
ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಜಯಭೇರಿ ಬಾರಿಸಿದೆ. ಎರಡನೇ ಇನ್ನಿಂಗ್ಸ್ನಲ್ಲಿ 139 ರನ್ಗಳ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ 2 ವಿಕೆಟ್ ಕಳೆದುಕೊಂಡು, 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟಯ್ಲರ್ ಗೆಲುವಿನ ಜೊತೆಯಾಟ ನೀಡಿದ್ದಾರೆ. ವಿಲಿಯಮ್ಸನ್ ಅರ್ಧಶತಕ ಪೂರ್ತಿಗೊಳಿಸಿದರೆ, ಟಯ್ಲರ್ 47 ರನ್ ದಾಖಲಿಸಿದ್ದಾರೆ. ಇದಕ್ಕೂ ಮೊದಲು, ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 170 ರನ್ ಗಳಿಸಿ ಆಲ್ ಔಟ್ ಆಗಿತ್ತು. ಆ ಮೂಲಕ 138 ರನ್ಗಳ ಲೀಡ್ ಪಡೆದುಕೊಂಡಿತ್ತು. ಆದರೆ, ಈ ಮೊತ್ತವನ್ನು ನ್ಯೂಜಿಲ್ಯಾಂಡ್ ಸಮರ್ಥವಾಗಿ ಎದುರಿಸಿದೆ. ಎಲ್ಲಾ ವಿಭಾಗಗಳಲ್ಲಿಯೂ ಉತ್ತಮ ಆಟವಾಡಿ ಟೆಸ್ಟ್ ಚಾಂಪಿಯನ್ ಪಟ್ಟ ಪಡೆದುಕೊಂಡಿದೆ. ತನ್ಮೂಲಕ ಭಾರತದ ಕನಸು ಕಮರಿಹೋಗಿದೆ.
ಪಂದ್ಯದ ಉದ್ದಕ್ಕೂ ಹವಾಮಾನ ತೊಡಟುಮಾಡಿತ್ತು. ಹನಾಲ್ಕನೇ ದಿನದಾಟ ಹಾಗೂ ಮೊದಲ ದಿನದಾಟ ಮಳೆಯ ಕಾರಣದಿಂದ ಸಂಪೂರ್ಣ ರದ್ದಾಗಿತ್ತು. ಎರಡನೇ ದಿನ ಮೂರು ಬಾರಿ ಬ್ಯಾಡ್ ಲೈಟ್ ಪಂದ್ಯಕ್ಕೆ ಅಡ್ಡಿಪಡಿಸಿತ್ತು. ಹಾಗಾಗಿ, ಪಂದ್ಯದ ಎಲ್ಲಾ ನಿರೀಕ್ಷೆಗಳಿಗೂ ಮೀರಿ ಕ್ರಿಕೆಟ್ ಅಭಿಮಾನಿಗಳಿಗೆ ಹವಾಮಾನದ ಅಡ್ಡಿಯಿಲ್ಲದೆ, ಪಂದ್ಯ ನಡೆಯಲಿ ಎಂಬ ಆಶಯವೇ ಹೆಚ್ಚಾಗಿತ್ತು. ಅದರಂತೆ, ಆರು ದಿನಗಳ ಕಾಲ ನಡೆದ ಟೆಸ್ಟ್ ಇಂದು ಅಂತ್ಯಗೊಂಡಿದೆ.
ಪಂದ್ಯದ ಸಂಪೂರ್ಣ ಅಪ್ಡೇಟ್ಗಳು ಈ ಕೆಳಗೆ ಲಭ್ಯವಿದೆ. ಓದಿರಿ..
ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 8 ವಿಕೆಟ್ಗಳ ಗೆಲುವು ದಾಖಲಿಸಿದೆ. ಈ ಮೂಲಕ ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟವನ್ನು ನ್ಯೂಜಿಲ್ಯಾಂಡ್ ತನ್ನದಾಗಿಸಿಕೊಂಡಿದೆ. ವಿಲಿಯಮ್ಸನ್ ಹಾಗೂ ಟಯ್ಲರ್ ಆಟ ತಂಡವನ್ನು ಸುಲಭವಾಗಿ ಗೆಲ್ಲಿಸಿಕೊಟ್ಟಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಮುಖ್ಯ ಕಾರಣವಾಗಿದೆ.
