆತಗಳಲ್ಲಿ 73 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 20 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಅಂದು ಜೋ ರೂಟ್ ಪಾದಾರ್ಪಣೆ ಪಂದ್ಯ ಆಡುವಾಗ ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಮೈದಾನದಲ್ಲೇ ಹತ್ತಿರದಿಂದ ಗಮನಿಸಿದ್ದರು. ಈ ನೆನಪನ್ನು ಹಂಚಿಕೊಂಡಿರುವ ಸಚಿನ್, ‘ಅವರು ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ, ಮುಂದೊಂದು ದಿನ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಸಾಧನೆ ಮಾಡಲಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ಮನವರಿಕೆಯಾಗಿತ್ತು’ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಪ್ರಸ್ತುತ ತಲೆಮಾರಿನ ವಿದೇಶಿ ಬ್ಯಾಟರ್‌ಗಳ ಪೈಕಿ ಜೋ ರೂಟ್, ಹ್ಯಾರಿ ಬ್ರೂಕ್ ಮತ್ತು ಸ್ಟೀವ್ ಸ್ಮಿತ್ ಅವರ ಬ್ಯಾಟಿಂಗ್ ನೋಡುವುದೆಂದರೆ ತಮಗೆ ತುಂಬಾ ಇಷ್ಟ ಎಂದು ಸಚಿನ್ ತಿಳಿಸಿದ್ದಾರೆ.

ಇಲ್ಲಿ ಸಚಿನ್ ತೆಂಡೂಲ್ಕರ್ ಅವರು ಜೋ ರೂಟ್ ತಮ್ಮ ವಿಶ್ವ ದಾಖಲೆಯನ್ನು ಮುರಿಯಲಿದ್ದಾರೆ ಎಂದು ನೇರವಾಗಿ ಹೇಳದಿದ್ದರೂ, ರೂಟ್ ಅವರಿಗೆ ಆ ಎಲ್ಲಾ ಸಾಮರ್ಥ್ಯ ಹಾಗೂ ಅರ್ಹತೆ ಇದೆ ಎಂಬುದನ್ನು ತಮ್ಮ ಪ್ರಶಂಸೆಯ ನುಡಿಗಳ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

1,644 ರನ್​ಗಳ ಟಾರ್ಗೆಟ್:

“ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ವಿಶ್ವ ದಾಖಲೆಯನ್ನು ಮುರಿಯಲು ಜೋ ರೂಟ್‌ಗೆ ಇನ್ನೂ 1,644 ರನ್‌ಗಳ ಅಗತ್ಯವಿದೆ. ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 14,200ಕ್ಕೂ ಹೆಚ್ಚು ರನ್ ಕಲೆಹಾಕಿರುವ ರೂಟ್, ಮುಂಬರುವ ದಿನಗಳಲ್ಲೂ ಇದೇ ಭರ್ಜರಿ ಪ್ರದರ್ಶನ ಮುಂದುವರಿಸಿದರೆ ಸಚಿನ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನ ನೂತನ ‘ರನ್ ಸರದಾರ’ ಎನಿಸಿಕೊಳ್ಳಲಿದ್ದಾರೆ.

ಆಟಗಾರರು  ಇನ್ನಿಂಗ್ಸ್‌ಗಳು   ಟೆಸ್ಟ್ ರನ್‌ಗಳು  ಶತಕಗಳು
ಸಚಿನ್ ತೆಂಡೂಲ್ಕರ್ 329 15,921 (ವಿಶ್ವ ದಾಖಲೆ) 51
ಜೋ ರೂಟ್ 309 14,278 41

ವಿಶ್ವ ದಾಖಲೆ ಮುರಿಯಲು ಸಾಧ್ಯನಾ?

ಜೋ ರೂಟ್ ಪ್ರಸ್ತುತ 35 ವರ್ಷ ವಯಸ್ಸಿನವರಾಗಿದ್ದು, ಅವರ ಅದ್ಭುತ ಫಿಟ್‌ನೆಸ್ ಹಾಗೂ ಭರ್ಜರಿ ಫಾರ್ಮ್ ನೋಡಿದರೆ ಅವರು ಇನ್ನೂ ಕನಿಷ್ಠ 2 ರಿಂದ 3 ವರ್ಷಗಳ ಕಾಲ ಆರಾಮವಾಗಿ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡಬಲ್ಲರು. ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರತಿ ವರ್ಷ ಸರಾಸರಿ 12 ರಿಂದ 14 ಟೆಸ್ಟ್ ಪಂದ್ಯಗಳನ್ನು ಆಡುವುದರಿಂದ, ಮುಂಬರುವ 2-3 ವರ್ಷಗಳಲ್ಲಿ ರೂಟ್ ಅವರ ಮುಂದೆ ಸುಮಾರು 30 ರಿಂದ 40 ಟೆಸ್ಟ್ ಪಂದ್ಯಗಳು ಲಭ್ಯವಿರಲಿವೆ.

