Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಸ್ಸಿ ಮೇಲಿನ ವ್ಯಾಮೋಹ; ಕೇರಳದಿಂದ ಕತಾರ್​ಗೆ ತನ್ನ ಕಾರಿನಲ್ಲೇ ಪ್ರಯಾಣ ಬೆಳೆಸಿದ ಐದು ಮಕ್ಕಳ ತಾಯಿ..!

FIFA World Cup 2022: ನನ್ನ ಹೀರೋ ಲಿಯೋನೆಲ್ ಮೆಸ್ಸಿ ಆಡುವುದನ್ನು ನಾನು ನೋಡಲೇಬೇಕು ಎಂಬುದು ನನ್ನ ಮಹದಾಸೆ. ಈ ನಡುವೆ ಸೌದಿ ಅರೇಬಿಯಾ ವಿರುದ್ಧದ ಸೋಲು ನನಗೆ ನಿರಾಸೆಯನ್ನುಂಟು ಮಾಡಿತ್ತು. ಆದರೆ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಇದು ಸಣ್ಣ ಅಡಚಣೆಯಾಗಲಿದೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.

ಮೆಸ್ಸಿ ಮೇಲಿನ ವ್ಯಾಮೋಹ; ಕೇರಳದಿಂದ ಕತಾರ್​ಗೆ ತನ್ನ ಕಾರಿನಲ್ಲೇ ಪ್ರಯಾಣ ಬೆಳೆಸಿದ ಐದು ಮಕ್ಕಳ ತಾಯಿ..!
ಮೆಸ್ಸಿ ಅಭಿಮಾನಿ ನಾಜಿ ನೌಶಿ
Follow us
TV9 Web
| Updated By: ಪೃಥ್ವಿಶಂಕರ

Updated on: Nov 27, 2022 | 9:45 AM

ಪ್ರಸ್ತುತ ಕತಾರ್​ನಲ್ಲಿ ಫಿಫಾ ವಿಶ್ವಕಪ್ (Qatar World Cup 2022) ನಡೆಯುತ್ತಿದ್ದು, ಅಚ್ಚರಿಯ ಫಲಿತಾಂಶಗಳೊಂದಿಗೆ ದಿನೇ ದಿನೇ ರಂಗು ಪಡೆದುಕೊಳ್ಳುತ್ತಿದೆ. ಅಲ್ಲದೆ ತಮ್ಮ ನೆಚ್ಚಿನ ಆಟಗಾರರನ್ನು ನೋಡುವ ಸಲುವಾಗಿಯೇ ಲಕ್ಷಾಂತರ ಫುಟ್ಬಾಲ್ ಅಭಿಮಾನಿಗಳು ಕತಾರ್ ತಲುಪಿದ್ದಾರೆ. ಭಾರತದಲ್ಲಿ ಈ ಆಟದ ಮೇಲಿನ ವ್ಯಾಮೋಹ ಅಷ್ಟಕ್ಕಷ್ಟೆಯಾದರು. ಈ ಆಟವನ್ನು ಹುಚ್ಚರಂತೆ ಇಷ್ಟಪಡುವ ಅನೇಕ ಅಭಿಮಾನಿಗಳನ್ನು ನಾವು ಕಾಣಬಹುದಾಗಿದೆ. ಭಾರತದಲ್ಲಿ ಪಶ್ಚಿಮ ಬಂಗಾಳ ಹಾಗೂ ಕೇರಳದಲ್ಲಿ ಬಿಟ್ಟರೆ ಮತ್ತ್ಯಾವ ರಾಜ್ಯಗಳಲ್ಲೂ ಇದರ ಕ್ರೇಜ್ ತೀರ ಕಡಿಮೆ. ಅದರಲ್ಲೂ ಭಾರತದಲ್ಲಿ ಮೆಸ್ಸಿ ಹಾಗೂ ರೊನಾಲ್ಡೊಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಇದಕ್ಕೆ ಪೂರಕವೆಂಬಂತೆ ಕೇರಳದ ಮಹಿಳಾ ಅಭಿಮಾನಿಯೊಬ್ಬರು ತನ್ನ ನೆಚ್ಚಿನ ಆಟಗಾರ ಮೆಸ್ಸಿಯನ್ನು (Lionel Messi) ನೋಡಲು, ಅವರ ಆಟವನ್ನು ಕಣ್ತುಂಬಿಕೊಳ್ಳಲು ಕೇರಳದಿಂದ ಕತಾರ್​ಗೆ ತನ್ನ ಕಾರಿನಲ್ಲಿಯೇ ಏಕಾಂಗಿ ಪ್ರಯಾಣ ಬೆಳೆಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಕೇರಳದ ನಾಜಿ ನೌಶಿ ಎಂಬ ಮಹಿಳೆ ಮೆಸ್ಸಿ ಆಟಕ್ಕೆ ಮನಸೋತು ಅವರನ್ನು ಕಾಣಲೇಬೇಕು ಎಂಬ ಹಟಕ್ಕೆ ಬಿದ್ದು ಈ ಸಾಹಸಕ್ಕೆ ಕೈಹಾಕಿದ್ದಾರೆ. ಇಲ್ಲಿ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ 33 ವರ್ಷದ ಈ ನೌಶಿ ಐದು ಮಕ್ಕಳ ತಾಯಿ. ಯೂಟ್ಯೂಬ್ ವ್ಲಾಗರ್ ಆಗಿರುವ ನೌಶಿ ತನ್ನ ಕಾರಿನಲ್ಲಿಯೇ ಕತಾರ್‌ಗೆ ಪ್ರಯಾಣ ಬೆಳೆಸುವ ನಿರ್ಧಾರಕ್ಕೆ ಬಂದಿದ್ದಾರೆ.

