GPBL: ಕನಿಷ್ಠ ವೇತನ ಖಾತರಿಪಡಿಸಿದ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್

GPBL 2023: ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಈ ಬಾರಿ ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್, ಲಕ್ನೋ, ಪುಣೆ, ನಾರ್ತ್​ ಈಸ್ಟ್, ಮುಂಬೈ, ರಾಯ್‌ಪುರ ಮತ್ತು ಕೊಚ್ಚಿ ಸೇರಿದಂತೆ 10 ತಂಡಗಳು 1 ಕೋಟಿ ರೂಪಾಯಿ ನಗದು ಬಹುಮಾನಕ್ಕಾಗಿ ಸ್ಪರ್ಧಿಸಲಿವೆ.

GPBL: ಕನಿಷ್ಠ ವೇತನ ಖಾತರಿಪಡಿಸಿದ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್
GPBL
Follow us
TV9 Web
| Updated By: ಝಾಹಿರ್ ಯೂಸುಫ್

Updated on:Mar 29, 2023 | 7:34 PM

ಬಹುನಿರೀಕ್ಷಿತ ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್ (GPBL) ಎರಡನೇ ಸೀಸನ್​ಗಾಗಿ ಸಜ್ಜಾಗುತ್ತಿದೆ. ವಿಶೇಷ ಎಂದರೆ ಈ ಬಾರಿ ಆಟಗಾರರಿಗೆ ವೇತನ ಪ್ಯಾಕೇಜ್ ಘೋಷಿಸಲಾಗಿದೆ. ಆಗಸ್ಟ್‌ನಲ್ಲಿ ನಡೆಯಲಿರುವ ಎರಡನೇ ಸೀಸನ್‌ GPBL ಹರಾಜು ಪಟ್ಟಿಯಲ್ಲಿ 30 ಅಂತರಾಷ್ಟ್ರೀಯ ಆಟಗಾರರು ಸೇರಿದಂತೆ ಸುಮಾರು 150 ಹೆಸರುಗಳನ್ನು ಒಳಗೊಂಡಿರಲಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಪ್ರತಿಯೊಬ್ಬ ಆಟಗಾರನು ತಂಡದಿಂದ ಖರೀದಿಸಲ್ಪಟ್ಟಿರಲಿ ಅಥವಾ ಖರೀದಿಸದಿರಲಿ, ರೂ. 25,000 ರ ಖಾತರಿ ಮೊತ್ತವನ್ನು ಪಡೆಯಲಿದ್ದಾರೆ.

ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್​ನ ಈ ಕ್ರಮವು ದೇಶದ ಯುವ ಆಟಗಾರರ ಪ್ರತಿಭೆಯನ್ನು ಉತ್ತೇಜಿಸುವ ಮತ್ತು ಪೋಷಿಸುವ ಗುರಿಯನ್ನು ಹೊಂದಿದೆ. ಅಲ್ಲದೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಪ್ರತಿಫಲವನ್ನು ನೀಡುತ್ತದೆ ಎಂದು ಖಚಿತಪಡಿಸುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜಿಪಿಬಿಎಲ್‌ನ ಪ್ರಚಾರ ಕಂಪನಿಯಾದ ಬಿಟ್ಸ್‌ಪೋರ್ಟ್‌ನ ಸಿಇಒ ಪ್ರಶಾಂತ್ ರೆಡ್ಡಿ, “ನಾವು ಲೀಗ್ ಅನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಉತ್ಸುಕರಾಗಿದ್ದೇವೆ. ಯುವ ಮತ್ತು ಪ್ರತಿಭಾವಂತ ಆಟಗಾರರಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅತ್ಯುತ್ತಮ ವೇದಿಕೆಯನ್ನು ಒದಗಿಸುವುದು ನಾವು ಬದ್ಧವಾಗಿದ್ದೇವೆ. ಹರಾಜು ಪಟ್ಟಿಯಲ್ಲಿರುವ ಎಲ್ಲಾ ಆಟಗಾರರಿಗೆ ಕನಿಷ್ಠ ವೇತನ ಪ್ಯಾಕೇಜ್ ನೀಡಲಿದ್ದೇವೆ. ಈ ಮೂಲಕ ಬ್ಯಾಡ್ಮಿಂಟನ್ ಅನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಹೆಚ್ಚಿನ ಯುವಕರನ್ನು ಪ್ರೋತ್ಸಾಹಿಸಲು ನಾವು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
Image
IPL 2023: ಮೊದಲ ಪಂದ್ಯಕ್ಕೆ 8 ಆಟಗಾರರು ಅಲಭ್ಯ..!
Image
SA vs WI, 2nd T20I: ಒಂದೇ ಪಂದ್ಯದಲ್ಲಿ 7 ವಿಶ್ವ ದಾಖಲೆಗಳು ನಿರ್ಮಾಣ..!
Image
IPL 2023 All Team Captains List: 4 ತಂಡಗಳಿಗೆ ಹೊಸ ಕ್ಯಾಪ್ಟನ್ಸ್: ಇಲ್ಲಿದೆ 10 ತಂಡಗಳ ನಾಯಕರುಗಳ ಪಟ್ಟಿ
Image
IPL 2023 All Team Jersey: ಐಪಿಎಲ್ 10 ತಂಡಗಳ ಹೊಸ ಜೆರ್ಸಿ ಅನಾವರಣ: ಇಲ್ಲಿದೆ ಫೋಟೋಸ್

