ಚಿಕ್ಕಂದಿನಿಂದಲೂ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಇಟ್ಟುಕೊಂಡಿದ್ದ ಬೆಂಗಳೂರಿನ ಹೊಸಕೋಟೆಯ ಹುಡುಗ ಕಿಶೋರ್, ನೆದರ್ಲೆಂಡ್ಸ್ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ (GAMMA) ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾನೆ. ಈ ಕ್ಷೇತ್ರದಲ್ಲಿಯೇ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲದಿಂದ ಸದಾ ಅಭ್ಯಾಸದಲ್ಲಿ ತೊಡಗಿದ್ದ ಕಿಶೋರ್, 52 ಕೆಜಿ ವಿಭಾಗದಲ್ಲಿ ನಡೆದ ಮಿಕ್ಸಡ್ ಮಾರ್ಷಲ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಗೆದ್ದು ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೇಗೂರು ಗ್ರಾಮದ ಕುಮಾರ್ ಎಂಬುವವರ ಮಗನಾದ ಕಿಶೋರ್, ಚಿಕ್ಕಂದಿನಿಂದಲೂ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದನು. ಇದೀಗ ನೆದರ್ಲೆಂಡ್ಸ್ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ 52 ಕೆಜಿ ವಿಭಾಗದವರ ಎಂಎಂಎ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆದ್ದಿದ್ದಾನೆ.
ಇನ್ನೂ ಕಿಶೋರ್ ಸುಮಾರು ವರ್ಷಗಳಿಂದ (MMA) ಮಿಕ್ಸಡ್ ಮಾರ್ಷಲ್ ಆರ್ಟ್ಸ್ನಲ್ಲಿ ತರಬೇತಿ ಮಾಡ್ತಿದ್ದಾನೆ. ಕಳೆದ ವರ್ಷ 52. ಕೆಜಿ ವಿಭಾಗದಲ್ಲಿ ಖಜಗಿಸ್ತಾನ್ ದೇಶದ ವಿರುದ್ಧ ನಡೆದ MMA ಪಂದ್ಯದಲ್ಲಿ ಎದುರಾಳಿ ಜೊತೆಗೆ ರಿಯಲ್ ಫೈಟ್ ಮಾಡಿ ಗೆದ್ದು ಚಿನ್ನದ ಪದಕವನ್ನು ಪಡೆದಿದ್ದಾನೆ. ಜೊತೆಗೆ MMA ಗೇಮ್ನಲ್ಲಿ ಕರಾಟೆ, ಕುಂಗ್ ಫು, ಬಾಕ್ಸಿಂಗ್, ಟೈ ಕೊಂಡೋ, ಹೀಗೆ ಹಲವು ಗೇಮ್ ಮಿಕ್ಸ್ ಆಗಿರುತ್ತವೆ. ಹೀಗಾಗಿ ಇ ಗೇಮ್ ಅನ್ನು ಮಿಕ್ಷಡ್ ಮಾರ್ಷಲ್ ಆರ್ಟ್ಸ್ ಎಂದು ಕರೆಯಲಾಗುತ್ತದೆ. ಇಷ್ಟು ಆಟಗಳು ನಮ್ಮ ಕಿಶೋರ್ ಕುಮಾರ್ ಗೆ ಗೊತ್ತಿದೆ ಅಖಾಡದಲ್ಲಿ ಎದುರಾಳಿಗೆ ಯಾವ ಆಟದಿಂದ ಕಿಕ್ ಅಥವಾ ಪಂಚ್ ಹೊಡಿಯುತ್ತಾನೆ ಗೊತ್ತಿಲ್ಲ ಆದರೆ ಒಂದು ಕಿಕ್ಗೆ ನಾಕ್ ಔಟ್ ಮಾಡುತ್ತಾನೆ ನಮ್ಮ ಕಿಶೋರ್.
tv9 ಕನ್ನಡ ಸುದ್ದಿ ಮಾಡಿತ್ತು
ಕಿಶೋರ್ ಕುಮಾರ್ನ MMA ಟ್ಯಾಲೆಂಟ್ ಬಗ್ಗೆ ಕಳೆದ ವಾರ tv9 ಕನ್ನಡ ಸುದ್ದಿ ಮಾಡಿತ್ತು. ಸುದ್ದಿ ವೀಕ್ಷಿಸಿದ ರಾಜ್ಯದ ಸಿಎಂ ಬಸವರಾಜ ಬೊಮ್ಮಯಿ, MMA ನಲ್ಲಿ ಕಿಶೋರ್ ಕುಮಾರ್ ಗೆದ್ದು ಬರಬೇಕೆಂದು ಶುಭಾಶಯ ಕೋರಿದ್ದರು. ಒಟ್ಟಾರೆ ನಮ್ಮ ಬೆಂಗಳೂರಿನ ಕಿಶೋರ್ ಕುಮಾರ್ ಮಿಕ್ಸಡ್ ಮಾರ್ಷಲ್ ಆರ್ಟ್ಸ್ನ ವಿಶ್ವ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಗೆದ್ದು ನಮ್ಮ ಕರ್ನಾಟಕ ಹಾಗೂ ಭಾರತಕ್ಕೆ ಸಾಕಷ್ಟು ಕೀರ್ತಿ ತಂದಿದ್ದಾನೆ.
ಇನ್ನೂ ಕಿಶೋರ್ ಕುಮಾರ್ ಕೋಚ್ MMA ತರಬೇತಿಯಲ್ಲಿ ತುಂಬಾ ಅನುಭವ ಇರುವವರು ಕಿಶೋರ್ ಕುಮಾರ್ ಪ್ರತಿಭೆ ಕಂಡು ಪ್ರತಿ ದಿನ ಸುಮಾರು ಆರು ಗಂಟೆಗಳ ಕಾಲ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಟೈ ಕೊಂಡೋ ಹಾಗೂ ಬಾಕ್ಸಿಂಗ್ ನಲ್ಲಿ ಮೆಡಲ್ಗಳನ್ನು ಗೆದ್ದಿದ್ದಾನೆ.
ಇದನ್ನೂ ಓದಿ:IPL 2022: ವಿವಿಧ ಕಾರಣಗಳಿಂದ ಐಪಿಎಲ್ ಆರಂಭಿಕ ಪಂದ್ಯಗಳಿಗೆ ಗೈರಾಗುತ್ತಿರುವ ಎಲ್ಲಾ ತಂಡಗಳ ಆಟಗಾರರಿವರು..!