ನ್ಯೂಜಿಲ್ಯಾಂಡ್ ಪರ ಎರಡನೇ ಇನ್ನಿಂಗ್ಸ್ನಲ್ಲಿ ನಾಯಕ ಕೇನ್ ವಿಲಿಯಮ್ಸನ್ ಉತ್ತಮ ಆಟವಾಡಿದ್ದಾರೆ. 89 ಬಾಲ್ಗಳಲ್ಲಿ 8 ಬೌಂಡರಿ ಸಹಿತ 52 ರನ್ ದಾಖಲಿಸಿದ್ದಾರೆ. ಟಯ್ಲರ್ ಜೊತೆ ನೀಡಿದ ಜೊತೆಯಾಟ ತಂಡ ಗೆಲುವಿನತ್ತ ಸಾಗುವಂತೆ ಮಾಡಿದೆ.
ನ್ಯೂಜಿಲ್ಯಾಂಡ್ ತಂಡ 41 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 111 ರನ್ ದಾಖಲಿಸಿದೆ. ತಂಡಕ್ಕೆ ಗೆಲ್ಲಲು ಕೇವಲ 28 ರನ್ ಬೇಕಿದೆ. ವಿಲಿಯಮ್ಸನ್ 32 ಹಾಗೂ ಟಯ್ಲರ್ 38 ರನ್ಗಳ ಉತ್ತಮ ಜೊತೆಯಾಟ ನೀಡುತ್ತಿದ್ದಾರೆ. 2.71 ರನ್ಗಳ ಸರಾಸರಿಯಲ್ಲಿ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಮಾಡುತ್ತಿದೆ.
38 ಓವರ್ಗಳನ್ನು ಆಡಿರುವ ನ್ಯೂಜಿಲ್ಯಾಂಡ್ ತಂಡ 2 ವಿಕೆಟ್ ಕಳೆದುಕೊಂಡು 104 ರನ್ ದಾಖಲಿಸಿದೆ. ಗೆಲುವಿಗೆ ಕೇವಲ 35 ರನ್ ಬೇಕಿದೆ. ವಿಲಿಯಮ್ಸನ್ 28 ಹಾಗೂ ಟಯ್ಲರ್ 35 ರನ್ ಪೇರಿಸಿ ಆಟವಾಡುತ್ತಿದ್ದಾರೆ. 2.74 ರನ್ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಭಾರತ ಬಹುತೇಕ ಸೋಲಿನ ದವಡೆಯಲ್ಲಿ ಕುಳಿತಂತೆ ಕಾಣುತ್ತಿದೆ. ಈ ಮಧ್ಯೆ, ನ್ಯೂಜಿಲ್ಯಾಂಡ್ ತಂಡ 100ರ ಗಡಿ ದಾಟಿದೆ. ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟಯ್ಲರ್ ಜೊತೆಯಾಟ ಭಾರತಕ್ಕೆ ಮುಳುವಾಗಿದೆ.
ನ್ಯೂಜಿಲ್ಯಾಂಡ್ ಗೆಲ್ಲಲು 43 ರನ್ ಬೇಕಿದೆ. ಭಾರತದ ವಿರುದ್ಧ ಎರಡನೇ ಇನ್ನಿಂಗ್ಸ್ ಆಡುತ್ತಿರುವ ನ್ಯೂಜಿಲ್ಯಾಂಡ್ 36 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 96 ರನ್ ದಾಖಲಿಸಿದೆ. ರಾಸ್ ಟಯ್ಲರ್ 30 ಹಾಗೂ ಕೇನ್ ವಿಲಿಯಮ್ಸನ್ 26 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇಬ್ಬರು ಆಟಗಾರರೂ ತಲಾ 4 ಬೌಂಡರಿ ಸಿಡಿಸಿದ್ದಾರೆ. ಈಗಿನ ಆಟದ ಗತಿ ಗಮನಿಸಿದರೆ ನ್ಯೂಜಿಲ್ಯಾಂಡ್ ತಂಡ ಗೆಲ್ಲುವ ಲಕ್ಷಣ ಎದ್ದು ಕಾಣುತ್ತಿದೆ.
ನ್ಯೂಜಿಲ್ಯಾಂಡ್ ತಂಡ ದ್ವಿತೀಯ ಇನ್ನಿಂಗ್ಸ್ನಲ್ಲಿ 2 ವಿಕೆಟ್ ಕಳೆದುಕೊಂಡು 64 ರನ್ ದಾಖಲಿಸಿದೆ. 25 ಓವರ್ಗಳನ್ನು ಆಡಿದ್ದು ಇನ್ನೂ 28 ಓವರ್ಗಳು ಬಾಕಿ ಇದೆ. ನ್ಯೂಜಿಲ್ಯಾಂಡ್ ಗೆಲುವಿಗೆ 75 ರನ್ ಬೇಕಿದೆ. ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟಯ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಟಯ್ಲರ್ 3 ಬೌಂಡರಿ ಸಹಿತ ಕೊಂಚ ವೇಗದ ಆಟಕ್ಕೆ ಮುಂದಾಗಿದ್ದಾರೆ.
