
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಟೂರ್ನಿಯ 19ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲುಂಡಿದೆ. ಧೋನಿ ಪಡೆ 69 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಆರ್ಸಿಬಿ ಪರ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ 34 (15), ನಂತರ ಬಂದ ಮ್ಯಾಕ್ಸ್ವೆಲ್ 22 (15) ಹೊರತುಪಡಿಸಿ ಇನ್ಯಾರೂ ಉತ್ತಮ ಆಟ ಪ್ರದರ್ಶಿಸಿಲ್ಲ. ಎಬಿಡಿ, ಕೊಹ್ಲಿ ಸಹಿತ ಪ್ರಮುಖ ದಾಂಡಿಗರು 10 ರನ್ ದಾಟದೇ ಔಟ್ ಆಗಿದ್ದಾರೆ. ಈ ಮೂಲಕ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಗೆದ್ದು ಬೀಗಿದೆ. ಚೆನ್ನೈ ಪರ ಜಡೇಜಾ ಬೌಲಿಂಗ್ನಲ್ಲೂ ಮಿಂಚಿದ್ದಾರೆ. 4 ಓವರ್ಗೆ ಕೇವಲ 13 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಇಮ್ರಾನ್ ತಾಹಿರ್ 2 ವಿಕೆಟ್ ಪಡೆದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 191 ರನ್ ಕಲೆಹಾಕಿತ್ತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 192 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಚೆನ್ನೈ ಪರ ಡುಪ್ಲೆಸಿಸ್ 50 (41), ಗಾಯಕ್ವಾಡ್ 33 (25) ಉತ್ತಮ ಆರಂಭ ನೀಡಿದ್ದರು. ನಂತರ ಬಂದ ರೈನಾ 24, ರಾಯುಡು 14, ಧೋನಿ 3 ಬಾಲ್ ಆಡಿ 2 ರನ್ ದಾಖಲಿಸಿ ಇನ್ನಿಂಗ್ಸ್ ಕಟ್ಟಿದ್ದರು. ಆರಂಭಿಕ ಎರಡು ವಿಕೆಟ್ ಕುಸಿತದ ಬಳಿಕ ಚೆನ್ನೈ ಅಲ್ಪಮೊತ್ತದ ಟಾರ್ಗೆಟ್ ನೀಡುವ ನಿರೀಕ್ಷೆ ಮೂಡಿಸಿತ್ತು. ಆದರೆ ಅಂತಿಮವಾಗಿ ಜಡೇಜಾ ಅಬ್ಬರಿಸಿದರು. ಜಡೇಜಾ 28 ಬಾಲ್ಗೆ 5 ಸಿಕ್ಸರ್, 4 ಬೌಂಡರಿ ಸಹಿತ 62 ರನ್ ಕಲೆಹಾಕಿದ್ದರು.
ಆರ್ಸಿಬಿ ಪರ ಹರ್ಷಲ್ ಪಟೇಲ್ 3 ವಿಕೆಟ್ ಹಾಗೂ ಚಹಾಲ್ 1 ವಿಕೆಟ್ ಪಡೆದಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ 69 ರನ್ಗಳ ಗೆಲುವು ದಾಖಲಿಸಿದೆ. ಈ ಮೂಲಕ ಆರ್ಸಿಬಿ ಐಪಿಎಲ್ 2021 ಟೂರ್ನಿಯ ಮೊದಲ ಸೋಲು ಕಂಡಿದೆ. ಆರ್ಸಿಬಿ 20 ಓವರ್ಗೆ 9 ವಿಕೆಟ್ ಕಳೆದುಕೊಂಡು 122 ರನ್ ಗಳಿಸಲಷ್ಟೇ ಶಕ್ತವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್ಗೆ 9 ವಿಕೆಟ್ ಕಳೆದುಕೊಂಡು 111 ರನ್ ದಾಖಲಿಸಿದೆ. ಚೆನ್ನೈ ಗೆಲುವು ಖಚಿತವಾಗಿದೆ. ಆರ್ಸಿಬಿ 6 ಬಾಲ್ಗೆ 81 ರನ್ ಗಳಿಸಬೇಕಾಗಿದ್ದು, ಅಸಾಧ್ಯವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲು 12 ಬಾಲ್ಗೆ 83 ರನ್ ಬೇಕು. ತಂಡ 19 ಓವರ್ಗೆ 9 ವಿಕೆಟ್ ಕಳೆದುಕೊಂಡು 109 ರನ್ ದಾಖಲಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 16 ಓವರ್ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 103 ರನ್ ದಾಖಲಿಸಿದೆ. ಕೈಲ್ ಜಾಮಿಸನ್ ಕೂಡ ತಾಹಿರ್ಗೆ ರನ್ ಔಟ್ ಆಗಿದ್ದಾರೆ. ಸಿರಾಜ್ ಹಾಗೂ ಚಹಾಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗೆಲ್ಲಲು 24 ಬಾಲ್ಗೆ 89 ರನ್ ಬೇಕಿದೆ.
