AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ!

Fifa World Cup 2026: ಫಿಫಾ ವಿಶ್ವಕಪ್​ 2026 ರಲ್ಲಿ ಪೋರ್ಚುಗಲ್ ತಂಡ ಇನ್ನೂ ಕೂಡ ಅಭಿಯಾನ ಆರಂಭಿಸಿಲ್ಲ. ಅದಕ್ಕೂ ಮುನ್ನವೇ ಕೊಡಗಿನಲ್ಲಿ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ಬ್ಯಾನರ್ ಹಾಗೂ ಬೃಹತ್ ಆಕಾರದ ಕಟೌಟ್​​ಗಳು ರಾರಾಜಿಸಲಾರಂಭಿಸಿದೆ.

ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ!
Cristiano RonaldoImage Credit source: IG
ಝಾಹಿರ್ ಯೂಸುಫ್
|

Updated on:Jun 20, 2026 | 1:32 PM

Share

ಕೊಡಗು ಎಂದರೆ ಕೇವಲ ಕಾಫಿ ನಾಡಲ್ಲ, ಅದು ಕ್ರೀಡಾಪಟುಗಳ ತವರೂರು. ಇಲ್ಲಿನವರ ರಕ್ತದಲ್ಲೇ ಕ್ರೀಡಾ ಪ್ರೇಮ ಹರಿಯುತ್ತದೆ ಎಂಬುದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಹೌದು, ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ವಿಶ್ವ ಫುಟ್​ಬಾಲ್​ನ ಕಾಲ್ಚೆಂಡು ಚತುರ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಬೃಹತ್ ಕಟೌಟ್ ತಲೆ ಎತ್ತಿ ನಿಂತಿದೆ.

40 ಅಡಿ ಎತ್ತರದ ಕಟೌಟ್:

ಫಿಫಾ ವಿಶ್ವಕಪ್ ಕಾವೇರುತ್ತಿದ್ದಂತೆ ಸ್ಥಳೀಯ ಫುಟ್‌ಬಾಲ್ ಕ್ಲಬ್ ಆದ​ ‘ಅಮಿಟಿ ಯುನೈಟೆಡ್ ಎಫ್​ಸಿ’ ಮತ್ತು ರೊನಾಲ್ಡೊ ಅವರ ಕಟ್ಟಾ ಅಭಿಮಾನಿಗಳು ಸೇರಿ ಸರಿಸುಮಾರು 40 ಅಡಿ ಎತ್ತರದ ಈ ಬೃಹತ್ ಕಟೌಟ್ ಅನ್ನು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ನಿಲ್ಲಿಸಿದ್ದಾರೆ. ಇದೀಗ ಈ ಕಟೌಟ್ ಆ ಭಾಗದಲ್ಲಿ ಹಾದುಹೋಗುವ ಪ್ರವಾಸಿಗರು ಮತ್ತು ಸ್ಥಳೀಯರ ಗಮನ ಸೆಳೆಯುತ್ತಿದೆ.

ಕೊಡಗಿನ ಫುಟ್‌ಬಾಲ್ ಕ್ರೇಝ್:

ಕರ್ನಾಟಕದಲ್ಲಿ ಕೊಡಗು ಜಿಲ್ಲೆಯನ್ನು ‘ಹಾಕಿಯ ತವರೂರು’ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಹಾಕಿ ಮತ್ತು ಕ್ರಿಕೆಟ್‌ಗೆ ಎಷ್ಟು ಕ್ರೇಝ್ ಇದೆಯೋ, ಅಷ್ಟೇ ಕ್ರೇಝ್ ಫುಟ್‌ಬಾಲ್​ಗೂ ಇದೆ. ಅದರಲ್ಲೂ ಸುಂಟಿಕೊಪ್ಪ ಕೊಡಗಿನ ‘ಫುಟ್​ಬಾಲ್ ಮೆಕ್ಕಾ’ ಎಂದೇ ಗುರುತಿಸಿಕೊಂಡಿದೆ.