ಹರಾಜು ಪಟ್ಟಿಯಲ್ಲಿರುವ ಎಲ್ಲಾ ಆಟಗಾರರಿಗೆ ಖಾತರಿಯ ವೇತನ ಪ್ಯಾಕೇಜ್ ಅನ್ನು ಪರಿಚಯಿಸುತ್ತಿರುವುದು ಇದೇ ಮೊದಲು. ಈ ಕ್ರಮವು ಆಟಗಾರರಿಗೆ ಆರ್ಥಿಕ ಭದ್ರತೆಯನ್ನು ಖಚಿತಪಡಿಸುವಲ್ಲಿ ನೆರವಾಗಲಿದೆ. ಅಲ್ಲದೆ ದೇಶದಲ್ಲಿ ಬ್ಯಾಡ್ಮಿಟನ್​ ಆಟದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರವಹಿಸಲಿದೆ ಎಂದು ಪ್ರಶಾಂತ್ ಅಭಿಪ್ರಾಯಪಟ್ಟಿದ್ದಾರೆ.

ಆಟಗಾರರಿಗೆ ಖಾತರಿಯ ವೇತನ ಪ್ಯಾಕೇಜ್‌ನ ಪರಿಚಯದೊಂದಿಗೆ, GPBL ದೇಶದಲ್ಲಿ ಬ್ಯಾಡ್ಮಿಂಟನ್ ರಂಗದಲ್ಲಿ ಕ್ರಾಂತಿಯನ್ನುಂಟು ಮಾಡಲಿದೆ. ಜೊತೆಗೆ ಯುವ ಮತ್ತು ಪ್ರತಿಭಾವಂತ ಆಟಗಾರರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಅವರ ಕನಸುಗಳನ್ನು ಸಾಧಿಸಲು ವೇದಿಕೆಯನ್ನು ಒದಗಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಗ್ರ್ಯಾಂಡ್ ಪ್ರಿಕ್ಸ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಈ ಬಾರಿ ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್, ಲಕ್ನೋ, ಪುಣೆ, ನಾರ್ತ್ ಈಸ್ಟ್, ಮುಂಬೈ, ರಾಯ್‌ಪುರ ಮತ್ತು ಕೊಚ್ಚಿ ಸೇರಿದಂತೆ 10 ತಂಡಗಳು 1 ಕೋಟಿ ರೂಪಾಯಿ ನಗದು ಬಹುಮಾನಕ್ಕಾಗಿ ಸ್ಪರ್ಧಿಸಲಿವೆ.

ಇದನ್ನೂ ಓದಿ: SA vs WI: ಬರೋಬ್ಬರಿ 517 ರನ್​: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಸೌತ್ ಆಫ್ರಿಕಾ

ಇನ್ನು ಈ ಲೀಗ್​ನಲ್ಲಿ ಸ್ಟಾರ್ ಬ್ಯಾಡ್ಮಿಟನ್ ತಾರೆಯರಾದ, ಪಿವಿ ಸಿಂಧು, ಕಿಡಂಬಿ ಶ್ರೀಕಾಂತ್, ಅಶ್ವಿನಿ ಪೊನಪ್ಪ, ಸಾಯಿ ಪ್ರಣೀತ್, ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ, ಎಚ್‌ಎಸ್ ಪ್ರಣಯ್, ಚಿರಾಗ್ ಶೆಟ್ಟಿ ಮತ್ತು ಜ್ವಾಲಾ ಗುಟ್ಟಾ ಸೇರಿದಂತೆ ಹಲವು ಖ್ಯಾತನಾಮರು ಕಣಕ್ಕಿಳಿಯಲಿದ್ದಾರೆ.

Published On - 7:34 pm, Wed, 29 March 23

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