Women’s T20 World Cup 2024: ಆಸೀಸ್ ವಿರುದ್ಧ ಗೆದ್ದರೂ ಟೀಂ ಇಂಡಿಯಾ ಸೆಮೀಸ್ ತಲುಪುವುದು ಕಷ್ಟ

Women’s T20 World Cup 2024: ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧ ಯಾವುದೇ ಬೆಲೆ ತೆತ್ತಾದರೂ ಗೆಲುವಿನ ಅಗತ್ಯವಿದೆ. ಗೆಲುವು ದೊಡ್ಡದಿದ್ದಷ್ಟೂ ತಮಗೆ ಅನುಕೂಲ ಎಂಬುದನ್ನೂ ಹರ್ಮನ್ ಸೇನೆ ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ದೊಡ್ಡ ಅಂತರದ ಗೆಲುವಿನೊಂದಿಗೆ ಭಾರತ ತಂಡದ ನೆಟ್ ರನ್ ರೇಟ್ ಸುಧಾರಿಸಲಿದೆ.

Women’s T20 World Cup 2024: ಆಸೀಸ್ ವಿರುದ್ಧ ಗೆದ್ದರೂ ಟೀಂ ಇಂಡಿಯಾ ಸೆಮೀಸ್ ತಲುಪುವುದು ಕಷ್ಟ
ಭಾರತ ವನಿತಾ ಪಡೆ
Follow us
|

Updated on: Oct 12, 2024 | 7:52 PM

ಯುಎಇಯಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವಕಪ್ ರೋಚಕ ಘಟ್ಟದತ್ತ ಸಾಗುತ್ತಿದೆ. ಪ್ರತಿಯೊಂದು ಪಂದ್ಯದ ನಂತರವೂ ಸೆಮಿಫೈನಲ್‌ ಲೆಕ್ಕಾಚಾರ ಅದಲುಬದಲಾಗುತ್ತಿದೆ. ಇಂದು ನಡೆದ ಎ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ ನ್ಯೂಜಿಲೆಂಡ್ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಕಿವೀಸ್ ಪಡೆ ಸೆಮೀಸ್ ಹಾದಿಯನ್ನು ಮತ್ತಷ್ಟು ಸುಲಭಗೊಳಿಸಿಕೊಂಡರೆ, ಇತ್ತ ಟೀಂ ಇಂಡಿಯಾಕ್ಕೆ ಸಂಕಷ್ಟ ತಂದೊಡ್ಡಿದೆ. ಟೀಂ ಇಂಡಿಯಾ ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗಿದೆ. ಹರ್ಮನ್ ಪಡೆ ಸೆಮೀಸ್ ತಲುಪಬೇಕೆಂದರೆ ಕಾಂಗರೂಗಳ ವಿರುದ್ಧ ಕೇವಲ ಗೆಲುವು ಸಾಧಿಸಿದರೆ ಸಾಕಾಗದು. ಬದಲಿಗೆ ಬಲಿಷ್ಠ ಆಸೀಸ್ ಪಡೆಯ ವಿರುದ್ಧ ಬೃಹತ್ ಗೆಲುವು ದಾಖಲಿಸಬೇಕು. ಆದಾಗ್ಯೂ, ಭಾರತ ತಂಡ ಆಸ್ಟ್ರೇಲಿಯವನ್ನು ಸೋಲಿಸುವಲ್ಲಿ ಯಶಸ್ವಿಯಾದರೂ ಸೆಮಿಫೈನಲ್ ಸ್ಥಾನ ಖಚಿತವಾಗುವುದಿಲ್ಲ.

ಭಾರೀ ಅಂತರದ ಗೆಲುವು ಅಗತ್ಯ

ಭಾರತ ತಂಡ ಇದುವರೆಗೆ 3 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಹರ್ಮನ್‌ಪ್ರೀತ್ ಪಡೆ 2 ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಪಂದ್ಯದಲ್ಲಿ ಸೋಲನ್ನು ಎದುರಿಸಿದೆ. ಶ್ರೀಲಂಕಾವನ್ನು 82 ರನ್‌ಗಳಿಂದ ಸೋಲಿಸಿದ ನಂತರ, ಟೀಂ ಇಂಡಿಯಾದ ನೆಟ್ ರನ್ ರೇಟ್ ಖಂಡಿತವಾಗಿಯೂ ಸುಧಾರಿಸಿದೆ. ಇದರೊಂದಿಗೆ ಭಾರತ ತಂಡವು ಎ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತ ತಂಡ ಈಗ ಅಕ್ಟೋಬರ್ 13 ರಂದು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗಿದೆ.

ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಲು ಭಾರತ ತಂಡಕ್ಕೆ ಆಸ್ಟ್ರೇಲಿಯಾ ವಿರುದ್ಧ ಯಾವುದೇ ಬೆಲೆ ತೆತ್ತಾದರೂ ಗೆಲುವಿನ ಅಗತ್ಯವಿದೆ. ಗೆಲುವು ದೊಡ್ಡದಿದ್ದಷ್ಟೂ ತಮಗೆ ಅನುಕೂಲ ಎಂಬುದನ್ನೂ ಹರ್ಮನ್ ಸೇನೆ ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ದೊಡ್ಡ ಅಂತರದ ಗೆಲುವಿನೊಂದಿಗೆ ಭಾರತ ತಂಡದ ನೆಟ್ ರನ್ ರೇಟ್ ಸುಧಾರಿಸಲಿದೆ. ತಂಡದ ನೆಟ್ ರನ್ ರೇಟ್ ಪ್ರಸ್ತುತ +0.576 ಆಗಿದೆ.

ನ್ಯೂಜಿಲೆಂಡ್ ಸೋಲಲೇಬೇಕು

ಇದೀಗ ನ್ಯೂಜಿಲೆಂಡ್ ತಂಡ, ಭಾರತ ತಂಡ ಮತ್ತು ಸೆಮಿಫೈನಲ್ ಟಿಕೆಟ್ ನಡುವೆ ಅಡ್ಡ ನಿಂತಿದೆ. ಈಗ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಿದರೂ ಸೆಮಿಫೈನಲ್ ಟಿಕೆಟ್ ಕನ್ಫರ್ಮ್ ಆಗುವುದಿಲ್ಲ. ಏಕೆಂದರೆ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದೊಡ್ಡ ಗೆಲುವು ದಾಖಲಿಸುವ ಮೂಲಕ ನೆಟ್ ರನ್ ರೇಟ್‌ನಲ್ಲಿ ಭಾರತ ತಂಡವನ್ನು ಹಿಂದಿಕ್ಕುವ ಅವಕಾಶ ನ್ಯೂಜಿಲೆಂಡ್‌ಗೆ ಇದೆ. ವಿಶೇಷವೆಂದರೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆದ ನಂತರ ಪಾಕಿಸ್ತಾನದ ವಿರುದ್ಧ ಕಿವೀಸ್ ಕಣಕ್ಕಿಳಿಯಲಿದೆ. ಹೀಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯದ ಫಲಿತಾಂಶದ ಮೇಲೆ ಕಿವೀಸ್ ತಂಡಕ್ಕೆ ಸೆಮೀಸ್ ತಲುಪಲು ಏನು ಮಾಡಬೇಕು ಎಂಬುದು ಸ್ಪಷ್ಟವಾಗಲಿದೆ. ಅಂದರೆ ಸೆಮಿಫೈನಲ್‌ಗೆ ಟಿಕೆಟ್ ಪಡೆಯಲು ಭಾರತ ತಂಡಕ್ಕೆ ಅದೃಷ್ಟದ ಜೊತೆಗೆ ಗೆಲುವೂ ಬೇಕು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜಂಬೂ ಸವಾರಿಗೆ ಮಳೆ ಕಾಟವಿಲ್ಲ, ದಸರಾ ಉತ್ಸವದಲ್ಲಿ ಭಾಗಿಯಾದವರು ನಿರಾಳ
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ಜೆಡಿಎಸ್ ಸಾಮಾನ್ಯ ಕಾರ್ಯಕರ್ತ ಸಹ ಚನ್ನಪಟ್ಟದಿಂದ ಗೆಲ್ತಾನೆ: ನಿಖಿಲ್
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ: ಅಬ್ಬರಿಸಿದ ಕಿಚ್ಚ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ದಸರಾ: ವಾದ್ಯ ನುಡಿಸುವವರ ಉತ್ಸಾಹಕ್ಕೆ ಮಳೆ ಕಿಂಚಿತ್ತೂ ಅಡ್ಡಿಯಾಗಿಲ್ಲ
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ಹಿಂಗಾರು ಮಳೆ ಆರ್ಭಟಕ್ಕೆ ನೀರಲ್ಲಿ ಕೊಚ್ಚಿ ಹೋದ ಈರುಳ್ಳಿ; ರೈತರು ಕಂಗಾಲು
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ನಂದಿಗಿರಿಧಾಮಕ್ಕೆ ಹರಿದು ಬಂದ ಜನ ಸಾಗರ: ನಡುರಸ್ತೆಯಲ್ಲೇ ನಿಂತ ವಾಹನಗಳು
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಕೆಟ್ಟದ್ದನ್ನು ಬಯಸುವ ಜನರಿಗೆ ಚಾಮುಂಡೇಶ್ವರಿ ಸದ್ಬುದ್ಧಿ ನೀಡಲಿ: ಸಿಎಂ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
ಜಂಬೂಸವಾರಿಗೆ ಮುನ್ನ ಫೋಟೋಶೂಟ್​ನಲ್ಲಿ ಭಾಗಿಯಾದ ಗಜಪಡೆ
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್
‘ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ’; ಸುದೀಪ್