ಇಮ್ರಾನ್ ತಾಹಿರ್ ಬೌಲಿಂಗ್ಗೆ ನವದೀಪ್ ಸೈನಿ ಔಟ್ ಆಗಿದ್ದಾರೆ. 4 ಬಾಲ್ಗೆ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಚಹಾಲ್ ಹಾಗೂ ಜಾಮಿಸನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಆರ್ಸಿಬಿ ಗೆಲ್ಲಲು 42 ಬಾಲ್ಗೆ 98 ರನ್ ಬೇಕಿದೆ. 13 ಓವರ್ಗೆ 7 ವಿಕೆಟ್ ಕಳೆದುಕೊಂಡು 94 ರನ್ ದಾಖಲಿಸಿದೆ. ಆರಂಭಿಕ ವೇಗದ ಆಟ ಆಡಿದ್ದ ರಾಯಲ್ ಚಾಲೆಂಜರ್ಸ್ ನಂತರ ಪ್ರಮುಖ ದಾಂಡಿಗರ ವಿಕೆಟ್ಗಳನ್ನು ಒಂದರ ಹಿಂದೆ ಒಂದರಂತೆ ಕಳೆದುಕೊಂಡಿದೆ.
ಆರ್ಸಿಬಿ 7 ವಿಕೆಟ್ ಕಳೆದುಕೊಂಡಿದೆ. ಹರ್ಷಲ್ ಪಟೇಲ್ 8 ಬಾಲ್ ಆಡಿ ರನ್ ಗಳಿಸದೇ ಇಮ್ರಾನ್ ತಾಹಿರ್ ಬಾಲ್ಗೆ ಬೌಲ್ಡ್ ಆಗಿದ್ದಾರೆ. ಕೈಲ್ ಜಾಮಿಸನ್ ಹಾಗೂ ನವದೀಪ್ ಸೈನಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ರವೀಂದ್ರ ಜಡೇಜಾ ಬಾಲ್ಗೆ ಎಬಿ ಡಿವಿಲಿಯರ್ಸ್ ಬೌಲ್ಡ್ ಆಗಿದ್ದಾರೆ. ಕೈಲ್ ಜಾಮಿಸನ್ ಹಾಗೂ ಹರ್ಲ್ ಪಟೇಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಡೇನಿಯಲ್ ಕ್ರಿಶ್ಚಿಯನ್ 3 ಬಾಲ್ಗೆ 1 ರನ್ ಗಳಿಸಿ ರನ್ ಔಟ್ಗೆ ಬಲಿಯಾಗಿದ್ದಾರೆ. ಆರ್ಸಿಬಿ 10 ಓವರ್ಗೆ 83 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದೆ. 60 ಬಾಲ್ಗೆ 109 ರನ್ ಬೇಕಿದೆ.
ರಾಯಲ್ ಚಾಲೆಂಜರ್ಸ್ ದಾಂಡಿಗ ಗ್ಲೆನ್ ಮ್ಯಾಕ್ಸ್ವೆಲ್ ಔಟ್ ಆಗಿದ್ದಾರೆ. 15 ಬಾಲ್ಗೆ 22 ರನ್ ಗಳಿಸಿ ರವೀಂದ್ರ ಜಡೇಜಾಗೆ ಬೌಲ್ಡ್ ಆಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲಲು 72 ಬಾಲ್ಗೆ 119 ರನ್ ಬೇಕಿದೆ. 8 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 73 ರನ್ ದಾಖಲಿಸಿದೆ. ಮ್ಯಾಕ್ಸ್ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ.