ನ್ಯೂಜಿಲ್ಯಾಂಡ್ ತಂಡ 22 ಓವರ್ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದೆ. ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟಯ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ಗೆಲುವಿಗೆ 93 ರನ್ ಬೇಕಿದೆ.
ಇನ್ನಿಂಗ್ಸ್ನ ಎರಡು ವಿಕೆಟ್ಗಳನ್ನು ಸ್ಪಿನ್ನರ್ ರವಿಚಂದ್ರನ್ ಪಡೆದಿದ್ದಾರೆ. ಆರಂಭಿಕರಾದ ಲತಮ್ ಹಾಗೂ ಕಾನ್ವೆ ಔಟ್ ಮಾಡಿದ್ದಾರೆ.
ಸ್ಪಿನ್ನರ್ ಅಶ್ವಿನ್ ಬೌಲಿಂಗ್ಗೆ ನ್ಯೂಜಿಲ್ಯಾಂಡ್ ತಂಡದ ಮತ್ತೊಂದು ವಿಕೆಟ್ ಪತನವಾಗಿದೆ. ಆರಂಭಿಕ ಆಟಗಾರ ಡೆವಾನ್ ಕಾನ್ವೆ ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದಾರೆ. ಕಾನ್ವೆ 47 ಬಾಲ್ಗೆ 19 ರನ್ ಗಳಿಸಿ ನಿರ್ಗಮಿಸಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಮಾಡುತ್ತಿದ್ದು, ರಾಸ್ ಟಯ್ಲರ್ ಕ್ರೀಸ್ಗೆ ಇಳಿದಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಮೊತ್ತ 18 ಓವರ್ಗೆ 2 ವಿಕೆಟ್ ಕಳೆದುಕೊಂಡು 44 ರನ್ ಆಗಿದೆ. ನ್ಯೂಜಿಲ್ಯಾಂಡ್ ಗೆಲುವಿಗೆ 95 ರನ್ ಬೇಕಿದೆ. 8 ವಿಕೆಟ್ಗಳು ಉಳಿದಿವೆ.
ಎರಡನೇ ಇನ್ನಿಂಗ್ಸ್ ನ್ಯೂಜಿಲ್ಯಾಂಡ್ ತಂಡದ ವಿಕೆಟ್ ಸ್ಪಿನ್ನರ್ ಅಶ್ವಿನ್ ಪಾಲಾಗಿದೆ. ಟಾಮ್ ಲತಮ್ 41 ಬಾಲ್ಗೆ 9 ರನ್ ಗಳಿಸಿ ಸ್ಟಂಪ್ ಔಟ್ ಆಗಿದ್ದಾರೆ. ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಈಗ ಬ್ಯಾಟಿಂಗ್ಗೆ ಇಳಿದಿದ್ದಾರೆ. ತಂಡದ ಮೊತ್ತ 14 ಓವರ್ಗೆ 33-1 ಆಗಿದೆ. ನ್ಯೂಜಿಲ್ಯಾಂಡ್ ಗೆಲ್ಲಲು 106 ರನ್ ಬೇಕಿದೆ. ಇನ್ನೂ ಸುಮಾರು ಎರಡು ಗಂಟೆಗಳ ಕಾಲ ಪಂದ್ಯ ನಡೆಯಲಿದೆ. ದಿನದ ಕೊನೆಯ ಸೆಷನ್ ನಡೆಯುತ್ತಿದೆ.
ನ್ಯೂಜಿಲ್ಯಾಂಡ್ ತಂಡದ ಗೆಲುವಿಗೆ 117 ರನ್ ಬೇಕಿದೆ. ಇದೀಗ, 12 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 22 ರನ್ ದಾಖಲಿಸಿದೆ. ಟಾಮ್ ಲತಮ್ 6 ಹಾಗೂ ಡೆವಾನ್ ಕಾನ್ವೆ 10 ರನ್ ದಾಖಲಿಸಿದ್ದಾರೆ. ಭಾರತದ ಬೌಲರ್ಗಳಿಂದ ವಿಕೆಟ್ ಉರುಳಿಸುವ ಪ್ರಯತ್ನ ಸಫಲವಾಗಿಲ್ಲ. ಪಂದ್ಯ ಮುಂದೇನಾಗುತ್ತೆ ಎಂಬ ಕುತೂಹಲ ಹೆಚ್ಚಾಗಿದೆ.
