Good News ತಂದೆಯಾದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ!

Good News ತಂದೆಯಾದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ!

ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಪಾಂಡ್ಯಾ ಈಗ ತಂದೆಯಾಗಿದ್ದಾರೆ. ಪತ್ನಿ ನತಾಶಾ ಸ್ಟಾಂಕೋವಿಚ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನ ಚಿತ್ರವನ್ನ ತಮ್ಮ ಟ್ವಿಟರ್ ಮತ್ತು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರೋ ಪಾಂಡ್ಯಾ, ನಮ್ಮ ಮನೆಯಲ್ಲಿ ಗಂಡು ಮಗು ಜನಿಸಿದೆ ಎಂದಷ್ಟೇ ಬರೆದುಕೊಂಡಿದ್ದಾರೆ. ಆದ್ರೆ ತಮ್ಮ ಪುತ್ರನ ಮುಖವನ್ನ ಮಾತ್ರ ಮರೆಮಾಚಿದ್ದಾರೆ. ಇದಕ್ಕೂ ಮೊದಲು ಹಾರ್ದಿಕ್ ಅವರ ಮನೆಯಲ್ಲಿ ನತಾಶಾಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನತಾಶಾ ಹಸಿರು ಬಣ್ಣದ […]

KUSHAL V

| Edited By: sadhu srinath

Jul 31, 2020 | 2:33 PM

ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಪಾಂಡ್ಯಾ ಈಗ ತಂದೆಯಾಗಿದ್ದಾರೆ. ಪತ್ನಿ ನತಾಶಾ ಸ್ಟಾಂಕೋವಿಚ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನ ಚಿತ್ರವನ್ನ ತಮ್ಮ ಟ್ವಿಟರ್ ಮತ್ತು ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರೋ ಪಾಂಡ್ಯಾ, ನಮ್ಮ ಮನೆಯಲ್ಲಿ ಗಂಡು ಮಗು ಜನಿಸಿದೆ ಎಂದಷ್ಟೇ ಬರೆದುಕೊಂಡಿದ್ದಾರೆ. ಆದ್ರೆ ತಮ್ಮ ಪುತ್ರನ ಮುಖವನ್ನ ಮಾತ್ರ ಮರೆಮಾಚಿದ್ದಾರೆ.

ಇದಕ್ಕೂ ಮೊದಲು ಹಾರ್ದಿಕ್ ಅವರ ಮನೆಯಲ್ಲಿ ನತಾಶಾಗೆ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನತಾಶಾ ಹಸಿರು ಬಣ್ಣದ ಉಡುಗೆ ಧರಿಸಿದ್ದರು. ನತಾಶಾಳ ಈ ಫೋಟೋಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸೀಮಂತ ಕಾರ್ಯಕ್ರಮದಲ್ಲಿ ಪಾಂಡ್ಯಾ ಹಿರಿಯ ಅಣ್ಣ ಕೃನಾಲ್ ಪಾಂಡ್ಯಾ, ಅತ್ತಿಗೆ ಪಾಖುಂಡಿ ಶರ್ಮಾ ಕೂಡ ಪಾಲ್ಗೊಂಡಿದ್ರು.

ಜನವರಿ 1, 2020 ರಂದು ಪಾಂಡ್ಯಾ ಸರ್ಬಿಯಾದ ಪ್ರಜೆ ಹಾಗೂ ಬಾಲಿವುಡ್ ನಟಿಯಾಗಿರುವ ನತಾಶಾ ಸ್ಟಾಂಕೋವಿಚ್ ಜೊತೆ ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದರು. ಈ ವೇಳೆ ಶೀರ್ಷಿಕೆ ಬರೆದುಕೊಂಡಿದ್ದ ಹಾರ್ದಿಕ್ ಪಾಂಡ್ಯಾ ಮೈ ತೇರಾ, ತೂ ಮೇರಿ ಜಾನೆ, ಸಾರಾ ಹಿಂದುಸ್ತಾನ್’ ಎಂದಿದ್ರು.

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಆಗಿರೋ 26 ವರ್ಷದ ಪಾಂಡ್ಯಾ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿ ಈಗ ಫಿಟ್ ಆಗಿದ್ದಾರೆ. ಈ ಬಾರಿಯ IPLನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ರೆಡಿಯಾಗಿದ್ದಾರೆ. ಈ ಮಧ್ಯೆ ಪುಟ್ಟ ಕಂದಮ್ಮನ ಆಗಮನ ಪಾಂಡ್ಯಾ ದಂಪತಿಯ ಸಂಭ್ರಮಕ್ಕೆ ಪಾರವೇ ಇಲ್ಲದಂತೆ ಮಾಡಿದೆ.

Follow us on

Related Stories

Most Read Stories

Click on your DTH Provider to Add TV9 Kannada