IPL 2022: ರಾಜಸ್ಥಾನ್ ರಾಯಲ್ಸ್ ಸೋತರೂ, ಗೆದ್ದ ಯುಜ್ವೇಂದ್ರ ಚಹಲ್
Yuzvendra chahal: ಐಪಿಎಲ್ 2022 ರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆರೂವರೆ ಕೋಟಿ ರೂ.ಗೆ ಚಹಲ್ ಅವರನ್ನು ಈ ಬಾರಿ ಖರೀದಿಸಿತು. ವಿಶೇಷ ಎಂದರೆ RCB ತಂಡವು ಚಹಲ್ ಅವರಿಗಾಗಿ ಬಿಡ್ ಮಾಡಿರಲಿಲ್ಲ.
ರಾಜಸ್ಥಾನ್ ರಾಯಲ್ಸ್ ವಿರುದ್ದ್ ಆರ್ಸಿಬಿ (RCB vs RR) ಗೆದ್ದಿರಬಹುದು. ಆದರೆ ಯುಜ್ವೇಂದ್ರ ಚಹಲ್ (yuzvendra chahal) ಮಾತ್ರ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ತನ್ನ ಮಾಜಿ ತಂಡವಾದ ಆರ್ಸಿಬಿ ವಿರುದ್ದವೇ ಚಹಲ್ ಭರ್ಜರಿ ಪ್ರದರ್ಶನ ನೀಡಿರುವುದು ವಿಶೇಷ. ಏಕೆಂದರೆ ಆರ್ಸಿಬಿ ತಂಡದಲ್ಲೇ ಇರಬೇಕೆಂದು ಬಯಸಿದರೂ ಈ ಸಲ ಚಹಲ್ ಅವರನ್ನು ಆರ್ಸಿಬಿ ಫ್ರಾಂಚೈಸಿ ತಂಡದಿಂದ ಕೈಬಿಟ್ಟಿತ್ತು. ಇದೀಗ ಆರ್ಸಿಬಿ ವಿರುದ್ದದವೇ ಚಹಲ್ 4 ಓವರ್ ಬೌಲಿಂಗ್ ಮಾಡಿ ಕೇವಲ 15 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿಯನ್ನು ರನೌಟ್ ಮಾಡಿ ಮಿಂಚಿದ್ದಾರೆ. ಅಂದರೆ ಆರ್ಸಿಬಿ ತಂಡದ ಎಲ್ಲಾ ಬೌಲರ್ಗಳಿಂದ ಚಹಲ್ ಕಡಿಮೆ ರನ್ ನೀಡುವ ಮೂಲಕ ಚಹಲ್ ಆರ್ಸಿಬಿ ಪ್ರಾಂಚೈಸಿಗೆ ತಕ್ಕ ಉತ್ತರ ನೀಡಿದ್ದಾರೆ.
ಏಕೆಂದರೆ ಈ ಪಂದ್ಯದಲ್ಲಿ ಅತ್ಯಂತ ಕಡಿಮೆ ನೀಡಿದ ಬೌಲರ್ ಚಹಲ್. ಅತ್ತ ಆರ್ಸಿಬಿ ಆಯ್ಕೆ ಮಾಡಿದ ಸ್ಪಿನ್ನರ್ ವನಿಂದು ಹಸರಂಗ ನೀಡಿದ್ದು 32 ರನ್ಗಳನ್ನು. ಚಹಲ್ ನೀಡಿದ್ದು ಕೇವಲ 15 ರನ್. ಅಲ್ಲದೆ ಚಹಲ್ ಅವರ ಸ್ಪೆಲ್‌ನಲ್ಲಿ 12 ಬಾಲ್ ಡಾಟ್ ಹಾಕಿದ್ದರು. ಅಷ್ಟೇ ಯಾಕೆ ತಮ್ಮ ಓವರ್ನಲ್ಲಿ ನೀಡಿದ್ದು ಕೇವಲ ಒಂದೇ ಒಂದು ಬೌಂಡರಿ ಮಾತ್ರ. ಆರ್ಸಿಬಿ ವಿರುದ್ದ ಮಧ್ಯಮ ಓವರ್‌ಗಳಲ್ಲಿ ಚಹಲ್ ಅವರು ಸ್ಪಿನ್ ಮೋಡಿ ಮಾಡಿದ್ದರು.