ಚಹಾ ವಿರಾಮದ ವೇಳೆ ನ್ಯೂಜಿಲ್ಯಾಂಡ್ ತಂಡ 19 ರನ್ ಗಳಿಸಿದೆ. 8 ಓವರ್ ಆಡಿದ್ದು ಯಾವುದೇ ವಿಕೆಟ್ ಕಳೆದುಕೊಂಡಿಲ್ಲ. ಡೆವಾನ್ ಕಾನ್ವೆ ಹಾಗೂ ಟಾಮ್ ಲತಮ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ಗೆಲುವಿಗೆ 120 ರನ್ ಬೇಕಿದೆ.
ದ್ವಿತೀಯ ಇನ್ನಿಂಗ್ಸ್ ಆಡುತ್ತಿರುವ ನ್ಯೂಜಿಲ್ಯಾಂಡ್ ತಂಡ 6 ಓವರ್ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 14 ರನ್ ದಾಖಲಿಸಿದೆ. ಭಾರತ ವಿರುದ್ಧ ಗೆಲ್ಲಲು 125 ರನ್ ಬೇಕಿದೆ. ಭಾರತೀಯ ಬೌಲರ್ಗಳು ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಬೇಕಿದೆ. ಇಲ್ಲದೇ ಹೋದರೆ ಪಂದ್ಯ ನ್ಯೂಜಿಲ್ಯಾಂಡ್ ವಶವಾಗುವ ಸಾಧ್ಯತೆ ದಟ್ಟವಾಗಿದೆ. ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಆರಂಭಿಕ ಆರು ಓವರ್ಗಳನ್ನು ಬೌಲ್ ಮಾಡಿದ್ದಾರೆ.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ನ್ಯೂಜಿಲ್ಯಾಂಡ್ 3 ಓವರ್ಗಳನ್ನು ಎದುರಿಸಿ ವಿಕೆಟ್ ನಷ್ಟವಿಲ್ಲದೆ 1 ರನ್ ದಾಖಲಿಸಿದೆ. ನ್ಯೂಜಿಲ್ಯಾಂಡ್ ಗೆಲ್ಲಲು ಇನ್ನು 138 ರನ್ ಬೇಕಿದೆ.
ಭಾರತ ಆಲ್ಔಟ್ ಆದ ಬಳಿಕ ಇದೀಗ ನ್ಯೂಜಿಲ್ಯಾಂಡ್ ತಂಡ ತನ್ನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ. ಟಾಮ್ ಲತಮ್ ಹಾಗೂ ಡೆವಾನ್ ಕಾನ್ವೆ ಬ್ಯಾಟಿಂಗ್ಗೆ ಇಳಿದಿದ್ದಾರೆ. ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ. ನ್ಯೂಜಿಲ್ಯಾಂಡ್ ಗೆಲ್ಲಲು 139 ರನ್ ಬೇಕಿದೆ.
ನ್ಯೂಜಿಲ್ಯಾಂಡ್ ವಿರುದ್ಧ 138 ರನ್ ಗಳ ಸಾಮಾನ್ಯ ಲೀಡ್ ಪಡೆದುಕೊಂಡಿದೆ. ಭಾರತ ಗೆಲ್ಲಲು ಬೌಲರ್ಗಳು ಅದ್ಭುತ ಪ್ರದರ್ಶನ ತೋರಬೇಕಿದೆ. ಅದೇ ರೀತಿ ನ್ಯೂಜಿಲ್ಯಾಂಡ್ ಗೆಲುವಿಗೆ ವೇಗದ ಬ್ಯಾಟಿಂಗ್ ನೆರವಾಗಬೇಕಿದೆ. ಸೋಲು- ಗೆಲುವು- ಡ್ರಾ ಲೆಕ್ಕಾಚಾರವೀಗ ಕಗ್ಗಂಟಾಗಿದೆ. ಪಂದ್ಯ ಯಾವ ಹಂತದತ್ತ ತಿರುಗಲಿದೆ ಎಂದು ಇನ್ನಷ್ಟೇ ನೋಡಬೇಕಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತ ಆಲ್ ಔಟ್ ಆಗಿದೆ. ಕೊನೆಯದಾಗಿ ಬ್ಯಾಟಿಂಗ್ಗೆ ಇಳಿದ ಜಸ್ಪ್ರೀತ್ ಬುಮ್ರಾ ಸೊನ್ನೆಗೆ ಔಟ್ ಆಗಿದ್ದಾರೆ. ಟಿಮ್ ಸೌಥಿ ಬೌಲಿಂಗ್ಗೆ ಲತಮ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತ 10 ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೇ ಶಕ್ತವಾಗಿದೆ. ಆ ಮೂಲಕ, 138 ರನ್ಗಳ ಲೀಡ್ ಪಡೆದುಕೊಂಡಿದೆ. ನ್ಯೂಜಿಲ್ಯಾಂಡ್ ಪರ ಟಿಮ್ ಸೌಥಿ 4, ಟ್ರೆಂಟ್ ಬೋಲ್ಟ್ 3, ಕೈಲ್ ಜಾಮಿಸನ್ 2 ಹಾಗೂ ನೀಲ್ ವಾಗ್ನರ್ 1 ವಿಕೆಟ್ ಕಬಳಿಸಿದ್ದಾರೆ.