ವಾಷಿಂಗ್ಟನ್ ಸುಂದರ್ 11 ಬಾಲ್ಗೆ 7 ರನ್ ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್ ನೀಡಿದ್ದಾರೆ. ಋತುರಾಜ್ ಗಾಯಕ್ವಾಡ್ ಕ್ಯಾಚ್ ಪಡೆದಿದ್ದಾರೆ. ಆರ್ಸಿಬಿ ಪರ ಮ್ಯಾಕ್ಸ್ವೆಲ್ ಹಾಗೂ ಎಬಿ ಡಿವಿಲಿಯರ್ಸ್ ಆಡುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ಓವರ್ಗೆ 2 ಮುಖ್ಯ ವಿಕೆಟ್ ಕಳೆದುಕೊಂಡು 65 ರನ್ ದಾಖಲಿಸಿದೆ. ಆರ್ಸಿಬಿ ಪರ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಗೆಲ್ಲಲು 84 ಬಾಲ್ಗೆ 127 ರನ್ ಬೇಕಿದೆ.
ದೇವದತ್ ಪಡಿಕ್ಕಲ್ 15 ಬಾಲ್ಗೆ 34 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ದಾರೆ. ಠಾಕುರ್ ಬೌಲಿಂಗ್ಗೆ ರೈನಾಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಆರ್ಸಿಬಿ ಪರ ಮ್ಯಾಕ್ಸ್ವೆಲ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ವಿರಾಟ್ ಕೊಹ್ಲಿ 7 ಬಾಲ್ಗೆ 8 ರನ್ ಗಳಿಸಿ ಔಟ್ ಆಗಿದ್ದಾರೆ. ಸ್ಯಾಮ್ ಕುರ್ರನ್ ಬಾಲ್ಎ ಧೋನಿಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಪಡಿಕ್ಕಲ್ ಹಾಗೂ ವಾಷಿಂಗ್ಟನ್ ಸುಂದರ್ ಆಡುತ್ತಿದ್ದಾರೆ.
ಅದ್ಭುತ ಓಪನಿಂಗ್ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ಓವರ್ ಅಂತ್ಯಕ್ಕೆ 44 ರನ್ ದಾಖಲಿಸಿದೆ. ಪಡಿಕ್ಕಲ್ 12 ಬಾಲ್ಗೆ 32 ರನ್ ಕಲೆಹಾಕಿದ್ದಾರೆ.
ಬೃಹತ್ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಪರ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಪಡಿಕ್ಕಲ್ ವೇಗದ ಆಟಕ್ಕೆ ಮುಂದಾಗಿದ್ದಾರೆ. ಎರಡನೇ ಓವರ್ನಲ್ಲಿ ಸಿಕ್ಸರ್ ಸಹಿತ 18 ರನ್ ಕಲೆಹಾಕಿದ್ದಾರೆ. 2 ಓವರ್ಗೆ ಆರ್ಸಿಬಿ ವಿಕೆಟ್ ನಷ್ಟವಿಲ್ಲದೆ 28 ರನ್ ಕಲೆಹಾಕಿದೆ.
1 ಓವರ್ನ ಅಂತ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ರನ್ ದಾಖಲಿಸಿದೆ. ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಆರಂಭಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಓವರ್ ಹಾಗೂ ಅಂತಿಮ ಓವರ್ಗಳಲ್ಲಿ ಅಬ್ಬರಿಸಿದೆ. ಭರ್ಜರಿ 191 ರನ್ ಕಲೆಹಾಕಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲ್ಲಲು 192 ರನ್ ಬೇಕಿದೆ.
ರವೀಂದ್ರ ಜಡೇಜಾ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಹರ್ಷಲ್ ಪಟೇಲ್ ಓವರ್ಗೆ 5 ಸಿಕ್ಸ್, 1 ಫೋರ್ ಸಹಿತ 37 ರನ್ ಬಾರಿಸಿದ್ದಾರೆ. ಚೆನ್ನೈ ಪರ ಜಡೇಜಾ 28 ಬಾಲ್ಗೆ 62 ರನ್ ದಾಖಲಿಸಿದ್ದಾರೆ.
