ಕೊಹ್ಲಿ ಸನಿಹಕ್ಕೂ ಸ್ಟೀವನ್ ಸ್ಮಿತ್ ಬರೋದಿಲ್ಲ, ಕೊಹ್ಲಿ ಬ್ಯಾಟಿಂಗ್ ವರ್ಣಿಸಿದ ಪೀಟರ್ಸನ್..
ಮಾಡ್ರನ್ ಕ್ರಿಕೆಟ್ ಲೋಕದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗ್ರೇಟಾ? ಇಲ್ಲಾ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಗ್ರೇಟಾ ಅನ್ನೋ ಜಿಜ್ಞಾಸೆ ಇದ್ದೆ ಇದೆ. ಒಬ್ಬೊಬ್ಬರು ಒಬ್ಬೊಬ್ಬರ ಪರ ಹೇಳಿಕೆಗಳನ್ನ ನೀಡುತ್ತಾ ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಆದ್ರೀಗ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್, ಕೊಹ್ಲಿ ಮತ್ತು ಸ್ಮಿತ್ ಇಬ್ಬರಲ್ಲಿ ಯಾರು ಗ್ರೇಟ್ ಅನ್ನೋ ಸಂಗತಿಯನ್ನ ಬಾಯ್ಬಿಟ್ಟಿದ್ದಾರೆ. ಕೊಹ್ಲಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್: ಇನ್ಸ್ಟಾದಲ್ಲಿ ಮಾತನಾಡೋ ವೇಳೆ ಕೆವಿನ್ ಪೀಟರ್ಸನ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ […]
ಮಾಡ್ರನ್ ಕ್ರಿಕೆಟ್ ಲೋಕದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗ್ರೇಟಾ? ಇಲ್ಲಾ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಗ್ರೇಟಾ ಅನ್ನೋ ಜಿಜ್ಞಾಸೆ ಇದ್ದೆ ಇದೆ. ಒಬ್ಬೊಬ್ಬರು ಒಬ್ಬೊಬ್ಬರ ಪರ ಹೇಳಿಕೆಗಳನ್ನ ನೀಡುತ್ತಾ ಸಮರ್ಥಿಸಿಕೊಳ್ಳುತ್ತಾ ಬಂದಿದ್ದಾರೆ. ಆದ್ರೀಗ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್, ಕೊಹ್ಲಿ ಮತ್ತು ಸ್ಮಿತ್ ಇಬ್ಬರಲ್ಲಿ ಯಾರು ಗ್ರೇಟ್ ಅನ್ನೋ ಸಂಗತಿಯನ್ನ ಬಾಯ್ಬಿಟ್ಟಿದ್ದಾರೆ.
ಕೊಹ್ಲಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್: ಇನ್ಸ್ಟಾದಲ್ಲಿ ಮಾತನಾಡೋ ವೇಳೆ ಕೆವಿನ್ ಪೀಟರ್ಸನ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದು, ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್, ಕೊಹ್ಲಿ ದಾಖಲೆಯ ಸನಿಹಕ್ಕೂ ಬರೋದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಸ್ಟೀವನ್ ಸ್ಮಿತ್ ಇಬ್ಬರಲ್ಲಿ ಒಬ್ಬರನ್ನ ಆಯ್ಕೆ ಮಾಡಿಕೊಳ್ಳಿ ಎಂಬ ಪ್ರಶ್ನೆಗೆ ಉತ್ತರಿಸಿದ ಪೀಟರ್ಸನ್, ಚೇಸಿಂಗ್ ವಿಷಯಕ್ಕೆ ಬಂದಾಗ ವಿರಾಟ್ ಕೊಹ್ಲಿ ಭಾರತದ ಪರ ಅದ್ಭುತ ದಾಖಲೆಯನ್ನ ಹೊಂದಿದ್ದಾರೆ. ಟೀಮ್ ಇಂಡಿಯಾ ಪರ ಕೊಹ್ಲಿ ಅದ್ಭುತ ಬ್ಯಾಟ್ಸ್‌ಮನ್. ಸ್ಟೀವನ್ ಸ್ಮಿತ್, ಕೊಹ್ಲಿ ದಾಖಲೆಗಳ ಸಮೀಪ ಕೂಡ ಬರಲು ಸಾಧ್ಯವಿಲ್ಲ ಎಂದಿದ್ದಾರೆ.
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್: ಹಾಗೇ ಸಚಿನ್ ತೆಂಡುಲ್ಕರ್ ಮತ್ತು ಕೊಹ್ಲಿ ಇಬ್ಬರಲ್ಲಿ ಒಬ್ಬರನ್ನ ಆಯ್ಕೆಮಾಡಿಕೊಳ್ಳಿ ಎಂಬ ಪ್ರಶ್ನೆಗೂ ಕೆಪಿ, ವಿರಾಟ್ ಕೊಹ್ಲಿಯನ್ನೇ ಆಯ್ಕೆಮಾಡಿಕೊಂಡಿದ್ದಾರೆ. ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ಗಿಂತ ಅತ್ಯುತ್ತಮ ಚೇಸಿಂಗ್ ದಾಖಲೆಯನ್ನ ಹೊಂದಿರೋ ಕಾರಣ, ಕ್ಯಾಪ್ಟನ್ ಕೊಹ್ಲಿಯೇ ಕಿಂಗ್ ಅಂತಾ ಕೆಪಿ ಹಾಡಿ ಹೊಗಳಿದ್ದಾರೆ.
ವಿರಾಟ್ ಕೊಹ್ಲಿ ಚೇಸಿಂಗ್ ದಾಖಲೆಗಳು ಭಯಾನಕವಾಗಿವೆ. ಕೊಹ್ಲಿ ಚೇಸಿಂಗ್ ಮಾಡೋವಾಗ ಶೇ.80 ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿದ್ದಾರೆ. ಚೇಸಿಂಗ್ ಅಷ್ಟೇ ಅಲ್ಲ. ಕೊಹ್ಲಿ ಬ್ಯಾಟಿಂಗ್ನಲ್ಲಿ ಸ್ಥಿರತೆಯನ್ನ ಕಾಪಾಡಿಕೊಂಡಿದ್ದಾರೆ.
ಎಂತಹದ್ದೇ ಕ್ಲಿಷ್ಟಕರ ಪರಿಸ್ಥಿತಿ ಇದ್ರೂ, ತಮ್ಮ ಅಮೋಘ ಬ್ಯಾಟಿಂಗ್ ಕೌಶಲ್ಯದ ಮೂಲಕ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಆ ಮೂಲಕ ತಂಡದ ಗೆಲುವಿಗೆ ಕಾರಣರಾಗುತ್ತಾರೆ ಎಂದು, ಪೀಟರ್ಸನ್ ರನ್ ಮಷೀನ್ ಕೊಹ್ಲಿ ಬ್ಯಾಟಿಂಗ್ ವೈಭವವನ್ನ ವರ್ಣಿಸಿದ್ದಾರೆ.
Published On - 9:33 am, Sun, 17 May 20