ಪಂಕಜ್ ಮಿಂಚಿಂಗ್, ಪಠಾಣ್ ಅಬ್ಬರ: ವಿಶ್ವ ದೈತ್ಯರ ಮುಂದೆ ಇಂಡಿಯಾ ಮಹಾರಾಜರಿಗೆ ಭರ್ಜರಿ ಜಯ

Legends League Cricket 2022: ಕೇವಲ 31 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 52 ರನ್ ಬಾರಿಸಿ ಒ ಬ್ರಿಯೆನ್ ಅಬ್ಬರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ವೆಸ್ಟ್ ಇಂಡೀಸ್​ನ ಮಾಜಿ ಆಟಗಾರ ದಿನೇಶ್ ರಾಮ್​ದಿನ್ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 42 ರನ್​ ಚಚ್ಚಿದರು.

ಪಂಕಜ್ ಮಿಂಚಿಂಗ್, ಪಠಾಣ್ ಅಬ್ಬರ: ವಿಶ್ವ ದೈತ್ಯರ ಮುಂದೆ ಇಂಡಿಯಾ ಮಹಾರಾಜರಿಗೆ ಭರ್ಜರಿ ಜಯ
india maharajas
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 17, 2022 | 11:32 AM

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಪಂದ್ಯದಲ್ಲಿ ವರ್ಲ್ಡ್​ ಜೈಂಟ್ಸ್​ ವಿರುದ್ಧ ಇಂಡಿಯಾ ಮಹಾರಾಜಾಸ್ ಭರ್ಜರಿ ಜಯ ಸಾಧಿಸಿದೆ. ಲೆಜೆಂಡ್ಸ್ ಕ್ರಿಕೆಟ್​ ಲೀಗ್​ನಲ್ಲೇ ನಡೆದ ಈ ಸ್ಪೆಷಲ್ ಮ್ಯಾಚ್​ನಲ್ಲಿ ಟಾಸ್ ಗೆದ್ದ ವರ್ಲ್ಡ್ ಜೈಂಟ್ಸ್​ ತಂಡದ ನಾಯಕ ಜಾಕ್ಸ್ ಕಾಲಿಸ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ವರ್ಲ್ಡ್​ ಜೈಂಟ್ಸ್ ತಂಡಕ್ಕೆ ಐರ್ಲೆಂಡ್​ನ ಮಾಜಿ ಆಟಗಾರ ಕೆವಿನ್ ಓಬ್ರಿಯಾನ್ ಸ್ಪೋಟಕ ಆರಂಭ ಒದಗಿಸಿದ್ದರು.

ಕೇವಲ 31 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 52 ರನ್ ಬಾರಿಸಿ ಒ ಬ್ರಿಯೆನ್ ಅಬ್ಬರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ವೆಸ್ಟ್ ಇಂಡೀಸ್​ನ ಮಾಜಿ ಆಟಗಾರ ದಿನೇಶ್ ರಾಮ್​ದಿನ್ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸ್​ನೊಂದಿಗೆ 42 ರನ್​ ಚಚ್ಚಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ ವರ್ಲ್ಡ್​ ಜೈಂಟ್ಸ್​ ತಂಡವು 8 ವಿಕೆಟ್ ನಷ್ಟಕ್ಕೆ 170 ರನ್​ ಕಲೆಹಾಕಿತು. ಇಂಡಿಯಾ ಮಹರಾಜಾಸ್ ಪರ 4 ಓವರ್​ಗಳಲ್ಲಿ ಕೇವಲ 26 ರನ್​ ನೀಡಿ ಪಂಕಜ್ ಸಿಂಗ್ 5 ವಿಕೆಟ್ ಕಬಳಿಸಿ ಮಿಂಚಿದ್ದರು.

ಇನ್ನು 171 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಇಂಡಿಯಾ ಮಹಾರಾಜಾಸ್ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 4 ರನ್​ಗಳಿಸಿ ವೀರೇಂದ್ರ ಸೆಹ್ವಾಗ್ ಔಟಾದರೆ, ಇದರ ಬೆನ್ನಲ್ಲೇ ಪಾರ್ಥಿವ್ ಪಟೇಲ್ 18 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮೊಹಮ್ಮದ್ ಕೈಫ್ 11 ರನ್​ಗಳಿಸಿ ಹೊರನಡೆದರು. ಈ ಹಂತದಲ್ಲಿ ಜೊತೆಗೂಡಿದ ತನ್ಮಯ್ ಶ್ರೀವಾಸ್ತವ್ ಹಾಗೂ ಯೂಸುಫ್ ಪಠಾಣ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.