ಇದಕ್ಕೆ ಪೂರಕವೆಂಬಂತೆ, ರೂಟ್ ಇತ್ತೀಚೆಗಷ್ಟೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​  ಜೊತೆಗೆ ಸೆಪ್ಟೆಂಬರ್ 2028 ರವರೆಗೆ 2 ವರ್ಷಗಳ ಸುದೀರ್ಘ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ರನ್ ಶಿಖರವನ್ನು (15,921 ರನ್) ಮುರಿಯಲು ರೂಟ್ ಅವರಿಗೆ ಈಗ ಕೇವಲ 1,644 ರನ್‌ಗಳಷ್ಟೇ ಬೇಕಾಗಿದ್ದು, ಅವರು ಇದೇ ಬ್ಯಾಟಿಂಗ್ ಲಯವನ್ನು ಕಾಯ್ದುಕೊಂಡರೆ ಮುಂಬರುವ 15 ರಿಂದ 18 ಟೆಸ್ಟ್ ಪಂದ್ಯಗಳಲ್ಲೇ ಈ ಐತಿಹಾಸಿಕ ವಿಶ್ವ ದಾಖಲೆಯನ್ನು ಮುರಿಯುವುದನ್ನು ಎದುರು ನೋಡಬಹುದು.

  • 2024 ರಲ್ಲಿ ಜೋ ರೂಟ್​ 14 ಪಂದ್ಯಗಳಿಂದ ಬರೋಬ್ಬರಿ 1,522 ರನ್ ಕಲೆಹಾಕಿದ್ದರು.
  • 2025 ರಲ್ಲಿ ರೂಟ್ 12 ಪಂದ್ಯಗಳಿಂದ ಗಳಿಸಿದ ಒಟ್ಟು ರನ್​ಗಳ ಸಂಖ್ಯೆ ಬರೋಬ್ಬರಿ 1,104 .
  • 2026 ರಲ್ಲಿ  11 ಪಂದ್ಯಗಳಿಂದ 914 ರನ್ ಗಳಿಸಿ ಭರ್ಜರಿ ಫಾರ್ಮ್​ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಬ್ಯಾಟಿಂಗ್ ವೇಳೆ ಮೈದಾನದಲ್ಲಿ ‘ಪಿನ್’ ಹುಡುಕಾಡಿದ ವಿರಾಟ್ ಕೊಹ್ಲಿ!

ಒಟ್ಟಾರೆಯಾಗಿ ಹೇಳುವುದಾದರೆ, ಸಚಿನ್ ತೆಂಡೂಲ್ಕರ್ ಅವರ 15,921 ಟೆಸ್ಟ್ ರನ್‌ಗಳ ದಾಖಲೆ ದಶಕಕ್ಕೂ ಹೆಚ್ಚು ಕಾಲ ಅಚಲವಾಗಿ ಉಳಿದಿದೆ. ಆದರೆ, ಪ್ರಸ್ತುತ ಜೋ ರೂಟ್ ಅವರ ಅದ್ಭುತ ಫಾರ್ಮ್, ಇಸಿಬಿ ಜೊತೆಗಿನ ಸುದೀರ್ಘ ಒಪ್ಪಂದ ಮತ್ತು ಮುಂದಿರುವ ಪಂದ್ಯಗಳ ಅವಕಾಶಗಳನ್ನು ಗಮನಿಸಿದರೆ, ಈ ಐತಿಹಾಸಿಕ ವಿಶ್ವ ದಾಖಲೆ ಇಂಗ್ಲೆಂಡ್ ದಾಂಡಿಗನ ಪಾಲಾಗುವ ಸಾಧ್ಯತೆ ಹೆಚ್ಚಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆ: ಬಾರ್​​ಗೆ ನುಗ್ಗಿದ ನೀರು
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್
‘ರಾಮಾಯಣ’ ಸಿನಿಮಾನ ಸಂಭ್ರಮಿಸಿದ ಫ್ಯಾನ್ಸ್; ಯಶ್ ನಟನೆಗೆ ಫುಲ್ ಮಾರ್ಕ್ಸ್
ಸೌಂದರ್ಯಾ-ಧನುಷ್​​ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ
ಸೌಂದರ್ಯಾ-ಧನುಷ್​​ಗೆ ಓಪನ್ ಆಯ್ತು ಬಿಗ್ ಬಾಸ್ ಮುಖ್ಯದ್ವಾರ
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಶಾಲಾ ಕಟ್ಟಡದಲ್ಲಿ ಭಾರೀ ಪ್ರಮಾಣದ ಪಟಾಕಿ ಅಕ್ರಮ ದಾಸ್ತಾನು, ಜಪ್ತಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಈ ರಾಶಿಯವರ ಆದಾಯ ವೃದ್ಧಿ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿ
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಮಳೆಯಬ್ಬರಕ್ಕೆ ಕೆರೆಯಂತಾದ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳು
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಡೆಹ್ರಾಡೂನ್-ದೆಹಲಿ ಹೈವೇಯಲ್ಲಿ ಭೀಕರ ಅಪಘಾತ; ನಾಲ್ವರ ಸಾವು, ಮಗು ಬಚಾವ್
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಅಮುಲ್​ನಿಂದಲೂ ಬೆಲೆ ಏರಿಕೆಯ ಶಾಕ್; ಹಾಲಿನ ದರ ಲೀಟರ್​​ಗೆ 2 ರೂ. ಹೆಚ್ಚಳ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಹಾಸನಾಂಬೆ ಜಾತ್ರಾಮಹೋತ್ಸವ: ರಾತ್ರಿ 12ರಿಂದ ದೇವರ ದರ್ಶನಕ್ಕೆ ಅವಕಾಶವಿಲ್ಲ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ
ಸಿನಿಮಾ ಹಾಕಿ ಎಂದ ತಾಂಡವ್​​, ಐಡಿಯಾ ಕೊಟ್ಟ ಪ್ರಶಾಂತ್: ವಿಡಿಯೋ