AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 10 ಗೋಲುಗಳು… ಫ್ರಾನ್ಸ್ ಪಡೆಯ ಪರಾಕ್ರಮ

FIFA World Cup 2026 France: 2026ರ ಫಿಫಾ ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ 10 ಗೋಲುಗಳನ್ನು ಬಾರಿಸಿ ಅಜೇಯವಾಗಿ ಮುನ್ನುಗ್ಗಿರುವ 'ಲೆ ಬ್ಲೂಸ್' ಫ್ರಾನ್ಸ್ ತಂಡ, ಈಗ ಅಸಲಿ ಆಟಕ್ಕೆ ಸಜ್ಜಾಗಿದೆ. ಅಂದರೆ ಜೂನ್ 30ರ ಮಂಗಳವಾರದಂದು ನ್ಯೂಜೆರ್ಸಿಯ ಪ್ರತಿಷ್ಠಿತ ಮೆಟ್‌ಲೈಫ್ ಸ್ಟೇಡಿಯಂನಲ್ಲಿ 'ರೌಂಡ್ ಆಫ್ 32' ನಾಕೌಟ್ ಪಂದ್ಯದಲ್ಲಿ ಫ್ರಾನ್ಸ್ ತಂಡವು ಬಲಿಷ್ಠ ಸ್ವೀಡನ್ ಸವಾಲನ್ನು ಎದುರಿಸಲಿದೆ. 

ಬರೋಬ್ಬರಿ 10 ಗೋಲುಗಳು... ಫ್ರಾನ್ಸ್ ಪಡೆಯ ಪರಾಕ್ರಮ
FranceImage Credit source: ANI
ಝಾಹಿರ್ ಯೂಸುಫ್
|

Updated on: Jun 27, 2026 | 10:36 AM

Share

FIFA World Cup 2026: ಫಿಫಾ ವಿಶ್ವಕಪ್ 2026 ರಲ್ಲಿ ಫ್ರಾನ್ಸ್ ಪಡೆಯ ಪ್ರರಾಕ್ರಮ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ ಇರಾಕ್ ವಿರುದ್ಧ 3-0 ಅಂತರದಿಂದ ಗೆದ್ದಿದ್ದ ಲೆ ಬ್ಲೂಸ್ ಇದೀಗ ಬಲಿಷ್ಠ ನಾರ್ವೆಯನ್ನು 4-1 ಅಂತರದಿಂದ ಮಣಿಸಿದೆ. ಈ ಭರ್ಜರಿ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ನಾಕೌಟ್ ಹಂತಕ್ಕೇರಿದೆ.

ಫ್ರಾನ್ಸ್​ ಐತಿಹಾಸಿಕ ಸಾಧನೆ:

ಫ್ರಾನ್ಸ್ ತಂಡವು ಬರೋಬ್ಬರಿ 28 ವರ್ಷಗಳ ಬಳಿಕ ತನ್ನ ಗ್ರೂಪ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿದೆ. ಇದಕ್ಕೂ ಮುನ್ನ 1998 ರಲ್ಲಿ ಗ್ರೂಪ್ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಅಂದು ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಫ್ರಾನ್ಸ್ ಇದೀಗ ಮತ್ತೊಮ್ಮೆ ಅದೇ ರೀತಿಯ ಪ್ರಚಂಡ ಲಯವನ್ನು ಪ್ರದರ್ಶಿಸುತ್ತಿದೆ.

ಬರೋಬ್ಬರಿ 10 ಗೋಲುಗಳು:

ಫ್ರಾನ್ಸ್ ತಂಡವು ಮೊದಲ ಮೂರು ಪಂದ್ಯಗಳಲ್ಲಿ ದಾಖಲಿಸಿರುವುದು ಬರೋಬ್ಬರಿ 10 ಗೋಲುಗಳು ಎಂಬುದು ವಿಶೇಷ. ಈ ವೇಳೆ ಹೊಡೆಸಿಕೊಂಡಿರುವುದು ಕೇವಲ 2 ಗೋಲುಗಳು ಮಾತ್ರ. ಇದು ಫ್ರಾನ್ಸ್​ ತಂಡದ ಮುನ್ಪಡೆಯ ಬಲಿಷ್ಠತೆಯನ್ನು ಹಾಗೂ ರಕ್ಷಣಾ ಕೋಟೆಯ ಬಲವನ್ನು ಸೂಚಿಸುತ್ತದೆ.

  • ಮೊದಲ ಪಂದ್ಯ: ಇರಾಕ್ ವಿರುದ್ಧ 3-0 ಅಂತರದ ಭರ್ಜರಿ ಜಯ.
  •  ಎರಡನೇ ಪಂದ್ಯ: ಸೆನೆಗಲ್ ವಿರುದ್ಧ 3-1 ಗೋಲುಗಳ ಜಯಭೇರಿ
  • ಮೂರನೇ ಪಂದ್ಯ: ನಾರ್ವೆ ವಿರುದ್ಧ 4-1 ಗೋಲುಗಳ ಅಮೋಘ ಗೆಲುವು.

