ಡಬ್ಲ್ಯೂಪಿಎಲ್ ಮಿನಿ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರಿವರು

ಮಹಿಳಾ ಪ್ರೀಮಿಯರ್ ಲೀಗ್ 2027ರ ಆಟಗಾರ್ತಿಯರ ಹರಾಜು ಕೊಚ್ಚಿಯಲ್ಲಿ ನಡೆದು, 25 ಆಟಗಾರ್ತಿಯರು ವಿವಿಧ ತಂಡಗಳನ್ನು ಸೇರಿದರು. ಆಸ್ಟ್ರೇಲಿಯಾದ ಸೋಫಿ ಮೊಲಿನ್ಯೂ 1.10 ಕೋಟಿಗೆ ಯುಪಿ ವಾರಿಯರ್ಸ್ ಪಾಲಾದರೆ, ಕಿರಣ್ ನವ್‌ಗಿರೆ 75 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದರು. ಆರ್ ಸಿಬಿ, ಗುಜರಾತ್ ಜೈಂಟ್ಸ್ ಸಹ ಪ್ರಮುಖ ಆಟಗಾರ್ತಿಯರನ್ನು ಖರೀದಿಸಿ ತಂಡಗಳನ್ನು ಬಲಪಡಿಸಿಕೊಂಡವು. ಈ ಮಿನಿ ಹರಾಜಿನಲ್ಲಿ ತಂಡಗಳ ರಣನೀತಿ ಎದ್ದು ಕಾಣಿಸಿತು.

ಡಬ್ಲ್ಯೂಪಿಎಲ್ ಮಿನಿ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ್ತಿಯರಿವರು
Wpl

Updated on: Oct 28, 2026 | 9:02 PM

ಮಹಿಳಾ ಪ್ರೀಮಿಯರ್ ಲೀಗ್‌ 2027ರ ಆಟಗಾರ್ತಿಯರ ಹರಾಜು ಕೊಚ್ಚಿಯಲ್ಲಿ ನಡೆಯಿತು. ಇದು ಮಿನಿ ಹರಾಜಾದ ಕಾರಣ ಐದು ತಂಡಗಳಿಂದ ಒಟ್ಟು 27 ಸ್ಲಾಟ್​ಗಳು ಖಾಲಿ ಇದ್ದವು. ಇದಕ್ಕಾಗಿ 150 ಆಟಗಾರ್ತಿಯರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಅದರಲ್ಲಿ 25 ಅಟಗಾರ್ತಿಯರು ತಂಡಗಳನ್ನು ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲಿ ಅಧಿಕ ಬೆಲೆಗೆ ಖರೀದಿಯಾದ ಆಟಗಾರ್ತಿಯರ ಪಟ್ಟಿ ಇಂತಿದೆ.

ಹರಾಜಿನ ಆರಂಭಿಕ ಹಂತದಲ್ಲೇ ಆಸ್ಟ್ರೇಲಿಯಾದ ಆಲ್‌ರೌಂಡರ್ ಸೋಫಿ ಮೊಲಿನ್ಯೂ ಭಾರೀ ಮೊತ್ತಕ್ಕೆ ಮಾರಾಟವಾದರು. ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಅಂತಿಮವಾಗಿ 1.10 ಕೋಟಿ ರೂ. ನೀಡಿ ಯುಪಿ ವಾರಿಯರ್ಸ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.

ಆರ್​ಸಿಬಿ ಖರೀದಿಸಿದ ಆಟಗಾರ್ತಿಯರು

ಇನ್ನು, ಭಾರತದ ಬ್ಯಾಟರ್ ಕಿರಣ್ ನವ್‌ಗಿರೆ ಅವರನ್ನು 75 ಲಕ್ಷ ರೂ. ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು. ಈ ಖರೀದಿಗಾಗಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ನಡೆಯಿತು. ಗುಜರಾತ್ ಜೈಂಟ್ಸ್ ತಂಡ ಯುವ ವಿಕೆಟ್‌ಕೀಪರ್-ಬ್ಯಾಟರ್ ಜಿ. ಕಾಮಲಿನಿ ಅವರನ್ನು 40 ಲಕ್ಷ ರೂ.ಗೆ ಖರೀದಿಸಿತು. ಹಾಗೆಯೇ ಆರ್​ಸಿಬಿ ಆಸ್ಟ್ರೇಲಿಯಾದ ವೇಗಿ ಜೆಸ್ ಜೋನಾಸೆನ್ ಅವರನ್ನು 40 ಲಕ್ಷ ರೂ.ಗೆ ಖರೀದಿಸಿತು. ಆರ್​ಸಿಬಿ ಅತ್ಯಧಿಕ ಮೊತ್ತ ನೀಡಿ ಖರೀದಿಸಿದ ಆಟಗಾರ್ತಿ ಜೆಸ್ ಜೋನಾಸೆನ್ ಎಂಬುದು ಗಮನಾರ್ಹ. ಇವರ ಜೊತೆಗೆ ಆರ್​ಸಿಬಿ, ತೇಜಲ್ ಹಸಬ್ನಿಸ್ ಹಾಗೂ ಕ್ಲೋಯ್ ಟ್ರಯಾನ್ ಅವರನ್ನು ತಲಾ 30 ಲಕ್ಷ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು.

