AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ಎಸೆತಗಳಲ್ಲಿ ಎರಡು ಕ್ಯಾಚ್ ಮಿಸ್; ರೋಹಿತ್-ಇಶಾನ್ ಎಡವಟ್ಟಿಗೆ ಆಕಿಬ್ ನಬಿಗೆ ಸಿಗದ ವಿಕೆಟ್

ಭಾರತ-ನ್ಯೂಜಿಲೆಂಡ್ ಏಕದಿನ ಪಂದ್ಯದಲ್ಲಿ ಆಕಿಬ್ ನಬಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಅವರ ಎರಡನೇ ಓವರ್‌ನಲ್ಲಿ ನ್ಯೂಜಿಲೆಂಡ್‌ನ ವಿಲ್ ಯಂಗ್ ಅವರನ್ನು ಔಟ್ ಮಾಡುವ ಎರಡು ಸ್ಪಷ್ಟ ಅವಕಾಶಗಳನ್ನು ನಬಿ ಸೃಷ್ಟಿಸಿದರು. ಆದರೆ ಸುಲಭ ಕ್ಯಾಚ್‌ಗಳನ್ನು ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಕೈಚೆಲ್ಲಿದರು. ಹೀಗಾಗಿ ನಬಿ ವಿಕೆಟ್ ವಂಚಿತರಾಗಿ, ಭಾರತಕ್ಕೆ ಆರಂಭದಲ್ಲೇ ಸಿಗಬೇಕಿದ್ದ ಯಶಸ್ಸು ಕೈತಪ್ಪಿತು.

ಎರಡು ಎಸೆತಗಳಲ್ಲಿ ಎರಡು ಕ್ಯಾಚ್ ಮಿಸ್; ರೋಹಿತ್-ಇಶಾನ್ ಎಡವಟ್ಟಿಗೆ ಆಕಿಬ್ ನಬಿಗೆ ಸಿಗದ ವಿಕೆಟ್
ರೋಹಿತ್ ಶರ್ಮಾ, ಇಶಾನ್ ಕಿಶನ್
ಪೃಥ್ವಿಶಂಕರ
|

Updated on: Nov 13, 2026 | 8:51 AM

Share

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಹೀಗಾಗಿ ಮೊದಲು ಬೌಲಿಂಗ್ ಆರಂಭಿಸಿದ ಭಾರತಕ್ಕೆ ಎರಡನೇ ಓವರ್​ನಲ್ಲೇ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ ವಿಕೆಟ್‌ಕೀಪರ್ ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಆ ಎರಡು ಅವಕಾಶಗಳನ್ನು ಕೈಚೆಲ್ಲಿದರು. ಪಂದ್ಯದ ಆರಂಭದಲ್ಲೇ ಬೌಲಿಂಗ್‌ಗೆ ಇಳಿದ ಆಕಿಬ್ ನಬಿ ತಮ್ಮ ಎರಡನೇ ಓವರ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಆದರೆ ಅವರ ಉತ್ತಮ ಬೌಲಿಂಗ್‌ಗೆ ತಕ್ಕ ಫಲ ಸಿಗಲಿಲ್ಲ. ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದರೂ, ಭಾರತೀಯ ಫೀಲ್ಡರ್‌ಗಳು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು.

ನಬಿ ಬೌಲಿಂಗ್‌ಗೆ ಯಂಗ್ ಕಂಗಾಲು

ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಎರಡನೇ ಓವರ್‌ನಲ್ಲಿ ಆಕಿಬ್ ನಬಿ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಕಿವೀಸ್ ಆರಂಭಿಕ ಆಟಗಾರ ವಿಲ್ ಯಂಗ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ 12 ರನ್ ಬಿಟ್ಟುಕೊಟ್ಟಿದ್ದ ನಬಿ, ನಂತರ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದರು. ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ವಿಲ್ ಯಂಗ್ ಅವರನ್ನು ಔಟ್ ಮಾಡುವ ಎರಡು ಉತ್ತಮ ಅವಕಾಶಗಳನ್ನು ಸೃಷ್ಟಿಸಿದರು. ಆದರೆ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಇಬ್ಬರೂ ಕ್ಯಾಚ್ ಕೈಚೆಲ್ಲುವ ಮೂಲಕ ನಬಿ ಅವರ ಪ್ರಯತ್ನಕ್ಕೆ ಬೆಲೆ ಇಲ್ಲದಂತೆ ಮಾಡಿದರು.

ರೋಹಿತ್ ಕೈಗೆ ಬಂದ ಕ್ಯಾಚ್ ಮಿಸ್

ಆಕಿಬ್ ನಬಿ ಎಸೆದ ಓವರ್‌ನ ಐದನೇ ಎಸೆತ ಆಫ್ ಸ್ಟಂಪ್‌ನಿಂದ ಹೊರಗೆ ಬಿದ್ದ ಗುಡ್ ಲೆಂಗ್ತ್ ಬಾಲ್ ಆಗಿತ್ತು. ಇದನ್ನು ಎದುರಿಸಿದ ವಿಲ್ ಯಂಗ್ ಬ್ಯಾಟ್ ಬೀಸಿದಾಗ ಚೆಂಡು ಬ್ಯಾಟ್‌ನ ಅಂಚಿಗೆ ತಾಗಿ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಅವರತ್ತ ಸಾಗಿತು. ಚೆಂಡು ರೋಹಿತ್ ಅವರ ಕೈಗೆ ಸುಲಭವಾಗಿ ಸಿಗುವ ಎತ್ತರದಲ್ಲಿತ್ತು. ಆದರೆ ಅದನ್ನು ಹಿಡಿಯುವಲ್ಲಿ ಅವರು ಎಡವಿದರು. ಚೆಂಡು ಅವರ ಅಂಗೈಯಿಂದ ಜಾರಿ ಕೆಳಗೆ ಬಿದ್ದಿದ್ದರಿಂದ ವಿಲ್ ಯಂಗ್‌ಗೆ ಮತ್ತೊಂದು ಜೀವದಾನ ಸಿಕ್ಕಿತು.

ಸುಲಭ ಕ್ಯಾಚ್ ಕೈಚೆಲ್ಲಿದ ಕಿಶನ್

ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲಿದ ಬೆನ್ನಲ್ಲೇ ಆಕಿಬ್ ನಬಿ ಮತ್ತೊಂದು ಅದ್ಭುತ ಎಸೆತದ ಮೂಲಕ ವಿಲ್ ಯಂಗ್ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಈ ಬಾರಿ ಅವರು ಎಸೆದ ಔಟ್‌ಸ್ವಿಂಗರ್‌ಗೆ ಡ್ರೈವ್ ಮಾಡಲು ಹೋದ ವಿಲ್ ಯಂಗ್ ಬ್ಯಾಟ್‌ನ ಅಂಚಿಗೆ ಚೆಂಡು ತಾಗಿ ವಿಕೆಟ್ ಕೀಪರ್ ಇಶಾನ್ ಕಿಶನ್ ಅವರ ಬಲಭಾಗಕ್ಕೆ ಹೋಯಿತು. ಆದರೆ ಚೆಂಡನ್ನು ಹಿಡಿಯಲು ಮುಂದಕ್ಕೆ ಚಲಿಸುವ ಬದಲು ಇಶಾನ್ ಕಿಶನ್ ಡೈವ್ ಮಾಡಿದರು. ಈ ವೇಳೆ ಚೆಂಡು ಅವರ ಗ್ಲೌಸ್‌ಗೆ ತಾಗಿ ಕೈತಪ್ಪಿ ನೆಲಕ್ಕೆ ಬಿತ್ತು. ಹೀಗಾಗಿ ಕೇವಲ ಎರಡು ಎಸೆತಗಳ ಅಂತರದಲ್ಲಿ ವಿಲ್ ಯಂಗ್ ಎರಡು ಬಾರಿ ಔಟಾಗುವ ಅಪಾಯದಿಂದ ಪಾರಾದರು. ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಅದ್ಭುತ ಅವಕಾಶ ಸೃಷ್ಟಿಸಿದ್ದ ಆಕಿಬ್ ನಬಿ, ಫೀಲ್ಡರ್‌ಗಳ ತಪ್ಪಿನಿಂದಾಗಿ ವಿಕೆಟ್ ಪಡೆಯಲು ಸಾಧ್ಯವಾಗದೆ ನಿರಾಸೆ ಅನುಭವಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್