ಎಂಬಾಪೆ ಜೊತೆ ಡೆಂಬೆಲೆ ಮಿಂಚಿನಾಟ:

ನಾರ್ವೆ ವಿರುದ್ಧದ ಪಂದ್ಯದಲ್ಲಿ ಫ್ರಾನ್ಸ್‌ನ ಸ್ಟಾರ್ ಆಟಗಾರ ಉಸ್ಮಾನೆ ಡೆಂಬೆಲೆ ಮೊದಲಾರ್ಧದಲ್ಲೇ (7ನೇ, 20ನೇ ಮತ್ತು 32ನೇ ನಿಮಿಷ) ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ್ದರು. ಇದಾದ ಬಳಿಕ ಪಂದ್ಯದ ಕೊನೆಯ ಕ್ಷಣದಲ್ಲಿ (90+4′ ನಿಮಿಷ) ಡೆಸಿರೆ ಡೌ ಯಂಗ್ ಬ್ಯಾಕ್ ಗೋಲು ಬಾರಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಅಂದರೆ ಫ್ರಾನ್ಸ್ ತಂಡವು ಕೇವಲ ಎಂಬಾಪೆಯನ್ನು ಮಾತ್ರ ಅವಲಂಭಿಸಿಲ್ಲ. ಇತ್ತ ಎದುರಾಳಿಗಳು ಎಂಬಾಪೆಗಾಗಿ ರಣತಂತ್ರ ರೂಪಿಸುತ್ತಿದ್ದರೆ ಅತ್ತ ಕಡೆಯಿಂದ ಉಸ್ಮಾನೆ ಡೆಂಬೆಲೆ, ಡೆಸಿರೆ ಡೌ ಅಟ್ಯಾಕಿಂಗ್ ಆಟದೊಂದಿಗೆ ಎದುರಾಳಿಗಳಿಗೆ ಚಳ್ಳೆಹಣ್ಣು ತಿನ್ನುಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ನಾರ್ವೆ ವಿರುದ್ಧದ ಪಂದ್ಯ.

ನಾರ್ವೆ ತಂಡದ ಡಿಫೆಂಡರ್​ಗಳು ಸೆಂಟರ್ ಫಾರ್ವರ್ಡ್​ನಲ್ಲಿ ಕಿಲಿಯನ್ ಎಂಬಾಪೆಯತ್ತ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದರು. ಆದರೆ ಗೋಲು ಬಾರಿಸಿದ್ದು ರೈಟ್ ವಿಂಗ್​ನಲ್ಲಿದ್ದ ಉಸ್ಮಾನೆ ಡೆಂಬೆಲೆ. ಇಲ್ಲಿ ಎಂಬಾಪೆ ಗೋಲು ಬಾರಿಸುವ ಬದಲು ಎರಡು ಅಸಿಸ್ಟ್​ಗಳನ್ನು ನೀಡಿದ್ದು ವಿಶೇಷ. ಅಂದರೆ ಎದುರಾಳಿಗಳ ತಂತ್ರಕ್ಕೆ ರಣತಂತ್ರ ರೂಪಿಸುವಲ್ಲಿ ಫ್ರಾನ್ಸ್ ಯಶಸ್ವಿಯಾಗಿದೆ ಎನ್ನಬಹುದು.

  • ಕಿಲಿಯನ್ ಎಂಬಾಪೆ: 4 ಗೋಲುಗಳು, 3 ಅಸಿಸ್ಟ್‌ಗಳು
  • ಉಸ್ಮಾನೆ ಡೆಂಬೆಲೆ: 4 ಗೋಲುಗಳು, 1 ಅಸಿಸ್ಟ್

ಫ್ರಾನ್ಸ್ ಎದುರಾಳಿ ಯಾರು?

ನಾರ್ವೆ ತಂಡವನ್ನು 4-1 ಗೋಲುಗಳಿಂದ ಸೋಲಿಸಿದ ಫ್ರಾನ್ಸ್, ತನ್ನ ಗ್ರೂಪ್‌ ಐ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ. ನಾಕೌಟ್ (ರೌಂಡ್ ಆಫ್ 32) ಹಂತದಲ್ಲಿ ಫ್ರಾನ್ಸ್ ತಂಡವು ಸ್ವೀಡನ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ: ಕೋಚ್ ಚಿಂತಿಸಬೇಡಿ, ಮ್ಯಾಚ್ ಮುಗೀತು! ಇದು ವೈಭವ್ ಆತ್ಮ ವಿಶ್ವಾಸದ ಕಥೆ!

ಸ್ವೀಡನ್ ವಿರುದ್ಧ ಕೂಡ ಫ್ರಾನ್ಸ್ ಪಡೆ ಗೆದ್ದರೆ ಮುಂದಿನ ಹಂತದಲ್ಲಿ (ರೌಂಡ್ ಆಫ್ 16) ಜರ್ಮನಿ ಅಥವಾ ಪರಾಗ್ವೆ ತಂಡವನ್ನು ಎದುರಿಸುವ ಸಾಧ್ಯತೆ ಇದೆ.

Follow Us
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಈ ರಾಶಿಯವರಿಗೆ ಇಂದು ಅದೃಷ್ಟ ಕೂಡಿ ಬರಲಿದೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಚಿಕ್ಕಬಳ್ಳಾಪುರ: ಅನ್ನಭಾಗ್ಯ ಯೋಜನೆಯ ಗೋಧಿ ಅಕ್ರಮ ಸಾಗಾಟ, 14 ಟನ್ ವಶಕ್ಕೆ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