2 ಬಾರಿ ಚೆಸ್ ವಿಶ್ವಕಪ್ ಗೆದ್ದಿದ್ದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್

Viswanathan Anand: ವಿಶ್ವನಾಥನ್ ಆನಂದ್ ಅವರ ಈ ಕ್ರಾಂತಿಯ ಹೊಸ ಅಧ್ಯಾಯದೊಂದಿಗೆ ಆರ್​. ಪ್ರಜ್ಞಾನಂದ ಚದುರಂಗದಾಟದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಅಲ್ಲದೆ ತಮ್ಮ 18ನೇ ವಯಸ್ಸಿನಲ್ಲೇ ಚೆಸ್​ ವಿಶ್ವಕಪ್​ನಲ್ಲಿ ಫೈನಲ್​ಗೇರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

2 ಬಾರಿ ಚೆಸ್ ವಿಶ್ವಕಪ್ ಗೆದ್ದಿದ್ದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್
Viswanathan Anand
Follow us
| Updated By: ಝಾಹಿರ್ ಯೂಸುಫ್

Updated on: Aug 24, 2023 | 5:29 PM

ವಿಶ್ವ ಚಾಂಪಿಯನ್​ ವಿಶ್ವನಾಥನ್ ಆನಂದ್…ಭಾರತದಲ್ಲಿ ಏಕಾಂಗಿಯಾಗಿ ಚೆಸ್ ಕ್ರಾಂತಿಯನ್ನು ಹುಟ್ಟುಹಾಕಿದ ಚದುರಂಗ ಚತುರ ಎಂದರೆ ತಪ್ಪಾಗಲಾರದು. ಏಕೆಂದರೆ ಚೆಸ್​ ಅನ್ನು ಜಗತ್ತಿಗೆ ಪರಿಚಯಿಸಿದ ಭಾರತೀಯರಾದರೂ, ಚದುರಂಗದಾಟದಲ್ಲಿ ಜಾಣ್ಮೆಯ ನಡೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಪಾತಾಕೆಯನ್ನು ಹಾರಿಸಿದ್ದು ವಿಶ್ವನಾಥನ್ ಆನಂದ್.

ವಿಶ್ವ ವಿಖ್ಯಾತ ಚದುರಂಗ ಚತುರರು ಎನಿಸಿಕೊಂಡಿದ್ದ ಉಕ್ರೇನ್​ನ ರುಸ್ಲಾನ್ ಪೊನೊಮರಿವ್, ರಷ್ಯಾದ ವ್ಲಾಡಿಮಿರ್ ಬೊರಿಸೊವಿಚ್ ಕ್ರಾಮ್ನಿಕ್ ಅವರಿಗೆ ಸೋಲುಣಿಸುವ ಮೂಲಕ ವಿಶ್ವನಾಥನ್ ಆನಂದ್ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದರು. ಈ ಅಧ್ಯಾಯದ ಮುಂದುವರೆದ ಭಾಗ ಇದೀಗ 18ರ ಹರೆಯದ ರಮೇಶ್​ಬಾಬು ಪ್ರಜ್ಞಾನಂದ ಅವರ ಫೈನಲ್​ ಸಾಧನೆ.

ಆದರೆ ಆರ್​. ಪ್ರಜ್ಞಾನಂದ ಚೆಸ್ ವಿಶ್ವಕಪ್​ನಲ್ಲಿ ಫೈನಲ್​ಗೇರುವ 20 ವರ್ಷಗಳ ಮುಂಚೆಯೇ ಗ್ರ್ಯಾಂಡ್ ಮಾಸ್ಟರ್​ ವಿಶ್ವನಾಥನ್ ಆನಂದ್ 2 ಬಾರಿ ಚೆಸ್ ವಿಶ್ವಕಪ್​ನಲ್ಲಿ ಚಾಂಪಿಯನ್ ಆಗಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ.

2000 ರಲ್ಲಿ ಬೀಜಿಂಗ್​ನಲ್ಲಿ ನಡೆದ ಮೊದಲ ಚೆಸ್ ವಿಶ್ವಕಪ್​ನಲ್ಲಿ ಸೋವಿಯತ್ ಒಕ್ಕೂಟದ ಎವ್ಗೆನಿ ಬರೀವ್ ಅವರನ್ನು ಮಣಿಸುವ ಮೂಲಕ ವಿಶ್ವನಾಥನ್ ಆನಂದ್ ಚೊಚ್ಚಲ ವಿಶ್ವಕಪ್​ ಗೆದ್ದಿದ್ದರು.

