AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ನೋಡುಗರ ಕಣ್ಣು ಕುಕ್ಕುತ್ತಿದೆ ಧೋನಿಯ ಹೊಸ ಲುಕ್! ಮೀಸೆ ತಿರುವಿ ಸಾಮಾಜಿಕ ಅರಿವು ಮೂಡಿಸಿದ ಮಹೀ

MS Dhoni: ಈಗ ಧೋನಿ ನಾಯಕತ್ವದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಧೋನಿಯ ಹೊಸ ಲುಕ್​ನ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

MS Dhoni: ನೋಡುಗರ ಕಣ್ಣು ಕುಕ್ಕುತ್ತಿದೆ ಧೋನಿಯ ಹೊಸ ಲುಕ್! ಮೀಸೆ ತಿರುವಿ ಸಾಮಾಜಿಕ ಅರಿವು ಮೂಡಿಸಿದ ಮಹೀ
ಎಂ ಎಸ್ ಧೋನಿ
ಪೃಥ್ವಿಶಂಕರ
|

Updated on: Jun 26, 2021 | 2:50 PM

Share

ಭಾರತಕ್ಕಾಗಿ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಭಾರತದ ಅತ್ಯಂತ ಯಶಸ್ವಿ ನಾಯಕ ಎಂ.ಎಸ್. ಧೋನಿ. ಎಲ್ಲಾ ಭಾರತೀಯರ ಅಚ್ಚುಮೆಚ್ಚಿನ ಕ್ರಿಕೆಟಿಗ ಎಂಬುದರಲ್ಲಿ ಎರಡು ಮಾತಿಲ್ಲ. ಧೋನಿ ಮಾಡುವ ಎಲ್ಲ ಚಟುವಟಿಕೆಯೂ ತಕ್ಷಣವೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಧೋನಿಯ ಹೊಸ ನೋಟ ಅಥವಾ ಅವರು ತೆಗೆದುಕೊಂಡ ಹೊಸ ಬೈಕು ಇರಲಿ ಇವೆಲ್ಲವೂ ಬಾರೀ ಸುದ್ದಿಯಾಗುತ್ತವೆ. ಐಪಿಎಲ್ ರದ್ದಾದ ನಂತರ ಧೋನಿ ಪ್ರಸ್ತುತ ಕುಟುಂಬದೊಂದಿಗೆ ಶಿಮ್ಲಾದಲ್ಲಿ ರಜೆಯಲ್ಲಿದ್ದಾರೆ. ಈ ಬಾರಿ ಧೋನಿ ಮೀಸೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ಧೋನಿ ತನ್ನ ಮಗಳ ಜೊತೆಗಿನ ಫೋಟೋಗಳು ವೈರಲ್ ಆಗಿದ್ದವು.

ಗಿಡಗಳನ್ನು ನೆಡಿ ಮತ್ತು ಮರಗಳನ್ನು ಕಾಪಾಡಿ ಈಗ ಧೋನಿ ನಾಯಕತ್ವದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಧೋನಿಯ ಹೊಸ ಲುಕ್​ನ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಏತನ್ಮಧ್ಯೆ, ಈ ಫೋಟೋಕ್ಕೆ ನೆಟಿಜನ್‌ಗಳು ವಿಭಿನ್ನ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ ಮತ್ತು ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ. ಸಿಎಸ್​ಕೆ ಹಮಚಿಕೊಂಡಿರುವ ಧೋನಿ ಮೀಸೆ ಬಿಟ್ಟಿರುವ ಈ ಫೋಟೋದಲ್ಲಿ ಮರದಿಂದ ತಯಾರಾದ ಹೋಟೆಲ್ ಬಳಿ ನಿಂತಿರುವ ಧೋನಿ ನಿಂತಿದ್ದಾರೆ. ಹಾಗೆಯೇ ಒಂದು ಮರದ ತುಂಡಿನ ಮೇಲೆ ಗಿಡಗಳನ್ನು ನೆಡಿ ಮತ್ತು ಮರಗಳನ್ನು ಕಾಪಾಡಿ ಎಂದು ಬರೆಯಲಾಗಿದೆ.

ಉಳಿದ ಐಪಿಎಲ್‌ಗಾಗಿ ಕ್ರಿಕೆಟಿಗರು ಉತ್ಸುಕರಾಗಿದ್ದಾರೆ ಕೊರೊನಾ ಬಿಕ್ಕಟ್ಟಿನಿಂದ ಮುಂದೂಡಲ್ಪಟ್ಟ ಐಪಿಎಲ್ 2021 ಸೆಪ್ಟೆಂಬರ್-ಅಕ್ಟೋಬರ್ ನಡುವೆ ಯುಎಇಯಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕೆಲವು ದಿನಗಳ ಹಿಂದೆ ತಿಳಿಸಿದೆ. ಏತನ್ಮಧ್ಯೆ, ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದರಿಂದ, ಅಭಿಮಾನಿಗಳು ಧೋನಿ ಆಡುವದನ್ನು ನೋಡುವ ಏಕೈಕ ಆಯ್ಕೆ ಐಪಿಎಲ್ ಆಗಿದೆ.

ಇದನ್ನೂ ಓದಿ:ಎಮ್ ಎಸ್​ ಧೋನಿಯನ್ನು ತಬ್ಬಿ ನಿಂತ ಮಗಳು; ಕ್ಯಾಮರಾ ಮುಂದೆ ಝೀವಾ ಕೊಟ್ಟ ಸ್ಮೈಲ್​ ನೋಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ವಿ. ಸೋಮಣ್ಣ ಕಾರು ಮುತ್ತಿಗೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಯತ್ನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಯುವತಿ ದೂರಿನ ಮೇರೆಗೆ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ
ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
ಎಟಿಎಂನಲ್ಲಿ ಹೆಡೆ ಎತ್ತಿ ನಿಂತ ನಾಗರಹಾವು
‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್
‘ಅತ್ತಿಗೆ ಪಟ್ಟ ಸಿಕ್ಕಿದ್ದಕ್ಕೆ ಖುಷಿ ಇದೆ’; ಸಂಗೀತಾ ಭಟ್ ಫಸ್ಟ್ ರಿಯಾಕ್ಷನ್
ಆನೇಕಲ್‌: ಅಂತರರಾಜ್ಯ ಬೈಕ್ ಕಳ್ಳರ ಬಂಧನ, ₹18 ಲಕ್ಷ ಮೌಲ್ಯದ ಬೈಕ್‌ಗಳ ವಶ
ಆನೇಕಲ್‌: ಅಂತರರಾಜ್ಯ ಬೈಕ್ ಕಳ್ಳರ ಬಂಧನ, ₹18 ಲಕ್ಷ ಮೌಲ್ಯದ ಬೈಕ್‌ಗಳ ವಶ
ಲುಧಿಯಾನ ಮತದಾರರ ಪಟ್ಟಿಯಲ್ಲಿ ಭಗತ್ ಸಿಂಗ್ ಫೋಟೋ
ಲುಧಿಯಾನ ಮತದಾರರ ಪಟ್ಟಿಯಲ್ಲಿ ಭಗತ್ ಸಿಂಗ್ ಫೋಟೋ