AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ನಂಬರ್​ 1 ಚೆಸ್​ ಚತುರನಿಗೆ ಸೋಲುಣಿಸಿದ ಡಿ. ಗುಕೇಶ್

D Gukesh: ವಿಶ್ವ ಚಾಂಪಿಯನ್ ಡಿ. ಗುಕೇಶ್ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. 2025 ರ ನಾರ್ವೆ ಚೆಸ್‌ನ ಆರನೇ ಸುತ್ತಿನಲ್ಲಿ ಅವರು ಮೊದಲ ಬಾರಿಗೆ ಮಾಜಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ಸೋಲುಣಿಸಿದ್ದಾರೆ. ಇದಕ್ಕೂ ಮುನ್ನ ಕಳೆದ ವರ್ಷ ಆರ್ ಪ್ರಜ್ಞಾನಂದ ಅವರು ಮ್ಯಾಗ್ನಸ್ ಕಾರ್ಲ್ಸನ್ ಅವರ ವಿರುದ್ಧ ಗೆಲುವು ದಾಖಲಿಸಿದ್ದರು.

ವಿಶ್ವದ ನಂಬರ್​ 1 ಚೆಸ್​ ಚತುರನಿಗೆ ಸೋಲುಣಿಸಿದ ಡಿ. ಗುಕೇಶ್
D. Gukesh
Follow us
Zahir Yusuf
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 02, 2025 | 10:07 AM

ಭಾರತದ ಯುವ ಚೆಸ್ ಚತುರ ಡಿ. ಗುಕೇಶ್ (D Gukesh) ವಿಶ್ವದ ನಂಬರ್ 1 ಚೆಸ್ ಪಟು ಮ್ಯಾಗ್ನಸ್ ಕಾರ್ಲ್ಸನ್​ಗೆ ಸೋಲುಣಿಸಿದ್ದಾರೆ. ನಾರ್ವೆಯಲ್ಲಿ ನಡೆಯುತ್ತಿರುವ ಚೆಸ್ ಟೂರ್ನಿಯ 6ನೇ ಸುತ್ತಿನ ಕ್ಲಾಸಿಕ್ ಪಂದ್ಯದಲ್ಲಿ ಗುಕೇಶ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಗುಕೇಶ್ ಕಾರ್ಲ್ಸನ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಆ ಸೋಲಿನ ನಂತರ, ಕಾರ್ಲ್ಸನ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ನಿಗೂಢ ಸಂದೇಶವನ್ನು ಪೋಸ್ಟ್ ಮಾಡಿ, “ನೀವು ರಾಜನ ವಿರುದ್ಧ ಆಡುವಾಗ, ನೀವು ತಪ್ಪಿಸಿಕೊಳ್ಳಬಾರದು” ಎಂದು ಕಾಲೆಳೆದಿದ್ದರು.

ಈ ಸಂದೇಶವು ಮ್ಯಾಗ್ನಸ್ ಕಾರ್ಲ್ಸನ್ ಅವರ ಪ್ರಾಬಲ್ಯದ ಸಂಕೇತವಾಗಿತ್ತು. ಆದರೆ ಆರನೇ ಸುತ್ತಿನಲ್ಲಿ ಗುಕೇಶ್ ಅದಕ್ಕೆ ಸೂಕ್ತ ಉತ್ತರವನ್ನು ನೀಡಿದರು. ಬಿಳಿ ಕಾಯಿಗಳೊಂದಿಗೆ ಆಡಿದ 19 ವರ್ಷದ ಗುಕೇಶ್ ಆಟದ ಉದ್ದಕ್ಕೂ ತಾಳ್ಮೆ ಮತ್ತು ಶಿಸ್ತನ್ನು ತೋರಿಸಿದರು.