ಭಾರತದ 9ನೇ ವಿಕೆಟ್ ಕೂಡ ಪತನವಾಗಿದೆ. ಮೊಹಮ್ಮದ್ ಶಮಿ ಸೌಥಿ ಬೌಲಿಂಗ್ಗೆ ಲತಮ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. 10 ಬಾಲ್ಗೆ 13 ರನ್ ಗಳಿಸಿ ನಿರ್ಗಮಿಸಿದ್ದಾರೆ. ಬುಮ್ರಾ ಕ್ರೀಸ್ಗೆ ಇಳಿದಿದ್ದಾರೆ.
ರಿಷಭ್ ಪಂತ್ ಔಟಾದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಕೂಡ ಔಟ್ ಆಗಿದ್ದಾರೆ. ಬೋಲ್ಟ್ ಬೌಲಿಂಗ್ಗೆ ರಾಸ್ ಟಯ್ಲರ್ಗೆ ಕ್ಯಾಚ್ ನೀಡಿ, 7 ರನ್ಗೆ ನಿರ್ಗಮಿಸಿದ್ದಾರೆ. ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಕ್ರೀಸ್ನಲ್ಲಿದ್ದಾರೆ. ಭಾರತ 70 ಓವರ್ಗೆ 8 ವಿಕೆಟ್ ಕಳೆದುಕೊಂಡು 156 ರನ್ ದಾಖಲಿಸಿದೆ. 2.23 ಸರಾಸರಿಯಲ್ಲಿ ಬ್ಯಾಟ್ ಮಾಡುತ್ತಿದೆ. ಸದ್ಯ 124 ರನ್ ಲೀಡ್ ಗಳಿಸಿದ್ದು, ಗೆಲುವಿನ ಆಶಾಭಾವನೆ ಗಟ್ಟಿಯಾಗಿರಲು ಇನ್ನೂ ಹೆಚ್ಚಿನ ಲೀಡ್ ಅವಶ್ಯಕತೆ ಇತ್ತು. ಆದರೆ, ವಿಕೆಟ್ ಉಳಿಸಿಕೊಂಡು ಆಡುವಲ್ಲಿ ಭಾರತ ವಿಫಲವಾದಂತೆ ಕಾಣುತ್ತಿದೆ. ಮುಂದಿನ ಹಂತದ ರೋಚಕ ಪಂದ್ಯಕ್ಕಾಗಿ ಕಾದುನೋಡಬೇಕಿದೆ.
88 ಬಾಲ್ಗಳಲ್ಲಿ 41 ರನ್ ಗಳಿಸಿ, ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಭರವಸೆಯಾಗಿ ಕಂಡಿದ್ದ ರಿಷಭ್ ಪಂತ್ ಕೂಡ ಔಟ್ ಆಗಿದ್ದಾರೆ. ಬೋಲ್ಟ್ ಬೌಲಿಂಗ್ಗೆ ನಿಕೊಲಸ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
124 ರನ್ ಲೀಡ್ ಗಳಿಸಿ ಆಡುತ್ತಿರುವ ಭಾರತ ದ್ವತೀಯ ಇನ್ನಿಂಗ್ಸ್ನಲ್ಲಿ 69 ಓವರ್ಗಳನ್ನು ಆಡಿ 156 ರನ್ ದಾಖಲಿಸಿದೆ. 6 ವಿಕೆಟ್ ಕಳೆದುಕೊಂಡಿದೆ. ರಿಷಭ್ ಪಂತ್ 41 ರನ್ ನೀಡಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಅರ್ಧಶತಕದ ಅಂಚಿನಲ್ಲಿದ್ದಾರೆ. 2.26 ಸರಾಸರಿ ರನ್ರೇಟ್ನಲ್ಲಿ ಭಾರತ ಬ್ಯಾಟಿಂಗ್ ಮಾಡುತ್ತಿದೆ.
65 ಓವರ್ಗಳನ್ನು ಆಡಿರುವ ಭಾರತ 6 ವಿಕೆಟ್ ಕಳೆದುಕೊಂಡು 147 ರನ್ ದಾಖಲಿಸಿದೆ. ತಂಡದ ಪರವಾಗಿ ರಿಷಭ್ ಪಂತ್ 71 ಬಾಲ್ಗೆ 36 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಶ್ವಿನ್ 3 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ 115 ರನ್ಗಳ ಲೀಡ್ ಪಡೆದುಕೊಂಡಿದೆ. 2.26 ರನ್ರೇಟ್ನಲ್ಲಿ ಭಾರತ ಬ್ಯಾಟಿಂಗ್ ಮಾಡುತ್ತಿದೆ.