ಹರ್ಷಲ್ ಪಟೇಲ್ ಅಂತಿಮ ಓವರ್ಗೆ ರವೀಂದ್ರ ಜಡೇಜಾ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸುತ್ತಿದ್ದಾರೆ. 3 ಬಾಲ್ಗೆ ಸಿಕ್ಸ್ ಬಾರಿಸಿ ತಂಡದ ಮೊತ್ತ 170 ರನ್ ದಾಟುವಂತೆ ಮಾಡಿದ್ದಾರೆ. ಹರ್ಷಲ್ ಪಟೇಲ್ ಅಂತಿಮ ಓವರ್ನಲ್ಲಿ ದುಬಾರಿಯಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 19 ಓವರ್ಗೆ 4 ವಿಕೆಟ್ ಕಳೆದುಕೊಂಡು 154 ರನ್ ದಾಖಲಿಸಿದೆ. ಧೋನಿ ಹಾಗೂ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 18 ಓವರ್ಗಳ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 145 ರನ್ ಕಲೆಹಾಕಿದೆ. ಇನ್ನು 2 ಓವರ್ಗಳು ಬಾಕಿ ಇದ್ದು, 150 ರನ್ ಗಡಿದಾಟುವುದು ಖಚಿತವಾಗಿದೆ.
ಹರ್ಷಲ್ ಪಟೇಲ್ಗೆ ಮತ್ತೊಂದು ವಿಕೆಟ್ ಸಿಕ್ಕಿದೆ. 7 ಬಾಲ್ಗೆ 14 ರನ್ ಗಳಿಸಿ ಆಡುತ್ತಿದ್ದ ಅಂಬಟಿ ರಾಯುಡು ಜಾಮಿಸನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ರವೀಂದ್ರ ಜಡೇಜಾ ಹಾಗೂ ನಾಯಕ ಧೋನಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 16 ಓವರ್ಗೆ 3 ವಿಕೆಟ್ ಕಳೆದುಕೊಂಡು 134 ರನ್ ಗಳಿಸಿದೆ. ಅಂಬಟಿ ರಾಯುಡು ಹಾಗೂ ರವೀಂದ್ರ ಜಡೇಜಾ ಕ್ರಿಸ್ನಲ್ಲಿದ್ದಾರೆ. ಆರ್ಸಿಬಿ ಪರ ಹರ್ಷಲ್ ಪಟೇಲ್ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ಹರ್ಷಲ್ಗೆ ಇನ್ನೂ 2 ಓವರ್ ಬಾಕಿ ಇದೆ.
ಡೇನಿಯಲ್ ಕ್ರಿಶ್ಚಿಯನ್ ಒಂದು ಕ್ಯಾಚ್ ಡ್ರಾಪ್ ಮಾಡಿದ್ದಾರೆ. ರವೀಂದ್ರ ಜಡೇಜಾ ಹೊಡೆತವನ್ನು ಕೈಚೆಲ್ಲಿದ್ದಾರೆ. 15 ಓವರ್ಗಳಿಗೆ 3 ವಿಕೆಟ್ ಕಳೆದುಕೊಂಡು 117 ರನ್ ದಾಖಲಿಸಿರುವ ಚೆನ್ನೈ, ತನ್ನ ರನ್ ವೇಗ ಕಡಿಮೆ ಮಾಡಿಕೊಂಡು ಆಡುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ 14 ಓವರ್ಗೆ 3 ವಿಕೆಟ್ ಕಳೆದುಕೊಂಡು 111 ರನ್ ಕಲೆಹಾಕಿದೆ. ರೈನಾ ಹಾಗೂ ಡುಪ್ಲೆಸಿಸ್ ಒಬ್ಬರ ಹಿಮದೆ ಒಬ್ಬರಂತೆ ವಿಕೆಟ್ ಕಳೆದುಕೊಂಡಿದ್ದಾರೆ. ಆ ಬಳಿಕ ಅಂಬಟಿ ರಾಯುಡು ಮತ್ತು ರವೀಂದ್ರ ಜಡೇಜಾ ಕ್ರೀಸ್ಗೆ ಇಳಿದಿದ್ದಾರೆ.