ಅತ್ತ ಕಾರ್ಲ್‌ಸನ್ ಪಂದ್ಯದ ಬಹುಪಾಲು ಮುನ್ನಡೆ ಕಾಯ್ದುಕೊಂಡರೂ, ಪಂದ್ಯಾವಳಿಯ ಹೆಚ್ಚುತ್ತಿರುವ ಸಮಯ ನಿಯಂತ್ರಣದ ಸಮಯದಲ್ಲಿ ಒತ್ತಡಕ್ಕೆ ಒಳಗಾದರು. ಈ ಅವಕಾಶವನ್ನು ಬಳಸಿಕೊಂಡ ಗುಕೇಶ್, ಕಾರ್ಲನ್ಸ್​ ಅವರ ಮೇಲೆ ಮತ್ತಷ್ಟು ಒತ್ತಡ ಹೇರಿದರು. ಈ ಒತ್ತಡದಿಂದಾಗಿ ಮ್ಯಾಗ್ನಸ್ ಕಾರ್ಲ್ಸನ್ ತಪ್ಪು ಹೆಜ್ಜೆಯನ್ನಿಟ್ಟರೆ, ಗುಕೇಶ್ ನಿಖರವಾದ ಪ್ರತಿದಾಳಿಯೊಂದಿಗೆ ಗೆಲುವು ಸಾಧಿಸಿದರು.

ಕೋಪಗೊಂಡ ಕಾರ್ಲ್ಸನ್:

19 ವರ್ಷದ ಗುಕೇಶ್ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲು ಮ್ಯಾಗ್ನಸ್ ಕಾರ್ಲ್ಸನ್ ಸಾಧ್ಯವಾಗಲಿಲ್ಲ. ಅಲ್ಲದೆ ಆಘಾತಕಾರಿ ಸೋಲಿನಿಂದ ವಿಚಲಿತರಾದ ಕಾರ್ಲ್ಸನ್ ಪಂದ್ಯದ ನಂತರ ಮೇಜನ್ನು ಗುದ್ದುವ ಮೂಲಕ ತನ್ನ ಆಕ್ರೋಶವನ್ನು ಹೊರಹಾಕಿದ್ದರು.

ಇನ್ನು ಮ್ಯಾಗ್ನಸ್ ಕಾರ್ಲ್ಸನ್ ಅವರ ಈ ಸೋಲನ್ನು ಅವರ ವೃತ್ತಿಜೀವನದ ಅತಿದೊಡ್ಡ ಸೋಲುಗಳಲ್ಲಿ ಒಂದು ಖ್ಯಾತ ಚೆಸ್ ಗ್ರ್ಯಾಂಡ್ ಮಾಸ್ಟರ್ ಸುಸಾನ್ ಪೋಲ್ಗರ್ ವಿಮರ್ಶಿಸಿದ್ದಾರೆ. ಅದೇ ಸಮಯದಲ್ಲಿ, ನಾರ್ವೆ ಚೆಸ್‌ ಟೂರ್ನಿಯಲ್ಲಿ  ಎರಡನೇ ಬಾರಿಗೆ, ಭಾರತೀಯ ಆಟಗಾರನೊಬ್ಬ ಕ್ಲಾಸಿಕ್ ಸ್ವರೂಪದಲ್ಲಿ ಕಾರ್ಲ್ಸನ್ ಅವರನ್ನು ಸೋಲಿಸಿದ್ದಾರೆ.

ಇದನ್ನೂ ಓದಿ: ಹೀಗೂ ಉಂಟೆ… ಸೋತ ದಿನವೇ ಫೈನಲ್​ಗೇರಿದ RCB ಮತ್ತು ಪಂಜಾಬ್ ಕಿಂಗ್ಸ್

ಇದಕ್ಕೂ ಮುನ್ನ ಕಳೆದ ವರ್ಷ ಆರ್ ಪ್ರಜ್ಞಾನಂದ ಅವರು ಮ್ಯಾಗ್ನಸ್ ಕಾರ್ಲ್ಸನ್ ಅವರಿಗೆ ಸೋಲಿನ ರುಚಿ ತೋರಿಸಿದ್ದರು. ಇದೀಗ ಡಿ ಗುಕೇಶ್ ಕೂಡ ವಿಶ್ವದ ನಂಬರ್ 1 ಚೆಸ್ ಚತುರನ ವಿರುದ್ಧ ಸ್ಮರಣೀಯ ಗೆಲುವು ಸಾಧಿಸಿದ್ದಾರೆ.

Published On - 9:53 am, Mon, 2 June 25

ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