ತಲಾ 30 ಲಕ್ಷ ರೂ ಪಡೆದವರ ಪಟ್ಟಿ

ಉಳಿದಂತೆ ಯುಪಿ ವಾರಿಯರ್ಸ್ ತಂಡ ತನ್ನ ತಂಡವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಆಲ್‌ರೌಂಡರ್ ಸ್ನೇಹ್ ರಾಣಾ ಮತ್ತು ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ರೇಸ್ ಹ್ಯಾರಿಸ್ ಅವರನ್ನು ತಲಾ 30 ಲಕ್ಷ ರೂ. ನೀಡಿ ಖರೀದಿಸಿತು. ಗ್ರೇಸ್ ಹ್ಯಾರಿಸ್ ಈ ಹಿಂದೆ ಯುಪಿ ವಾರಿಯರ್ಸ್ ತಂಡದ ಪರ ಆಡಿದ್ದರು. ಆದರೆ ಹರಾಜಿಗೂ ಮುನ್ನ ಆರ್‌ಸಿಬಿ ಅವರನ್ನು ಬಿಡುಗಡೆ ಮಾಡಿತ್ತು. ಮತ್ತೊಂದೆಡೆ, ಸ್ನೇಹ್ ರಾಣಾ ಈ ಹಿಂದೆ ಗುಜರಾತ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಬದಲಿ ಆಟಗಾರ್ತಿಯಾಗಿಯೂ ಅವರು ಆರ್‌ಸಿಬಿ ತಂಡದ ಭಾಗವಾಗಿದ್ದರು. ಇವರಲ್ಲದೆ ಭಾರತದ ಸ್ಪಿನ್ನರ್ ಆಶಾ ಸೋಭಾನ ಅವರನ್ನು ಯುಪಿ ವಾರಿಯರ್ಸ್ 30 ಲಕ್ಷ ರೂ. ನೀಡಿ ಖರೀದಿಸಿದರೆ, ಸುಷ್ಮಾ ವರ್ಮಾ ಅವರನ್ನು 30 ಲಕ್ಷ ರೂ ನೀಡಿ ತಂಡಕ್ಕೆ ಸೇರಿಸಿಕೊಂಡಿತು.

ಅತ್ಯಧಿಕ ಮೊತ್ತ ಪಡೆದವರ ಪಟ್ಟಿ

  • ಸೋಫಿ ಮೊಲಿನ್ಯೂ, ಯುಪಿ ವಾರಿಯರ್ಸ್, 1.1 ಕೋಟಿ ರೂ.
  • ಕಿರಣ್ ನವಗಿರೆ, ದೆಹಲಿ ಕ್ಯಾಪಿಟಲ್ಸ್, 75 ಲಕ್ಷ ರೂ
  • ಜೆಸ್ ಜೋನಾಸೆನ್, ಆರ್‌ಸಿಬಿ, 40 ಲಕ್ಷ ರೂ.
  • ಜಿ.ಕಮಾಲಿನಿ, ಗುಜರಾತ್ ಜೈಂಟ್ಸ್, 40 ಲಕ್ಷ ರೂ.
  • ಗ್ರೇಸ್ ಹ್ಯಾರಿಸ್, ಯುಪಿ ವಾರಿಯರ್ಸ್, 30 ಲಕ್ಷ ರೂ.
  • ತೇಜಲ್ ಹಸಬ್ನಿಸ್, ಆರ್‌ಸಿಬಿ, 30 ಲಕ್ಷ ರೂ.
  • ಓರ್ಲಾ ಪ್ರೆಂಡರ್‌ಗ್ಯಾಸ್ಟ್, ಗುಜರಾತ್ ಜೈಂಟ್ಸ್, 30 ಲಕ್ಷ ರೂ.
  • ಸ್ನೇಹ್ ರಾಣಾ, ಯುಪಿ ವಾರಿಯರ್ಸ್, 30 ಲಕ್ಷ ರೂ.
  • ಆಶಾ ಸೋಭಾನ, ಯುಪಿ ವಾರಿಯರ್ಸ್, 30 ಲಕ್ಷ ರೂ.
  • ಕ್ಲೋಯ್ ಟ್ರಯಾನ್, ಆರ್‌ಸಿಬಿ, 30 ಲಕ್ಷ ರೂ.
  • ಸುಷ್ಮಾ ವರ್ಮಾ, ಯುಪಿ ವಾರಿಯರ್ಸ್, 30 ಲಕ್ಷ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:59 pm, Wed, 28 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us