ಇದನ್ನೂ ಓದಿ
Image
On This Day: ಏಕದಿನ ವಿಶ್ವಕಪ್​: ಕೇವಲ 45 ರನ್​ಗೆ ಆಲೌಟ್..!
Image
Heinrich Klaasen: ಬಡವರ ಧೋನಿ, RCB ಆಟಗಾರ…ಯಾರು ಈ ಹೆನ್ರಿಕ್ ಕ್ಲಾಸೆನ್..?
Image
Hardik Pandya: ದಿನೇಶ್ ಕಾರ್ತಿಕ್ ವಿರುದ್ದ ಸೇಡು ತೀರಿಸಿಕೊಂಡ್ರಾ ಹಾರ್ದಿಕ್ ಪಾಂಡ್ಯ?
Image
Dinesh Karthik: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ಬರೆದ ದಿನೇಶ್ ಕಾರ್ತಿಕ್

ನಾಲ್ಕನೇ ವಿಕೆಟ್​ಗೆ ಯೂಸುಫ್ ಪಠಾಣ್ ಜೊತೆಗೂಡಿ 103 ರನ್​ಗಳ ಜೊತೆಯಾಟವಾಡಿದ ತನ್ಮಯ್ ಶ್ರೀವಾಸ್ತವ್ 39 ಎಸೆತಗಳಲ್ಲಿ 54 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಅದಾಗಲೇ ಗೆಲುವಿನ ಸಮೀಪದಲ್ಲಿದ್ದ ಇಂಡಿಯಾ ಮಹಾರಾಜಾಸ್ ಪರ ಯೂಸುಫ್ ಪಠಾಣ್ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದರು. ಪರಿಣಾಮ 35 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ ಪಠಾಣ್ ಅರ್ಧಶತಕ ಪೂರೈಸಿದರು.

ಮತ್ತೊಂದೆಡೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇರ್ಫಾನ್ ಪಠಾಣ್ 3 ಸಿಕ್ಸ್​ ಒಳಗೊಂಂಡಂತೆ ಕೇವಲ 9 ಎಸೆತಗಳಲ್ಲಿ 20 ರನ್ ಚಚ್ಚಿದರು. ಅದರಂತೆ ಇಂಡಿಯಾ ಮಹಾರಾಜಾಸ್ 18.4 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 174 ರನ್​ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಇಂಡಿಯಾ ಮಹಾರಾಜಾಸ್ ಪರ 5 ವಿಕೆಟ್ ಉರುಳಿಸಿ ಮಿಂಚಿದ್ದ ಪಂಕಜ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಇನ್ನು ಈ ಪಂದ್ಯದಲ್ಲಿ ಗೆದ್ದ ಇಂಡಿಯಾ ಮಹಾರಾಜಾಸ್ ತಂಡಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮರಣಾರ್ಥ ವಿಶೇಷ ಟ್ರೋಫಿಯನ್ನು ಸಹ ನೀಡಲಾಯಿತು.

ಇಂಡಿಯಾ ಮಹರಾಜಾಸ್ ಪ್ಲೇಯಿಂಗ್ ಇಲೆವೆನ್: ವೀರೇಂದ್ರ ಸೆಹ್ವಾಗ್ , ತನ್ಮಯ್ ಶ್ರೀವಾಸ್ತವ , ಪಾರ್ಥಿವ್ ಪಟೇಲ್ ( ವಿಕೆಟ್ ಕೀಪರ್) , ಮೊಹಮ್ಮದ್ ಕೈಫ್ , ಮನ್ವಿಂದರ್ ಬಿಸ್ಲಾ , ಇರ್ಫಾನ್ ಪಠಾಣ್ , ಯೂಸುಫ್ ಪಠಾಣ್ , ಹರ್ಭಜನ್ ಸಿಂಗ್ (ನಾಯಕ) , ಜೋಗಿಂದರ್ ಶರ್ಮಾ , ಪಂಕಜ್ ಸಿಂಗ್ , ಶ್ರೀಶಾಂತ್ , ಅಶೋಕ್ ದಿಂಡಾ

ವರ್ಲ್ಡ್ ಜೈಂಟ್ಸ್ ಪ್ಲೇಯಿಂಗ್ ಇಲೆವೆನ್: ಕೆವಿನ್ ಒ ಬ್ರಿಯೆನ್ , ಹ್ಯಾಮಿಲ್ಟನ್ ಮಸಕಡ್ಜಾ , ಜಾಕ್ವೆಸ್ ಕಾಲಿಸ್ (ನಾಯಕ) , ದಿನೇಶ್ ರಾಮ್​ದಿನ್ (ವಿಕೆಟ್ ಕೀಪರ್) , ತಿಸಾರಾ ಪೆರೆರಾ , ಟಟೆಂಡಾ ತೈಬು , ರಮೇಶ್ ಕಲುವಿತಾರಣ , ಡೇನಿಯಲ್ ವೆಟ್ಟೋರಿ , ಟಿಮ್ ಬ್ರೆಸ್ನಾನ್ , ಮಾಂಟಿ ಪನೇಸರ್ , ಫಿಡೆಲ್ ಎಡ್ವರ್ಡ್ಸ್

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?