ಮೆಸ್ಸಿ ಆಟ ನೋಡಬೇಕು- ನಾಜಿ ನೌಶಿ

ಖಲೀಜ್ ಟೈಮ್ಸ್ ಪತ್ರಿಕೆಯ ಪ್ರಕಾರ, ಅಕ್ಟೋಬರ್ 15 ರಂದು ಕೇರಳದಿಂದ ಪ್ರಯಾಣ ಆರಂಭಿಸಿದ ನೌಶಿ ಸದ್ಯ ಯುಎಇ ತಲುಪಿದ್ದಾರೆ. ಈ ನಡುವೆ ನಡೆದ ಅರ್ಜೆಂಟೀನಾ ಹಾಗೂ ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಅರ್ಜೆಂಟೀನಾ ಸೋತಾಗ ನೌಶಿಯ ಭರವಸೆಗೆ ದೊಡ್ಡ ಹೊಡೆತ ಬಿದ್ದಿತು. ಮುಂದಿನ ಪಂದ್ಯದಲ್ಲಿ ತನ್ನ ನೆಚ್ಚಿನ ತಂಡ ಗೆಲ್ಲುತ್ತದೆ ಎಂಬ ಭರವಸೆಯಿಂದ ನೌಶಿ ತನ್ನ ಪ್ರಯಾಣವನ್ನು ಮುಂದುವರೆಸಿದರು.

ಈ ವೇಳೆ ಪತ್ರಿಕೆಗೆ ಹೇಳಿಕೆ ನೀಡಿರುವ ನೌಶಿ, ನನ್ನ ಹೀರೋ ಲಿಯೋನೆಲ್ ಮೆಸ್ಸಿ ಆಡುವುದನ್ನು ನಾನು ನೋಡಲೇಬೇಕು ಎಂಬುದು ನನ್ನ ಮಹದಾಸೆ. ಈ ನಡುವೆ ಸೌದಿ ಅರೇಬಿಯಾ ವಿರುದ್ಧದ ಸೋಲು ನನಗೆ ನಿರಾಸೆಯನ್ನುಂಟು ಮಾಡಿತ್ತು. ಆದರೆ ಟ್ರೋಫಿ ಗೆಲ್ಲುವ ಹಾದಿಯಲ್ಲಿ ಇದು ಸಣ್ಣ ಅಡಚಣೆಯಾಗಲಿದೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.

ಕಾರಿನೊಳಗೆ ಅಡುಗೆಮನೆ

ತನ್ನ ಎಸ್‌ಯುವಿ ಕಾರಿನಲ್ಲಿ ಕೇರಳದಿಂದ ಮುಂಬೈಗೆ ಪ್ರಯಾಣ ಬೆಳೆಸಿದ ನೌಶಿ ಅಲ್ಲಿಂದ ಹಡಗಿನ ಮೂಲಕ ಒಮಾನ್‌ ತಲುಪಿದ್ದಾರೆ. ನಂತರ ಮಸ್ಕತ್‌ನಿಂದ ತನ್ನ ಪ್ರಯಾಣವನ್ನು ಮುಂದುವರೆಸಿದ ನೌಶಿ, ಹಟಾ ಗಡಿ ಮೂಲಕ ಯುಎಇ ತಲುಪಿದ್ದಾರೆ. ತನ್ನ ಪ್ರಯಾಣದ ವೆಚ್ಚವನ್ನು ಕೊಂಚ ಕಡಿಮೆಗೊಳಿಸುವ ಸಲುವಾಗಿ ಮುಂಚೆಯೇ ಅದ್ಭುತ ತಯಾರಿ ಮಾಡಿಕೊಂಡಿರುವ ನೌಶಿ ತನ್ನ ಕಾರಿನಲ್ಲಿಯೇ ಪುಟ್ಟ ಅಡುಗೆಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಡುಗೆ ತಯಾರಿಗಾಗಿ ಅಕ್ಕಿ, ನೀರು, ಹಿಟ್ಟು, ಮಸಾಲೆ ಮತ್ತು ಇತರ ಒಣ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ. ಅಲ್ಲದೆ ವಿಶ್ರಾಂತಿ ಪಡೆದುಕೊಳ್ಳುವ ಸಲುವಾಗಿ ಕಾರಿನ ಮೇಲ್ಛಾವಣಿ ಮೇಲೆ ಟೆಂಟ್ ಕೂಡ ಅಳವಡಿಸಿಕೊಂಡಿದ್ದಾರೆ.

28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