ಅರ್ಧಶತಕ ಸಿಡಿಸಿ ಚೆನ್ನೈಗೆ ಉತ್ತಮ ಆರಂಭ ನೀಡಿದ್ದ ಫಫ್ ಡುಪ್ಲೆಸಿಸ್ ಕೂಡ ಔಟ್ ಆಗಿದ್ದಾರೆ. ರೈನಾ ಬೆನ್ನಲ್ಲೇ ಡುಪ್ಲೆಸಿಸ್ ಹರ್ಷಲ್ ಪಟೇಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ಡೇನಿಯಲ್ ಕ್ರಿಶ್ಚಿಯನ್ಗೆ ಕ್ಯಾಚ್ ನೀಡಿ 41 ಬಾಲ್ಗೆ 50 ರನ್ ಗಳಿಸಿ ನಿರ್ಗಮಿಸಿದ್ದಾರೆ.
18 ಬಾಲ್ಗೆ 24 ರನ್ ಗಳಿಸಿ ವೇಗದ ಆಟವಾಡುತ್ತಿದ್ದ ಸುರೇಶ್ ರೈನಾ ಔಟ್ ಆಗಿದ್ದಾರೆ. ಹರ್ಷಲ್ ಪಟೇಲ್ ಬಾಲ್ಗೆ ಸಿಕ್ಸರ್ ಸಿಡಿಸಲು ಹೋಗಿ, ದೇವದತ್ತ್ ಪಡಿಕ್ಕಲ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 100 ರನ್ಗಳ ಗಡಿ ದಾಟಿದೆ. 13 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 110 ರನ್ ದಾಖಲಿಸಿದೆ. ಸುರೇಶ್ ರೈನಾ ಸಿಕ್ಸರ್ಗಳ ಆಟ ಆಡುತ್ತಿದ್ದಾರೆ. ಡುಪ್ಲೆಸಿಸ್ 49 ರನ್ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
12 ಓವರ್ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 1 ವಿಕೆಟ್ ಕಳೆದುಕೊಂಡು 97 ರನ್ ಗಳಿಸಿದೆ. ಸುರೇಶ್ ರೈನಾ 12 ಬಾಲ್ಗೆ 2 ಸಿಕ್ಸರ್ ಸಹಿತ 17 ರನ್ ದಾಖಲಿಸಿದ್ದಾರೆ. ಡುಪ್ಲೆಸಿಸ್ 36 ಬಾಲ್ಗೆ 43 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 10 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 83 ರನ್ ದಾಖಲಿಸಿದೆ. ಗಾಯಕ್ವಾಡ್ ಔಟ್ ಆದ ಬಳಿಕ, ಸುರೇಶ್ ರೈನಾ ಕ್ರೀಸ್ಗೆ ಇಳಿದಿದ್ದಾರೆ. ಡುಪ್ಲೆಸಿಸ್- ರೈನಾ ಜೊತೆಯಾಗಿದ್ದಾರೆ.
ಚೆನ್ನೈಗೆ ಉತ್ತಮ ಆರಂಭ ನೀಡಿದ್ದ ಋತುರಾಜ್ ಗಾಯಕ್ವಾಡ್ 33 (25) ಔಟ್ ಆಗಿದ್ದಾರೆ. ಚಹಾಲ್ ಬೌಲಿಂಗ್ಗೆ ಜಾಮಿಸನ್ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 9 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 74 ರನ್ ಗಳಿಸಿದೆ. ಋತುರಾಜ್ ಗಾಯಕ್ವಾಡ್ 33 ಹಾಗೂ ಡುಪ್ಲೆಸಿಸ್ 38 ರನ್ ಗಳಿಸಿ ಆಡುತ್ತಿದ್ದಾರೆ.