ವಿಶ್ವಕಪ್ ಅಥವಾ ಪ್ರಮುಖ ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಗಳು ಬಂದಾಗಲೆಲ್ಲಾ ಕೊಡಗಿನ ಮೂಲೆ ಮೂಲೆಗಳಲ್ಲೂ ಫುಟ್‌ಬಾಲ್ ಫೀವರ್ ಮುಗಿಲೇರುತ್ತದೆ. ಈ ಬಾರಿ ಕ್ರಿಸ್ಟಿಯಾನೊ ರೊನಾಲ್ಡೊ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಮೇಲಿನ ಪ್ರೀತಿಯನ್ನು ಈ ಬೃಹತ್ ಕಟೌಟ್ ಮೂಲಕ ಜಗತ್ತಿಗೆ ಸಾರಿದ್ದಾರೆ.

ಫಿಫಾ ಫೀವರ್:

ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ಕೇವಲ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಟೌಟ್ ಮಾತ್ರ ತಲೆ ಎತ್ತಿ ನಿಂತಿಲ್ಲ. ಜಿ-ಟೌನ್ ಫುಟ್​ಬಾಲ್ ಕ್ಲಬ್ ಕೂಡ ಬ್ರೆಝಿಲ್, ಪೋರ್ಚುಗಲ್, ಅರ್ಜೆಂಟೀನಾ ತಂಡಗಳ ಬೃಹತಾಕಾರದ ಬ್ಯಾನರ್​​ ಅನ್ನು ಕೂಡ ನಿಲ್ಲಿಸಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ತಂಡಗಳ ಗೆಲುವಿಗಾಗಿ ಹಾರೈಸಿದ್ದಾರೆ.

ಮೈದಾನದ ಬೇಡಿಕೆ:

ಸುಂಟಿಕೊಪ್ಪ ಕೊಡಗಿನ ‘ಫುಟ್​ಬಾಲ್ ಮೆಕ್ಕಾ’ ಎಂದು ಗುರುತಿಸಿಕೊಂಡರೂ, ಈ ಭಾಗದಲ್ಲಿ ಫುಟ್‌ಬಾಲ್‌ಗೆ ಸೂಕ್ತವಾದ ಸುಸಜ್ಜಿತ ಆಟದ ಮೈದಾನ ಹಾಗೂ ಕ್ರೀಡಾ ಸೌಲಭ್ಯಗಳಿಲ್ಲ ಎಂಬುದೇ ಸತ್ಯ. ಇದೀಗ ತಂಡಗಳ ಬ್ಯಾನರ್ ಹಾಗೂ ಕಟೌಟ್ ನಿಲ್ಲಿಸುವ ಮೂಲಕ ಸುಂಟಿಕೊಪ್ಪ ಫುಟ್​ಬಾಲ್ ಪ್ರೇಮಿಗಳು ಸುಸಜ್ಜಿತ ಆಟದ ಮೈದಾನಕ್ಕಾಗಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

ಪ್ರವಾಸಿಗರ ಸೆಲ್ಫಿ ಸ್ಪಾಟ್:

ಸುಂಟಿಕೊಪ್ಪ ಮಾರ್ಗವಾಗಿ ಮಡಿಕೇರಿಗೆ ತೆರಳುವ ಪ್ರವಾಸಿಗರು ಈ 40 ಅಡಿಯ ರೊನಾಲ್ಡೊ ಕಟೌಟ್ ನೋಡಿ ಗಾಡಿ ನಿಲ್ಲಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, “ಕೊಡಗಿನ ಹುಡುಗರ ಫುಟ್‌ಬಾಲ್ ಪ್ರೇಮಕ್ಕೆ ಸಾಟಿಯೇ ಇಲ್ಲ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಶಾಕ್… ಬಲಿಷ್ಠ ಸ್ಪೇನ್ ವಿರುದ್ಧ ಸೆಟೆದು ನಿಂತ ಕೇಪ್ ವರ್ಡೆ..!

ಒಟ್ಟಾರೆಯಾಗಿ ಫುಟ್​ಬಾಲ್ ಎನ್ನುವುದು ಕೇವಲ ಆಟವಲ್ಲ, ಅದೊಂದು ಭಾವನೆ ಎಂಬುದನ್ನು ಕೊಡಗಿನ ಕ್ರೀಡಾಭಿಮಾನಿಗಳು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Published On - 10:08 am, Tue, 16 June 26

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