ಮೊದಲ ಓವರ್ನಲ್ಲಿ ಡುಪ್ಲೆಸಿಸ್ ವಿಕೆಟ್ ಪಡೆದ ಚಹಲ್, 2ನೇ ಓವರ್ನ ನಾಲ್ಕನೇ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು ರನೌಟ್ ಮಾಡಿದ್ದರು. ಮರು ಎಸೆತದಲ್ಲೇ ಡೇವಿಡ್ ವಿಲ್ಲಿ ಅವರನ್ನು ಬೌಲ್ಡ್ ಮಾಡಿ ಮತ್ತೊಂದು ಯಶಸ್ಸು ತಂದುಕೊಟ್ಟಿದ್ದರು. ಈ ಮೂಲಕ ಆರ್‌ಸಿಬಿಗೆ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಶಾಕ್ ನೀಡಿದ್ದರು. ಅಲ್ಲದೆ ಒಂದು ಹಂತದಲ್ಲಿ ಇಡೀ ಪಂದ್ಯದ ಮೇಲೆ ನಿಯಂತ್ರಣ ಹೊಂದಿದ್ದರು. ಇನ್ನು ನಿರ್ಣಾಯಕ ಹಂತದಲ್ಲಿ 17ನೇ ಓವರ್ ಬೌಲ್ ಮಾಡಿದ್ದ ಚಹಲ್ ನೀಡಿದ್ದು ಕೇವಲ 4 ರನ್ ಮಾತ್ರ. ಅಂದರೆ ಆರ್ಸಿಬಿ ವಿರುದ್ದ ಎಲ್ಲಾ ರೀತಿಯಲ್ಲೂ ಮಿಂಚುವ ಮೂಲಕ ಯುಜ್ವೇಂದ್ರ ಚಹಲ್ ಗೆದ್ದಿದ್ದಾರೆ.
ಹೊಸ ತಂಡ ಭರ್ಜರಿ ಪ್ರದರ್ಶನ: ಐಪಿಎಲ್ 2022 ರ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಆರೂವರೆ ಕೋಟಿ ರೂ.ಗೆ ಚಹಲ್ ಅವರನ್ನು ಈ ಬಾರಿ ಖರೀದಿಸಿತು. ವಿಶೇಷ ಎಂದರೆ RCB ತಂಡವು ಚಹಲ್ ಅವರಿಗಾಗಿ ಬಿಡ್ ಮಾಡಿರಲಿಲ್ಲ. ಈ ನೋವನ್ನು ಹಂಚಿಕೊಂಡಿದ್ದ ಚಹಲ್ ನನ್ನನ್ನು ಮೆಗಾ ಹರಾಜಿನ ಮೂಲಕ ಖರೀದಿಸುತ್ತೇವೆ ಎಂದು ಆರ್ಸಿಬಿ ತಿಳಿಸಿತ್ತು. ನಾನು ಯಾವುದೇ ಮೊತ್ತಕ್ಕೆ ಡಿಮ್ಯಾಂಡ್ ಮಾಡಿರಲಿಲ್ಲ. ಇದಾಗ್ಯೂ ಅವರು ನನ್ನನ್ನು ಕೈಬಿಟ್ಟಿದ್ದು ತುಂಬಾ ನಿರಾಸೆಯಾಗಿತ್ತು ಎಂದು ತಿಳಿಸಿದ್ದರು. ಇದೀಗ ಆರ್ಸಿಬಿ ಫ್ರಾಂಚೈಸಿಗೆ ಭರ್ಜರಿ ಪ್ರದರ್ಶನದ ಮೂಲಕ ಯುಜ್ವೇಂದ್ರ ಚಹಲ್ ಭರ್ಜರಿ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್