ಜಡೇಜಾ ವಿಕೆಟ್ ಕಿತ್ತ ವಾಗ್ನರ್ ಸಂಭ್ರಮ ಸೆರೆಯಾದ್ದು ಹೀಗೆ
ಭಾರತದ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಕೂಡ ಔಟ್ ಆಗಿದ್ದಾರೆ. 49 ಬಾಲ್ಗೆ 16 ರನ್ ಗಳಿಸಿ, ವಾಗ್ನರ್ ಬೌಲಿಂಗ್ಗೆ ವಾಟ್ಲಿಂಗ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ರಿಷಭ್ ಪಂತ್ ಕ್ರೀಸ್ನಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ ಪಂತ್ಗೆ ಜೊತೆಯಾಗಿದ್ದಾರೆ. ತಂಡದ ಮೊತ್ತ 63 ಓವರ್ಗೆ 6 ವಿಕೆಟ್ ಕಳೆದುಕೊಂಡು 142 ರನ್ ಆಗಿದೆ.
60ನೇ ಓವರ್ ಅಂತ್ಯಕ್ಕೆ ಭಾರತ ತಂಡ 137 ರನ್ ಗಳಿಸಿ, 5 ವಿಕೆಟ್ ಕಳೆದುಕೊಂಡಿದೆ. 105 ರನ್ಗಳ ಲೀಡ್ ಪಡೆದು ಎರಡನೇ ಇನ್ನಿಂಗ್ಸ್ ಆಡುತ್ತಿದೆ. ಜಡೇಜಾ ಮತ್ತು ಪಂತ್ ಆಡುತ್ತಿದ್ದಾರೆ. ವಿಕೆಟ್ ಉಳಿಸಿ, ರನ್ ಗಳಿಸುವ ಸವಾಲು ಈಗ ಭಾರತದ ಮುಂದಿದೆ. ಉತ್ತಮ ಲೀಡ್ ಪಡೆದುಕೊಂಡರೆ ಭಾರತಕ್ಕೆ ಗೆಲ್ಲುವ ಅವಕಾಶ ಇದೆ. ವಿಕೆಟ್ ಕಳೆದುಕೊಂಡರೆ ಸಂಕಷ್ಟಕ್ಕೆ ತುತ್ತಾಗುವ ಪರಿಸ್ಥಿತಿ ಎದುರಾಗಬಹುದು.
ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 100 ರನ್ ಲೀಡ್ ಸಾಧಿಸಿದೆ. 57 ಓವರ್ಗಳ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 132 ರನ್ ದಾಖಲಿಸಿದೆ. ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪಂತ್ 30 ಹಾಗೂ ಜಡೇಜಾ 12 ರನ್ ಗಳಿಸಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಎರಡನೇ ಇನ್ನಿಂಗ್ಸ್ ಇಂದು ನಡೆಯುತ್ತಿದೆ. ಕೊನೆಯ ದಿನದಾಟದಲ್ಲಿ ಊಟದ ವಿರಾಮ ಘೋಷಿಸಲಾಗಿದೆ. ಈ ವೇಳೆ ಭಾರತ ತಂಡದ ಮೊತ್ತ 55 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಆಗಿದೆ. ಭಾರತ 98 ರನ್ ಲೀಡ್ ಸಾಧಿಸಿದೆ. ರಿಷಭ್ ಪಂತ್ 28 ಹಾಗೂ ರವೀಂದ್ರ ಜಡೇಜಾ 12 ರನ್ ಗಳಿಸಿದ್ದಾರೆ. 2.36 ರನ್ರೇಟ್ನಲ್ಲಿ ಭಾರತ ಬ್ಯಾಟ್ ಬೀಸುತ್ತಿದೆ.
ಎರಡನೇ ಇನ್ನಿಂಗ್ಸ್ನ 53 ಓವರ್ ಬಳಿಕ ಭಾರತ 5 ವಿಕೆಟ್ ಕಳೆದುಕೊಂಡು 127 ರನ್ ದಾಖಲಿಸಿದೆ. ವಿಕೆಟ್ ಕೀಪರ್ ರಿಷಭ್ ಪಂತ್ 46 ಬಾಲ್ ಆಡಿ 26 ರನ್ ದಾಖಲಿಸಿದ್ದಾರೆ. ರವೀಂದ್ರ ಜಡೇಜಾ 11 ಬಾಲ್ಗೆ 11 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ. ಭಾರತ 95 ರನ್ಗಳ ಲೀಡ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ವಿಕೆಟ್ ಉಳಿಸಿಕೊಳ್ಳುವ ಜವಾಬ್ದಾರಿಯೂ ಆಟಗಾರರ ಮೇಲಿದೆ. 2.39 ರನ್ ಸರಾಸರಿಯಲ್ಲಿ ಭಾರತ ಬ್ಯಾಟ್ ಬೀಸುತ್ತಿದೆ.