ಫಾಫ್ ಡುಪ್ಲೆಸಿಸ್ ಹಾಗೂ ಗಾಯಕ್ವಾಡ್ ಭರ್ಜರಿ ಆರಂಭ ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ 7 ಓವರ್ಗೆ 1 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ 6 ಓವರ್ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 51 ರನ್ ಕಲೆಹಾಕಿದೆ. ಪವರ್ಪ್ಲೇ ಅವಧಿಯಲ್ಲಿ ಆರ್ಸಿಬಿ ವಿಕೆಟ್ ಕಬಳಿಸಲು ವಿಫಲವಾಗಿದೆ. ಡುಪ್ಲೆಸಿಸ್ ಹಾಗೂ ಗಾಯಕ್ವಾಡ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರ್ಸಿಬಿ ಪರ ಸಿರಾಜ್, ಜಾಮಿಸನ್, ಚಹಾಲ್ ಮತ್ತು ಸೈನಿ ಬೌಲಿಂಗ್ ಮಾಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ 5 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 37 ರನ್ ಗಳಿಸಿದ್ದಾರೆ. ಚೆನ್ನೈ ಪರ ಡುಪ್ಲೆಸಿಸ್ 25 (17) ಹಾಗೂ ಗಾಯಕ್ವಾಡ್ 12 (14) ಬ್ಯಾಟಿಂಗ್ ಮಾಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ಗೆ ಉತ್ತಮ ಆರಂಭ ದೊರಕಿದೆ.
ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಬ್ಯಾಟ್ಸ್ಮನ್ ಫಾಫ್ ಡುಪ್ಲೆಸಿಸ್ ಬೌಂಡರಿ, ಸಿಕ್ಸರ್ ಸಿಡಿಸಿದ್ದಾರೆ. ಸಿರಾಜ್ ಬೌಲಿಂಗ್ನ 3ನೇ ಓವರ್ಗೆ ವೇಗದ ಆಟ ಆಡುತ್ತಿದ್ದಾರೆ. ಚೆನ್ನೈ ತಂಡದ ಮೊತ್ತ 3 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ಆಗಿದೆ.
ಎರಡನೇ ಓವರ್ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ. ಆರ್ಸಿಬಿ ಪರ ಎರಡನೇ ಓವರ್ನ್ನು ಕೈಲ್ ಜಾಮಿಸನ್ ಬೌಲ್ ಮಾಡಿದ್ದಾರೆ.
ಎರಡೂ ತಂಡಗಳು ತಮ್ಮ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಮಾಡಿಕೊಂಡಿವೆ. ವಿವರ ಇಲ್ಲಿದೆ
ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ. ಋತುರಾಜ್ ಗಾಯಕ್ವಾಡ್ ಹಾಗೂ ಫಫ್ ಡುಪ್ಲೆಸಿಸ್ ಕ್ರೀಸ್ಗೆ ಇಳಿದಿದ್ದಾರೆ. ಮೊದಲ ಓವರ್ ಅಂತ್ಯಕ್ಕೆ ಚೆನ್ನೈ 6 ರನ್ ಗಳಿಸಿದೆ. ವಿಕೆಟ್ ಕಳೆದುಕೊಂಡಿಲ್ಲ. ಆರ್ಸಿಬಿ ಪರ ಸಿರಾಜ್ ಮೊದಲ ಓವರ್ ಬೌಲಿಂಗ್ ಮಾಡಿದ್ದಾರೆ.
ಆರ್ಸಿಬಿ ಹಾಗೂ ಸಿಎಸ್ಕೆ ಮುಖಾಮುಖಿ ಆಗಿರುವ ಪಂದ್ಯಗಳ ಪೈಕಿ ಚೆನ್ನೈ ಸೂಪರ್ ಕಿಂಗ್ಸ್ 16 ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ಪಂದ್ಯಗಳನ್ನು ಗೆದ್ದಿದೆ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬೌಲಿಂಗ್ ಮಾಡಲಿದೆ.
ಕೊರೊನಾ ಪ್ರಕರಣಗಳನ್ನು ತಡೆಗಟ್ಟಲು ಮಾಸ್ಕ್ ಬಳಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಸ್ವಚ್ಛತೆಯ ಕಡೆಗೆ ಗಮನಕೊಡಿ
ಬ್ಯಾಟಿಂಗ್ಗೆ ಸಹಕಾರಿ ಎಂದು ಗುರುತಿಸಿಕೊಂಡಿರುವ ಮುಂಬೈ ವಾಂಖೆಡೆ ಮೈದಾನದಲ್ಲಿ ಇಂದು ರನ್ ಹೊಳೆ ಹರಿಯಬಹುದೇ?
Published On - 7:29 pm, Sun, 25 April 21