ಇನ್ನು 2002 ರಲ್ಲಿ ಹೈದರಾಬಾದ್​ನಲ್ಲಿ ನಡೆದ ಚೆಸ್ ವಿಶ್ವಕಪ್​ನಲ್ಲಿ ವಿಶ್ವನಾಥನ್ ಆನಂದ್ ಚಾಂಪಿಯನ್ ಪಟ್ಟದೊಂದಿಗೆ ಕಾಣಿಸಿಕೊಂಡಿದ್ದರು. ಅಲ್ಲದೆ ಫೈನಲ್​ನಲ್ಲಿ ಸೋವಿಯತ್ ಒಕ್ಕೂಟ ಗ್ರ್ಯಾಂಡ್ ಮಾಸ್ಟರ್​ ರುಸ್ತಮ್ ಕಾಸಿಮ್ಜಾನೋವ್ ಅವರಿಗೆ ಅನಿರೀಕ್ಷಿತ ಸೋಲುಣಿಸಿ 2ನೇ ಬಾರಿಗೆ ಚಾಂಪಿಯನ್​ ಆಗಿ ಹೊರಹೊಮ್ಮಿದ್ದರು.

ಈ ಎರಡು ವಿಶ್ವ ಚಾಂಪಿಯನ್ ಪಟ್ಟಕ್ಕಿಂತಲೂ ಮುನ್ನ ವಿಶ್ವನಾಥನ್ ಆನಂದ್ 1998 ರಲ್ಲಿ ಏಷ್ಯನ್ ಚಾಂಪಿಯನ್ ಆಗಿದ್ದರು. ಹಾಗೆಯೇ ಚೆಸ್ ವಿಶ್ವಕಪ್ ಅಲ್ಲದೆ ವಿಶ್ವನಾಥನ್ ಆನಂದ್ ಅವರು 2007, 2008, 2010, 2012 ರಲ್ಲಿ ಕ್ಲಾಸಿಕ್ ವರ್ಲ್ಡ್​ ಚಾಂಪಿಯನ್​ಶಿಪ್​ನಲ್ಲಿ 4 ಬಾರಿ ವಿಶ್ವ ಚಾಂಪಿಯನ್​ ಆಗಿ ಹೊರಹೊಮ್ಮಿದ್ದರು.

ಇದೀಗ ಈ ಕ್ರಾಂತಿಯ ಹೊಸ ಅಧ್ಯಾಯದೊಂದಿಗೆ ಆರ್​. ಪ್ರಜ್ಞಾನಂದ ಚದುರಂಗದಾಟದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ತಮ್ಮ 18ನೇ ವಯಸ್ಸಿನಲ್ಲೇ ಚೆಸ್​ ವಿಶ್ವಕಪ್​ನಲ್ಲಿ ಫೈನಲ್​ಗೇರುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ವಿಶ್ವ ಚೆಸ್​ನಲ್ಲಿ ಭಾರತೀಯರ ಪಾರುಪತ್ಯ:

ಅಝರ್​ಬೈಜಾನ್​ನಲ್ಲಿ ನಡೆದ ಈ ಬಾರಿಯ ಚೆಸ್ ವಿಶ್ವಕಪ್​ನ ಕ್ವಾರ್ಟರ್​ಫೈನಲ್​ನಲ್ಲಿ ನಾಲ್ವರು ಭಾರತೀಯರು ಕಾಣಿಸಿಕೊಂಡಿದ್ದರು ಎಂಬುದು ವಿಶೇಷ. ಡಿ ಗುಕೇಶ್ , ಅರ್ಜುನ್ ಎರಿಗೈಸಿ, ವಿದಿತ್ ಗುಜರಾತಿ ಮತ್ತು ಆರ್​. ಪ್ರಜ್ಞಾನಂದ ಅತ್ಯುತ್ತಮ ಪ್ರದರ್ಶನದ ಮೂಲಕ ನಿರ್ಣಾಯಕ ಹಂತಕ್ಕೇರಿದ್ದರು. ಇವರಲ್ಲಿ ಜಾಣ ನಡೆಯೊಂದಿಗೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತ ಆರ್​. ಪ್ರಜ್ಞಾನಂದ ವಿಶ್ವಕಪ್​ ಫೈನಲ್​ ಆಡಿದ್ದರು.

ಆದರೆ ಅಂತಿಮ ಹಣಾಹಣಿಯಲ್ಲಿ ಮ್ಯಾಗ್ನಸ್ ಕಾರ್ಲ್​ಸೆನ್ ವಿರುದ್ದ ವಿರೋಚಿತವಾಗಿ ಸೋಲೊಪ್ಪಿಕೊಳ್ಳಬೇಕಾಯಿತು. ಇದಾಗ್ಯೂ ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್​ನಲ್ಲಿ ಫೈನಲ್ ಪ್ರವೇಶಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಆರ್​. ಪ್ರಜ್ಞಾನಂದ ಪಾತ್ರರಾಗಿದ್ದಾರೆ.

ತಾಜಾ ಸುದ್ದಿ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