ಅಜಿಂಕ್ಯ ರಹಾನೆ ವಿಕೆಟ್ ಪಡೆದ ಸಂಭ್ರಮದಲ್ಲಿ ಟ್ರೆಂಟ್ ಬೋಲ್ಟ್
ಭಾರತದ ಉಪನಾಯಕ ಅಜಿಂಕ್ಯ ರಹಾನೆ ಕೂಡ ಔಟ್ ಆಗಿದ್ದಾರೆ. 40 ಬಾಲ್ನಲ್ಲಿ 15 ರನ್ ಗಳಿಸಿ ಬೋಲ್ಟ್ಗೆ ವಿಕೆಟ್ ಒಪ್ಪಿಸಿದ್ದಾರೆ. ರಿಷಭ್ ಪಂತ್ ಜೊತೆಗೆ ರವೀಂದ್ರ ಜಡೇಜಾ ಬ್ಯಾಟಿಂಗ್ಗೆ ಇಳಿದಿದ್ದಾರೆ. 50 ಓವರ್ಗಳ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 109 ರನ್ ದಾಖಲಿಸಿದೆ. ಭಾರತ 77 ರನ್ ಲೀಡ್ ಗಳಿಸಿ ಆಡುತ್ತಿದೆ.
48ನೇ ಓವರ್ ಅಂತ್ಯಕ್ಕೆ ಭಾರತ 99 ರನ್ ಗಳಿಸಿದೆ. 4 ಮುಖ್ಯ ವಿಕೆಟ್ಗಳನ್ನೂ ಕಳೆದುಕೊಂಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 67 ರನ್ಗಳ ಲೀಡ್ ಪಡೆದುಕೊಂಡಿದೆ. 2.5 ರನ್ ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿರುವ ಭಾರತದ ಪರವಾಗಿ ಅಜಿಂಕ್ಯ ರಹಾನೆ ಮತ್ತು ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಔಟ್ ಆದ ಬೆನ್ನಲ್ಲೇ ಚೇತೇಶ್ವರ ಪೂಜಾರ ಕೂಡ ಕೈಲ್ ಜಾಮಿಸನ್ ಬೌಲಿಂಗ್ ಬಲೆಗೆ ಬಿದ್ದಿದ್ದಾರೆ. 80 ಬಾಲ್ ಆಡಿ 15 ರನ್ ಗಳಿಸಿದ್ದ ಪೂಜಾರ ಜಾಮಿಸನ್ ಬೌಲಿಂಗ್ಗೆ ರಾಸ್ ಟಯ್ಲರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಇದೀಗ, ಉಪನಾಯಕ ಅಜಿಂಕ್ಯ ರಹಾನೆ ಜೊತೆಗೆ ರಿಷಭ್ ಪಂತ್ ಕ್ರೀಸ್ನಲ್ಲಿ ಇದ್ದಾರೆ. ಭಾರತ ತಂಡದ ಮೊತ್ತ 38 ಓವರ್ಗೆ 73-4 ಆಗಿದೆ. ಅಲ್ಪ ಮೊತ್ತದ ಲೀಡ್ ಪಡೆದುಕೊಂಡು ಆಡುತ್ತಿರುವ ಭಾರತಕ್ಕೆ ಉತ್ತಮ ರನ್ ಗತಿ ಬೇಕಿದೆ. ವಿಕೆಟ್ ಉಳಿಸಿಕೊಂಡು, ರನ್ ಗಳಿಸಬೇಕಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಆಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ 29 ಬಾಲ್ಗೆ 13 ರನ್ ಗಳಿಸಿ ಔಟ್ ಆಗಿದ್ದಾರೆ. ಕೈಲ್ ಜಾಮಿಸನ್ ಬೌಲಿಂಗ್ಗೆ ವಾಟ್ಲಿಂಗ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಇದೀಗ ಚೇತೇಶ್ವರ ಪೂಜಾರ ಜೊತೆಗೆ ಉಪನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್ಗೆ ಇಳಿದಿದ್ದಾರೆ. ತಂಡದ ಮೊತ್ತ 36 ಓವರ್ಗೆ 71-3 ಆಗಿದೆ. ಭಾರತ 39 ರನ್ ಲೀಡ್ ಪಡೆದು ಆಡುತ್ತಿದೆ. ಇನ್ನುಳಿದ ದಾಂಡಿಗರಿಂದ ಉತ್ತಮ ಆಟದ ನಿರೀಕ್ಷೆ ಇದ್ದೇಇದೆ.
ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ನಲ್ಲೂ ತಮ್ಮ ಆರ್ಸಿಬಿ ಸಹ ಆಟಗಾರ ಕೈಲ್ ಜಾಮಿಸನ್ಗೆ ವಿಕೆಟ್ ನೀಡಿದ್ದರು. ಇಂದು ಮತ್ತೆ ಜಾಮಿಸನ್ ಬಲೆಗೆ ಬಿದ್ದಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆರನೇ ದಿನದಲ್ಲಿ ಎರಡನೇ ಇನ್ನಿಂಗ್ಸ್ ಆಡುತ್ತಿರುವ ಭಾರತ 33 ಓವರ್ಗಳನ್ನು ಪೂರ್ತಿಗೊಳಿಸಿ, 2 ವಿಕೆಟ್ ಕಳೆದುಕೊಂಡು 70 ರನ್ ದಾಖಲಿಸಿದೆ. ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ 38 ರನ್ಗಳ ಲೀಡ್ ಪಡೆದುಕೊಂಡಿದೆ.
ಮಳೆಯ ಕಾರಣದಿಂದ ನಡೆಯುತ್ತಿರುವ ಹೆಚ್ಚುವರಿ ದಿನದ ಆಟ ಈಗ ಆರಂಭವಾಗಿದೆ. ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಕ್ರೀಸ್ಗೆ ಇಳಿದಿದ್ದಾರೆ. ಟಿಮ್ ಸೌಥಿ ಮೊದಲ ಇಂದಿನ ಓವರ್ ಬೌಲಿಂಗ್ ಆರಂಭಿಸಿದ್ದಾರೆ.
ವಿರಾಟ್ ಕೊಹ್ಲಿ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯದುದ್ದಕ್ಕೂ ಕಂಡುಬಂದಿದ್ದು ಹೀಗೆ.. ವಿಶೇಷ ವಿಡಿಯೋ ಇಲ್ಲಿದೆ
ಐದನೇ ದಿನದಾಟವಾದ ನಿನ್ನೆ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ನಡೆದ ಹಣಾಹಣಿಯ ಚುಟುಕು ನೋಟವನ್ನು ಬಿಸಿಸಿಐ ಟ್ವಿಟರ್ ಖಾತೆ ಹಂಚಿಕೊಂಡಿದೆ. ಜೊತೆಗೆ, ನಿನ್ನೆಯ ಪಂದ್ಯದಲ್ಲಿ 4 ವಿಕೆಟ್ ಕಿತ್ತು ಭಾರತಕ್ಕೆ ನೆರವಾದ ಮೊಹಮ್ಮದ್ ಶಮಿ ಕೂಡ ಮಾತನಾಡಿದ್ದಾರೆ. ನೋಡಿ ಬನ್ನಿ.
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಸಂಪೂರ್ಣ ಲೈವ್ ಮಾಹಿತಿಗಳು ಇಲ್ಲಿ ನಿಮಗೆ ಲಭ್ಯವಿರುತ್ತದೆ. ಪಂದ್ಯದ ಕುತೂಹಲವನ್ನು ಅಕ್ಷರಗಳಲ್ಲಿ ನೀವು ಆಸ್ವಾದಿಸಬಹುದು. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ- ನ್ಯೂಜಿಲ್ಯಾಂಡ್ ತಂಡಗಳು ಕಣಕ್ಕಿಳಿದಿದ್ದು. ಯಾರು ಗೆಲ್ಲುತ್ಥಾರೆ, ಪಂದ್ಯದಲ್ಲಿ ಏನೇನು ದಾಖಲೆ, ಬೆಳವಣಿಗೆಗಳು ಆಗುತ್ತವೆ ಎಂದು ಇಲ್ಲಿ ಮಾಹಿತಿ ಪಡೆಯಬಹುದು. ಟಿವಿ9 ಡಿಜಿಟಲ್ನಲ್ಲಿ ಕ್ರಿಕೆಟ್ಗಾಗಿ ವಿಶೇಷ ಪುಟ ತೆರೆಯಲಾಗಿದೆ. ಅಲ್ಲಿಯೂ ಕ್ರಿಕೆಟ್ ಬಗ್ಗೆ ಹಲವು ವಿಶೇಷ ಮಾಹಿತಿಗಳನ್ನು ಓದಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ: ಟಿವಿ9 ಡಿಜಿಟಲ್- ಕ್ರಿಕೆಟ್
Published On - 11:28 pm, Wed, 23 June 21