ಅರ್ ಸಿ ಬಿ ತಂಡ ಐಪಿಎಲ್ ಟ್ರೋಫಿ ಗೆಲ್ಲುವ ದಿನ ದೂರವಿಲ್ಲ: ಜೆನ್ನಿಂಗ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 2009ರಿಂದ 2014ರವರೆಗೆ ಕೋಚ್ ಆಗಿದ್ದ ದಕ್ಷಿಣ ಆಫ್ರಿಕಾದ ರೇ ಜೆನ್ನಿಂಗ್ಸ್ ಅವರ ಪ್ರಕಾರ ವಿರಾಟ್ ಕೊಹ್ಲಿ ಈಗ ಪ್ರಬುದ್ಧ ಆಟಗಾರ ಹಾಗೂ ನಾಯಕನಾಗಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆಲ್ಲುವ ದಿನಗಳು ಅವರಿಂದ ದೂರವಿಲ್ಲ. ‘‘ಕೊಹ್ಲಿಯ ನಾಯಕತ್ವದಲ್ಲಿ ನಾನು ಕಂಡಿರುವ ಋಣಾತ್ಮಕ ಅಂಶವೆಂದರೆ, ಆಟಗಾರರನ್ನು ಆಯ್ಕೆ ಮಾಡುವಲ್ಲಿ ಅವರು ಎಡವುತ್ತಿದ್ದಾರೆ. ಕೆಲವು ಸಲ ಅಸಮರ್ಥ ಆಟಗಾರರನ್ನು ಬೆಂಬಲಿಸಿ ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳ್ಳುತ್ತಾರೆ. ಅದು ತಂಡದ ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ […]
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 2009ರಿಂದ 2014ರವರೆಗೆ ಕೋಚ್ ಆಗಿದ್ದ ದಕ್ಷಿಣ ಆಫ್ರಿಕಾದ ರೇ ಜೆನ್ನಿಂಗ್ಸ್ ಅವರ ಪ್ರಕಾರ ವಿರಾಟ್ ಕೊಹ್ಲಿ ಈಗ ಪ್ರಬುದ್ಧ ಆಟಗಾರ ಹಾಗೂ ನಾಯಕನಾಗಿದ್ದಾರೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಗೆಲ್ಲುವ ದಿನಗಳು ಅವರಿಂದ ದೂರವಿಲ್ಲ.
‘‘ಕೊಹ್ಲಿಯ ನಾಯಕತ್ವದಲ್ಲಿ ನಾನು ಕಂಡಿರುವ ಋಣಾತ್ಮಕ ಅಂಶವೆಂದರೆ, ಆಟಗಾರರನ್ನು ಆಯ್ಕೆ ಮಾಡುವಲ್ಲಿ ಅವರು ಎಡವುತ್ತಿದ್ದಾರೆ. ಕೆಲವು ಸಲ ಅಸಮರ್ಥ ಆಟಗಾರರನ್ನು ಬೆಂಬಲಿಸಿ ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳ್ಳುತ್ತಾರೆ. ಅದು ತಂಡದ ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ. ಟಿ20 ಕ್ರಿಕೆಟ್ ಅತ್ಯಂತ ಕಡಿಮೆ ಅವಧಿಯ ಆಟವಾಗಿರುವುದರಿಂದ ಚಿಕ್ಕ ಪ್ರಮಾಣದ ಪ್ರಮಾದಗಳು ಕೂಡ ದುಬಾರಿಯಾಗಿಬಿಡುತ್ತವೆ. ಟೀಮಿನ ಆಯ್ಕೆ ಬಗ್ಗೆ ಅವರು ಹೆಚ್ಚು ಜಾಗರೂಕರಾದರೆ ಆರ್ ಸಿ ಬಿ ತಂಡ ಐಪಿಎಲ್ ಟ್ರೋಫಿ ಗೆಲ್ಲದಿರಲು ಯಾವುದೇ ಕಾರಣವಿಲ್ಲ,’’ ಎಂದು ಜೆನ್ನಿಂಗ್ಸ್ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಶೇಕಡಾ 60ರಷ್ಟು ಪಂದ್ಯಗಳನ್ನು ಗೆದ್ದಿರುವ ಕೊಹ್ಲಿ, ಸೀಮಿತ ಓವರ್ಗಳ ಕ್ರಿಕೆಟ್ನಲ್ಲೂ ವಿಶ್ವದ ಅತಿ ಯಶಸ್ವೀ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಆದರೆ ಅವರ ಯಶೋಗಾಥೆಯಲ್ಲಿ ಐಪಿಎಲ್ ಟ್ರೋಫಿ ಸೇರಿಲ್ಲ.
‘‘ಕೊಹ್ಲಿ ಯೋಚಿಸುವ ವಿಧಾನ ಇತರರಿಗಿಂತ ಭಿನ್ನವಾಗಿದೆ ಮತ್ತು ಅಸಾಧಾರಣವಾಗಿದೆ. ಆದರೆ ಹಲವು ಬಾರಿ ಅವರ ನಿರ್ಧಾರಗಳು ಏಕಪಕ್ಷೀಯವಾಗಿರುತ್ತವೆ. ಆಟಗಾರನಾಗಿ ಉನ್ನತಮಟ್ಟದ ಪ್ರದರ್ಶನಗಳನ್ನು ನೀಡುವ ಮೂಲಕ ಆಟದ ಪರಿಮಾಣವನ್ನು ಎತ್ತರಕ್ಕೇರಿಸುವ ಕೊಹ್ಲಿಗೆ ಮಾರ್ಗದರ್ಶನದ ಅವಶ್ಯಕತೆಯಿದೆ. ಬೇರೆಯವರ ಅಭಿಪ್ರಾಯಗಳಿಗೆ ಅವರು ಕೂಡಲೇ ಮನ್ನಣೆ ನೀಡುವುದಿಲ್ಲ ಎಂಬ ಆಂಶ ನನಗೆ ಚೆನ್ನಾಗಿ ಗೊತ್ತಿದೆಯಾದರೂ ಅವರಲ್ಲಿ ಕಲಿಯುವ ಗುಣವಿದೆ. ಒಬ್ಬ ಆಟಗಾರ ಮತ್ತು ನಾಯಕನಾಗಿ ಅವರೀಗ ಬೆಳೆದಿದ್ದಾರೆ, ಪ್ರಬುದ್ಧರಾಗಿದ್ದಾರೆ. ಕೊಹ್ಲಿಯ ವ್ಯಕ್ತಿತ್ವ ಅದ್ಭುತ, ಅವರ ಗರಿಷ್ಠ ಸಾಧನೆ ಇನ್ನೂ ಬರಬೇಕಿದೆ,’’ ಎಂದು ಜೆನ್ನಿಂಗ್ಸ್ ಹೇಳಿದ್ದಾರೆ.