AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paris Olympics 2024: ಹಿಂದೆಂದಿಗಿಂತಲೂ ವಿಭಿನ್ನವಾಗಿರಲಿದೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ

Paris Olympics 2024 Opening Ceremony: ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವು ದೋಣಿ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ಸುಮಾರು ಮೂರು ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮೂರು ಸಾವಿರ ಕಲಾವಿದರು ಪ್ರದರ್ಶನವನ್ನು ಪ್ರಸ್ತುತಪಡಿಸಲಿದ್ದಾರೆ. ಮೇಲೆ ಹೇಳಿದಂತೆ ಉದ್ಘಾಟನಾ ಸಮಾರಂಭವು ಇಂದು ರಾತ್ರಿ 11 ರಿಂದ ಪ್ರಾರಂಭವಾಗಿ, ಮರುದಿನ ಜುಲೈ 27 ರ ರಾತ್ರಿ 2 ಗಂಟೆಗೆವರೆಗೆ ಮುಂದುವರಿಯಲ್ಲಿದೆ.

Paris Olympics 2024: ಹಿಂದೆಂದಿಗಿಂತಲೂ ವಿಭಿನ್ನವಾಗಿರಲಿದೆ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ
ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ
ಪೃಥ್ವಿಶಂಕರ
|

Updated on: Jul 26, 2024 | 3:21 PM

Share

ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಪ್ಯಾರಿಸ್‌ನಲ್ಲಿ ನಡೆಯಲಿರುವ 33ನೇ ಆವೃತ್ತಿಯ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಇಂದು ಅಂದರೆ ಜುಲೈ 26 ರಂದು ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಸಮಾರಂಭ ರಾತ್ರಿ 11 ಗಂಟೆಗೆ ಶುರುವಾಗಲಿದೆ. ವಾಸ್ತವವಾಗಿ ಫ್ರಾನ್ಸ್ ಈ ಕ್ರೀಡಾಕೂಟವನ್ನು ಆಯೋಜಿಸುತ್ತಿರುವುದು ಇದು ಮೂರನೇ ಬಾರಿ. ಹೀಗಾಗಿ ಈ ಕ್ರೀಡಾಕೂಟವನ್ನು ಇನ್ನಷ್ಟು ವಿಶೇಷಗೊಳಿಸುವ ಸಲುವಾಗಿ ಆಯೋಜಕರು ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ. ಸಾಮಾನ್ಯವಾಗಿ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದಲ್ಲಿ ನಡೆಯುವುದು ವಾಡಿಕೆ. ಆದರೆ ಪ್ಯಾರಿಸ್​ನಲ್ಲಿ ಈ ವಾಡಿಕೆಯನ್ನು ಬದಲಾಯಿಸಲು ಚಿಂತಿಸಲಾಗಿದೆ. ಅದರಂತೆ ಇಂದು ನಡೆಯಲಿರುವ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದಲ್ಲಿ ನಡೆಯದೆ ಸೀನ್ ನದಿಯ ಮೇಲೆ ನಡೆಯಲಿದೆ.

ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವು ದೋಣಿ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ. ಸುಮಾರು ಮೂರು ಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮೂರು ಸಾವಿರ ಕಲಾವಿದರು ಪ್ರದರ್ಶನವನ್ನು ಪ್ರಸ್ತುತಪಡಿಸಲಿದ್ದಾರೆ. ಮೇಲೆ ಹೇಳಿದಂತೆ ಉದ್ಘಾಟನಾ ಸಮಾರಂಭವು ಇಂದು ರಾತ್ರಿ 11 ರಿಂದ ಪ್ರಾರಂಭವಾಗಿ, ಮರುದಿನ ಜುಲೈ 27 ರ ರಾತ್ರಿ 2 ಗಂಟೆಗೆವರೆಗೆ ಮುಂದುವರಿಯಲ್ಲಿದೆ. ಈ ಮೂಲಕ ಈ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಇನ್ನು ಈ ಕ್ರೀಡಾಕೂಟದಲ್ಲಿ ಭಾರತದಿಂದ ಒಟ್ಟು 117 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ ಮಳೆಯ ಆತಂಕ

