AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಮ್ ಮಾಡುವಾಗ ಉಂಟಾದ ಎಡವಟ್ಟಿನಿಂದ ರಶ್ಮಿಕಾಗೆ ಇಂಜುರಿ; ಅರ್ಧಕ್ಕೆ ನಿಂತ ಸಲ್ಲು ಸಿನಿಮಾ ಶೂಟ್

ರಶ್ಮಿಕಾ ಮಂದಣ್ಣ ಅವರಿಗೆ ಜಿಮ್‌ನಲ್ಲಿ ಗಾಯವಾಗಿದ್ದು, 'ಸಿಖಂದರ್' ಸಿನಿಮಾದ ಚಿತ್ರೀಕರಣಕ್ಕೆ ತಾತ್ಕಾಲಿಕ ತಡೆ ಉಂಟಾಗಿದೆ. ವೈದ್ಯರ ಸಲಹೆಯಂತೆ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಪುಷ್ಪ 2 ಚಿತ್ರದ ಯಶಸ್ಸಿನ ನಂತರ, ರಶ್ಮಿಕಾ ಅವರು ಸಲ್ಮಾನ್ ಖಾನ್ ಜೊತೆಗಿನ 'ಸಿಖಂದರ್' ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಗಾಯದಿಂದಾಗಿ ಚಿತ್ರೀಕರಣ ನಿಂತಿದ್ದರೂ ಶೀಘ್ರವೇ ಚೇತರಿಸಿಕೊಂಡು ಮತ್ತೆ ಸೆಟ್‌ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಮ್ ಮಾಡುವಾಗ ಉಂಟಾದ ಎಡವಟ್ಟಿನಿಂದ ರಶ್ಮಿಕಾಗೆ ಇಂಜುರಿ; ಅರ್ಧಕ್ಕೆ ನಿಂತ ಸಲ್ಲು ಸಿನಿಮಾ ಶೂಟ್
ರಶ್ಮಿಕಾ-ಸಲ್ಮಾನ್
ರಾಜೇಶ್ ದುಗ್ಗುಮನೆ
|

Updated on: Jan 11, 2025 | 11:49 AM

Share

ರಶ್ಮಿಕಾ ಮಂದಣ್ಣ ಅವರು ನಿತ್ಯವೂ ಬಿಡದೇ ಜಿಮ್ ಮಾಡುತ್ತಾರೆ. ಈ ಮೂಲಕ ಫಿಟ್ನೆಸ್ ಕಾಯ್ದುಕೊಳ್ಳುತ್ತಾ ಇದ್ದಾರೆ. ಆದರೆ, ಈಗ ಜಿಮ್ ಮಾಡುವಾಗ ಎಡವಟ್ಟು ಸಂಭವಿಸಿ ಹೋಗಿದೆ. ಅವರಿಗೆ ಜಿಮ್ ಮಾಡುವಾಗ ಗಾಯ ಆಗಿದೆ. ಈ ಕಾರಣಕ್ಕೆ ವಿಶ್ರಾಂತಿಗೆ ಕೋರಲಾಗಿದೆ. ಹೀಗಾಗಿ, ವಿಶ್ರಾಂತಿ ಬಳಿಕ ಸಿನಿಮಾ ಕೆಲಸಕ್ಕೆ ಮರಳಲಿದ್ದಾರೆ. ಈ ಕಾರಣಕ್ಕೆ ಸಲ್ಮಾನ್ ಖಾನ್ ನಟನೆಯ ‘ಸಿಖಂದರ್’ ಸಿನಿಮಾ ಶೂಟ್​ನ ಅರ್ಧಕ್ಕೆ ನಿಲ್ಲಿಸಲಾಗಿದೆ.

ಸದ್ಯ ರಶ್ಮಿಕಾ ಅವರಿಗೆ ಎಷ್ಟು ತೀವ್ರತೆಯಲ್ಲಿ ಗಾಯ ಆಗಿದೆ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿತ್ತು. ಇದಕ್ಕೆ ರಶ್ಮಿಕಾ ಅವರ ಆಪ್ತ ಮೂಲಗಳಿಂದ ಉತ್ತರ ಸಿಕ್ಕಿದೆ. ‘ಜಿಮ್ ಮಾಡುವಾಗ ರಶ್ಮಿಕಾಗೆ ಇಂಜುರಿ ಆಗಿದೆ. ಸದ್ಯ ಅವರು ರಿಕವರಿ ಆಗುತ್ತಿದ್ದು, ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ಈ ಕಾರಣಕ್ಕೆ ಅವರ ಮುಂದಿನ ಸಿನಿಮಾಗಳ ಕೆಲಸಗಳನ್ನು ನಿಲ್ಲಿಸಲಾಗಿದೆ. ಅವರು ಈಗ ಚೇತರಿಕೆ ಕಾಣುತ್ತಿದ್ದು, ಶೀಘ್ರವೇ ಸೆಟ್​ಗೆ ಮರಳಲಿದ್ದಾರೆ’ ಎನ್ನುತ್ತಿವೆ ಆಪ್ತ ಮೂಲಗಳು.

ರಶ್ಮಿಕಾ ಮಂದಣ್ಣ ಅವರು ಸದ್ಯ ‘ಪುಷ್ಪ 2’ ಸಕ್ಸಸ್​​ನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಬರೋಬ್ಬರಿ 1900 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇಂದಿನಿಂದ (ಜನವರಿ 11) ಸಿನಿಮಾಗೆ ಹೆಚ್ಚುವರಿಯಾಗಿ 20 ನಿಮಿಷಗಳು ಸೇರ್ಪಡೆ ಆಗಿದ್ದು, ಸಿನಿಮಾದ ಅವಧಿ 3 ಗಂಟೆ 40 ನಿಮಿಷ ಆಗಲಿದೆ. ರಶ್ಮಿಕಾ ಪಾತ್ರಕ್ಕೂ ಭರ್ಜರಿ ಬೇಡಿಕೆ ಇದೆ.

ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ಅವರು ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ವರ್ಷ ಈದ್​ಗೆ ಸಿನಿಮಾ ರಿಲೀಸ್ ಆಗಬೇಕಿದೆ. ಇನ್ನು ಕೆಲವೇ ತಿಂಗಳಲ್ಲಿ ಚಿತ್ರ ತೆರೆಗೆ ಬರುವುದರಲ್ಲಿ ಇದೆ. ಈ ಚಿತ್ರಕ್ಕೆ ಎಆರ್​ ಮುರುಗದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ದೊಡ್ಡ ಬಜೆಟ್​ನಲ್ಲಿ ರೆಡಿ ಆಗುತ್ತಿದೆ.

ಇದನ್ನೂ ಓದಿ: ಅರ್ಧಕ್ಕೆ ನಿಂತೋಯ್ತು ಸಲ್ಮಾನ್ ಖಾನ್-ರಶ್ಮಿಕಾ ನಟನೆಯ ‘ಸಿಖಂದರ್’ ಶೂಟಿಂಗ್?

‘ಸಿಖಂದರ್’ ಸಿನಿಮಾ ಶೂಟ್ ತಮ್ಮ ಕಾರಣದಿಂದ ನಿಂತಿರುವುದಕ್ಕೆ ಅವರಿಗೆ ಬೇಸರ ಇದೆ. ಈ ಕಾರಣಕ್ಕೆ ಅವರು ಸಿನಿಮಾ ಕೆಲಸಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಆದರೆ, ಇವುಗಳ ಮಧ್ಯೆ ಅವರು ಆರೋಗ್ಯಕ್ಕೂ ಗಮನ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.