AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hockey Asia Cup: ಜಪಾನ್ ವಿರುದ್ಧ ಭಾರತಕ್ಕೆ ಗೆಲುವು; ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡ ಹಾಕಿ ಪಡೆ

Hockey Asia Cup: ಭಾರತ ಹಾಕಿ ತಂಡ ಗುರುವಾರ ಪ್ರಬಲ ಆಟವಾಡಿತು. ಸರಣಿಯ ಕೊನೆಯ ಪಂದ್ಯದಲ್ಲಿ ಇಂಡೋನೇಷ್ಯಾ ಸೋಲು ಕಂಡಿತ್ತು. ಭಾರತ 16-0 ಅಂತರದಲ್ಲಿ ಇಂಡೋನೇಷ್ಯಾವನ್ನು ಸೋಲಿಸಿತ್ತು.

Hockey Asia Cup: ಜಪಾನ್ ವಿರುದ್ಧ ಭಾರತಕ್ಕೆ ಗೆಲುವು; ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡ ಹಾಕಿ ಪಡೆ
ಭಾರತ ಹಾಕಿ ತಂಡ
TV9 Web
| Edited By: |

Updated on:May 28, 2022 | 8:40 PM

Share

ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಭಾರತದ ಹಾಕಿ ತಂಡ, ಜಪಾನ್ ತಂಡವನ್ನು 2-1 (IND vs JAP) ಗೋಲುಗಳಿಂದ ಸೋಲಿಸಿತು. ಈ ಹಿಂದೆ ಗುಂಪು ಹಂತದಲ್ಲಿ ಜಪಾನ್ 2-5 ಗೋಲುಗಳಿಂದ ಭಾರತವನ್ನು ಸೋಲಿಸಿತು. ಇಂದಿನ ಗೆಲುವಿನೊಂದಿಗೆ ಭಾರತ ಲೀಗ್ ಹಂತದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಭಾರತದ ಪರ ಮಂಜಿತ್ ಮತ್ತು ಪವನ್ ಎರಡು ಗೋಲು ಗಳಿಸಿದರು. ಮಂಜಿತ್ ಏಳನೇ ನಿಮಿಷದಲ್ಲಿ ಮತ್ತು ಪವನ್ 34ನೇ ನಿಮಿಷದಲ್ಲಿ ಗೋಲು ಗಳಿಸಿದರು. ಜಪಾನ್ ಪರ ಟಕುಮಾ ನಿವಾ 17ನೇ ನಿಮಿಷದಲ್ಲಿ ಗೋಲು ಗಳಿಸಿದರು. ಈ ಪಂದ್ಯದಲ್ಲಿ ಜಪಾನ್‌ಗೆ ಐದು ಪೆನಾಲ್ಟಿ ಕಾರ್ನರ್‌ಗಳನ್ನು ನೀಡಲಾಯಿತು. ಆದರೆ ಒಂದು ಪೆನಾಲ್ಟಿ ಕಾರ್ನರ್ ಅನ್ನು ಮಾತ್ರ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಭಾರತಕ್ಕೆ ಏಕೈಕ ಪೆನಾಲ್ಟಿ ಕಾರ್ನರ್ ಸಿಕ್ಕಿತು. ಆದರೆ ಅದನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.

ಭಾರತದ ಮುಂದಿನ ಪಂದ್ಯ ಮಲೇಷ್ಯಾ ವಿರುದ್ಧ

ಲೀಗ್ ಹಂತದಲ್ಲಿ ಜಪಾನ್ ತನ್ನೆಲ್ಲಾ ಪಂದ್ಯಗಳನ್ನು ಗೆದ್ದು, ಪೂಲ್ ಎ ನಲ್ಲಿ ಅಗ್ರಸ್ಥಾನದಲ್ಲಿದ್ದರು. ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ನಾಲ್ಕು ಅಂಕಗಳನ್ನು ಹೊಂದಿದ್ದವು. ಆದರೆ ದೊಡ್ಡ ಗೋಲುಗಳ ಅಂತರದಲ್ಲಿ ಭಾರತ ಸೂಪರ್ 4 ಪ್ರವೇಶಿಸಿತ್ತು. ಭಾರತದ ಹೊರತಾಗಿ ಜಪಾನ್, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ಸೂಪರ್ 4 ರಲ್ಲಿವೆ. ಈ ತಂಡಗಳು ಪರಸ್ಪರರ ವಿರುದ್ಧ ಆಡಲಿವೆ. ಅಗ್ರ ಎರಡು ತಂಡಗಳ ನಡುವೆ ಅಂತಿಮ ಪಂದ್ಯ ನಡೆಯಲಿದೆ. ಭಾರತದ ಮುಂದಿನ ಪಂದ್ಯ ಭಾನುವಾರ ಮಲೇಷ್ಯಾ ವಿರುದ್ಧ ನಡೆಯಲಿದೆ.

ಇದನ್ನೂ ಓದಿ
Image
IPL 2022 Final: 10, 20, 50 ಸಾವಿರವೂ ಅಲ್ಲ; ಅಬ್ಬಬ್ಬಾ.. ಐಪಿಎಲ್ ಫೈನಲ್ ಪಂದ್ಯಕ್ಕೆ ಟಿಕೆಟ್ ಬೆಲೆ ಇಷ್ಟೊಂದಾ..!
Image
IPL 2022: ನಾಯಕ ಬದಲಾದರೂ ಹಣೆಬರಹ ಬದಲಾಗಲಿಲ್ಲ! ಬೇಡದ ದಾಖಲೆಯೊಂದಿಗೆ ಚೆನ್ನೈ ಹಿಂದಿಕ್ಕಿದ ಆರ್​ಸಿಬಿ

ಇದನ್ನೂ ಓದಿ:Asia Cup Hockey: ಪ್ರಶಸ್ತಿ ಉಳಿಸಿಕೊಳ್ಳುವ ಕನಸು ಭಗ್ನ; ಸೆಮಿಫೈನಲ್‌ನಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ

ಬೀರೇಂದ್ರ ಲಕ್ಡಾ ತಂಡದ ನಾಯಕ

ಈ ಟೂರ್ನಿಯಲ್ಲಿ ಭಾರತದ ಹಾಕಿ ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಅನುಭವಿ ಬೀರೇಂದ್ರ ಲಕ್ಡಾ ತಂಡದ ನಾಯಕರಾಗಿದ್ದಾರೆ. ಸರ್ದಾರ್ ಸಿಂಗ್ ಕೋಚ್ ಪಾತ್ರದಲ್ಲಿದ್ದಾರೆ. ಏಷ್ಯಾಕಪ್​ನ ಕೊನೆಯ ಸೀಸನ್ 2017ರಲ್ಲಿ ನಡೆದಿತ್ತು.ಆಗ ಭಾರತ ಮಲೇಷ್ಯಾವನ್ನು ಮಣಿಸಿ ಮೂರನೇ ಬಾರಿ ಟ್ರೋಫಿ ಗೆದ್ದಿತ್ತು.

ಇದು ಇಂಡೋನೇಷ್ಯಾ ವಿರುದ್ಧದ ದೊಡ್ಡ ಗೆಲುವು

ಭಾರತ ಹಾಕಿ ತಂಡ ಗುರುವಾರ ಪ್ರಬಲ ಆಟವಾಡಿತು. ಸರಣಿಯ ಕೊನೆಯ ಪಂದ್ಯದಲ್ಲಿ ಇಂಡೋನೇಷ್ಯಾ ಸೋಲು ಕಂಡಿತ್ತು. ಭಾರತ 16-0 ಅಂತರದಲ್ಲಿ ಇಂಡೋನೇಷ್ಯಾವನ್ನು ಸೋಲಿಸಿತ್ತು. ಈ ವಿಜಯವು ಭಾರತಕ್ಕೆ ಸೂಪರ್ 4 ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಭಾರತ ಈ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಭಾರತ ಕನಿಷ್ಠ ಪಕ್ಷ 15-0 ಗೋಲುಗಳಿಂದ ಇಂಡೋನೇಷ್ಯಾವನ್ನು ಮಣಿಸಬೇಕಿತ್ತು, ಇದು ಬಹಳ ಕಷ್ಟದ ಕೆಲಸವಾಗಿತ್ತು. ಆದರೆ ಭಾರತದ ಯುವ ಹಾಕಿ ಆಟಗಾರರು ಅಸಾಧ್ಯ ಎನಿಸಿದ್ದನ್ನು ಸಾಧ್ಯವಾಗಿಸಿದರು.

ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಆ ಬಳಿಕ ಜಪಾನ್, ಭಾರತವನ್ನು 2-5 ಗೋಲುಗಳಿಂದ ಸೋಲಿಸಿತ್ತು. ಆದ್ದರಿಂದ, ಭಾರತ ತನ್ನ ತೋಳುಗಳನ್ನು ಸರಪಳಿಯಲ್ಲಿ ಸುತ್ತಿಕೊಳ್ಳಬೇಕಾದ ಸಾಧ್ಯತೆ ಇತ್ತು. 2023ರ ವಿಶ್ವಕಪ್‌ಗೆ ಪಾಕಿಸ್ತಾನ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಜಪಾನ್, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ಅರ್ಹತೆ ಪಡೆದಿವೆ. ಭಾರತ ಆತಿಥೇಯರಾಗಿ ಅರ್ಹತೆ ಪಡೆದಿದೆ.

Published On - 8:40 pm, Sat, 28 May 22

ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