ಶುಕ್ರವಾರದಂದು ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿರುವುದರಿಂದ ಸೀನ್ ನದಿಯಲ್ಲಿ ನಡೆಯಲ್ಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನ ವಿಶಿಷ್ಟ ಉದ್ಘಾಟನಾ ಸಮಾರಂಭಕ್ಕೆ ಮಳೆ ಅಡ್ಡಿಪಡಿಸಬಹದು. ಫ್ರೆಂಚ್ ಹವಾಮಾನ ಇಲಾಖೆ Meteo ಫ್ರಾನ್ಸ್ ಶುಕ್ರವಾರ ಬೆಳಗ್ಗೆ ಮಳೆ ಮುನ್ಸೂಚನೆ ನೀಡಿದೆ. ಮಧ್ಯಾಹ್ನದ ವೇಳೆಗೆ ವಾತಾವರಣ ಶುಭ್ರವಾಗಿದ್ದರೂ ಉದ್ಘಾಟನಾ ಸಮಾರಂಭ ನಡೆಯುವ ಸಂಜೆ ವೇಳೆಗೆ ಮಳೆ ಬೀಳಬಹುದು. ಆದರೆ ಮಳೆ ಬಂದರೂ ನಿಗದಿಯಂತೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಮೆರವಣಿಗೆಯಲ್ಲೂ ವಿಭಿನ್ನತೆ

ಸಾಮಾನ್ಯವಾಗಿ ಕ್ರೀಡಾಪಟುಗಳು ಸಾಂಪ್ರದಾಯಿಕವಾಗಿ ಕ್ರೀಡಾಂಗಣದಲ್ಲಿ ಮೆರವಣಿಗೆ ತೆರಳುತ್ತಾರೆ. ಆದರೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಥ್ಲೀಟ್​ಗಳು 90 ಕ್ಕೂ ಹೆಚ್ಚು ದೋಣಿಗಳಲ್ಲಿ ಸೀನ್ ನದಿಯ ಮೇಲೆ ಆರು ಕಿಲೋಮೀಟರ್‌ಗಳಷ್ಟು ಪರೇಡ್ ಮಾಡುತ್ತಾರೆ. ಈ ಸಮಯದಲ್ಲಿ, ನೂರಾರು ಪ್ರೇಕ್ಷಕರು ನದಿಯ ದಡದಲ್ಲಿ ಉಪಸ್ಥಿತರಿದ್ದು ಅವರನ್ನು ಹುರಿದುಂಬಿಸುತ್ತಾರೆ. ಪ್ರತಿ ರಾಷ್ಟ್ರೀಯ ನಿಯೋಗದ ದೋಣಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವೀಕ್ಷಕರು ತಮ್ಮ ನೆಚ್ಚಿನ ಆಟಗಾರರನ್ನು ತೀರ ಹತ್ತಿರದಿಂದ ವೀಕ್ಷಿಸಬಹುದು.

ಈ ಬಾರಿ ಲಿಂಗ ಸಮಾನತೆ

ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಲಿಂಗ ಸಮಾನತೆಗೆ ಹೆಚ್ಚು ಆಧ್ಯತೆ ನೀಡಲಾಗಿದೆ. ಅಂದರೆ ಒಲಿಂಪಿಕ್ಸ್​ನಲ್ಲಿ ಪಾಲ್ಗೊಳ್ಳುತ್ತಿರುವ ಒಟ್ಟು 10,500 ಸ್ಪರ್ಧಿಗಳಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಆಗಸ್ಟ್ 11 ರವರೆಗೆ ನಡೆಯುವ ಪ್ಯಾರಿಸ್ ಕ್ರೀಡಾಕೂಟದ ಸಾಂಪ್ರದಾಯಿಕ ಸಮಾರೋಪ ಸಮಾರಂಭವು ಪುರುಷರ ಮ್ಯಾರಥಾನ್ ಬದಲಿಗೆ ಮಹಿಳೆಯರ ಮ್ಯಾರಥಾನ್‌ನೊಂದಿಗೆ ನಡೆಯಲಿದೆ. ಈ ಬಾರಿ ನಡೆಯುತ್ತಿರುವ 32ಕ್ರೀಡೆಗಳ ಪೈಕಿ 28 ಕ್ರೀಡೆಗಳಲ್ಲಿ ಮಹಿಳೆಯರೂ ಭಾಗವಹಿಸಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು